ಬೆಂಗಳೂರು: ಪ್ರಧಾನಿ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದರು. ಜನವರಿ 19 ರಂದು ಪ್ರಧಾನಿ …
Read More »ಬಿಜೆಪಿ ವಿರುದ್ಧ ‘ಕೈ’ ಹೋರಾಟ: ಕಾಂಗ್ರೆಸ್ ನಾಯಕರಿಂದ ರಾಜ್ಯ ಪ್ರವಾಸ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಇದೇ 11ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸಲಿದ್ದು, ಅದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರವಾಸ ಸಮಿತಿಯ ಸಭೆ ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆಯಿತು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವೆಂದು ವಿಭಾಗ ಮಾಡಿಕೊಂಡು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಯಾತ್ರೆ ಕೈಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಕಡೆ …
Read More »ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನ; ನಾಳೆ ಸಾಗರ ಟೌನ್ ಬಂದ್
ಶಿವಮೊಗ್ಗ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸೋಮವಾರ (ಜ.9 ರಂದು) ನಡೆದಿದೆ. ಸಾಗರ ನಗರ ಭಜರಂಗದಳದ ಸಹ ಸಂಚಾಲಕ ಆಗಿರುವ ಸುನೀಲ್ ಎಂಬುವವರ ಮೇಲೆ ಸಮೀರ್ ಎನ್ನುವ ಯುವಕ ಸಾಗರ ನಗರದ ಬಿ.ಹೆಚ್. ರಸ್ತೆಯ ಬಸ್ ನಿಲ್ದಾಣ ಸಮೀಪ ಮಚ್ಚು ಬೀಸಿದ್ದಾನೆ. ಕೂದಲೆಳೆ ಅಂತರದಲ್ಲಿ ಮಚ್ಚಿನ ದಾಳಿಯಿಂದ ಸುನೀಲ್ ಪಾರಾಗಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ನಡೆದ ಶೌರ್ಯ ಸಂಚಲನ ಯಾತ್ರೆಯಲ್ಲಿ …
Read More »ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ: B.S.Y
ಶಿವಮೊಗ್ಗ: ಸ್ಯಾಂಟ್ರೋ ರವಿ ವಿಷಯದಲ್ಲಿ ಸಿಎಂ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸಚಿವರ ಹೆಸರು ಕೇಳಿ ಬಂದ ವಿಚಾರ ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಮಾತಾನಾಡಿದ ಅವರು, ಸಂಪುಟದ ವಿಸ್ತರಣೆ ವಿಷಯ ಚರ್ಚೆಯಾಗುತ್ತಿದೆ. ಕೇಂದ್ರದ ನಾಯಕರ …
Read More »ಹತ್ತಿ ನೆಲದ ನೆತ್ಯಾಗ ತೆಲಿ ಎತ್ತಿತ್ರಪಾ ಕನ್ನಡಾ
ಹಾವೇರಿ: ಏ ಮಗನಾ ನಿನ್ನ ಜಿಲ್ಲಾ ಅಷ್ಟ … ದೊಡ್ಡದನ ನಮ್ಮ ಜಿಲ್ಲಾದಾಗನೂ ಗಂಡಸೂರ ಅದೇವಿ. ನಾವು ನಮ್ಮ ಸ್ವಂತ ರೊಕ್ಕಾ ಖರ್ಚ ಮಾಡಿ ಸಮ್ಮೇಳಾನಾ ಮಾಡುವಂಗ ಅದೇವಿ. ಮಾಡಿ ತೋರಸ್ತೇವಿ, ಹೊಳ್ಳಾಮಳ್ಳಾ ಮಾತಾಡ್‌ಬ್ಯಾಡ್. ಯಾನೋ ಎಲ್ಲಿಂದ ಬಂದಿ ನಮ್ಮ ಜಿಲ್ಲಾ ಏನ ಕಡಿಮೇಯೇನ್? ಓಯ್ ಮಾರಾಯಾ ಸ್ವಲ್ಪ ಸುಮ್ಮನಿರಿ ಎಷ್ಟು ಜಗಳ ಮಾರಾಯಾ ನಿಮ್ಮದು. ಮಂಡೆ ಬಿಸಿಯಾಗಿ ಹೋಯ್ತು. ಏ ಅದೆಲ್ಲ ಗೊತ್ತಿಲ್ರಪ್ಪಾ ನಮ್ಗೆ, ಈ ಸಲಾ ಕೊಡ್ತಿವಿ …
Read More »ಸ್ಯಾಂಟ್ರೊ ರವಿ ವಿಚಾರ: ಹೆಚ್ ಡಿಕೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ; ಆರಗ ಜ್ಞಾನೇಂದ್ರ
