ಮುಂಬೈ : ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಾಲಿವುಡ್‌ನ ಪ್ರಸಿದ್ಧ ಛಾಯಾಗ್ರಾಹಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇ 26 ರಂದು, 28 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರಸಿದ್ಧ ಬಾಲಿವುಡ್ ಛಾಯಾಗ್ರಾಹಕ ಸೇರಿ 8 ಜನರ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಮಾಡೆಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಐಪಿಸಿಯ 376 …
Read More »ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ
ಕೋಲಾರ: ಎರಡು ರಾಜ್ಯಗಳನ್ನು ಸಂಪರ್ಕಿಸುವ ಗಡಿ ಜಿಲ್ಲೆಯ ಎಲ್ಲ ದಾರಿಗಳು ಕೊರೊನಾ ಆತಂಕದಿಂದ ಬಂದ್ ಆಗಿವೆ. ಆದರೆ ಹೊರ ರಾಜ್ಯದ ಜನ ಮಾತ್ರ ಗಡಿಗಳಲ್ಲಿ ಕಳ್ಳಾಟ ನಡೆಸುತ್ತಿದ್ದಾರೆ. ರಸ್ತೆ ಬಂದ್ ಮಾಡಿ, ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಿದ್ದರೂ, ಹಳ್ಳಿಗಳು, ಕಾಡು ಮೇಡುಗಳ ಕಳ್ಳ ದಾರಿಯ ಮೂಲಕ ಹೊರ ರಾಜ್ಯದ ಜನ ನುಸುಳುತ್ತಿದ್ದಾರೆ. ಬಂಗಾರಪೇಟೆ ತಾಲೂಕು ಕನಮನಹಳ್ಳಿ ಸೇರಿದಂತೆ ಕೆಜಿಎಫ್ ತಾಲೂಕು ವೆಂಕಟಾಪುರ, ಕೆಂಪಾಪುರ, ಮುಳಬಾಗಲು ತಾಲೂಕಿನ ನಂಗಲಿ, ಬೈರಕೂರು, …
Read More »ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿನೂತನವಾಗಿ ಆರಂಭಿಸಿರುವ “ಕೋವಿಡ್-19 ಹೆಲ್ಪ್ ಲೈನ್ ಸರ್ವೀಸ್ ಸೆಂಟರ್” ಗೆ ಚಾಲನೆ :
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆರಂಭಿಸಿರುವ “ಕೋವಿಡ್-19 ಹೆಲ್ಪ್ ಲೈನ್ ಸರ್ವೀಸ್ ಸೆಂಟರ್” ಗೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಅಶೋಕ ಪಟ್ಟಣ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ , ವಿಶ್ವಾಸ ವೈದ್ಯ ಸೇರಿ ಇನ್ನಿತರರು ಉಪಸ್ಥಿತರಿದ್ದರು. “ಕೋವಿಡ್ ಸೋಂಕಿತರಿಗೆ ಔಷಧಿ ವಿತರಣೆ, ಸಲಹೆ, ಸೂಚನೆಗಳನ್ನು ನೀಡುವುದು, ಸೋಂಕಿತರನ್ನು …
Read More »ಜೂನ್‌ನಲ್ಲಿ ಎಷ್ಟು ಲಸಿಕೆ ಲಭ್ಯವಾಗಲಿದೆ ಎಂದು ಲೆಕ್ಕ ನೀಡಿದ ಆರೋಗ್ಯ ಸಚಿವಾಲಯ
ನವದೆಹಲಿ, ಮೇ 30: ಸುಮಾರು 12 ಕೋಟಿಯಷ್ಟು ಲಸಿಕೆ ಜೂನ್ ತಿಂಗಳಿನಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. ಮೇ ತಿಂಗಳಿನಲ್ಲಿ ಒಟ್ಟು 7.94 ಕೋಟಿಯಷ್ಟು ಲಸಿಕೆಯನ್ನು ಉತ್ಪಾದನೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯನ್ನು ವಿತರಣೆಯ ಮಾದರಿ, ಜನಸಂಖ್ಯೆ ಮತ್ತು ವಾಕ್ಸಿನ್ ವೇಸ್ಟೇಜ್ ಪ್ರಮಾಣವನ್ನು ನೋಡಿಕೊಂಡು ಹಂಚಲಾಗುತ್ತದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಜೂನ್ ತಿಂಗಳಿನಲ್ಲಿ …
Read More »ಹೊಸಪೇಟೆ; ಒಂದೇ ದಿನದ ಅಂತರದಲ್ಲಿ ಕೋವಿಡ್‌ಗೆ ಅಕ್ಕ, ತಮ್ಮ ಬಲಿ
ವಿಜಯನಗರ, ಮೇ 30; ಕೋವಿಡ್ ಸೋಂಕಿಗೆ ಅಕ್ಕ ಮತ್ತು ತಮ್ಮ ಬಲಿಯಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನದ ಅಂತರದಲ್ಲಿ ಇಬ್ಬರೂ ಸಹ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಹಾಗೂ ಸಾವಿಯೋ ಸ್ಮಿತ್ (42) ಎಂದು ಗುರುತಿಸಲಾಗಿದೆ. ಕೋವಿಡ್ ಸೋಂಕು ತಗುಲಿದ ಬಳಿಕ 8 ದಿನಗಳಿಂದ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ …
