Breaking News

ಸೆಪ್ಟೆಂಬರ್​ 17ನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲು ತಮಿಳುನಾಡು ಸಿಎಂ ಸ್ಟಾಲಿನ್​ ನಿರ್ಧಾರ; ಅಣ್ಣಾಮಲೈರಿಂದ ವಿರೋಧ

Spread the love

ಚೆನ್ನೈ: ಇಂದು (ಸೆಪ್ಟೆಂಬರ್ 17) ದ್ರಾವಿಡಿಯನ್​ ಚಳವಳಿ ನಾಯಕನಾದ ಪೆರಿಯಾರ್​ ಇ.ವಿ.ರಾಮಸ್ವಾಮಿ ಅವರ ಹುಟ್ಟುಹಬ್ಬದ ನಿಮಿತ್ತ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಿರ್ಧರಿಸಿದ್ದಾರೆ. ಆದರೆ ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಪೆರಿಯಾರ್​ ಅವರ ಜನ್ಮದಿನವನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲು ಒಪ್ಪಿಗೆ ಇದೆ, ಆದರೆ ಡಿಎಂಕೆ ಸರ್ಕಾರ ಉಳಿದ ಸಮಾಜ ಸುಧಾಕರನ್ನು ನಿರ್ಲಕ್ಷಿಸುವುದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ.

1879ರ ಸೆಪ್ಟೆಂಬರ್​ 17ರಂದು ಜನಿಸಿದ್ದ ಪೆರಿಯಾರ್ ಇ.ವಿ.ರಾಮಸ್ವಾಮಿಯವರನ್ನು ದ್ರಾವಿಡ ಚಳವಳಿಯ ಜನಕ ಎಂದೇ ಕರೆಯಲಾಗುತ್ತದೆ. ಜಾತಿ, ಲಿಂಗತಾರತಮ್ಯವನ್ನು ಬಲವಾಗಿ ವಿರೋಧಿಸಿದ್ದ ಇವರು, ಅಂಥ ಅಸಮಾನತೆ ವಿರುದ್ಧ ಹಲವು ಚಳವಳಿಗಳನ್ನು ಹಮ್ಮಿಕೊಂಡಿದ್ದವರು. ಹಾಗಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ವರ್ಷದಿಂದ,  ಇನ್ನುಮುಂದೆ ಸೆಪ್ಟೆಂಬರ್​ 17ನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸುವುದಾಗಿ ಎಂ.ಕೆ.ಸ್ಟಾಲಿನ್​ ಹೇಳಿದ್ದಾರೆ. ಅಷ್ಟೇ ಅಲ್ಲ,  ಪೆರಿಯಾರ್​ ಸಿದ್ಧಾಂತವು ಸಾಮಾಜಿಕ ನ್ಯಾಯ, ಆತ್ಮಗೌರವ, ಸಮಾನತೆ, ಭ್ರಾತೃತ್ ಮತ್ತು ವೈಚಾರಿಕತೆಯ ಪ್ರತಿಬಿಂಬವಾಗಿದೆ ಎಂದು ಹೇಳಿದ್ದರು.

ಸ್ಟಾಲಿನ್ ನಿರ್ಧಾರದ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ನೈನಾರ್​ ನಾಗೇಂದ್ರನ್​, ಸಾಮಾಜಿಕ ನ್ಯಾಯ ಎಂಬುದು ಬಿಜೆಪಿಯ ತತ್ವಗಳ ಪರಿಕಲ್ಪನೆಯಾಗಿದೆ. ಹಾಗಾಗಿ ನಮ್ಮ ಪಕ್ಷ ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದರು.  ಆದರೆ ಬಿಜೆಪಿ ತಮಿಳುನಾಡು ಮುಖ್ಯಸ್ಥ ಅಣ್ಣಾಮಲೈ ಎಂ.ಕೆ.ಸ್ಟಾಲಿನ್ ನಿರ್ಧಾರವನ್ನು ವಿರೋಧಿಸಿದ್ದಾರೆ. ಡಿಎಂಕೆ ಸರ್ಕಾರ ಉಳಿದ ಸಮಾಜ ಸುಧಾಕರನ್ನು ಕಡೆಗಣಿಸುತ್ತಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾಕವಿ ಭಾರತಿಯಾರ್​ರಂಥವರಿಗೂ ಸರ್ಕಾರ ಮನ್ನಣೆ ನೀಡಬೇಕು ಎಂದಿದ್ದಾರೆ.

 


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