ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸೂಕ್ತ ಸಮಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ನೀತಿಯ ಬಗ್ಗೆ ಚರ್ಚೆ ಆಗುತ್ತಿರುವ ಸಮಯದಲ್ಲೇ ಸಿ.ಟಿ.ರವಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯೆಯ ಸ್ಫೋಟ ಸಂಭವಿಸಿದಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ. …
Read More »ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಗಾವಿ ಯೋಧನ ಅಂತ್ಯಕ್ರಿಯೆ
ಗೋಕಾಕ : ಕಳೆದ ನಾಲ್ಕೈದು ದಿನಗಳ ಹಿಂದೆ ನ್ಯಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಪಘಾತದಲ್ಲಿ ಅಸುನೀಗಿದ್ದ ಗೋಕಾಕ ತಾಲ್ಲೂಕಿನ ವೀರಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಜರುಗಿತು. ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡಣ್ಣವರ (38) ಯೋಧ ಅಫಘಾತದಲ್ಲಿ ಸಾವನ್ನಪ್ಪಿದ್ದರು. ಮೃತ ಯೋಧನ ಪಾರ್ಥಿವ ಶರೀರ ಬೆಂಗಳೂರಿನಿಂದ ಇಂದು ಬೆಳಿಗ್ಗೆ 7 ಗಂಟೆಗೆ ಯೋಧನ ಸ್ವಗ್ರಾಮ ಗೋಕಾಕ್ ತಾಲ್ಲೂಕಿನ ಶಿವಾಪುರ ಗ್ರಾಮಕ್ಕೆ ರಸ್ತೆ ಮೂಲಕ ಕರೆತರಲಾಯಿತು. …
Read More »ಕಪ್ಪತ್ತಗುಡ್ಡದಲ್ಲಿ ಖಾಕಿಯ ಟ್ರೆಕ್ಕಿಂಗ್ ಮಜಾ
ಗದಗ/ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ರವಿವಾರ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿತ್ತು. ಕೈಗೆ ತಾಗುವಷ್ಟು ಮೋಡಗಳ ಮಧ್ಯೆ ಖಾಕಿ ಪಡೆಯ ಹೆಜ್ಜೆಗಳ ಸಪ್ಪಳ ಜೋರಾಗಿತ್ತು. ಹೌದು. ರವಿವಾರ ಬೆಳಗ್ಗೆ ಎಸ್ಪಿ ಎನ್.ಯತೀಶ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿ ಕಾರಿಗಳು ಹಾಗೂ ಆಯ್ದ ಸಿಬ್ಬಂದಿ ಟ್ರೆಕ್ಕಿಂಗ್‌ನಲ್ಲಿ ಒಬ್ಬರಿಗಿಂತ ಒಬ್ಬರು ಮೇಲೆಂಬಂತೆ ಗಿರಿ ಶಿಖರವನ್ನೇರಿ ಕಪ್ಪತ್ತಗಿರಿ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರ ಮನ ಸೆಳೆದರು. ಸದಾ ಕೆಲಸದ ಒತ್ತಡ ಹಾಗೂ ಇತ್ತೀಚೆಗೆ ಕೋವಿಡ್ …
Read More »ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಸಿಗಬೇಕಿದೆ.: ಪ್ರಹ್ಲಾದ್ ಜೋಶಿ,ಉಮೇಶ್ ಕತ್ತಿ ಸಿಎಂ ಕನಸಿಗೆ ಪರೋಕ್ಷ ಬೆಂಬಲ
