ಬೇರೆಯವರ ಹೆಂಡತಿ ಬಗ್ಗೆ ಮಾತನಾಡುವಾಗ ಎಲ್ಲರೂ ಹುಷಾರಾಗಿಬೇಕು ಎನ್ನುವುದಕ್ಕೆ ನಿದರ್ಶನವಾಗಿ ಚಿಕ್ಕೋಡಿಯಲ್ಲೊಂದು ಘಟನೆ ನಡೆದಿದೆ. ಆತ್ಮೀಯ ಸ್ನೇಹಿತರ ನಡುವೆ ಹೆಂಡತಿ ವಿಚಾರ ಬಂದು ಅದು ಕೊಲೆಯಲ್ಲಿ ಅಂತ್ಯಗೊಂಡಿದೆ. ಆಗಿದ್ದೇನೆಂದರೆ, ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗೆಳೆಯನನ್ನು ವ್ಯಕ್ತಿಯೊಬ್ಬ ಹೆಂಡ ಕುಡಿಸಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಸುನೀಲ್ ಸಾಳುಂಕೆ(೩೪) ಕೊಲೆಯಾದವನು. ಮಹಾಂತೇಶ ಮತ್ತು ರಾಜು ಎಂಬವರನ್ನು ಈ ಕೊಲೆಗೆ ಸಂಬಂಧಿಸಿ ಬಂಧಿಸಲಾಗಿದೆ. ಅಕ್ಟೋಬರ್ ೭ರಂದು ಈ ಕೊಲೆ …
Read More »ತಾಯಿ ಮತ್ತು ಮೂರು ಮಕ್ಕಳು ಸಾವು
ಬೆಳಗಾವಿ ಮೂಲದ ಮೂರು ಹೆಣ್ಣು ಮಕ್ಕಳು ಹಾಗೂ ತಾಯಿಯ ಶವ ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ನಿವಾಸಿ ಆಗಿರುವ ಸುನಿತಾ ತುಕಾರಾಮ್ ಮಾಳಿ ಮತ್ತು ಪುತ್ರಿಯರಾದ ಅಮೃತಾ, ಅಂಕಿತಾ ಹಾಗೂ ಐಶ್ವರ್ಯಾ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ. ಕಳೆದ ಭಾನುವಾರ ಮುಂಜಾನೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮತ್ತು ಮೂವರು ಪುಟ್ಟ ಹೆಣ್ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. …
Read More »ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಲು ನಾರಾಯಣಸ್ವಾಮಿ ಒತ್ತಾಯ
ಹುಬ್ಬಳ್ಳಿ: ‘ಬಲಗೈ ಸಮುದಾಯದವರಿಗೆ ಪಕ್ಷದಲ್ಲಿ ಕಡಿಮೆ ಅವಕಾಶ ನೀಡಲಾಗಿದೆ. ಪಕ್ಷಕ್ಕೆ ಈ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು’ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು. ನಗರದಲ್ಲಿ ಭಾನುವಾರ ನಡೆದ ದಮನಿತರ ಚಿಂತನ ಸಭೆಯಲ್ಲಿ ಮಾತನಾಡಿ, ‘ಪಕ್ಷದಲ್ಲಷ್ಟೇ ಅಲ್ಲದೆ, ಸರ್ಕಾರ ಮತ್ತು ಅಧಿಕಾರಶಾಹಿ ವರ್ಗದಲ್ಲೂ ಆಯಕಟ್ಟಿನ ಹುದ್ದೆಗಳನ್ನು ನೀಡಬೇಕು’ ಎಂದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ‘ಹಿಂದೂ ಧರ್ಮದಲ್ಲಿರುವ …
Read More »ನಾಗರಾಳ: ಮಂಗಳಮುಖಿಯರ ಸ್ವ-ಉದ್ಯೋಗಕ್ಕೆ ಆರ್ಥಿಕ ನೆರವು
ಗುಳೇದಗುಡ್ಡ: ತಾಲ್ಲೂಕಿನ ನಾಗರಾಳ ಎಸ್.ಪಿ ಗ್ರಾಮದಲ್ಲಿ ತೃತೀಯ ಲಿಂಗಿಗಳನ್ನು ಸ್ವಸಹಾಯ ಸಂಘದ ಸದಸ್ಯರನ್ನಾಗಿಸಿ, ಸ್ವಯಂ ಉದ್ಯೋಗಕ್ಕಾಗಿ ಸಾಲ ನೀಡಿರುವ ಜಿಲ್ಲಾ ಪಂಚಾಯಿತಿ, ಅವರು ಸ್ವಾವಲಂಬಿಗಳಾಗಲು ಅವಕಾಶ ಮಾಡಿಕೊಟ್ಟಿದೆ. ಸಂಘದಲ್ಲಿ ಇಂತಹ 20 ಸದಸ್ಯರಿದ್ದು, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಅವರು ಸಾಲವನ್ನೂ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ. ಬಾಗಲಕೋಟೆ ಜಿ.ಪಂ ಸಿಇಒ ಟಿ. ಬೂಬಾಲನ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿರ್ವಹಣೆ ಮಿಷನ್ (ಎನ್‌ಆರ್‌ಎಲ್‌ಎಂ) ತಾಲ್ಲೂಕು ಪ್ರೋಗ್ರಾಮರ್ ಗುರುಲಿಂಗಯ್ಯ ಗೌಡರ ಅವರು ಜಿಲ್ಲಾ ಪಂಚಾಯಿತಿಯಲ್ಲಿ …
Read More »ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ವಿರುದ್ಧದ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್
ನವದೆಹಲಿ/ಬೆಂಗಳೂರು: ಖಾಸಗಿ ವ್ಯಕ್ತಿಯೊಬ್ಬರು ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಹ ಮೊದಲು ಒಪ್ಪಿಗೆ ಸೂಚಿಸಿತ್ತು. ಆದ್ರೆ ವಿಚಾರಣೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ. 2016ರಲ್ಲಿ ಸ್ಥಾಪಿಸಲಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಕನಕರಾಜು ಎಂಬುವರು …
