“ನೋಡುಗನ ಹಿಡಿತಕ್ಕೆ ಸಿಗದ ಮಂಕಿ!” ಸಿನಿಮಾ ಎಂದರೆ ಐದು ಹಾಡು,ನಾಲ್ಕು ಫೈಟು, ಬಿಲ್ಡಪ್ ಕೊಡೋ ಡೈಲಾಗ್ಸು, ಕಾಮಿಡಿ, ರೋಮ್ಯಾನ್ಸ್ ಮಾತ್ರ ಅಂದುಕೊಂಡವರಿಗೆ ಪಾಪಕಾರ್ನ್ ಮಂಕಿ ಟೈಗರ್ ಸಿನಿಮಾ ರುಚಿಸುವುದಿಲ್ಲ. ಸಿನಿಮಾ ಆರಂಭವಾಗಿ ಪ್ರಥಮಾರ್ಧ ಮುಗಿಯುಷ್ಟರಲ್ಲಿ ಅಂಥವರ ತಾಳ್ಮೆ ಸತ್ತು ಹೋಗಿರುತ್ತದೆ. ಅದು ಸಿನಿಮಾದ ಮಿತಿಯೂ ಹೌದು, ತಾಕತ್ತೂ ಹೌದು. ಈವರೆಗೆ ಸುಕ್ಕಾ ಸೂರಿ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿರುವಂತೆ ಈ ಸಿನಿಮಾದಲ್ಲಿ ಹೇರಳವಾಗಿ ಹೆಂಡ, ಹೆಣ್ಣು, ಸಿಗರೇಟಿನ ಘಾಟು, ಪೇಟಿಂಗನಂತೆ ಕಾಣುವ …
Read More »ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯ…………
ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿದೆ. ದಾದಾ ಸಾಹೇಬ್ ಪಾಲ್ಕೆ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಮುಂಬೈನಲ್ಲಿ ಗುರುವಾರ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುದೀಪ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ದಬಾಂಗ್ 3′ ಸಿನಿಮಾದ …
Read More »ವರ್ಷದ ನಂತರ ನಟಿ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ
ಬೆಂಗಳೂರು: ವರ್ಷದ ನಂತರ ನಟಿ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ ಕೊಟ್ಟಿದ್ದು, ಕಾದಂಬರಿ ಆಧರಿತ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅನುಪ್ರಭಾಕರ್ ಅಭಿಮಾನಿಗಳಲ್ಲಿ ಇದು ಅತೀವ ಸಂತಸವನ್ನುಂಟುಮಾಡಿದ್ದು, ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡುವ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ವೇಗದಲ್ಲಿ ಸಿನಿಮಾ ಸಹ ಪೂರ್ಣಗೊಂಡಿದ್ದು, ಆಗಲೇ ಡಬ್ಬಿಂಗ್ ಹಂತದಲ್ಲಿದೆ. ಆರಂಭದಲ್ಲಿ ತಕ್ಕ ಪಾತ್ರಗಳು ಸಿಗಲಿಲ್ಲ ಎಂದು ಸಿನಿಮಾದಿಂದ ದೂರ ಉಳಿದರೆ, ನಂತರ ಸಂಸಾರ, ಮಕ್ಕಳ ಜವಾಬ್ದಾರಿಯ …
Read More »2020ಯ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್ ಇದೇ ಶುಕ್ರವಾರ ಬಿಡುಗಡೆ
2020ಯ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಖತ್ ಕ್ರೇಜ್ ಹುಟ್ಟುಹಾಕಿದೆ. ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರ ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಾಲಿ ಭಕ್ತ ವೃಂದವಂತೂ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಡಾಲಿ ಅಭಿಮಾನಿಗಳ ಮನಸ್ಸನ್ನು ಕಾಡುತ್ತಿದೆ ಚಿತ್ರದ ಮಾಸ್ ಟೀಸರ್. ಸುಕ್ಕಾ ಸೂರಿ ಸಿನಿಮಾ ಅಂದ್ರೆ ಔಟ್ ಆ್ಯಂಡ್ ಔಟ್ ಮಾಸ್ ರಾ ಫ್ಲೇವರ್ ಇರೋ ಸಿನಿಮಾ. …
Read More »ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ…………… ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ.
