Breaking News

ಸತತ 14ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ …………..

Spread the love

ನವದೆಹಲಿ,ಜೂ.20 – ಸತತ 14ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿದ್ದು, ವಾಹನ ಸವಾರರನ್ನು ಕಂಗೆಡಿಸಿದೆ. ಇಂದು ಪೆಟ್ರೋಲ್ ಲೀಟರ್‍ಗೆ 0.51 ಪೈಸೆ ಹಾಗೂ ಡೀಸೆಲ್ 0.61 ಪೈಸೆ ಏರಿಕೆ ಮಾಡಲಾಗಿದೆ. ಹೀಗಾಗಿ ಎರಡು ವಾರಗಳ ಅಂತರದಲ್ಲಿ ಪೆಟ್ರೋಲ್ ರೂ.5.88 ಹಾಗೂ ಡೀಸೆಲ್ ರೂ.6.50 ಏರಿಕೆಯಾದಂತಾಗಿದೆ.

ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಶುಕ್ರವಾರ ಲೀಟರ್¿ಗೆ ರೂ. 81.42 ಹಾಗೂ ಡೀಸೆಲ್ ರೂ.73.89 ಆಗಿದೆ.ಅಂತರಾಷ್ಟ್ರೀಯ ಕಚ್ಚಾತೈಲ ದರಕ್ಕೆ ತಕ್ಕಂತೆ ತೈಲ ಕಂಪನಿಗಳು ಜೂ.7ರಿಂದ ತೈಲ ದರಗಳನ್ನು ದೈನಂದಿನ ಪರಿಷ್ಕರಣೆ ಮಾಡುತ್ತಿವೆ.ಒಂದೊಮ್ಮೆ ಬೇಡಿಕೆ ಕಡಿಮೆ ಆದಾಗಲೂ ಬೆಲೆ ಇಳಿದಿಲ್ಲ. ಇದೇ ರೀತಿ ದೇಶದಲ್ಲಿ ಈಗ ಲಾಕ್ಡೌನ್ ಕಾರಣಕ್ಕೆ ಹಾಗೂ ಕೊರೊನಾಗೆ ಹೆದರಿ ಜನ ಮೊದಲಿನಷ್ಟು ಹೊರಗಡೆ ಓಡಾಡುತ್ತಿಲ್ಲ. ಪೆಟ್ರೋಲ್, ಡೀಸೆಲ್ ಬಳಕೆಯಾಗುತ್ತಿಲ್ಲ. ಆದರೂ ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ನಡೆದುಕೊಂಡ ಬಂದಿರುವ ರೀತಿ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 14 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ. ಬಳಕೆ ಅಥವಾ ಬೇಡಿಕೆ ಕಡಿಮೆ ಆದಾಗಲೂ ವಸ್ತುಗಳ ದರ ಇಳಿಕೆಯಾಗುತ್ತೆ. ಇದು ಮಾರುಕಟ್ಟೆಯಲ್ಲಿ ಸಹಜವಾಗಿ ಕಂಡುಬರುವ ರೀತಿ.


Spread the love

About Laxminews 24x7

Check Also

ಯುಪಿಎಸ್​​ಸಿ ಪರೀಕ್ಷೆಯಲ್ಲಿ ಹಾಸನದ ಕೆ.ಎಸ್. ಧನ್ಯಗೆ 982ನೇ ರ‍್ಯಾಂಕ್

Spread the loveಹಾಸನ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​​ಸಿ) ಈ ಸಾಲಿನ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನನಗರದ ನಿವಾಸಿ ಕೆ.ಎಸ್.ಧನ್ಯ 982ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