ಹೈದರಾಬಾದ್: ಮನುಕುಲದಲ್ಲಿ ಮೊದಲು ಪೂಜೆಗೊಳ್ಳುವ ದೇವರೆಂದರೆ ಅದು ತಾಯಿಯೇ ಎಂಬ ನಂಬಿಕೆ ಇದೆ. ಆದರೆ ಹೆತ್ತ ತಾಯಿಯೇ ಮಕ್ಕಳನ್ನು ಕೊಲ್ಲುವ ಮಹಾಪಾಪಿಯಾಗುತ್ತಾಳೆ ಎಂದರೆ ನೀವು ನಂಬಲೇಬೇಕು… ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.
ದೃಷ್ಟಿವೈಕಲ್ಯ ಮತ್ತು ಬುದ್ಧಿಮಾಂದ್ಯ ಮಗನ ಸ್ಥಿತಿಯಿಂದ ತೀವ್ರ ಆಘಾತಗೊಂಡ ಮಹಿಳೆಯೊಬ್ಬಳು ಮಗುವಿನ ಮಣಿಕಟ್ಟು ಕೊಯ್ದು, ಮೂರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಇಲ್ಲಿಯ ಎಲ್‌ಬಿ ನಗರದ ಶಾತವಾಹನ ಕಾಲೋನಿಯಲ್ಲಿ ನಡೆದಿದೆ.
ಮಗನೇ.. ನನ್ನನ್ನು ಕೊಂದುಬಿಡು ಎಂದು ಅಂಗಲಾಚಿದ್ದ ತಾಯಿಯನ್ನು ದೇವರು ಕಾಪಾಡಲಿಲ್ಲ
ಜಿ ಮಮತಾ (26) ಆತ್ಮಹತ್ಯೆಗೀಡಾದ ದುರ್ದೈವಿ. ಮಾರಣಾಂತಿಕವಾಗಿ ಗಾಯಗೊಂಡ ಮಗು ರಿಯಾಂಶ್ (3) ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಮಮತಾ ಪತಿ ಜಿ ಶಂಕರಯ್ಯ ಬ್ಯಾಟರಿ ಮಾರಾಟಗಾರನಾಗಿದ್ದು, ಆತ ತನ್ನ ಅಂಗಡಿ ಕೆಲಸ ಮುಗಿಸಿ 10 ಗಂಟೆಗೆ ಮನೆಗೆ ಮರಳಿದ್ದ.
ನಂತರ, ಮಗ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದನ್ನು ಗಮನಿಸಿದ ಶಂಕರಯ್ಯ ಆಘಾತಕ್ಕೊಳಗಾದ. ಆ ಸಮಯದಲ್ಲಿ ಮಮತಾ ಮನೆಯಲ್ಲಿ ಇರಲಿಲ್ಲ. ಗಾಯಗೊಂಡ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ತಮ್ಮ ಸಹೋದ್ಯೋಗಿ ವಿಕಾಸ್ ಗೌಡಗೆ ಮಮತಾಳನ್ನು ಹುಡುಕುವಂತೆ ಹೇಳಿದ್ದ.
ರಫೇಲ್ ಜೆಟ್ಗಳು ಗೇಮ್ ಚೇಂಜರ್ ಆಗುವುದು ನಿಶ್ಚಿತ: ಅಮಿತ್ ಷಾ
ರಿಯಾಂಶ್ ನನ್ನು ಆಸ್ಪತ್ರೆಯಲ್ಲಿ ದಾಖಲಿಸಿದ ನಂತರ ಶಂಕರಯ್ಯ ರಾತ್ರಿ 11 ಕ್ಕೆ ಮನೆಗೆ ಮರಳಿ ಟೆರೇಸ್‌ಗೆ ಹೋದಾಗ ಮಮತಾ ನೀರಿನ ಟ್ಯಾಂಕ್ ಹತ್ತಿರ ಕುಳಿತಿದ್ದನ್ನು ಕಂಡು ಆಕೆಯನ್ನು ಕರೆದ, ಆದರೆ ಆಕೆ ಅಲ್ಲಿಂದ ಎದ್ದು ಹಠಾತ್ ಆಗಿ ಟೆರೇಸ್‌ನಿಂದ ಜಿಗಿದು ಸಾವಿಗೀಡಾಗಿದ್ದಾಳೆ. ರಿಯಾಂಶ್ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
‘ಹುಡುಗ ದೃಷ್ಟಿವೈಕಲ್ಯದಿಂದ ಬಳಲುತ್ತಿದ್ದ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಶಂಕರಯ್ಯ 20 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದರಾದರೂ ಯಾವುದೇ ಸುಧಾರಣೆಯಾಗಿಲ್ಲ ‘ಎಂದು ಎಲ್‌ಬಿ ನಗರ ಇನ್ಸ್‌ಪೆಕ್ಟರ್ ಅಶೋಕ್ ರೆಡ್ಡಿ ಹೇಳಿದ್ದಾರೆ. ಇದಲ್ಲದೆ, ಮಗು ಮಾನಸಿಕ ಅಸ್ವಸ್ಥ ಕೂಡ ಆಗಿದ್ದರಿಂದ ಹೆತ್ತವರು ತೀವ್ರ ಆಘಾತಕ್ಕೊಳಗಾಗಿದ್ದರು.ಇದೇ ಕಾರಣ ಮಮತಾ ಈ ದುರಂತ ಹೆಜ್ಜೆ ಇಟ್ಟಿದ್ದಾರೆಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.