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ನಾಯಿ ಬಿಸ್ಕೆಟ್ ತಿಂದಿದ್ದಾರೆ ಎಂದು ಟಾಲಿವುಡ್ ನಟ ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ. ನಿತಿನ್ ಮತ್ತು ರಶ್ಮಿಕಾ ಅಭಿನಯದ ‘ಭೀಷ್ಮ’ ಸಿನಿಮಾ ಫೆ.21 ರಂದು ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ನಿತಿನ್ ಮತ್ತು ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಂದರೆ ಪ್ರೇಮಿಗಳ ದಿನಾಚರಣೆಯಂದು ಇಬ್ಬರೂ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ನಿತಿನ್, ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ನಿತಿನ್ …
Read More »ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ಸಖತ್ ಸದ್ದು ಮಾಡಿದ್ದು, ಈಗ ಚಿತ್ರ ತಂಡ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಶಿವರಾತ್ರಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ …
Read More »ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ. ದರ್ಶನ್ ಅವರ ಹುಟ್ಟುಹಬ್ಬವನ್ನು ಅವರು ಅಭಿಮಾನಿಗಳು ಪ್ರತೀ ವರ್ಷ ಹಬ್ಬದಂತೆ ಆಚರಣೆ ಮಾಡುತ್ತಾರೆ. ಇಂದು ಕೂಡ ದರ್ಶನ್ ಅವರಿಗೇ ಶುಭಾಶಯ ಕೋರಲು ಅವರ ಸಾವಿರಾರು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ಈ ವೇಳೆ …
Read More »ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಜೊತೆಗೆ ಪುಟ್ಟ ಅಭಿಮಾನಿಯ ಆಸ್ಪತ್ರೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 16 ವರ್ಷದ ಬಾಲಕ ಆದರ್ಶ್, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. …
Read More »ಅಂಧ ಸಹೋದರಿಯರಿಗೆ ಲೈಫ್ ಲಾಂಗ್ ಆಹಾರ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ಅರ್ಜುನ್ ಜನ್ಯಾ.ಈ ಸಕತ್ ಸ್ಟೋರಿ ನೋಡಿ.
ಮಧುಗಿರಿಯ ರತ್ನಮ್ಮ ಮತ್ತು ಮಂಜಮ್ಮ. ಅಂಧ ಸಹೋದರಿಯರು ಅದರ ಜೊತೆಗೆ ಬಡತನ. ಜೀವನ ನಿರ್ವಹಣೆಗಾಗಿ ಮಧುಗಿರಿಯ ಮಾರಮ್ಮನ ಗುಡಿಯ ಮುಂದೆ ಹಾಡು ಹಾಡುವರು. ಅವರ ಹಾಡು ಕೇಳಿದವರು ನೀಡುವ ಚಿಲ್ಲರೆಯೇ ಅವರ ಜೀವನಾಧಾರ. ಇವರು ಮೂರು ಜನ ಸಹೋದರಿಯರು. ಮೂವರು ಕೂಡಾ ಅಂಧರಾಗಿದ್ದು, ಅಜ್ಜಿಯು ಅವರ ಆರೈಕೆ ಮಾಡುತ್ತಾರೆ. ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಡಿದ ಅರಳುವ ಹೂವುಗಳೇ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಇದನ್ನು ನೋಡಿರುವ ಜೀ ಕನ್ನಡ …
Read More »ಬೆಂಗಳೂರು: ಎಲ್ಲರೂ ಎದುರು ನೋಡುತ್ತಿರುವ ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕ ಯಾವುದು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಕೆಲವು ಮೂಲಗಳ ಪ್ರಕಾರ ಕೆಜಿಎಫ್ 2 ಬಹುತೇಕ ಇದೇ ವರ್ಷ ಜುಲೈ 30 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ ಇನ್ನೂ ಚಿತ್ರೀಕರಣ ಪೂರ್ತಿಯಾಗಿಲ್ಲ. ಅಷ್ಟೇ ಅಲ್ಲದೆ, ಅಭಿಮಾನಿಗಳು ಈಗ ಟೀಸರ್ ಗಾಗಿ ಕಾತುರದಿಂದ ಕಾಯತ್ತಿದ್ದಾರೆ. ಕೆಜಿಎಫ್ 2 ನ ಎರಡು ಪೋಸ್ಟರ್ ಗಳು ಮಾತ್ರ ಇದುವರೆಗೆ ಬಿಡುಗಡೆಯಾಗಿವೆ.
Read More »