ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022ನೇ ಸಾಲಿನ ‘ಸಿರಿಗನ್ನಡ ಗೌರವ’ ಮತ್ತು 2021ನೇ ಸಾಲಿನ ‘ಸಿರಿಗನ್ನಡ ಪುಸ್ತಕ ಪ್ರಶಸ್ತಿ’ ಪ್ರಕಟಿಸಿದೆ. ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೊ.ರಾಜಶೇಖರ ಎಂ. ಕರಡಿಗುದ್ದಿ ಮತ್ತು ಡಾ.ಮಾಧವ ದೀಕ್ಷಿತ ಭಾಜನರಾಗಿದ್ದಾರೆ. ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ ‘ಉರಿಯ ಪೇಟೆಯಲ್ಲಿ’ ಕೃತಿ ಮತ್ತು ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ ‘ಬೆಳಕ ನಿಚ್ಚಣಿಕೆ’ ಕೃತಿ ಆಯ್ಕೆಯಾಗಿವೆ. ಜೀವನಮಾನ ಸಾಧನೆ ಪ್ರಶಸ್ತಿಗಳು: …
Read More »ಬೆಳಗಾವಿ ಗ್ರಾಮೀಣ: ಹೈ ವೋಲ್ಟೇಜ್ ಕ್ಷೇತ್ರದಲ್ಲಿ ತಂತ್ರ- ಪ್ರತಿತಂತ್ರ
ಬೆಳಗಾವಿ: ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಕದನದಿಂದಾಗಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡ ‘ಬೆಳಗಾವಿ ಗ್ರಾಮೀಣ’ದಲ್ಲಿ ಈ ಬಾರಿ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಇಬ್ಬರ ತಿಕ್ಕಾಟದಲ್ಲಿ ಗೆಲುವಿನ ದಡ ಸೇರಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪ್ರಯತ್ನಿಸುತ್ತಿದೆ. ‘ಭಾಷಾ ರಾಜಕಾರಣ’ಕ್ಕೆ ಹೆಸರಾದ ಈ ಕ್ಷೇತ್ರ 2008ರಲ್ಲಿ ಪುನರ್ ವಿಂಗಡಣೆಯಾಗಿದೆ. ಹಿರೇಬಾಗೇವಾಡಿ ಕ್ಷೇತ್ರದ ಕೆಲವು ಹಳ್ಳಿಗಳನ್ನು ಸೇರಿಸಿ, ‘ಬೆಳಗಾವಿ ಗ್ರಾಮೀಣ’ ಕ್ಷೇತ್ರ ರಚಿಸಲಾಗಿದೆ. ಕಳೆದ ಮೂರು …
Read More »ಯರಗಟ್ಟಿ ಚೆಕ್ ಪೋಸ್ಟ್ಪೋಸ್ಟ್ ನಲ್ಲಿ1,37,000=00 ರೂ ವಶ
ದಿವಸ ದಿನಾಂಕ 8 4 2023 ರಂದು 17 -20 ಗಂಟೆಗೆ ಯರಗಟ್ಟಿ ಚೆಕ್ ಪೋಸ್ಟ್ ನಲ್ಲಿ ಮಿನಿ ಲಾರಿ ನಂಬರ್ KA- 05 D-9343 ರಲ್ಲಿ ತಪಾಸಣೆ ಮಾಡುವ ಕಾಲಕ್ಕೆ ಆನಂದ್ ತಟ್ಟಿ ಇವರ ಕಡೆಗೆ ಯಾವುದೇ ದಾಖಲಾತಿ ಇಲ್ಲದೆ ಇರುವ 1,37,000=00 ರೂಗಳನ್ನು ಜಪ್ ಮಾಡಿದ್ದು ಮುಂದಿನ ಕ್ರಮಕ್ಕಾಗಿ ಎಫ್ ಎಸ್ ಟಿ ರವರು ತಮ್ಮ ತಾಬಾಕ್ಕೆ ತೆಗೆದುಕೊಂಡಿರುತ್ತಾರೆ
Read More »ಕೆಲಸದ ಒತ್ತಡದ ನಡುವೆಯೂ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡ:S.P
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲಸದ ಒತ್ತಡದ ನಡುವೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ತಂಡ ಶನಿವಾರ ನಡೆಸಿದ 11ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು. ಎಂದಿನಂತೆ ಸಾರ್ವಜನಿಕರು ಕರೆ ಸ್ವೀಕರಿಸಿದ ಎಸ್ಪಿ ನಮಸ್ಕಾರ್ ರೀ.. ನಾನ ಎಸ್ಪಿ ಮಾತನಾಡುತ್ತಿದ್ದೇನೆ ಹೇಳ್ರಿ ಎನ್ನುತ್ತಲೇ ಸಾರ್ವಜನಿಕರ ಸಮಸ್ಯೆ ಆಲಿಸಿದರು. ನಗರದ ಶಹಾಪುರದ ವ್ಯಕ್ತಿಯೊರ್ವ …
Read More »ಸಾರ್ವಜನಿಕರ ಗಮನಕ್ಕೆ : ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಏಪ್ರಿಲ್ 10 ಕೊನೆಯ ದಿನ
ಧಾರವಾಡ : ಕರ್ನಾಟಕ ವಿಧಾನಸಭೆಗೆ ಭಾರತ ಚುನಾವಣಾ ಆಯೋಗವು ಮಾರ್ಚ್ 29 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ. ಅದರಂತೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20 (ಗುರುವಾರ) ಆಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರ್ಹ ಮತದಾರರು, ಮತದಾರರ ಯಾದಿಯಲ್ಲಿ ಹೆಸರುಗಳ ಸೇರ್ಪಡೆಯಾಗಿರುವ ಬಗ್ಗೆ https://ceo.karnataka.gov.in, https://www.nvsp.in ವೆಬ್‌ಸೈಟ್‌ಗಳಲ್ಲಿ ಹಾಗೂ Voter …
