Breaking News

ರಾಷ್ಟ್ರೀಯ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಇಂದು ಸಂಜೆ ಐದು ಗಂಟೆಗೆ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಇಂದು ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆ ಇದ್ದು, ಎಲ್ಲರ‌ ಚಿತ್ತ ಸಿಎಂ ಸಚಿವ ಸಂಪುಟದತ್ತ ಇದೆ ಎಂದು ಕೂಡಲ ಸಂಗಮ ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ 2 ಎ‌ ಮೀಸಲಾತಿಗಾಗಿ ಕಳೆದ ಎರಡೂ‌ ವರ್ಷಗಳಿಂದ ನಿರಂತರವಾಗಿ ನಡೆದ ಹೋರಾಟ ಬೆಳಗಾವಿಯಲ್ಲಿ ಬಂದು ನಿಂತಿದೆ. ನಮ್ಮ ಸಮಾಜದ …

Read More »

ಮುಂಬಯಿ ಯಾರಪ್ಪನದ್ದೂ ಅಲ್ಲ, ಮಹಾರಾಷ್ಟ್ರದ್ದು.; ಫಡ್ನವಿಸ್ ಕಿಡಿ

ನಾಗಪುರ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮುಂಬೈ ರಾಜ್ಯಕ್ಕೆ ಸೇರಿದ್ದು ಮತ್ತು ಯಾರಪ್ಪನದ್ದೂ ಅಲ್ಲ ಎಂದು ಬುಧವಾರ ಹೇಳಿ, ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ ಕರ್ನಾಟಕದ ಕೆಲ ನಾಯಕರ ಟೀಕೆಗಳನ್ನು ಬಲವಾಗಿ ಖಂಡಿಸಿದ್ದಾರೆ.   ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವಿಸ್, ರಾಜ್ಯದ ಭಾವನೆಗಳನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಲಾಗುವುದು ಎಂದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ …

Read More »

ಕರ್ನಾಟಕದ ವಿರುದ್ಧ ಮಹಾರಾಷ್ಟ್ರದ ನಿರ್ಣಯಕ್ಕೆ ರಾಜ್ಯದಲ್ಲಿ ರೋಷಾಗ್ನಿ

ನಾಗ್ಪುರ/ಬೆಳಗಾವಿ: ಬೆಳಗಾವಿ ಗಡಿ ವಿವಾದದ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರನ್ನು ಕೆರಳಿಸುತ್ತಿರುವ ಮಹಾರಾಷ್ಟ್ರ, ಈಗ “ನಿರ್ಣಯ’ದ ಮೂಲಕ ಕರ್ನಾಟಕವನ್ನು ಕೆಣಕಿದೆ. ಮಂಗಳವಾರ ಮಹಾರಾಷ್ಟ್ರ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಕರ್ನಾಟಕದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಇದಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ, ಗಡಿ ತಂಟೆ ಕುರಿತು ಮಹಾರಾಷ್ಟ್ರದ ವರ್ತನೆ ವಿರುದ್ಧ ರಾಜ್ಯ ವಿಧಾನ ಪರಿಷತ್‌ನಲ್ಲಿ ಸರ್ವಾನುಮತ ನಿರ್ಣಯವನ್ನು ಕೈಗೊಳ್ಳಲಾಗಿದೆ. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಇತ್ತೀಚೆಗೆ ವಿಧಾನಸಭೆಯಲ್ಲಿ ನಿರ್ಣಯ …

Read More »

ಹಳೇ ಪಿಂಚಣಿ ವ್ಯವಸ್ಥೆ ಜಾರಿ ಇಲ್ಲ: ಸಿಎಂ ಬೊಮ್ಮಾಯಿ

ಬೆಳಗಾವಿ: ಹಳೆಯ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತರುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಹೋರಾಡು ತ್ತಿರುವ ಸರಕಾರಿ ನೌಕರರಿಗೆ ಹಿನ್ನಡೆಯಾಗಿದೆ.   ಮಂಗಳವಾರ ಬಿಜೆಪಿಯ ರೇಣುಕಾ ಚಾರ್ಯ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಿಎಂ, ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಕಷ್ಟು ನಿಧಿ ಇಲ್ಲ. ಹಾಗಾಗಿ ಮರು ಜಾರಿ ಕಷ್ಟ. ಅಲ್ಲದೇ ಆರ್‌ಬಿಐ …

Read More »

ಈಗಾಗಲೇ ಮಹಾಜನ ವರದಿ ಇತ್ಯರ್ಥ : ಸಿದ್ದರಾಮಯ್ಯ

ಮಹಾರಾಷ್ಟ್ರ ರಾಜ್ಯ ಸರ್ಕಾರದ ನಿರ್ಣಯವನ್ನು ಖಂಡಿಸಿ ಕಾಂಗ್ರೆಸ್ ಸಿ ಎಲ್ ಪಿ ಅದ್ಯಕ್ಷ ಸಿದ್ದರಾಮಯ್ಯ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಈಗಾಗಲೇ ಮಹಾಜನ್ ಆಯೋಗ ವರದಿ ಇತ್ಯರ್ಥ ಆಗಿದೆ ಆದರೆ ಮಹಾರಾಷ್ಟ್ರ ಸರ್ಕಾರ ನಮಗೆ ಸೇರಬೇಕು ಎಂದು ನಿರ್ಣಯ ಮಾಡಿದರೆ ಅದಕ್ಕೆ ಕಾನೂನು ಬಲ ಇಲ್ಲಾ, ನಾವು ನಮ್ಮ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಮಹಾರಾಷ್ಟ್ರ ವಿಧಾನಸಭೆ ನಿರ್ಣಯಕ್ಕೆ ಕವಡೆ ಕಾಸಿನ‌‌ಕಿಮ್ಮತ್ತು ಇಲ್ಲ ಎಂದರು.