Read More »ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಯಶಸ್ವಿ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯನ್ಮು ನಿಯಂತ್ರಿಸಲು ಅಧಿಕಾರಿಗಳು ಹಾಗೂ ಎಲ್ಲ ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಶನಿವಾರ ಮುಖ್ಯಮಂತ್ರಿಗಳಾದ ಬಿ ಎಸ್.ಯಡಿಯೂರಪ್ಪ ಅವರು ಕರೆದಿದ್ದ ಐದು ಜಿಲ್ಲೆಗಳ ಜನ ಪ್ರತಿನಿಧಿಗಳು ಮತ್ತು ಉಸ್ತುವಾರಿ ಸಚಿವರುಗಳ ಸಭೆಯಲ್ಲಿ ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ …
Read More »ಶಾಸಕರ ಅನುದಾನದಲ್ಲಿ ಯಲ್ಲಾಪುರ ಕ್ಕೆ ನಾಲ್ಕು ಆಂಬುಲೆನ್ಸ್ ನೀಡಿದ ಶಿವರಾಮ ಹೆಬ್ಬಾರ್
ಕಾರವಾರ: ಶಾಸಕರ ಅನುದಾನದಲ್ಲಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಯಲ್ಲಾಪುರಕ್ಕೆ ನಾಲ್ಕು ಅಂಬುಲೆನ್ಸ್ ಖರೀದಿಸಿದ್ದಾರೆ. ಖರೀದಿಸಿದ ಅಂಬುಲೆನ್ಸ್ ಗಟ್ಟಿಮುಟ್ಟಾಗಿದೆಯೇ ಎಂದು ಪರೀಕ್ಷಿಸಲು ತಾವೇ ಸ್ವತ: ಹೊಸದಾಗಿ ಬಂದ ಅಂಬುಲೆನ್ಸ್ ಏರಿ ವಾಹನ ಚಲಾಯಿಸಿ ಟ್ರಯಲ್ ನೋಡಿದರು. ಯಲ್ಲಾಪುರದ ಪ್ರವಾಸಿ ಮಂದಿರದಿಂದ ಯಲ್ಲಾಪುರ ನಗರವನ್ನು ಒಂದು ಸುತ್ತುಹಾಕಿ ನಂತರ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಸಚಿವ ಶಿವರಾಮ್ ಹೆಬ್ಬಾರ್ ರವರು …
Read More »ಕೊರೊನಾ ಸೋಂಕಿಗೆ ನಾಟಿ ಔಷಧ ನೀಡುತ್ತಿದ್ದ ಮಹಿಳೆಗೆ ತಹಶೀಲ್ದಾರ್ ಎಚ್ಚರಿಕೆ
ಬಳ್ಳಾರಿ: ಕೊರೊನಾ ಸೋಂಕಿಗೆ ನಾಟಿ ಔಷಧ ನೀಡುತ್ತಿದ್ದ ಮಹಿಳೆಗೆ ಜಿಲ್ಲೆಯ ಸಂಡೂರು ತಾಲೂಕಿನ ತಹಶೀಲ್ದಾರ್ ರಶ್ಮಿ ಅವರು ಎಚ್ಚರಿಕೆ ನೀಡಿದ್ದು, ಯಾರಿಗೂ ಔಷಧಿ ನೀಡದಂತೆ ಸೂಚನೆ ಕೊಟ್ಟಿದ್ದಾರೆ. ಸಂಡೂರು ತಾಲೂಕಿನ ಹಳೆ ದರೋಜಿ ಗ್ರಾಮದಲ್ಲಿ ಕೊರೊನಾಗೆ ಮಹಿಳೆಯೊಬ್ಬರು ನಾಟಿ ಔಷಧ ನೀಡುತ್ತಿದ್ದರು. ಈ ಔಷಧ ಪಡೆದರೆ ಕೊರೊನಾ ವಾಸಿಯಾಗುತ್ತೆ ಎಂದು ನಂಬಿರುವ ಹಲವರು ಔಷಧ ಪಡೆಯಲು ಮಹಿಳೆಯ ನಿವಾಸದ ಎದುರು ಆಗಮಿಸುತ್ತಿದ್ದರು. ಮಹಿಳೆ ಮನೆಯಲ್ಲಿ ಔಷಧ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ …
Read More »ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ
ದೆಹಲಿ: ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್ ಗೆ 25 ರಿಂದ 26 ಪೈಸೆ ಹಾಗೂ ಡೀಸೆಲ್ ದರ ಲೀಟರ್ ಗೆ 28ರಿಂದ 30 ಪೈಸೆ ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಈವರೆಗೆ 15 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂ ಗಡಿ ದಾಟಿದ್ದು, 100.19 ರೂಪಾಯಿಯಾಗಿದೆ. ಡೀಸೆಲ್ ದರ 92.17 ರೂಪಾಯಿ …
Read More »ಪ್ರೇಮಿ ಜೊತೆ ಸೇರಿ 2ನೇ ಗಂಡನ ಕೊಲ್ಲಿಸಿದ 5 ಮಕ್ಕಳ ತಾಯಿ!
ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆ ಆಗಿದ್ದ 5 ಮಕ್ಕಳ ತಾಯಿ ಪ್ರಿಯಕರನ ಜೊತೆಗೂಡಿ ಎರಡನೇ ಗಂಡನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಬದನ್ಯುವಿನ ನಿವಾಸಿ ಸುಶೀಲಾ ತನ್ನ ಮೊದಲನೇ ಗಂಡ ಲಾಲಾರಾಮ್ನನ್ನು 5 ಮಕ್ಕಳೊಂದಿಗೆ ತೊರೆದು ಸಂತ್ರಾಮ್ ಎಂಬಾತನನ್ನು ಎರಡನೇ ಮದುವೆ ಆಗಿ ನಯಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಸಂತ್ರಾಮ್ ಜೊತೆ10ರಿಂದ 20 ವರ್ಷ ಸಂಬಂಧ ಹೊಂದಿದ್ದ ಸುಶೀಲಾ, ಅದೇ ಗ್ರಾಮದ ಬದನ್ಯುವಿನ ನಿವಾಸಿ ಮನೋಜ್ …
Read More »