ಬನಹಟ್ಟಿ : ಮಹಾಮಾರಿ ಕೋವಿಡ್‌ನಿಂದಾಗಿ ಪ್ರತಿ ನಿತ್ಯ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಮುಸ್ಲಿಂ ಯುವಕರು ಜಾತ್ಯತೀತ ಭಾವನೆಯಿಂದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ರಬಕವಿಯ ಅಂಜುಮನ್ ಇಸ್ಲಾಂ ಮುಸ್ಲಿಂ ಜಮಾತನ ಮುಖಂಡರ ಚಿಂತನೆ ಮೂಲಕ ಯುವಕರ ತಂಡ ರಚನೆ ಮಾಡಿ, ಅಂತ್ಯಸಂಸ್ಕಾರ ಮಾಡಲು ಸಜ್ಜಾಗಿದ್ದಾರೆ. ಯಾವುದೇ ಜಾತಿ ಭೇದ ನೋಡದೆ, ಅವರ …
Read More »ಬ್ಲಾಕ್ ಫಂಗಲ್ ಪೀಡಿತ ಯುವಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಡಿಸಿಎಂ ಸವದಿ
ಚಿಕ್ಕೋಡಿ:ರಾಜ್ಯಾದ್ಯಂತ ಕೊವಿಡ್ ಎರಡನೆಯ ಅಲೆಯ ನಡುವೆಯೆ ಕೊವಿಡ್ ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಭಾಧಿಸುತ್ತಿರುವ ಕಪ್ಪು ಶಿಲಿಂಧ್ರ (ಬ್ಲಾಕ್ ಫಂಗಲ್ ಇಂಪೆಕ್ಷನ್) ರೋಗ ಹಲವರಲ್ಲಿ ಕಂಡು ಬರುತ್ತಿದೆ.ಆರಂಭದಲ್ಲಿ ಗಲ್ಲ,ಮೂಗು,ಕಣ್ಣಿನ ರೆಪ್ಪೆಯ ಮೇಲ್ಭಾಗದಲ್ಲಿ ಬಾವು ಕಾಣಿಸಿಕೊಂಡು ನಂತರದಲ್ಲಿ ದೇಹದ ಒಳಭಾಗಕ್ಕೆ ಹರಡಿ ಜೀವಕ್ಕೆ ಎರವಾಗುತ್ತಿರುವ ಈ ಕಾಯಿಲೆ ಕೋವಿಡ್ ಚಿಕಿತ್ಸೆ ಪಡೆದವರಲ್ಲಿ ಕಂಡುಬರುತ್ತಿರುವದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಚಿಕಿತ್ಸೆಗೆ ಬಳಕೆ ಆಗುವ ಔಷಧಿಗಳ ಅಡ್ಡಪರಿಣಾಮ ಎಂದು ಹೇಳುತ್ತಿದ್ದರೂ ಕೂಡ ಕೋವಿಡ್ ಗಿಂತ ಮುಂದುವರೆದ …
Read More »ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್!
ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತ ನಡೆದಾಗ ನನ್ನ ವಿರುದ್ಧ ಆರೋಪ ಮಾಡಿದವರು ಕ್ಷಮೆ ಕೇಳಲಿ ಎಂಬ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಾ.ರಾ. ಮಹೇಶ್, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು ಕೇವಲ 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ಎಂದು ಪ್ರಶ್ನೆಯನ್ನು ಆರಂಭಿಸಿದರು. ಪ್ರಶ್ನೆಗಳ ಸವಾಲನ್ನು ಮುಂದುವರಿಸಿದ ಸಾ.ರಾ.ಮಹೇಶ್, ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ …
Read More »ಕೊರೋನಾ ಸಂತ್ರಸ್ತೆಯ ಮೇಲೆ ಆಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ದೌರ್ಜನ್ಯ
ಕೊಚ್ಚಿ : ಕೊರೋನಾ ಸೋಂಕಿಗೆ ತುತ್ತಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಮೇಲೆ ಆಯಂಬುಲೆನ್ಸ್ ಸಹಾಯಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಏಪ್ರಿಲ್ 27 ರಂದು ಈ ಘಟನೆ ನಡೆದಿದ್ದು, ಕೊರೋನಾ ಸೋಂಕಿಗೆ ತುತ್ತಾಗಿದ್ದ ರೋಗಿ ಚೇತರಿಸಿಕೊಂಡ ಬಳಿಕ ವೈದ್ಯರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ . ಪ್ರಕರಣ ದಾಖಲಾದ ನಂತರ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಕಳೆದ ವರ್ಷ ಕೂಡ ಕೇರಳದ ಇದೇ …
Read More »ಲಾಕ್ಡೌನ್ ನಡುವೆ ಹೆಣ್ಣು ಮಕ್ಕಳ ಕಳ್ಳಸಾಗಾಟ: ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ!
