Breaking News

Uncategorized

ಮಂಡ್ಯದಲ್ಲಿ ಸಿಡಿದೆದ್ದ ಕೈ ಕಾರ್ಯಕರ್ತರು; ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ

ಮಂಡ್ಯ : ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಮಂಗಳವಾರ ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮದ್ದೂರು ಪಟ್ಟಣದ ಕೊಲ್ಲಿ ವೃತ್ತದಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ತಾಲೂಕು ಕಚೇರಿ ಮುಂಭಾಗ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ …

Read More »

ಸಚಿವ ಎಚ್‌ಡಿಕೆ ಮತ್ತು ಸಂಬಂಧಿಕರಿಂದ ಗೋಮಾಳ ಜಾಗ ಕಬಳಿಕೆ; ಹಿರೇಮಠ ಆರೋಪ

ಧಾರವಾಡ: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗೋಮಾಳದ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ ಆರೋಪಿಸಿದರು.   ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ ಹಾಗೂ ಸಂಬಂಧಿಕ ಡಿ.ಸಿ.ತಮ್ಮಣ್ಣ ಕುಟುಂಬದವ‌ರು ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಂದಾಯ ಇಲಾಖೆಯ ಉನ್ನತಧಿಕಾರಿ 2014 ಆಗಸ್ಟ್‌ …

Read More »

ತಾಯಿ- ಮಕ್ಕಳಿಗೆ ಇನ್ನೂ ಸಿಗದ ಆಸ್ಪತ್ರೆಗಳು

ಬೆಳಗಾವಿ: ಜಿಲ್ಲೆಗೆ ಮಂಜೂರಾದ ಒಟ್ಟು ಏಳು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಇನ್ನೂ ಎರಡು ಆಸ್ಪತ್ರೆಗಳು ಕಾರ್ಯಾರಂಭ ಮಾಡಿಲ್ಲ. ಚಿಕ್ಕೋಡಿ ಹಾಗೂ ಖಾನಾಪುರದದಲ್ಲಿ ಮೂಲಸೌಕರ್ಯಗಳು ಸಿದ್ಧಗೊಂಡರೂ ಸಿಬ್ಬಂದಿ ನೇಮಕ ಹಾಗೂ ಸಣ್ಣಪುಟ್ಟ ಕೆಲಸಗಳಿಂದಾಗಿ ಇನ್ನೂ ಜನರ ಉಪಯೋಗಕ್ಕೆ ಬಂದಿಲ್ಲ.   ಉಳಿದಂತೆ, ಗೋಕಾಕದಲ್ಲಿ 100 ಬೆಡ್‌, ಒಂಟಮೂರಿಯಲ್ಲಿ 30 ಬೆಡ್‌, ನಿಪ್ಪಾಣಿ 30 ಬೆಡ್‌, ಸವದತ್ತಿ 60 ಬೆಡ್‌, ಬೈಲಹೊಂಗಲ 100 ಬೆಡ್‌ನ ಆಸ್ಪತ್ರೆಗಳು ಕೆಲಸ ಆರಂಭಿಸಿವೆ. ಚಿಕ್ಕೋಡಿಯಲ್ಲಿ 100 ಹಾಸಿಗೆ …

Read More »

ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ

ಬೆಳಗಾವಿ: ಯಾವುದೇ ಸೂಚನೆಯನ್ನು ನೀಡದೆ ಬರುವ ಜವರಾಯನ ಅಟ್ಟಹಾಸಕ್ಕೆ ಮಧ್ಯಮ ವಯಸ್ಸಿನವರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಬದುಕು ಹೇಗೆಲ್ಲ ಅಂತ್ಯವಾಗುತ್ತೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತೆ ಎಂಬುದು ಊಹಿಸಲು ಆಗುತ್ತಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ (Heart Attack) ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ …

Read More »

ಕಾರವಾರ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಿದ್ಧತೆ

ಕಾರವಾರ: ಸರ್ಕಾರಿ ಭೂಮಿ ಇದ್ದರೂ ಒತ್ತುವರಿಯಾಗುತ್ತಿರುವ ಪರಿಣಾಮ ಸರ್ಕಾರದ ಯೋಜನೆಗಳಿಗೆ ಜಾಗ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ವೇಗ ನೀಡಲು ಕಂದಾಯ ಇಲಾಖೆ ಮುಂದಾಗಿದ್ದು, ಜಿಲ್ಲೆಯಲ್ಲಿ ಸರ್ವೆ ಕಾರ್ಯ ಚುರುಕುಗೊಂಡಿದೆ. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಮಾಹಿತಿ ಕ್ರೂಢೀಕರಣಕ್ಕೆ ‘ಲ್ಯಾಂಡ್ ಬೀಟ್’ ಎಂಬ ಮೊಬೈಲ್ ಆಯಪ್‍ನ್ನು ಆರು ತಿಂಗಳ ಹಿಂದಷ್ಟೆ ಇಲಾಖೆ ಪರಿಚಯಿಸಿದೆ. ಅದರ ಮೂಲಕ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಸಮೀಕ್ಷೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿರುವ 36,926 ಎಕರೆ ಸರ್ಕಾರಿ ಭೂಮಿ …

Read More »

