ಈ ಬಾರಿ ನಡೆಯಲಿರುವ ೧ ನವೆಂಬರ್ ಕರಾಳದಿನಕ್ಕೆ ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಈ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರಿಗೆ ಮಾತು ಕೊಟ್ಟಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಮುಖರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರಿಗೆ ಫೋನಾಯಿಸಿ ೧ ನವೆಂಬರ್ ಕರಾಳದಿನಕ್ಕೆ ಮಹಾರಾಷ್ಟ್ರದ ಪ್ರತಿನಿಧಿಗಳನ್ನು ಕಳುಹಿಸಿಕೊಡುವಂತೆ ಆಗ್ರಹಿಸಿದ್ದಾರೆ. ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಖಜಾಂಚಿ ಪ್ರಕಾಶ ಮರಗಾಳೆ ಅವರ ಬೇಡಿಕೆಗೆ ಮಹಾ ಸಿಎಂ …
Read More »ಮಳೆಯ ನಡುವೆ ಹಾವುಗಳ ಕಾಟ,ಉರಗ ಭಯಕ್ಕೆ ತೋಟದ ವಸತಿಗಳ ರೈತರು ಕಂಗಾಲ
ಮಳೆಯ ನಡುವೆ ಹಾವುಗಳ ಕಾಟಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ಜಮೀನು, ತೋಟಗಳನ್ನ ಬಿಟ್ಟು ಮನೆಗಳ ನುಗ್ತಿರೋ ಹಾವಿನ ಭಯದಿಂದ ಮನೆಗೆ ಬೆಂಕಿ ಇಟ್ಟು, ಜೆಸಿಬಿ ಬಳಸಿ ಮನೆಗಳನ್ನೆ ಧ್ವಂಸ ಮಾಡ್ತಿರುವ ವಿಜಯಪುರ ಜಿಲ್ಲೆಯ ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ನಡೆದಿದೆ. ಜನರಿಗೆ ಹಾವುಗಳದ್ದೆ ಭಯ, ಉರಗ ಭಯಕ್ಕೆ ತೋಟದ ವಸತಿಗಳ ರೈತರು ಕಂಗಾಲಾಗಿದ್ದಾರೆ. ನಿರಂತರ ಮಳೆಯಿಂದ ಮನೆಗಳಿಗೆ ನುಗ್ತಿವೆ. ಮನೆ ಹೊಕ್ಕ ಹಾವಿಗೆ ಹೆದರಿ ಮನೆಗಳಿಗೆ ಬೆಂಕಿ ಇಡ್ತಿದ್ದಾರೆ. ಸಾವಳಸಂಗ ಹಾಗೂ …
Read More »‘ಗೊಂಬೆ ಹೇಳುತೈತೆ’ ಹಾಡು ಕೇಳುತ್ತಾ ದುಃಖ ಉಮ್ಮಳಿಸಿ ಕೈ ಮುಗಿದು ಅಳುತ್ತಾ ಹೊರಟ ಅಶ್ವಿನಿ ಪುನೀತ್ ರಾಜ್‌ಕುಮಾರ್!
ಅರಮನೆ ಮೈದಾನದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕಾರ್ಯಕ್ರಮದ ಕೊನೆಗೆ ಡಾ. ರಾಜ್‌ಕುಮಾರ್ ಕುಟುಂಬ ಸದಸ್ಯರೆಲ್ಲಾ ಸೇರಿ ‘ಗೊಂಬೆ ಹೇಳುತೈತೆ’ ಹಾಡು ಹಾಡಿದರು. ಗಾಯಕ ವಿಜಯ ಪ್ರಕಾಶ್ ಜೊತೆ ಹಾಡು ಹಾಡುತ್ತಾ ಎಲ್ಲರೂ ಭಾವುಕರಾದರು. ಹಾಡಿನುದ್ದಕ್ಕೂ ಭಾವುಕರಾಗಿ ನಿಂತಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೊನೆಗೆ ದುಃಖ ತಾಳಲಾರದೇ ಎಲ್ಲರಿಗೂ ಕೈ ಮುಗಿದು ಅಳುತ್ತಾ ವೇದಿಕೆಯಿಂದ ಹೊರಟುಬಿಟ್ಟರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. …
Read More »ಒಂಬತ್ತು ಜಿಲ್ಲಾಧಿಕಾರಿಗಳ ವರ್ಗಾವಣೆ
ಬೆಂಗಳೂರು : ಮೈಸೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಒಳಗೊಂಡಂತೆ ಒಂಬತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಟಿ.ಕೆ. ಅನಿಲ್‌ಕುಮಾರ್-ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ). ಎನ್.ವಿ. ಪ್ರಸಾದ್-ಕಾರ್ಯದರ್ಶಿ, ಕಾರ್ಮಿಕ ಇಲಾಖೆ. ಎನ್. ಜಯರಾಮ್-ಕಾರ್ಯದರ್ಶಿ, ಕಂದಾಯ ಇಲಾಖೆ. ಬಗಾದಿ ಗೌತಮ್- ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಪಿ.ಐ. ಶ್ರೀವಿದ್ಯಾ- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ. ಡಿ.ಎಸ್. ರಮೇಶ್-ಜಿಲ್ಲಾಧಿಕಾರಿ, ಚಾಮರಾಜನಗರ. ಎಚ್.ಎನ್. ಗೋಪಾಲಕೃಷ್ಣ- ಜಿಲ್ಲಾಧಿಕಾರಿ, …
Read More »ಹುಕ್ಕೇರಿ ಪಂಚಮಸಾಲಿ ಸಮಾವೇಶ ವಿಜಯಾನಂದ ಕಾಶಪ್ಪನವರ ಹಾಗೂ ಪೃಥ್ವಿ ಕತ್ತಿ ವಾಗ್ವಾದ
ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೆ ಗೆಲ್ಲಿಸಿ ಎಂದು ಕರೆ ನೀಡಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‍ಗೆ ಮಾಜಿ ಸಂಸದ ರಮೇಶ ಕತ್ತಿ ಪುತ್ರ ಪೃಥ್ವಿ ಕತ್ತಿ ಕೇಳಗೆ ಬಾ ಎಂದು ಸವಾಲು ಹಾಕಿರುವ ಘಟನೆ ನಡೆದಿದೆ. ಹೌದು ಹುಕ್ಕೇರಿ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ …
Read More »ಕೆಂಪೇಗೌಡರ 108 ಅಡಿ ಭವ್ಯ ಪ್ರತಿಮೆ ಕನ್ನಡಿಗರ ಸ್ವಾಭಿಮಾನ ಪ್ರಗತಿಯ ಪ್ರತೀಕ: C.M ಬೊಮ್ಮಾಯಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳು ಬಳಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ–Sಣಚಿಣue oಜಿ Pಡಿosಠಿeಡಿiಣಥಿ ಅನಾವರಣದ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕೆ …
Read More »ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ
ಮೈಸೂರು: ವಿಧಾನಸಭಾ ಚುವಾಣೆಗೆ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯುತ್ತಿದ್ದರೆ. ಇತ್ತ ಕಾಂಗ್ರೆಸ್ ಕೂಡ ಭಾರತ್ ಜೋಡೋ ಯಾತ್ರೆ ಮೂಲಕ ಸಂಚಲನ ಮೂಡಿಸುತ್ತಿದೆ. ಇದೀಗ ಜೆಡಿಎಸ್ ಪಂಚರತ್ನ ಯಾತ್ರೆಗೆ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಕೆಲ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.ಜೆಡಿಎಸ್ ತೊರೆಯಲು ಮುಂದಾಗಿದ್ದ ಹಿರಿಯ ಶಾಸಕ ಜಿ.ಟಿ ದೇವೇಗೌಡರನ್ನು ಮನವೊಲಿಕೆ ಮಾಡುವಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಯಶಸ್ವಿಯಾಗಿದ್ದು, ಈ ಮೂಲಕ ಹಳೆ ಮೈಸೂರು …
Read More »ನ. 1ರಂದು ಪುನೀತ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರದಾನ:C.M. ಬೊಮ್ಮಾಯಿ
ಬೆಂಗಳೂರು: ‘ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಬಗ್ಗೆ ಪುನೀತ್ ರಾಜ್‌ಕುಮಾರ್ ಕುಟುಂಬದ ಸದಸ್ಯರು ಮತ್ತು ಸಂಪುಟ ಸಹೋದ್ಯೋಗಿಗಳ ಜೊತೆ ಗುರುವಾರ ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದರು. ‘ಈವರೆಗೆ ಎಂಟು ಜನರಿಗೆ …
Read More »ಜಲ ಸಂಪನ್ಮೂಲ ಇಲಾಖೆಯ 155 ಎಸ್ಡಿಎ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಆಹ್ವಾನ
ರಾಜ್ಯ ಜಲ ಸಂಪನ್ಮೂಲ ವಿಭಾಗದಲ್ಲಿ (Water Resources Department) 155 ಬ್ಯಾಕ್ಲಾಗ್ ದ್ವಿತೀಯ ದರ್ಜೆ ಸಹಾಯಕ (Backlog Second Division Clerk) ಹುದ್ದೆ ನೇಮಕಾತಿಗೆ ನೀಡಿದ್ದ ತಡೆಯನ್ನು ರದ್ದು ಪಡಿಸಿ ಸರ್ಕಾರ ಮತ್ತೆ ಹೊಸದಾಗಿ ಅಧಿಸೂಚನೆ ಹೊರಡಿಸಿದೆ. ಗ್ರೂಪ್ ಸಿ ವೃಂದದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಆಸಕ್ತ …
Read More »ಬೆಳಗಾವಿ ನಗರ ಸಿಸಿಬಿ ಪೊಲೀಸರ ದಾಳಿ; ಅಫೀಮ ಮಾರಾಟ ಮಾಡುತ್ತಿದ್ದ ರಾಜಸ್ಥಾನಿ ವ್ಯಕ್ತಿಗಳಿಬ್ಬರ ಬಂಧನ
ದಿನಾಂಕ 20.10.2022 ರಂದು ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಶ್ರೀ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ನಗರದ ಆಟೋ ನಗರದಲ್ಲಿ ನಿಷೇಧಿತ ಅಫೀಮ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಾದ 1) ರೋಹಿತಾಶ್ವ ಭಗವಾನರಾಮ ಬಿಷ್ನೋಯಿ (24 ) ಸಾ: ಜೋಧಪುರ, ರಾಜಸ್ಥಾನ ಹಾಲಿ ಎಮ್.ಕೆ ಹುಬ್ಬಳ್ಳಿ, ಬೆಳಗಾವಿ 2) ರಾಜಕುಮಾರ್ ಜುಗತಾರಾಮ್ ಬಿಶ್ನೊಯಿ(22) ವರ್ಷ, ಸಾ: ಜೋಧಪುರ, ರಾಜಸ್ಥಾನ ಹಾಲಿ ರುಕ್ಮಿಣಿ …
Read More »