Breaking News

ರಾಷ್ಟ್ರೀಯ

ನೀರಾವರಿ: ₹22,200 ಕೋಟಿ ಟೆಂಡರ್ ಅಕ್ರಮ -ಬಿಜೆಪಿ ಶಾಸಕ ಗೂಳಿಹಟ್ಟಿ ಆರೋಪ

ಬೆಂಗಳೂರು: ವಿವಿಧ ನೀರಾವರಿ ನಿಗಮಗಳಲ್ಲಿ ₹22,200 ಕೋಟಿ ಮೊತ್ತದ ಟೆಂಡರ್ ಅಕ್ರಮ ನಡೆದಿದ್ದು, ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.   ಅಕ್ರಮದ ಕುರಿತು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಫೆ.3ರಂದು ದೂರು ನೀಡಿರುವ ಅವರು, ಕಾಮ ಗಾರಿಗಳ ಕಾರ್ಯಾದೇಶ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಗೂಳಿಹಟ್ಟಿ ಸಲ್ಲಿಸಿರುವ ಪತ್ರ ‘ಲಭ್ಯವಾಗಿದೆ. …

Read More »

ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಎಲ್ಲಿ ಗೊತ್ತಾ?

ಹಾಸನ ಜಿಲ್ಲೆಯ ಅರಕಲಹೊಳೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಮಾಜಿ ಸಚಿವ ಎ ಮಂಜು ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಹಾಲಿ ಶಾಸಕ, ಪಕ್ಷದ ಮುಖಂಡ ಎಟಿ ರಾಮಸ್ವಾಮಿ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ.   ಇಷ್ಟು ವರ್ಷ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಜೆಡಿಎಸ್ ನಡೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ. ಇದೇ ವೇಳೆ ರಾಮಸ್ವಾಮಿ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಅವರು ಕಾಂಗ್ರೆಸ್‌ಗೆ …

Read More »

ರೀಲ್ಸ್‌ನಲ್ಲಿ ಪರಿಚಯವಾದವನ ಜತೆ ಪತ್ನಿ ಪರಾರಿ

ಬೆಂಗಳೂರು: ಇತ್ತೀಚೆಗೆ ಚಿಕ್ಕಮಕ್ಕಳಿಂದ ವೃದ್ಧವರೆಗಿನ ಎಲ್ಲ ವಯಸ್ಸಿನವರು ರೀಲ್ಸ್‌ (ಮನರಂಜನೆ ಮೊಬೈಲ್‌ ಆಯಪ್‌)ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ಪತಿಯನ್ನು ತೊರೆದು ರೀಲ್ಸ್‌ನಲ್ಲಿ ಪರಿಚಯವಾದ ವ್ಯಕ್ತಿ ಜತೆ ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.   ಈ ಘಟನೆಯಿಂದ ವಿಚಲಿತಗೊಂಡಿರುವ ಪತಿ, ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮಿತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಡುವಂತೆ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿ ಕ್ಯಾಮೆರಾ …

Read More »

ಐಗಳಿ: ಭೈರವನಾಥ ಜಾತ್ರೆ ಇಂದಿನಿಂದ

ಐಗಳಿ : ಇಲ್ಲಿಯ ಭೈರವನಾಥ ದೇವರ ಜಾತ್ರೆ ಫೆ. 5 ಹಾಗೂ 6ರಂದು ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಲಿವೆ. ಫೆ.5ರಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ನಂತರ ಹಂದರ ಹಾಕುವುದು. ಮಧ್ಯಾಹ್ನ ದೇವರಿಗೆ ಮಹಾ ನೈವೇದ್ಯ ಅರ್ಪಿಸುವುದು, ಸಂಜೆಯಲ್ಲಿ ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ನಂತರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಗಳ ಮೂಲಕ ನಡೆಯಲಿದೆ. ರಾತ್ರಿ ಇಂಗಳಿ ಹಾಗೂ ಸತ್ತಿ …

Read More »

ಬಿಜೆಪಿಗೆ 130 ಸ್ಥಾನ ಖಚಿತ, ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 130ರಿಂದ 140 ಸ್ಥಾನಗಳನ್ನು ಪಡೆಯಲಿದೆ. ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ (ಬಿಜೆಪಿ) 130ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ …

Read More »

ನಿಪ್ಪಾಣಿ: ‘ಹೆಚ್ಚು ಅಂಕ ಗಳಿಕೆಗೆ ಒತ್ತಡ ಹೇರದಿರಿ’

