ಪಣಜಿ: ಕೊರೊನಾ ಸೋಂಕು ತಡೆಯಲು ಗೋವಾ ರಾಜ್ಯ ಸರ್ಕಾರ ಗುರುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ ವರೆಗೆ ಮೂರು ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳು ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ. ಸೋಂಕಿನ ಸರಪಳಿಯನ್ನು ಕತ್ತರಿಸಲು ಗುರುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆಯ ವರೆಗೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಅಗತ್ಯ ಸೇವೆಗಳು ಎಂದಿನಂತೆಯೇ ಇರಲಿವೆ ಎಂದರು. ಆದರೆ ವಾರದ ಸಂತೆ ನಡೆಸಲು ಅವಕಾಶ …
Read More »ಅತ್ಯಾಚಾರಕ್ಕೆ ಯತ್ನ: ಸಂಬಂಧಿಯ ಮರ್ಮಾಂಗ ಕತ್ತರಿಸಿ ಹಂದಿಗಳಿಗೆ ಉಣಬಡಿಸಿದ ಸಂತ್ರಸ್ತೆಯ ಲವರ್!
ಬ್ರಾಸಿಲಿಯಾ: ಸೋದರಸಂಬಂಧಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗ ಮತ್ತು ವೃಷಣಗಳನ್ನು ಕತ್ತರಿಸಿ ಕಾಡುಹಂದಿಗೆ ಆಹಾರವಾಗಿ ನೀಡಿರುವ ಘಟನೆ ಏಪ್ರಿಲ್ 19ರಂದು ಬ್ರೆಜಿಲ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 20 ವರ್ಷದ ಸೋದರಸಂಬಂಧಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವಿಷಯವೂ ಉತ್ತರ ಬ್ರೆಜಿಲಿಯನ್ ಮುನ್ಸಿಪಾಲಿಟಿಯ ಒಲ್ಹಾಸ್ ಡಿ ಔಗಾ ಪಟ್ಟಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, 36 ವರ್ಷದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಲಾಗಿದೆ. ಸೋದರಸಂಬಂಧಿ ಮನೆಯಲ್ಲಿ ಮಲಗಿದ್ದ ವೇಳೆ ಪಾನಮತ್ತ …
Read More »ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ. ಬಾಲಚಂದ್ರ ಜಾರಕಿಹೊಳಿ
ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ …
Read More »ಹುಟ್ಟೂರಿನಲ್ಲಿ ನೆರವೇರಿದ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ
ತುಮಕೂರು: ಕೋವಿಡ್‌ನಿಂದ ಮೃತಪಟ್ಟ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ ಕುಣಿಗಲ್ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು. ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ರಾಮು ಪಾರ್ಥೀವ ಶರೀರಕ್ಕೆ ಮಾಲಾಶ್ರೀ ಅಂತಿಮ ನಮನ ಸಲ್ಲಿಸಿದರು. ಪುತ್ರ ಆರ್ಯನ್ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪುತ್ರಿ ಅನನ್ಯ ಇದ್ದರು. ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ …
Read More »ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ!
ಅಥಣಿ: ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಹಾಗೂ ನಿರ್ಮಾಣಗೊಂಡ ನೂತನ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ಚಿಕ್ಕೋಡಿಯ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಗೆ ದೂರು ಹೋಗಿದ್ದವು. ಆ ದೂರುಗಳನ್ನಾಧರಿಸಿ ಹೆಸ್ಕಾಂ ಜಾಗೃತದಳ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬಂದಿದ್ದರಿಂದ ಕೆಲವು ಅಂಶಗಳ ಮಾಹಿತಿ ಕೋರಿ ನೋಟಿಸ್ ನೀಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನೇರವಾಗಿ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ …
Read More »14 ದಿನ ಲಾಕ್ ಡೌನ್ ಹಿನ್ನೆಲೆ..ಗೋಕಾಕನಲ್ಲಿ ಮಧ್ಯಾಹ್ನವೇ ಅಂಗಡಿ-ಮುಂಗಟ್ಟು ಬಂದ್