ಮಲ್ಕಂಗಿರಿ: ಲಾಕ್ಡೌನ್ ನಡುವೆಯೇ ಕೆಲ ದುಷ್ಕರ್ಮಿಗಳು ನೀಚ ಕೃತ್ಯಕ್ಕೆ ಕೈ ಹಾಕಿದ್ದು, ಅಮಾಯಕ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ದಂಧೆ ನೂಕಲ ಅವರನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಹೆಣ್ಣುಮಕ್ಕಳನ್ನು ಒಡಿಶಾದ ಭೈರಾಪುತ್ರ ವಲಯದ ಕುಡುಮುಲುಗುಮ್ಮ ಗ್ರಾಮದಿಂದ ಕದ್ದು ಸಾಗಿಸಲಾಗುತ್ತಿತ್ತು. ಲಾಕ್ಡೌನ್ ಪರಿಶೀಲನೆ ವೇಳೆ ಶುಕ್ರವಾರ ಘಟನೆ ಬೆಳಕಿಗೆ ಬಂದಿದೆ. ಮಲ್ಕಂಗಿರಿ ತಹಸೀಲ್ದಾರ್ ವಿಜಯ್ ಮಂದಾಂಗಿ ಲಾಕ್ಡೌನ್ ಪರಿಶೀಲನೆ ಮಾಡುವಾಗ ವಾಹನವೊಂದರಲ್ಲಿ ಹೆಣ್ಣು ಮಕ್ಕಳು ಕುಳಿತಿದ್ದನ್ನು ಗಮನಿಸಿದ್ದಾರೆ. ಅವರ ಬಳಿ …
Read More »ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ ಸಾತವಾ ಕೊರೋನಾಕ್ಕೆ ಬಲಿ
ನವದೆಹಲಿ – ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ ಸಾತವಾ ಕೊರೋನಾಕ್ಕೆ ಬಲಿಯಾಗಿದ್ದಾರೆ. ಒಂದು ವಾರದ ಹಿಂದೆ ಸಾತವಾ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಅತ್ಯಂತ ಕ್ರಿಯಾಶೀಲ, ಉತ್ಸಾಹಿ ಸಂಸದರಾಗಿದ್ದ ರಾಜೀವ, ಗಾಂಧಿ ಕುಟುಂಬಕ್ಕೆ ಹತ್ತಿರದವರಾಗಿದ್ದರು. Its not at all believable. We lost a humble and grounded person today. Shri #RajeevSatav Ji was an inspiration for …
Read More »ಅಂತ್ಯಕ್ರಿಯೆಗೆ ಕೆಲವೇ ನಿಮಿಷವಿರುವಾಗ ಎದ್ದು ನಿಂತ ಕೋವಿಡ್ ಪೀಡಿತ ಮಹಿಳೆ
ಹೊಸದಿಲ್ಲಿ: ಒಂದು ವಿಲಕ್ಷಣ ಘಟನೆಯೊಂದರಲ್ಲಿ ಬಾರಾಮತಿಯ ಮುಧಲೆ ಗ್ರಾಮದ, 76 ವರ್ಷದ ಮಹಿಳೆ ಕೋವಿಡ್ ನಿಂದ ಮೃತಪಟ್ಟಿದ್ದಾಳೆಂದು ನಂಬಿ ಕುಟುಂಬದವರು ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದಾಗ ಮಹಿಳೆ ಎದ್ದುನಿಂತಿರುವ ಒಂದು ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ಮಹಿಳೆಯನ್ನು ಶಕುಂತಲಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆ ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದರು. ಮನೆಯಲ್ಲಿ ಪ್ರತ್ಯೇಕವಾಗಿದ್ದರು. ಆದರೆ ವೃದ್ಧಾಪ್ಯದಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿತು, ಹೀಗಾಗಿ ಕುಟುಂಬದವರು ಮಹಿಳೆಯನ್ನು ಬಾರಾಮತಿಯ ಆಸ್ಪತ್ರೆಗೆ ಸ್ಥಳಾಂತರಿಸಲು …
Read More »ಒಳಿತು ಮಾಡು ಮನುಷ್ಯಾ.. ನೀ ಇರೋದು ಮೂರು ದಿವಸಾ: ಹಿಂಗೆ ನಡೆದುಕೊಳ್ಳುತ್ತಿದ್ದಾರೆ ಹುಬ್ಬಳ್ಳಿ ಪೊಲೀಸರು…!
