Breaking News

ರಾಷ್ಟ್ರೀಯ

ಗರ್ಭಕೋಶಕ್ಕೆ ಕತ್ತರಿ ಪ್ರಕರಣ: ಸಂತ್ರಸ್ತ ಮಹಿಳೆಯರಿಂದ ಅಹೋರಾತ್ರಿ ಧರಣಿ

ಹಾವೇರಿ: ಅನಧಿಕೃತವಾಗಿ ಗರ್ಭಕೋಶದ ಚಿಕಿತ್ಸೆಗೊಳಗಾಗಿದ್ದ ಮಹಿಳೆಯರು ‘ವಿಶೇಷ ಆರ್ಥಿಕ ಪ್ಯಾಕೇಜ್’ ಘೋಷಿಸುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಸೋಮವಾರ ಅಹೋರಾತ್ರಿ ಧರಣಿ ನಡೆಸಿದರು. ರಾಣೆಬೆನ್ನೂರಿನ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿದ್ದ ಡಾ.ಪಿ. ಶಾಂತ ಅವರು 1522 ಬಡ ಮಹಿಳೆಯರ ಗರ್ಭಕೋಶವನ್ನು ಅನಧಿಕೃತವಾಗಿ ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಗರ್ಭಕೋಶ ತೆಗೆದಿರುವ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೂರಾರು ಮಹಿಳೆಯರು ಆಗ್ರಹಿಸಿದರು. ಕಳೆದ …

Read More »

ಪುತ್ತೂರು: ಸರಣಿ ಕಳ್ಳತನ ಪ್ರಕರಣ ಅಂತಾರಾಜ್ಯ ಕಳ್ಳನ ಸೆರೆ

ಪುತ್ತೂರು: ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಯ್ಯೂರು ಗ್ರಾಮದ ಕಟ್ಟತ್ತಾರು, ಕೆಯ್ಯೂರು, ಮಾಡಾವು ಪರಿಸರದಲ್ಲಿ ಸರಣಿ ಮನೆ ಕಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಅಂತಾರಾಜ್ಯ ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.   ಕೇರಳದ ಕಣ್ಣೂರು ಜಿಲ್ಲೆಯ ತಲಿಪೆಂಬ ತಾಲೂಕಿನ ಅಲಕೋಡು ಗ್ರಾಮದ ವರಂಬಿಲ್‌ ನಿವಾಸಿ ಆರೋಪಿ ಮಹಮ್ಮದ್‌ ಕೆ.ಯು. (42)ಬಂಧಿತ ಆರೋಪಿ. ವಿಚಾರಣೆ ನಡೆಸಿದ ಸಮಯ ಆರೋಪಿಯು ಕಳೆದ ವರ್ಷ ಸವಣೂರು ಹಾಗೂ …

Read More »

ಮಳವಳ್ಳಿಯಲ್ಲಿ ಅತ್ಯಾಚಾರ ಪ್ರಕರಣ: ಡಿಡಿಪಿಐಗೆ ಬಿಇಒ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಮಳವಳ್ಳಿ: ಟ್ಯೂಷನ್​ಗೆ ಹೋದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಅನಧಿಕೃತ ಟ್ಯೂಷನ್​ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೆ, ಬಾಲಕಿಯ ಮೇಲೆ ಕೃತ್ಯ ಎಸಗಿದ ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ ಮತ್ತು ಟ್ಯೂಷನ್ ಸೆಂಟರ್‌ ಅಧಿಕೃತವು ಅಲ್ಲ ಎಂಬ ಸಂಗತಿಯು ಬಯಲಾಗಿದೆ.   ಟ್ಯೂಷನ್​​ಗೆ ತೆರಳಿದ್ದ 10 ವರ್ಷದ ಬಾಲಕಿ ಮೇಲೆ ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸಂಸ್ಥೆಯ‌ ಮೇಲ್ವಿಚಾರಕನಿಂದಲೇ ಅತ್ಯಾಚಾರ ನಡೆದಿತ್ತು. ಅಲ್ಲದೆ, …

Read More »