ಬಿಜೆಪಿ ಪಾಳಯದಲ್ಲಿ ಸಿಎಂ ಬದಲಾವಣೆಯ ಕೂಗು ಮುಗಿಯುವಂತೆ ಕಾಣುತ್ತಿಲ್ಲ. ಭಿನ್ನಮತ ಶಮನಕ್ಕೆ ಹೈಕಮಾಂಡ್ ಪ್ರಯತ್ನದ ಬಳಿಕವೂ ಅಲ್ಲಲ್ಲಿ ಭಿನ್ನರಾಗಗಳು ಕೇಳಿ ಬರುತ್ತಲೇ ಇದೆ. ಸದಾ ಸಿಎಂ ಸ್ಥಾನದ ಕನಸು ಕಾಣುವ ಉಮೇಶ್ ಕತ್ತಿ ಇಂದು ಮತ್ತೊಮ್ಮೆ ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಸಚಿವ ಉಮೇಶ್ ಕತ್ತಿಯ ಈ ಮಾತಿಗೆ ಪರೋಕ್ಷ ಬೆಂಬಲ ಸೂಚಿಸಿ ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕತ್ತಿ ಉತ್ತರ ಕರ್ನಾಟಕದವರು ಮುಂದಿನ …
Read More »ಇಂದಿನಿಂದ ಮುಕ್ತ ವ್ಯಾಪಾರ,ವಹಿವಾಟು
ಹಾಸನ: ಕೊರೊನಾ 2ನೇ ಅಲೆಯು ಇಳಿಮುಖ ವಾಗುತ್ತಾ ಸಾಗಿರುವುದರಿಂದ ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ್ದ ಇದ್ದ ಲಾಕ್‌ಡೌನ್ ಸೋಮವಾರದಿಂದ ಸಡಿಲಿಕೆಯಾಗುತ್ತಿದ್ದು, ಇನ್ನು ಪ್ರತಿದಿನವೂ ಮುಂಜಾನೆಯಿಂದ ರಾತ್ರಿವರೆಗೂ ಎಲ್ಲ ವಹಿವಾಟು ಮುಕ್ತವಾಗಿ ನಡೆಯಲಿವೆ. ಇದುವರೆಗೂ ವಾರದಲ್ಲಿ ಸೋಮವಾರ, ಬುಧ ವಾರ, ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶವಿತ್ತು. ಇನ್ನುಳಿದ 4 ದಿನ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿತ್ತು. ಆದರೆ ಸೋಮವಾರ …
Read More »ಹಳ್ಳಿಗರಿಗೂ ಲಸಿಕೆ ಕೊಡಿ : ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಲಸಿಕೆ ಕೇಂದ್ರ ಸ್ಥಗಿತ
ರಾಜ್ಯದಲ್ಲಿ ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಕೊರೊನಾ ಲಸಿಕೆ ಕೇಂದ್ರಗಳು ಸ್ಥಗಿತ ಗೊಂಡಿವೆ. ಬೇಡಿಕೆಯ ಶೇ. 20ರಷ್ಟು ಲಸಿಕೆಯೂ ಪೂರೈಕೆಯಾಗುತ್ತಿಲ್ಲ. ಲಸಿಕೆ ಬೇಕೆಂದರೆ ಆಸ್ಪತ್ರೆಗಳ ಮುಂದೆ ನಗರದ ಜನತೆ ಬೆಳಗ್ಗೆ 4ಕ್ಕೇ ಸರತಿಯಲ್ಲಿ ನಿಲ್ಲಬೇಕು. ಹಳ್ಳಿಯವರು ವಾರಗಟ್ಟಲೆ ಕಾಯಬೇಕು! ರಾಜ್ಯದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸರಕಾರಿ ವಲಯದಲ್ಲಿ 8,500 ಸಾವಿರ ಲಸಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಜೂ. 21ರಂದು ನಡೆದ ಲಸಿಕೆ ಮೇಳದಂದು 7,958 ಕೇಂದ್ರಗಳಲ್ಲಿ 24 ತಾಸುಗಳಲ್ಲಿ 11.6 ಲಕ್ಷ ಮಂದಿಗೆ …
Read More »ವಂಚನೆ ಪ್ರಕರಣ: ಮಹಿಳೆಯ ಹಿಂದಿರುವವರ ಪತ್ತೆಗೆ ನಟ ದರ್ಶನ್ ಒತ್ತಾಯ
