ಗೋಕಾಕ :ವೃದ್ದೆಯೋರ್ವಳು ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುತ್ತಾರೆ. ಕೊರೋನಾ ಶಂಕಿತೆ ಎಂದು ಕೊವೀಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರುವದು ಬಾಕಿ ಇದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ಅವರು ತಿಳಿಸಿದ್ದಾರೆ.
ಮಂಗಳವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದ ವೃದ್ದೆಯು ಗೋಕಾಕ ತಾಲೂಕಿನ ಕೊಣ್ಣೂರ್ ಗ್ರಾಮದವಳಾಗಿದ್ದು, ಮಹಿಳೆಗೆ ತೀವ್ರ ಮದುಮೇಹದ ಸಮಸ್ಯೆ ಉಂಟಾಗಿ ದೇಹದಲ್ಲಿ ಏರುಪೇರು ಆದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹದ ಜೊತೆಗೆ ಜ್ವರ ಕಾಣಿಸಿಕೊಂಡ ಪರಿಣಾಮ ಜಿಲ್ಲಾ ಆಸ್ಪತ್ರೆ ವೈದ್ಯರು ರೋಗಿಯ ಗಂಟಲು ದ್ರವ್ಯವನ್ನು ಪರೀಕ್ಷೆ ಕಳುಹಿಸಿದ್ದಾರೆ. ವರದಿ ಬರುವ ಮುನ್ನವೇ ರೋಗಿಯು ಸಾವನ್ನಪ್ಪಿದ್ದಾರೆ ಇನ್ನು ಅವರಿಗೆ ಕೊರೋನಾ ಧೃಡಪಟ್ಟಿಲ್ಲಾ, ಸಂಶಯ ವ್ಯಕ್ತಪಡಿಸಲಾಗಿದೆ. ಇನ್ನು ವರದಿ ಬರುವುದು ಬಾಕಿ ಇದೆ ಅದಕ್ಕಾಗಿ ಯಾರು ಭಯಪಡುವ ಅವಶ್ಯಕತೆ ಇಲ್ಲಾ, ಈಗಾಗಲೇ ಕೋವಿಡ್-19 ಸೊಂಕಿನಿಂದ ಬಳಲುತ್ತಿದ್ದ ವ್ಯಕ್ತಿಗಳ ಅಂತ್ಯಕ್ರೀಯಂತೆ ಮುಂಜಾಗೃತೆಯನ್ನು ವಹಿಸಿ ಮಹಿಳೆಯ ಅಂತ್ಯಕ್ರೀಯೆಯನ್ನು ನಡೆಸಲಾಗಿದೆ. ಅವರ ಟ್ರಾವೇಲ್ ಹಿಸ್ಟರಿ ಇರುವದಿಲ್ಲ ಎಂದು ತಿಳಿಸಿದರು.
ಗೋಕಾಕ ತಾಲೂಕಿನಲ್ಲಿ ದಾಖಲಾದ ಒಟ್ಟು 4 ಕೊರೋನಾ ಪ್ರಕರಣಗಳು ಗುಣಮುಖರಾಗಿ ಎಲ್ಲರ ವರದಿಗಳು ನೆಗಟೀವ್ ಬಂದಿದ್ದು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ. ಗೋಕಾಕ ನಗರದಲ್ಲಿ 8 ವರ್ಷದ ಬಾಲಕಿಯಲ್ಲಿ ಪತ್ತೆಯಾದ ಕೊರೋನಾ ಸೋಂಕು ದೃಢಪಟ್ಟು 10 ದಿನಗಳ ನಂತರ ನೆಗೆಟಿವ್ ಬಂದ ಪರಿಣಾಮ ಸರಕಾರದ ನಿರ್ದೇಶನದ ಮೆರೆಗೆ 7ದಿನಗಳ ಕಾಲ ಹೋಮ್ ಕ್ವಾರಂಟೈನ ಮಾಡಿ ಮನೆಗೆ ಕಳುಹಿಸಲಾಗಿದ್ದು, ಕೊವಿಡ್ ಪರೀಕ್ಷೆಯನ್ನು ಅತ್ಯಂತ ಸುಸಜ್ಜಿತ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿರುತ್ತದೆ. ಅಲ್ಲಿಯ ವರದಿ ಬಂದಿದ್ದು ಖಚಿತವಾಗಿರುತ್ತದೆ. ಸರಕಾರ ನೀಡುವ ವರದಿಗಳ ಬಗ್ಗೆ ಸಂಶಯ ವ್ಯಕ್ತಪಡಿಸದೇ ಸರಕಾರ ಮತ್ತು ಆರೋಗ್ಯ ಇಲಾಖೆಯ ನೀಡುವ ನಿರ್ದೆಶನಗಳನ್ನು ಪಾಲಿಸಬೇಕು ಎಂದು ಡಾ. ಜಗದೀಶ ಜಿಂಗಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.