ಬೆಂಗಳೂರು: ರಾಜ್ಯ ರಾಜಧಾನಿ ಇತ್ತೀಚೆಗೆ ಸಮಸ್ಯೆಗಳ ಆಗರವಾಗಿ ಸುದ್ದಿಯಾಗುತ್ತಿದೆ. ರಸ್ತೆ ಗುಂಡಿ, ಮೆಟ್ರೋ ಪಿಲ್ಲರ್ ದುರಂತ ಮತ್ತು ಪುಡಿ ರೌಡಿಗಳ ಅಟ್ಟಹಾಸದ ಕಾರಣಕ್ಕಾಗಿ ಬೆಂಗಳೂರು ಸಾರ್ವಜನಿಕರಿಗೆ ಸೇಫ್ ಅಲ್ಲ ಎಂಬ ಭಾವನೆ ಉಂಟಾಗಲು ಕಾರಣವಾಗಿತ್ತು. ಕಳೆದ ವಾರವಷ್ಟೇ ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ದುರಂತದಿಂದ ತಾಯಿ ಮತ್ತು ಮಗ ಸಾವನ್ನಪ್ಪಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ, ಬೆಂಗಳೂರು ತಲೆ ತಗ್ಗಿಸುವಂತಾಗಿತ್ತು. ಜತೆಗೆ ಬೆಂಗಳೂರಿನ ಹಲವೆಡೆ ರಸ್ತೆಗಳು ಕೆಟ್ಟು ಹೋಗಿ, ಗುಂಡಿಗಳು …
Read More »ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಮುಂದುವರಿಕೆ: ಲೋಕಸಭಾ ಚುನಾವಣೆ ವೇಳೆಯೂ ನಡ್ಡಾ ಸಾರಥ್ಯ
ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಅವರನ್ನ ಮುಂದುರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಘೋಷಿಸಿದರು. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರಾವಧಿಯನ್ನು 2024ರ ಜೂನ್ ವರೆಗೆ ವಿಸ್ತರಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಯೂ ನಡ್ಡಾ ಅವರೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಉಳಿಯಲಿದ್ದಾರೆ. ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಜೆ.ಪಿ. ನಡ್ಡಾ ಅವರ ನಾಯಕತ್ವದಲ್ಲಿ ಬಿಹಾರ ವಿಧಾನಸಭಾ …
Read More »ಮೊಬೈಲ್ ಟವರ್ ಏರಿದ ಕಳ್ಳ; ಬಿರಿಯಾನಿ-ಸಿಗರೇಟ್ ಕೇಳಿದವ ಕಡೆಗೆ ಕೆಳಗಿಳಿಯಲು ಇಟ್ಟ ಬೇಡಿಕೆಯೇ ಬೇರೆ!
ಧಾರವಾಡ: ಕಳ್ಳತನದ ಆರೋಪಿಯೊಬ್ಬ ಮೊಬೈಲ್ ಫೋನ್ ಟವರ್ ಏರಿ ಕುಳಿತು ಕೆಲವು ಕ್ಷಣಗಳ ಕಾಲ ತಲೆನೋವಾಗಿ ಪರಿಣಮಿಸಿದ ಪ್ರಕರಣವೊಂದು ನಡೆದಿದೆ. ಬಿರಿಯಾನಿ ಕೊಡಿ, ಸಿಗರೇಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದ ಈ ಕಳ್ಳ ಬಳಿಕ ಕೆಳಗಿಳಿಯಲು ಮತ್ತೊಂದು ಬೇಡಿಕೆ ಇರಿಸಿದ್ದ. ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಇಂದು ಈ ಘಟನೆ ನಡೆದಿದೆ. ಜಾವೀದ್ ಡಲಾಯತ್ ಎಂಬ ಈತ ಕಳ್ಳತನದ ಆರೋಪ ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ. ಟವರ್ ತುದಿಗೇರಿದ್ದ ಈತನನ್ನು ನೋಡಲು …
Read More »ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ; ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ’
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಆರಂಭದಲ್ಲಿ ಜೊತೆಗಿದ್ದ ನಿರಾಣಿ ಸಚಿವ ಸ್ಥಾನ ಸಿಕ್ಕ ಬಳಿಕ ತಮ್ಮ ವರಸೆ ಬದಲಾಯಿದ್ದಾರೆಂಬ ಆರೋಪ …
Read More »ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದು ವಾರೆ ನೋಟ: ಕೈ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ..