Read More »ಬಿಜೆಪಿಯಿಂದ ರಾಜ್ಯ ಪ್ರವಾಸ: ಜನಸಂಕಲ್ಪ ಯಾತ್ರೆಗೆ ನಾಳೆ ರಾಯಚೂರಿನಲ್ಲಿ ಚಾಲನೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೇಸರಿ ಅಲೆ ಎಬ್ಬಿಸಲು ಬಿಜೆಪಿ ಮುಂದಾಗಿದ್ದು, ಜನಸಂಕಲ್ಪ ಯಾತ್ರೆಯನ್ನು ಆರಂಭಿಸುತ್ತಿದೆ. ನಾಳೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಆರಂಭಗೊಳ್ಳಲಿದೆ. ನಾಳಿನ ಯಾತ್ರೆಯ ಆರಂಭದಲ್ಲಿ 50 ಸಾವಿರ ಜನ ಸೇರಲಿದ್ದು, ರಾಜ್ಯದಲ್ಲಿ ಎಲ್ಲರ ಗಮನ ಸೆಳೆಯುವ ಯಾತ್ರೆ ಇದಾಗಲಿದೆ. …
Read More »3 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿತ
ಬೆಂಗಳೂರು: ಮೂರು ತಿಂಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಡರ್ ಪಾಸ್ ಕಳಪೆ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಲಹಳ್ಳಿ ಬಳಿಯ ಅಂಡರ್ ಪಾಸ್ ಕುಸಿದಿದ್ದು, ಪ್ರಯಾಣಿಕಾರಾದಿಯಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 40% ಕಮಿಷನ್ ದಂಧೆಯ ಎಫೆಕ್ಟ್ ಎಂದು ಅಂಡರ್ ಪಾಸ್ ಕುಸಿತದ ಬಗ್ಗೆ ಸಾರ್ವಜನಿಕರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read More »ಕೋಟೆನಾಡು ಪ್ರವೇಶಿಸಿದ ‘ಭಾರತ್ ಜೋಡೊ ಯಾತ್ರೆ’
ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆ ಸೋಮವಾರ ಕೋಟೆನಾಡು ಪ್ರವೇಶಿಸಿದ್ದು, ಹಿರಿಯೂರು ನಗರದ ಹೊರವಲಯದಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು, ಕೆಂಕೆರೆ ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆ ಪಾದಯಾತ್ರೆ ನಡೆಸಿದ ರಾಹುಲ್, ವಾಹನದಲ್ಲಿ ಹಿರಿಯೂರು ತಲುಪಿದರು. ವಿಶೇಷ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿ ಚರ್ಚಿಸಿದರು. ಸಂಜೆ 4ಕ್ಕೆ ಹಿರಿಯೂರಿನ ತಹಾ ಪ್ಯಾಲೇಸ್ ಖಾಸಗಿ ಕಲ್ಯಾಣ ಮಂಪಟದಿಂದ ಪಾದಯಾತ್ರೆ …
Read More »ಪಕ್ಷಕ್ಕೆ ಹೊಸ ಹೆಸರು ಚಿಹ್ನೆ ಸೂಚಿಸಿದ ಶಿವಸೇನೆಯ ಉದ್ಧವ್ ಬಣ
ಹೊಸದಿಲ್ಲಿ: ಮುಂಬೈನ ಅಂಧೇರಿ ಪೂರ್ವದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಮೂರು ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ನೀಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಮೊದಲ ಆಯ್ಕೆಯ ಹೆಸರು ‘ಶಿವಸೇನಾ ಬಾಳಾಸಾಹೇಬ್ ಠಾಕ್ರೆ’ ಮತ್ತು ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎರಡನೇ ಆಯ್ಕೆಯಾಗಿದೆ ಎಂದು ಅವರು ಹೇಳಿದರು. ಚಿಹ್ನೆಯ ಆಯ್ಕೆ ವಿಚಾರದಲ್ಲಿ ತ್ರಿಶೂಲ ತನ್ನ ಮೊದಲ ಆಯ್ಕೆಯ ಚಿಹ್ನೆ ಮತ್ತು ಸುರ್ಯೋದಯದ ಚಿತ್ರ ಎರಡನೇ …
Read More »ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ : ಓವೈಸಿ ಹೇಳಿದ್ದೇನು?
ಹೈದರಾಬಾದ್ : ಇಬ್ಬರು ಮಕ್ಕಳ ನಡುವಿನ ಅಂತರವನ್ನು ಕಾಯ್ದುಕೊಳ್ಳಲು ಮುಸ್ಲಿಂ ಸಮುದಾಯದವರು ಕುಟುಂಬ ಯೋಜನಾ ಸಾಧನ ಕಾಂಡೋಮ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆರ್‌ಎಸ್‌ಎಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಅವರ ಇತ್ತೀಚಿನ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಭಾಗವತ್ ಅವರು ಇದನ್ನು ಉಲ್ಲೇಖಿಸುವುದಿಲ್ಲ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ಚರ್ಚಿಸುವ ಮೊದಲು ಅವರು …
Read More »