ಹುಬ್ಬಳ್ಳಿ: ಕೊರೋನಾ ಎಂಬ ಮಹಾಮಾರಿ ಪ್ರತಿಯೊಬ್ಬರ ನೆಮ್ಮದಿಯನ್ನ ಹಾಳು ಮಾಡುವುದಲ್ಲದೇ, ಬದುಕನ್ನ ನಿರ್ಜೀವಿಯನ್ನಾಗಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆಯಿದೆ. ತಾನೂ ಇರುವುದೆಷ್ಟು ದಿನ ಎಂಬುದು ಗೊತ್ತೆಯಿಲ್ಲದಿದ್ದರೂ, ಮನುಷ್ಯ ಮಾತ್ರ ಮಾನವೀಯ ಇನ್ನೂ ಮೈಗೂಡಿಸಿಕೊಳ್ಳುತ್ತಿಲ್ಲ. ಆದರೆ, ಸದಾಕಾಲ ಸಾರ್ವಜನಿಕರಿಂದ ವಿನಾಕಾರಣ ಬೈಸಿಕೊಳ್ಳುವ ಪೊಲೀಸರು ಮಾತ್ರ, ತಾವೂ ಎಷ್ಟು ಮಾನವೀಯತೆ ಹೊಂದಿದ್ದೇವ ಎಂಬುದನ್ನ ಸದ್ದಿಲ್ಲದೇ ತೋರಿಸಿಕೊಂಡು ಹೋಗುತ್ತಿದ್ದಾರೆ.. ಹುಬ್ಬಳ್ಳಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಬಂದ ನಂತರ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳು …
Read More »ಕೊರೋನಾ ಭಯ ಬೇಡ- ನಿಮ್ಮೊಂದಿಗೆ ಡಾ.ಸೀಮಾ ಸಾಧಿಕಾ ಇರ್ತಾರೆ…!
ಬೆಂಗಳೂರು: ಕೊರೋನಾ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ಬಹುತೇಕರಿಗೆ ಈಗಾಗಲೇ ಸಹಾಯ ಮಾಡುತ್ತಿರುವ ನಮ್ಮ ಮಿತ್ರ ಫೌಂಡೇಷನ್ ಸಂಸ್ಥಾಪಕಿ ಡಾ.ಸೀಮಾ ಸಾಧಿಕಾ ಅವರು, ಪ್ರತಿಯೊಂದು ಮಾಹಿತಿಯನ್ನ ನೀಡಲು ಮುಂದಾಗಿದ್ದಾರೆ. ಕೊರೋನಾ ಸಮಯದಲ್ಲಿ ಆರೋಗ್ಯ ಏರುಪೇರಾದ ತಕ್ಷಣ ಏನು ಮಾಡಬೇಕು. ಮನೆಯಲ್ಲಿಯೇ ಹೇಗೆ ಆರೋಗ್ಯ ಸುಧಾರಿಸಿಕೊಳ್ಳಬಹುದು. ನೀವು ಯಾವ ಔಷಧ ತೆಗೆದುಕೊಳ್ಳಬಹುದೆಂಬ ಮಾಹಿತಿಯನ್ನ ನೀಡಲಿದ್ದಾರೆ. ಅವಶ್ಯಕವಿದ್ದ ಸಮಯದಲ್ಲಿ ಆಸ್ಪತ್ರೆಗಳ ಮಾಹಿತಿಯನ್ನೂ ತಮಗೆ ನೀಡಲಿದ್ದಾರೆ. ಜ್ವರ, ಕೆಮ್ಮು …
Read More »ಕೋವಿಡ್ ಕೇರ್ ಸೆಂಟರನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟನೆ ಮಾಡಿದರು
ದಾವಣಗೆರೆ: ಕೋವಿಡ್ ಸೋಂಕಿತರಿಗಾಗಿ ದಾವಣಗೆರೆ-ಶಿರಮಗೊಂಡನಹಳ್ಳಿ ಮಾರ್ಗದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ವ್ಯವಸ್ಥೆಗೊಳಿಸಲಾಗಿದ್ದು, ಶನಿವಾರ ಸಂಸದ ಜಿ.ಎಂ. ಸಿದ್ದೇಶ್ವರ ಅದಕ್ಕೆ ಚಾಲನೆ ನೀಡಿದರು. ‘ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರಿಂದ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ವಿವಿಧೆಡೆ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ತರಳಬಾಳು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ …
Read More »