ಬೆಂಗಳೂರು: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಫೇಸ್ಬುಕ್ ಸ್ಟೋರಿ, ವಾಟ್ಸ್ಆಯಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಂ ಸ್ಟೋರಿ ಎಲ್ಲಿ ನೋಡಿದರು ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿದೆ. ಅಲ್ಲದರೆ, ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದೆ. ಹಾಗಾದರೆ ಆ ವಿಡಿಯೋ ಯಾವುದು ಅಂತಿರಾ… ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ವೇದಿಕೆ ಮೇಲಿಂದ ಕೆಳಗೆ ಇಳಿಯುವಾಗ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿರೂಪಕಿಯನ್ನು ವಾರೆಗಣ್ಣಿಂದ …
Read More »‘ರಾಜ್ಯ ಸರ್ಕಾರ’ದಿಂದ ‘ಮಹಾವೀರ ಜಯಂತಿ’ ರಜೆ ಬದಲಾವಣೆ ಮಾಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಈಗಾಗಲೇ 2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ( Public Holiday List ) ಪ್ರಕಟಿಸಲಾಗಿತ್ತು. ಈ ವೇಳೆಯಲ್ಲಿ ಏ.3ರಂದು ಮಹಾವೀರ ಜಯಂತಿ ಪ್ರಯುಕ್ತ ರಜೆಯನ್ನು ಘೋಷಿಸಿತ್ತು. ಇದೀಗ ಈ ರಜೆಯನ್ನು ಬದಲಾವಣೆ ಮಾಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿದ್ದುಪಡಿ ಆದೇಶ ಹೊರಡಿಸಿದ್ದು, 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ …
Read More »ಶಿಸ್ತು ಸಮಿತಿಯಿಂದ ನೋಟಿಸ್ ಬಂದಿಲ್ಲ, ಭಯ ಹುಟ್ಟಿಸುವ ತಂತ್ರ: ಯತ್ನಾಳ
ವಿಜಯಪುರ: ‘ನನಗೆ ಬಿಜೆಪಿ ಹೈಕಮಾಂಡ್‌ನಿಂದ ಅಥವಾ ಪಕ್ಷದ ಶಿಸ್ತು ಸಮಿತಿಯಿಂದ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ಪಕ್ಷದ ನಾಯಕರ ವಿರುದ್ಧ ಮಾತನಾಡಿದ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಿದೆ ಎಂಬುದು ಕೇವಲ ವಿರೋಧಿಗಳ ಭಯ ಹುಟ್ಟಿಸುವ ತಂತ್ರ ಅಷ್ಟೇ, ನನಗೆ ನೋಟಿಸ್ ಬಂದಿಲ್ಲ, …
Read More »ಹೋಂಗಾರ್ಡ್ ವರ್ಗಾವಣೆಗೆ ಲಂಚ: ಕೊಪ್ಪಳ ಜಿಲ್ಲಾ ಕಮಾಂಡೆಂಟ್ ಲೋಕಾಯುಕ್ತ ಬಲೆಗೆ
ಕೊಪ್ಪಳ: ಹೋಂಗಾರ್ಡ್ ಒಬ್ಬರ ವರ್ಗಾವಣೆಗೆ 10 ಸಾವಿರ ರೂ. ಲಂಚದ ಬೇಡಿಕೆಯನ್ನಿಟ್ಟಿದ್ದ ಜಿಲ್ಲಾ ಕಮಾಂಡೆಂಟ್ ಗವಿಸಿದ್ದಪ್ಪ ಹಾಗೂ ತಾಲೂಕು ಕಮಾಂಡೆಂಟ್ ರುದ್ರಪ್ಪ ಪತ್ತಾರ್ ಅವರು ನಗರದ ಮಾನಸಿಕ ಆರೋಗ್ಯ ತಪಾಸಣಾ ಕಚೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಮುನಿರಾಬಾದ್ ನ ಹೋಂಗಾರ್ಡ್ ಮಹೆಬೂಬ ಖಾನ್ ಅವರು ಮುನಿರಾಬಾದ್‌ನಿಂದ ಗಂಗಾವತಿಗೆ ವರ್ಗಾವಣೆ ಕೇಳಿಕೊಂಡಿದ್ದರು. ಇದಕ್ಕೆ ರುದ್ರಪ್ಪ ಪತ್ತಾರ ಹಾಗೂ ಗವಿಸಿದ್ದಪ್ಪ ಅವರು 10 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು. …
Read More »ಯುವಕನ ಮೇಲೆ ನಾಲ್ವರು ಹುಡುಗಿಯರಿಂದ ಅತ್ಯಾಚಾರ?