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಅತ್ಯಂತ ಬೇಜವಾಬ್ದಾರಿಯಿಂದ ಸ್ಯಾಂಟ್ರೊ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವುದರ ಮೂಲಕ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಕುಮಾರಸ್ವಾಮಿಯವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು. ಸಾಂಟ್ರೋ ರವಿಯ ಹಿನ್ನೆಲೆಯ ಬಗ್ಗೆ …
Read More »ಮುಂದಿನ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಡಾ ಮಹೇಶ್ ಜೋಶಿ
ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಏರ್ಪಡಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಾವೇರಿ: ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಏರ್ಪಡಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ …
Read More »ದೇಶದ ಪ್ರತಿಯೊಬ್ಬರೂ ತನ್ನನ್ನು ಆರಾಧಿಸಬೇಕೆಂದು ಮೋದಿ ಬಯಸುತ್ತಾರೆ; ರಾಹುಲ್ ಗಾಂಧಿ
ಕುರುಕ್ಷೇತ್ರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಜನರು ತಮ್ಮನ್ನು ಆರಾಧಿಸಬೇಕೆಂದು ಬಯಸುತ್ತಾರೆ, ಆದರೆ ಕಾಂಗ್ರೆಸ್‌ನ ಗಮನವು ತಪಸ್ಸು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯು ಸಮಾಜದಲ್ಲಿ ಹರಡುತ್ತಿರುವ ದ್ವೇಷ ಮತ್ತು ಭಯದ ವಿರುದ್ಧವಾಗಿದೆ. ಯಾತ್ರೆಯು ಸಂಯಮ ಮತ್ತು ಸ್ವಯಂ ಧ್ಯಾನದ ಬಗ್ಗೆ ಸೂಚಿಸುತ್ತದೆ. ಅವರು ಪಾದಯಾತ್ರೆಯನ್ನು ತಪಸ್ಸು ಎಂದು ನೋಡುತ್ತಾರೆ ಎಂದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಗುರಿಯಾಗಿಸಿ, ಜನರು ಸಂಪತ್ತನ್ನು ಬಳಸಿ, …
Read More »ಮಂಗಳೂರು ಲೋಕಾಯುಕ್ತ ಎಸ್ ಪಿ ಲಕ್ಷ್ಮೀ ಗಣೇಶ್ ವರ್ಗಾವಣೆ
ಮಂಗಳೂರು: ಲೋಕಾಯುಕ್ತ ಎಸ್ ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀ ಗಣೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೈಮನ್ ಅವರನ್ನು ನೂತನ ಲೋಕಾಯುಕ್ತ ಎಸ್ ಪಿಯಾಗಿ ನೇಮಕ ಮಾಡಲಾಗಿದೆ. ಸೈಮನ್ ಹಿಂದೆ ದಕ್ಷಿಣ ಕನ್ನಡ ಎಸಿಬಿ ಎಸ್‌ಪಿ ಆಗಿದ್ದರು. ಮಂಗಳೂರು ಲೋಕಾಯುಕ್ತ ವಿಭಾಗವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿ ಹೊಂದಿದೆ.
Read More »ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಬೃಹತ್ ಕೃಷಿ ಮೇಳ ಕಾರ್ಯಕ್ರಮಕೆ
ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶ್ರೀ ಕೆರಿ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ರವಿವಾರ ದಿ 15 ರಿಂದ 19 ರವರೆಗೆ ಬೃಹತ್ ಕೃಷಿ ಮೇಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೃಷಿ ಮಳಿಗೆ ನಿರ್ಮಿಸಲು ಅಡಿಗಲ್ ಪೂಜೆ ಸಿದ್ದೇಶ್ವರ ದೇವರ ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಇವರು ನೆರವೇರಿಸಿ ಚಾಲನೆ ನೀಡಿದರು. ಬುದುವಾರ ರಂದು ಐನಾಪುರದಲ್ಲಿ ಕೃಷಿ ಮೇಳದ 150 ಮಳಿಗೆಳು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಕರ್ನಾಟಕ ಹಾಗೂ …
Read More »