ನಿಪ್ಪಾಣಿ: ‘ಮಕ್ಕಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ಆಗ ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳುವಂತಹ ಕಾರ್ಯ ಮಾಡಲು ಸಶಕ್ತರಾಗುವರು’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.   ಸ್ಥಳೀಯ ಶಿವಶಂಕರ ಜೊಲ್ಲೆ ಪಬ್ಲಿಕ್ (ಸಿಬಿಎಸ್‍ಇ) ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಕ್ಕಳಿಗೆ ಅತಿ ಹೆಚ್ಚು ಅಂಕ ಪಡೆಯುವಂತೆ ಒತ್ತಡ ಹೇರಬಾರದು. ಮಕ್ಕಳಿಗೆ ನಿತ್ಯ ಯೋಗ, ಪ್ರಾಣಾಯಮ ಮಾಡುವಂತೆ ಹೇಳಬೇಕು ಹಾಗೂ ಅವರು …

Read More »

ವಾಣಿ ಜಯರಾಂ ಖ್ಯಾತ ಹಿನ್ನೆಲೆ ಗಾಯಕಿ ಅನುಮಾನಾಸ್ಪದ ಸಾವು

ಚೆನ್ನೈ: ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ವಾಣಿ ಜಯರಾಂ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಚೆನ್ನೈನ ನಿವಾಸದಲ್ಲಿ ವಾಣಿ ಜಯರಾಂ ಅವರ ಶವ ಪತ್ತೆಯಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ. ವಾಣಿಜಯರಾಂ ಅವರಿಗೆ 77 ವರ್ಷ ವಯಸ್ಸಾಗಿತ್ತು. ಕನ್ನಡ, ತೆಲುಗು,ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ವಾಣಿ ಜಯರಾಂ ಇದೀಗ ಶವವಾಗಿ ಪತ್ತೆಯಾಗಿರುವುದು ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ. 2023ರ ಗಣರಾಜ್ಯೋತ್ಸವದ ದಿನದಂದು …

Read More »

 ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ 3 ಜನರ ಬಂಧನ

ಸವದತ್ತಿ: ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸವದತ್ತಿ ಪೊಲೀಸರು ಸರಣಿ ದಾಳಿ ಮುಂದುವರಿಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ ಈವರೆಗೆ 5 ಪ್ರಕರಣ ದಾಖಲಿಸಿರುವ ಪೊಲೀಸರು, ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ದಾಳಿ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಸುತ್ತಮುತ್ತ ಮತ್ತು ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ …

Read More »

ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ

ಬೆಳಗಾವಿ: ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ ಕೂಡಿ ಬಂದಿದೆ. ಫೆ. 6ರಂದು ಮೇಯರ್‌- ಉಪ ಮೇಯರ್‌ ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸ್ಮಾರ್ಟ್‌ಟಿಸಿಯ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.   ಚುನಾವಣಾ ಪ್ರಕ್ರಿಯೆಗೆ ಕೋರ್ಟ್‌ ಅನುಮತಿ ನೀಡಿ ಎರಡು ವಾರಗಳಾಗಿದ್ದು, ಅಂದಿನಿಂದಲೂ ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಯಾರಿಗೆ ಕುರ್ಚಿ ಎಂಬುದನ್ನು ಈಗಲೇ ಘೋಷಣೆ …

Read More »

ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ ಪಾರ್ಟಿ!

ಹೈದರಬಾದ್​: ಕರ್ತವ್ಯನಿರತ ಇಬ್ಬರು ಪೊಲೀಸ್​ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.   ಇಬ್ಬರು ಸಹ ಗಸ್ತು ವಾಹನದ ಸಿಬ್ಬಂದಿ ಎಂದು ತಿಳಿದುಬಂದಿದೆ. ವಾಹನವನ್ನು ಪಕ್ಕದಲ್ಲಿ ಪಾರ್ಕ್​ ಮಾಡಿ ಮನೆಯ ಮುಂದಿನ ಸಣ್ಣದಾಗ ಗೋಡೆಯ ಮೇಲೆ ಕುಳಿತು ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಇಬ್ಬರು ಕೂಡ ಹೈದರಾಬಾದ್​ನ ಪಂಜಗುಟ್ಟ ಠಾಣಾ ಪೊಲೀಸರು ಎಂದು …

Read More »