: ಪಂಜಾಬ್‌ನ ಜಲಂಧರ್‍ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 20ರ ಹರೆಯದ ನಾಲ್ವರು ಹುಡುಗಿಯರು ತನ್ನನ್ನು ಅಪಹರಿಸಿ ನಂತರ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ. ಇದು ಕೇಳಲು ವಿಚಿತ್ರ ಎನಿಸಿದರೂ ನಿಜವಾಗಿಯೂ ನಡೆದಿರುವ ಘಟನೆ. ನಾಲ್ವರು ಯುವತಿಯರು ನನ್ನ ಕಣ್ಣಿಗೆರಾಸಾಯನಿಕಸಿಂಪಡಿಸಿ, ನಂತರ ಕಿಡ್ನಾಪ್ ಮಾಡಿ ಕಾರಿನಲ್ಲಿ ಅಜ್ಞಾನ ಸ್ಥಳಕ್ಕೆ ಕರೆದೊಯ್ದಿದ್ದರು. ಅರಣ್ಯ ಪ್ರದೇಶದಲ್ಲಿ ನನಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾನೆ. …
Read More »ಬ್ರ್ಯಾಂಚ್ ಕೆನಾಲ್‌ಗೆ ನೀರು; ರೈತರಲ್ಲಿ ಸಂತಸ
ಚಿಕ್ಕೋಡಿ: ಕಸ ಕಡ್ಡಿಯಿಂದ ಹೂಳು ತುಂಬಿಕೊಂಡು ನೀರು ಸೋರಿಕೆಯಾಗುತ್ತಿದ್ದ ಚಿಕ್ಕೋಡಿ ಸಿಬಿಸಿ ಕಾಲುವೆ ಸದ್ಯ ಸಂಪೂರ್ಣ ದುರಸ್ತಿಗೊಂಡಿದೆ. ಇದರಿಂದ ಕೊನೆ ಹಳ್ಳಿಯ ತನಕ ನೀರು ತಲುಪುತ್ತದೆ ಎನ್ನುವ ಆಶಾಭಾವನೆ ರೈತರಲ್ಲಿ ಮೂಡಿದೆ. ಚಿಕ್ಕೋಡಿ ಸಿಬಿಸಿ ಕಾಲುವೆಯಲ್ಲಿ ಕಸ, ಕಡ್ಡಿ ಹಾಗೂ ಕಾಲುವೆಗೆ ಬರುವ ನೀರು ಸೋರಿಕೆಯಿಂದ ರೈತರಿಗೆ ಸಮರ್ಪಕ ನೀರು ತಲುಪುತ್ತಿರಲಿಲ್ಲ. ನೀರಾವರಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿ ರೈತರು ಕೂಡ ಬೇಸತ್ತು ಹೋಗಿದ್ದರು. ಈಗ ಪರಿಷತ್ ಸದಸ್ಯ ಪ್ರಕಾಶ …
Read More »