ವಾಸಿ ಭವನ ನಿರ್ಮಾಣಕ್ಕೆ ಸಿಗದ ನಿವೇಶನ

ಬೆಳಗಾವಿ: ನಗರಕ್ಕೆ ಪ್ರವಾಸಿ ಭವನ ಮಂಜೂರಾಗಿ ಆರು ವರ್ಷ ಕಳೆದಿದೆ. ಆದರೆ, ಕಾಮಗಾರಿ ಕೈಗೊಳ್ಳಲು ಇಂದಿಗೂ ಜಾಗವೇ ಸಿಕ್ಕಿಲ್ಲ. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಬೆಳಗಾವಿಯಲ್ಲಿ ಸ್ವಂತ ಕಟ್ಟಡವಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲು ಸೂಕ್ತ ವ್ಯವಸ್ಥೆಯೂ ಇಲ್ಲ. ಇದಕ್ಕೆ ಪರಿಹಾರ ಒದಗಿಸಲೆಂದು ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಬೆಳಗಾವಿಗೆ ಪ್ರವಾಸಿ ಭವನ ಮಂಜೂರುಗೊಳಿಸಿ, ₹2 ಕೋಟಿ ಅನುದಾನ ಘೋಷಿಸಿತ್ತು. ಪ್ರಥಮ ಹಂತವಾಗಿ ₹1 …

Read More »

ಟಿಬಿ ಡ್ಯಾಂ ಗೇಟ್​ ದುರಸ್ತಿ ಕಾರ್ಯ ಯಶಸ್ವಿ: ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ ಡಿಕೆ ಶಿ

ಟಿಬಿ ಡ್ಯಾಂ ಗೇಟ್​ ದುರಸ್ತಿ ಕಾರ್ಯ ಯಶಸ್ವಿ: ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ ಡಿಕೆ ಶಿ   ಬೆಂಗಳೂರು, ಆ.17: ತುಂಗಭದ್ರಾ ಡ್ಯಾಂನಕ್ರಸ್ಟಗೇಟ್19 ಕೊಚ್ಚಿಕೊಂಡು ಹೋಗಿದ್ದರಿಂದ ಕಳೆದ ಆಗಸ್ಟ್ 10 ರಿಂದ ನಿರಂತರವಾಗಿ ನೀರು ಹರಿದು ವ್ಯರ್ಥವಾಗಿ ಹೋಗುತ್ತಿತ್ತು. ಇದೀಗ ಯಶಸ್ವಿಯಾಗಿ ಗೇಟ್ ದುರಸ್ತಿ ಕೆಲಸ ಮುಗಿಸಿದ್ದು, ನೀರನ್ನು ಬಂದ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಮಾತನಾಡಿ, ‘ತುಂಗಭದ್ರಾ ಡ್ಯಾಂ ಗೇಟ್​ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. …

Read More »

ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ: ವಾಹನ ಸವಾರರು ಪರದಾಟ

ಬೆಂಗಳೂರು, ಆ.16: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿವರಮಹಾಲಕ್ಷ್ಮಿಹಬ್ಬದಂದೆ ವರುಣನ ಆಗಮನವಾಗಿದೆ. ದಿಢೀರ್ ಮಳೆಗೆ ಹಬ್ಬದ ಸಡಗರದಲ್ಲಿದ್ದ ಸಿಟಿಮಂದಿ ಸುಸ್ತಾಗಿದ್ದಾರೆ. ನಗರದ ವಿಧಾನ ಸೌಧ, ಕಾರ್ಪೊರೇಷನ್ ಸರ್ಕಲ್, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಶಾಂತಿನಗರ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆ(Rain) ಆಗಿದ್ದು, ದಿಢೀರ್​ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಹೆಸರಘಟ್ಟ ಸೇರಿದಂತೆ ಹಲವಾರು ಕಡೆ …

Read More »

750 ಸರ್ವೇಯರ್‌ ನೇಮಕಕ್ಕೆ ಕ್ರಮ: ಕೃಷ್ಣ ಬೈರೇಗೌಡ

ಬಳ್ಳಾರಿ: ರಾಜ್ಯದಲ್ಲಿ ಖಾಲಿಯಿರುವ ಸರಕಾರಿ ಮತ್ತು ಪರವಾನಿಗೆಯುಳ್ಳ ಸರ್ವೇಯರ್‌ ಸೇರಿ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ವೇಯರ್‌ಗಳ ಕೊರತೆ ಇದ್ದು, ಇದು ಸಿಎಂ ಸಿದ್ದರಾಮಯ್ಯ ಅವರಿಗೂ ಜನತಾ ದರ್ಶನದಲ್ಲಿ ಗಮನಕ್ಕೆ ಬಂದಿದೆ. ಹಾಗಾಗಿ ಅವರೇ ರಾಜ್ಯದಲ್ಲಿ ಖಾಲಿ ಇರುವ ಎಲ್ಲ 750 ಸರ್ವೇಯರ್‌ ಭರ್ತಿಗೆ ಅನುಮತಿ ನೀಡಿದ್ದಾರೆ. ಪರವಾನಿಗೆಯುಳ್ಳ 1191 ಸರ್ವೇಯರ್‌ಗಳನ್ನು ಈಗಾಗಲೇ ನೇಮಕ …

Read More »

ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ:ಸತೀಶ ಜಾರಕಿಹೊಳಿ

ಬೆಳಗಾವಿ: ‘ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿಲ್ಲ. ಇದು ಜನರ ಅಭಿಪ್ರಾಯ ಅಷ್ಟೇ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಲು ನಾನೇ ಹೇಳಿದ್ದೇನೆಂದು ಸುದ್ದಿ ಬರುತ್ತಿದೆ. ನಾನು ಆ ಮಾತು ಹೇಳಿಲ್ಲ. ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಜನ ಗ್ಯಾರಂಟಿ ಇರಲಿ ಎಂದರೆ ಮುಂದುವರೆಯುತ್ತವೆ. ಅವರೇ ಬೇಡವೆಂದರೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು. ‘ಐದು …

Read More »