Read More »

ಗೋವಾಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಚಾಲಕ

ಪಣಜಿ: ರಜೆ ಇದ್ದ ಕಾರಣಕ್ಕೆ ಗೋವಾಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಚಾಲಕನನ್ನು ಬಂಧಿಸಲಾಗಿದೆ. ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.   ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ಮೊರ್ಮುಗಾವೊದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ್ ವಾಸು ಲಮಾಣಿ ಎಂದು ಪೊಲೀಸರು ಗುರುತಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಬಸ್ …

Read More »

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ಶೇ.5ರಷ್ಟು ಡಿಎ, ಫಿಟ್ಮೆಂಟ್ ಅಂಶ ಹೆಚ್ಚಳ, ಸ್ಯಾಲರಿ ಹೆಚ್ಚಳ

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮನೆ ಬಾಡಿಗೆ ಭತ್ಯೆ, ಡಿಎ ಹೆಚ್ಚಳ, ಡಿಎ ಬಾಕಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಫಿಟ್ಮೆಂಟ್ ಫ್ಯಾಕ್ಟರ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆಯಿದೆ. ದೀರ್ಘಕಾಲದಿಂದ, ಕೇಂದ್ರ ಸರ್ಕಾರಿ ನೌಕರರು ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ವರದಿಗಳನ್ನ ನಂಬುವುದಾದ್ರೆ, ಫಿಟ್ಮೆಂಟ್ ಫ್ಯಾಕ್ಟರ್’ನ ದೀರ್ಘಕಾಲದ ಬೇಡಿಕೆಯ ಬಗ್ಗೆ ಕೇಂದ್ರವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ವರದಿಗಳ …

Read More »

ಸರ್ ಕೊಲೆ ಮಾಡ್ತಾರೆ ಬದುಕಿಸಿ: ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್ ಸ್ಟಾರ್ ನವೀನ್

ಬೆಂಗಳೂರು : ಬೆಂಗಳೂರು ಸಿಸಿಬಿ ಮತ್ತು ಸೌಥ್ ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಸ್ಟಾರ್ ಇದ್ದಕ್ಕಿದ್ದಂತೆ ಸಿದ್ದಾಪುರ ಪೊಲೀಸರಿಗೆ ಕರೆ ಮಾಡಿ ಸರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ ಎಂದು ಗೋಗರೆದಿದ್ದ. ಇನ್ನೂ ನವೀನ ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಫಾಲೋ ಮಾಡಿದ ಗ್ಯಾಂಗ್‌ನಿಂದ ಈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮೈಸೂರಿಗೆ ಎದುರಾಳಿಗಳಿಗೆ ಮೆಸೇಜ್ ಪಾಸ್​ ಮಾಡಿದ್ದ ವಿಷಯ ಕೇಳಿಸಿಕೊಂಡು ಜಾಗೃತನಾದ ರೌಡಿಶೀಟರ್ ನವೀನ ತಕ್ಷಣ ಸಿಸಿಬಿ …

Read More »

ಮತ್ತೆ ವಿದೇಶದತ್ತ ಉಕ್ರೇನ್‌ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು

ವಿಜಯಪುರ: ಉಕ್ರೇನ್‌-ರಷ್ಯಾ ಯುದ್ಧದ ಪರಿಣಾಮ ಜೀವ ಉಳಿಸಿಕೊಂಡು ಭಾರತಕ್ಕೆ ಮರಳಿದ್ದ ನಿರಾಶ್ರಿತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸದ ಕಾರಣಕ್ಕೆ ನಿರಾಶರಾದ ವಿದ್ಯಾರ್ಥಿಗಳು ಇದೀಗ ವಿದೇಶದತ್ತ ಮುಖ ಮಾಡತೊಡಗಿದ್ದಾರೆ.   ಉಕ್ರೇನ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮರಳಿದ್ದ ಸುಮಾರು 700 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ನಿರಾಕರಿಸಿದೆ. …

Read More »

ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿ: ಠಾಕ್ರೆ

ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸುವಂತೆ ಶಿವಸೇನ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಗೆ ತಿಳಿಸಿದ್ದಾರೆ.   ‘ಕರ್ನಾಟಕದ ಮುಖ್ಯಮಂತ್ರಿ ಆಕ್ರಮಣಕಾರಿಯಾಗಿದ್ದು, ಮಹಾರಾಷ್ಟ್ರ ಸಿಎಂ ಶಿಂದೆ ಮೌನವಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು. ಪ್ರಸ್ತಾವನೆಯಲ್ಲಿ ಇದನ್ನು ಸೇರಿಸಿ ಸದನ ಅಂಗೀಕರಿಸಬೇಕು’ ಎಂದು ಉದ್ಧವ್ ಹೇಳಿದ್ದಾರೆ. ಉದ್ಧವ್ …

Read More »