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು; ಸಾಂಕೇತಿಕ ಧರಣಿ 21ರಿಂದ

ಮೀಸಲಾತಿಗೆ ಒತ್ತಾಯ; ಸಾಂಕೇತಿಕ ಧರಣಿ 21ರಿಂದ ಮೂಡಲಗಿ: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಮೂಡಲಗಿ ತಾಲ್ಲೂಕು ವ್ಯಾಪ್ತಿಯ 10 ಸಾವಿರಕ್ಕೂ ಅಧಿಕ ಸಂಖ್ಯೆಯ ಉಪ್ಪಾರ ಸಮಾಜ ಜನರಿಂದ ಅ. 21ರಂದು ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಉಪ್ಪಾರ ಸಮಾಜದ ಮುಖಂಡ ಬಿ.ಬಿ. ಹಂದಿಗುಂದ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಈರಣ್ಣ ದೇವಸ್ಥಾನದಿಂದ ಪಾದಯಾತ್ರೆಯ ನಂತರ …

Read More »

ಫೈನಾನ್ಸ್​​ ಕಂಪನಿ ವಿರುದ್ಧ ವಂಚನೆ ಆರೋಪ: ಸದಸ್ಯರ ಮನೆಗಳ ಮುಂದೆ ಜನರ ಪ್ರತಿಭಟನೆ

ಬೆಳಗಾವಿ: ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿ ವಿರುದ್ಧ 25 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಂತ್ರಸ್ತರು ಫೈನಾನ್ಸ್ ಮತ್ತು ಆಡಳಿತ ಮಂಡಳಿ ಸದಸ್ಯರ ಮನೆಗಳ‌ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಫೈನಾನ್ಸ್​​ ಕಂಪನಿ ವಿರುದ್ಧ ವಂಚನೆ ಆರೋಪಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿರುವ ನವೋದಯ ಫೈನಾನ್ಸ್, ಜಗಜ್ಯೋತಿ ಸೌಹಾರ್ದ ಸಹಕಾರಿ ಸಂಘವು ಸರ್ವಜ್ಞ ಚಿಟ್ ಹೆಸರಿನಲ್ಲಿ ಅಂದಾಜು 25 ಕೋಟಿ ರೂ.ವಂಚನೆ …

Read More »

ಯತ್ನಾಳ್​ಗೆ ನೋಟಿಸ್ ಜಾರಿ, ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್: ಅರುಣ್​ ಸಿಂಗ್

ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್ ಮಾಡದಂತೆ ಹಾಗೂ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್ ಕೊಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನ ಸಚಿವ ಮಾಡಿಲ್ಲ. ಅದಕ್ಕಾಗಿ ಹೀಗೆ ಮಾತಾಡ್ತಿದ್ದಾರೆ. ಯಾರೇ ಆದ್ರು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಪಕ್ಷದ ಹಿರಿಯ ನಾಯಕರನ್ನ ಗೌರವಿಸಬೇಕು. ಯತ್ನಾಳ್ ಅವರ ಇಂತಹ ಹೇಳಿಕೆಗೆ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

*ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ* ಗೋಕಾಕ : ತಾಲೂಕಿನ ಸಂತೋಷ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಹಿರೇನಂದಿ ಗ್ರಾಮದಿಂದ ಕಾರ್ಖಾನೆವರಗೆ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ತರಲಾಯಿತು. ನಂತರ ಗೋಮಾತೆ ಗೆ ಪೂಜೆ ಸಲ್ಲಿಸಿ, ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ …

Read More »

ದೂಧ್ ಸಾಗರ್ ಪ್ರವಾಸೋದ್ಯಮ ಆರಂಭ ; ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಆಗಮನ

ಪಣಜಿ: ಗೋವಾದ ಜಗತ್ಪ್ರಸಿದ್ಧ ದೂಧ್ ಸಾಗರ್ ಪ್ರವಾಸೋದ್ಯಮ ಸೋಮವಾರದಿಂದ ಆರಂಭಗೊಂಡಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಸದ್ಯ ಪ್ರತಿದಿನ 150 ಕ್ಕೂ ಜೀಪ್‍ಗಳ ಮೂಲಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ತೆರಳುತ್ತಿದ್ದಾರೆ.   ಗೋವಾದ ದೂಧ್ ಸಾಗರ್ ಜಲಪಾತವು ದೇಶ ವಿದೇಶದ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ದೂಧಸಾಗರ ಜಲಪಾತ ವೀಕ್ಷಣೆಗೆರ ಗೋವಾದ ಕುಳೆ ಮೂಲಕ ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ತೆರಳಲು ಅಸಾಧ್ಯವಾಗಿದೆ. ಇದೀಗ ಮಳೆ ಕಡಿಮೆಯಾಗಿರುವುದರಿಂದ ಜಲಪಾತ ವೀಕ್ಷಣೆಗೆ ತೆರಳಲು ಸಾಧ್ಯವಾಗಿದೆ. …

Read More »

APPLE ಕಂಪನಿಗೆ ಬರೋಬ್ಬರಿ 2 ಕೋಟಿ ಡಾಲರ್‌ ದಂಡ ವಿಧಿಸಿದ ನ್ಯಾಯಾಲಯ

ಬ್ರೆಸಿಲಿಯಾ: ಗ್ರಾಹಕರಿಗೆ ಕೇವಲ ಐ-ಫೋನ್‌ ನೀಡಿ, ಚಾರ್ಜರ್‌ ನೀಡದ ಆಯಪಲ್‌ ಕಂಪನಿಗೆ ಬ್ರೆಜಿಲ್‌ ನ್ಯಾಯಾಲಯ ಬರೋಬ್ಬರಿ 2 ಕೋಟಿ ಡಾಲರ್‌ ದಂಡ ವಿಧಿಸಿದೆ. “ಗ್ರಾಹಕರಿಗೆ ಕೇವಲ ಫೋನ್‌ ಪೂರೈಸಿ, ಚಾರ್ಜರ್‌ ನೀಡದಿರುವುದು ಕೆಟ್ಟ ಪದ್ಧತಿಯಾಗಿದೆ. ಇದು ಗ್ರಾಹಕರಿಗೆ ಹೆಚ್ಚುವರಿ ವಸ್ತುಗಳನ್ನು ಖರೀದಿಸಲು ಬಲವಂತಪಡಿಸಿದಂತೆ,’ ಎಂದು ಬ್ರೆಜಿಲ್‌ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಬ್ರೆಜಿಲಿಯನ್‌ ಗ್ರಾಹಕರ ಸಂಘವು ಆಯಪಲ್‌ ಕಂಪನಿಯ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೇ ರೀತಿ ಚಾರ್ಜರ್‌ ಇಲ್ಲದೇ ಐಫೋನ್‌ …

Read More »

18ಕ್ಕೂ ಹೆಚ್ಚು ಶಾಸಕರು, ಸಚಿವರು, ಶ್ರೀಮಂತರು, ಪ್ರಭಾವಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ

ಭುವನೇಶ್ವರ: ಒಡಿಶಾದ ಬಡತನದ ಕೇಂದ್ರ ಎಂದು ಬಿಂಬಿಸಲ್ಪಟ್ಟಿರುವ ಕಾಳಹಂಡಿ ಜಿಲ್ಲೆಯ 26 ವರ್ಷದ ಮಹಿಳೆ ಅರ್ಚನಾ ನಾಗ್‌ ಇವತ್ತು ಕೋಟ್ಯಧಿಪತಿ! ಶ್ರೀಮಂತರು, ಪ್ರಭಾವಿಗಳ ಖಾಸಗಿ ಕ್ಷಣಗಳ ಚಿತ್ರಗಳನ್ನಿಟ್ಟುಕೊಂಡು, ಅವರನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಆಕೆ ಕಳೆದ ವಾರವೇ ಬಂಧನಕ್ಕೊಳಗಾಗಿದ್ದಾಳೆ. ಈಗ ಆಕೆಯ ವಿರುದ್ಧ ವಸೂಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ವಿಶೇಷ ಗೊತ್ತಾ? ಒಡಿಶಾ ಚಿತ್ರನಿರ್ದೇಶಕರೊಬ್ಬರು ಆಕೆಯ ಬಗ್ಗೆ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ. ಒಂದು ಕಾಲದಲ್ಲಿ ಬಡವಳಾಗಿದ್ದ ಅರ್ಚನಾ …

Read More »