ಸರಕಾರದ ಕೊರಾನಾ ಹೊಸ ಮಾರ್ಗಸೂಚಿ ಬೆನ್ನಲ್ಲೆ ಗೋಕಾಕದಲ್ಲಿ ಅಂಗಡಿ ಮುಗ್ಗಟುಗಳನ್ನು ಬಂದ್ ಮಾಡಿಸಲು ಮುಂದಾದ ಪೋಲಿಸ್ ಮತ್ತು ನಗರಸಭೆ ಅಧಿಕಾರಿಗಳು. ಹೌದು ಕೊರಾನಾ2ಅಲೆಯು ತನ್ನ ಅಟ್ಟಹಾಸವನ್ನು ದಿನದಿನಕ್ಕೂ ಸಾವು ಪಡೆಯಯತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಾರ್ವಜನಿಕರು ಕೊರಾನಾ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದು ಇನ್ನೊಂದು ಕಡೆ, ಹೇಗಾದರೂ ಮಾಡಿ ಕೊರಾನಾದಿಂದ ಸರಕಾರ ಸಾರ್ವಜನಿಕರನ್ನು ರಕ್ಷಿಸಲು ಹೊಸ ಮಾರ್ಗಸೂಚಿ ಸಂಜೆಯಿಂದ ಅನ್ವಯವಾಗಲೆಂದು ಬಿಡುಗಡೆ ಮಾಡಿತ್ತು, ಆದರೆ ಗೋಕಾಕ ನಗರದಲ್ಲಿ ಇವತ್ತು ಸಂಜೆ …
Read More »ಸಿಗದ ಆಯಂಬುಲೆನ್ಸ್: ತಾಯಿ ಶವ ಬೈಕ್ ಮೇಲೆ ಸಾಗಿಸಿದ ಮಗ
ಆಂಧ್ರ ಪ್ರದೇಶ : ಕೋವಿಡ್ ಎರಡನೇ ಅಲೆ ಮತ್ತೊಂದು ಬಾರಿ ಕರುಣಾಜನಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ದೇಶದಲ್ಲಿ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದ್ದರೆ, ಬಡಜನರು ಅಸಹಾಯಕತೆಯ ನೋಟ ಬೀರುತ್ತ ಜೀವನ ಸಾಗಿಸುತ್ತಿದ್ದಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ಆಯಂಬುಲೆನ್ಸ್ ಸಿಗದಿದ್ದರಿಂದ ಕೋವಿಡ್ ರೋಗಿಯ ಶವವನ್ನು ಬೈಕ್ ಮೇಲೆ ಸಾಗಿಸಿರುವ ಮನಕಲಕುವಂತಹ ಘಟನೆ ನಡೆದಿದೆ. ಆಂಧ್ರದ ಶ್ರೀಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಎಂಬ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಈ ಗ್ರಾಮದ 50 ವರ್ಷದ …
Read More »ಪಂಜಾಬ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಕೆಕೆಆರ್..!
ಅಹಮದಾಬಾದ್: ಉತ್ತಮ ಬೌಲಿಂಗ್ ಪ್ರದರ್ಶನ, ರಾಹುಲ್ ತ್ರಿಪಾಠಿ ಹಾಗೂ ನಾಯಕ ಇಯಾನ್ ಮೋರ್ಗಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್‌ಅ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 124 ರನ್‌ಗಳ ಗುರಿ ನೀಡಿತ್ತು. ಈ ಸಾಧಾರಣ ಟಾರ್ಗೆಟ್ ಗುರಿ ಬೆನ್ನಟ್ಟಿದ ಕೆಕೆಆರ್ 20 ಎಸೆತಗಳು ಬಾಕಿ ಇರುವಂತೆ 5 …
Read More »ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ’ಯಿಂದಲೇ ‘ಕೊರೋನಾ ರೂಲ್ಸ್’ ಬ್ರೇಕ್ : ‘ಮಾಸ್ಕ್ ಧರಿಸದೇ’ ಮದುವೆ ಕಾರ್ಯಕ್ರಮದಲ್ಲಿ ಭಾಗಿ
ಕಾರವಾರ : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಆದ್ರೇ.. ಈ ನಿಯಮ ಮೀರಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ, ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿ, ಸಾರ್ವಜನಿಕರು ಕಿಡಿಕಾರಿದ್ದಾರೆ. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ನಿನ್ನೆಯ ಭಾನುವಾರದಂದು ಸಿದ್ದಾಪುರದಲ್ಲಿ ನಡೆದಂತ ಆಪ್ತರ ಮದುವೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. …
Read More »ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆ ಮುಂದೂಡಲು ಶಿಫಾರಸ್ಸು
ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳನ್ನೂ ಮುಂದೂಡುವಂತೆ ಚುನಾವಣೆ ಆಯೋಗಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ. ಮುಂದಿನ 14 ದಿನ ಜನತಾ ಕರ್ಫ್ಯೂ ಜಾರಿಯಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗುವುದು. ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. ತಾಲೂಕು, ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ …
Read More »