Read More »ರೀಲ್ಸ್ ಮಾಡುವ ನೆಪದಲ್ಲಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ
ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Ranebennuru) ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ ಮಾಡಲೆತ್ನಿಸಿದ ಘಟನೆ ನಡೆದಿದೆ. ಮಾರ್ಚ್ 3ರಂದು ಹರಪನಹಳ್ಳಿ (Harapanahalli) ತಾಲೂಕಿನ ಮೂಲದ ದೇವೇಂದ್ರಗೌಡ ಎಂಬಾತನ ಜೊತೆ 17 ವರ್ಷದ ಅಪ್ರಾಪ್ತೆಯ ನಿಶ್ಚಿತಾರ್ಥವಾಗಿತ್ತು. ಆದರೆ ಅಪ್ರಾಪ್ತೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪ್ರೀತಿಸುತ್ತಿದ್ದ ಗೆಳೆಯನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕೊಲೆಗೆ ಅಪ್ರಾಪ್ತೆ ಮುಂದಾಗಿದ್ದಳು ಎಂದು ತಿಳಿದುಬಂದಿದೆ. …
Read More »ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ
ಬೆಳಗಾವಿ: ಗಂಟಲು ನೋವು, ಊತ, ನುಂಗಲು ತೊಂದರೆಯ ಸಮಸ್ಯೆಯೊಂದಿಗೆ ಉಲ್ಬಣಗೊಂಡಿದ್ದ ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಗೆ ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2ರಿಂದ 3 ವರ್ಷಗಳಲ್ಲಿ ಉಲ್ಭಣಗೊಂಡು ರೋಗಿಯು ನುಂಗಲು, ಮಾತನಾಡಲು ಸಮಸ್ಯೆಯನ್ನು ಎದುರಿಸಬೇಕಾಯಿತು. …
Read More »ಸರ್ಕಾರಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ 2 ವರ್ಷದ ಮಗು ಸಾವು ; ಸ್ಥಳೀಯರಿಂದ ಬಸ್ ಗಾಜು ಪುಡಿಪುಡಿ.!
ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಸರ್ಕಾರಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ 2 ವರ್ಷದ ಮಗು ಸಾವಿಗೀಡಾದ ಘಟನೆ ನಡೆದಿದೆ. ಮೃತ ಮಗು ಶ್ಲೋಕ ಅಶೋಕ ತುಳಸಿಗೇರಿ (2) ಎಂದು ತಿಳಿದುಬಂದಿದೆ. ಪರಮಾನಂದವಾಡಿಯಿಂದ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದ ಬಸ್, ಮಗು ರಸ್ತೆ ದಾಟುವಾಗ ಹರಿದಿದೆ ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ …
Read More »“ಟಿಕೆಟ್ ನೀರಿಕ್ಷೆಯಲ್ಲಿದ್ದ ಅಭ್ಯರ್ಥಿಗಳು ಕೈ ತಪ್ಪಿದರಿಂದ ನಿರಾಸೆಯಾಗುವುದು ಸಹಜ: ಸತೀಶ ಜಾರಕಿಹೊಳಿ
ಬೆಳಗಾವಿ: “ಟಿಕೆಟ್ ನೀರಿಕ್ಷೆಯಲ್ಲಿದ್ದ ಅಭ್ಯರ್ಥಿಗಳು ಕೈ ತಪ್ಪಿದರಿಂದ ನಿರಾಸೆಯಾಗುವುದು ಸಹಜ, ಅವರನ್ನು ಮನವೊಲಿಸುವ ಪ್ರಯತ್ನಗಳು ನಡೆಯಲಿದೆ ” ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ನಿಂದ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಲು ಮಹಾಂತೇಶ ಕಡಾಡಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ಹೈಕಮಾಂಡ್ ತೀರ್ಮಾನ ಅಂತಿಮ ತೀರ್ಮಾನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು. ಯಾವ ಕ್ಷೇತ್ರದಕ್ಕೆ ಯಾವ …
Read More »ಕಿತ್ತೂರಿನಲ್ಲಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ
ಬೆಳಗಾವಿ; ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕಿತ್ತೂರಿನ ನಾವಲಗಟ್ಟಿ ಗ್ರಾಮದ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಯಲ್ಲಪ್ಪ ಉಪ್ಪಾರಟ್ಟಿ, ಭೀಮಮೂಡಲಗಿ, ರಾಜು ಕಲ್ಲೂರ, ಸಂತೋಷ ಕಲ್ಲೂರ ಸೇರಿದಂತೆ ಎಲ್ಲರನ್ನೂ ಕಾಂಗ್ರೆಸ್ ಮುಖಂದ ನಾನಾಸಾಹೇಬ್ ಪಾಟೀಲ್ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
Read More »