ಮೈಸೂರು, 25 ಕೋಟಿ ರೂಪಾಯಿ ಬ್ಯಾಂಕ್ ಸಾಲ ಶೂರಿಟಿ ಸಂಬಂಧಿಸಿದಂತೆ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಇಂದು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 16ರಂದು ನನಗೆ ಈ ಸಂಬಂಧ ಮೊದಲ ಕರೆ ಬಂದಿತ್ತು ಎಂದು ಹೇಳಿದರು. ನನ್ನ ತೋಟದ ಮನೆ ಸೇರಿದಂತೆ ಹಲವು ಆಸ್ತಿಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಬ್ಯಾಂಕ್ ಅಧಿಕಾರಿ ಎಂದು ಹೇಳಿದ್ದ ವ್ಯಕ್ತಿಯೊಬ್ಬರು ತಿಳಿಸಿದರು ಎಂದು ದರ್ಶನ್ …
Read More »ಎರಡು ವರ್ಷದೊಳಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಪಣ
ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು. ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ …
Read More »ಪೆಟ್ರೋಲ್ ಬೆಲೆ ಏರಿಕೆ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ: ಸಚಿವ ನಿತಿನ್ ಗಡ್ಕರಿ
ನವದೆಹಲಿ: ಪೆಟ್ರೋಲ್ ಬೆಲೆ ಏರಿಕೆ ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ(ಜುಲೈ11) ನಾಗ್ಪುರದಲ್ಲಿ ದೇಶದ ಮೊದಲ ಖಾಸಗಿ ಎಲ್ ಎನ್ ಜಿ(ನೈಸರ್ಗಿಕ ಅನಿಲ) ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಪೆಟ್ರೋಲ್ ಬೆಲೆ ಏರಿಕೆಯಿಂದ ದೇಶಕ್ಕೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ. ಇದರಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಗ್ರಾಹಕರು ಇನ್ನು ಪೆಟ್ರೋಲ್ ಬಂಕ್ ಬೇಕೋ ಅಥವಾ ಎಥಾನಾಲ್ (ನೈಸರ್ಗಿಕ …
Read More »ದೆಹಲಿ ರಾಜಕೀಯ ಪಡಸಾಲೆಯಲ್ಲೂ ಸೈ ಎನಿಸಿಕೊಂಡ ಬಿ.ಎಲ್. ಸಂತೋಷ್; ಮುಂದಿನ ನಡೆ ಏನು?
ಬೆಂಗಳೂರು: ಕಳೆದ ವಾರ ಕೇಂದ್ರ ಸಚಿವ ಸಂಪುಟ ಪುನರ್ರಚನೆಯ ನಂತರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಂಘಟನೆಯ ಉಸ್ತುವಾರಿಯಲ್ಲಿ ಮತ್ತಷ್ಟು ಪ್ರಭಾವಿಯಾಗಿ ಬೆಳೆಯುತ್ತಿದ್ದಾರೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಒಳಗಿನವರು ನಂಬಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಗತಗೊಳಿಸಿದ ಕೇಂದ್ರ ಸಂಪುಟ ಪುನರ್ರಚನೆಗೆ ಅಂತಿಮವಾಗಿ ಅನುಮೋದನೆ ನೀಡಿದ್ದು ಆರ್‌ಎಸ್‌ಎಸ್ ಹಿರಿಯ ನಾಯಕ ಬಿ.ಎಲ್. ಸಂತೋಷ್ ಎಂಬುದು ಈಗ ಖಚಿತವಾಗಿದೆ. ಮೂರು ವರ್ಷಗಳ ಹಿಂದೆ, ಸಂತೋಷ್ ನವದೆಹಲಿ ರಾಜಕೀಯ …
Read More »
Laxmi News 24×7