Breaking News

ರಾಷ್ಟ್ರೀಯ

ಬತ್ತಿದ ಕೃಷ್ಣಾ ನದಿ,ಒಣಗಿದ ಬೆಳೆಗಳು

ವಾಡಿಕೆಯಂತೆ ಮುಂಗಾರು ಮಳೆ‌ ಆಗದೆ ಇರುವುದರಿಂದ ಹಾಗೂ ರಣ ಬಿಸಿಲಿನ ತಾಪಕ್ಕೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಕೃಷ್ಣಾ ನದಿ ಬತ್ತಿಹೋಗಿದ್ದು, ಜಮೀನಗಳಿಗಷ್ಟೇ ಅಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. .ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣಾ ನದಿಯು ನೀರಿಲ್ಲದೆ ಬತ್ತಿಹೋಗಿದ್ದು,ಇದರಿಂದಾಗಿ ಜನಜಾನುವಾರುಗಳಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ರೈತರು ಹಗಲು ರಾತ್ರಿ ಎನ್ನದೇ ಸಾಲಸೂಲ ಮಾಡಿ ಕಷ್ಟಪಟ್ಟು ದುಡಿದು‌ ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗಿ‌ ಹೋಗಿದ್ದು ರೈತರಿಗೆ ಗಾಯದ ಬರೆ …

Read More »

ಬೈಕ್ ಹಾಗೂ ಟಂಟಂ ಮಧ್ಯೆ ಡಿಕ್ಕಿ

ವಿಜಯಪುರ…  ಬೈಕ್ ಹಾಗೂ ಟಂಟಂ ಮಧ್ಯೆ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೊಳಸಂಗಿ ಬಳಿ ಘಟನೆ ನಡೆದಿದೆ‌. ಅಪಘಾತದಲ್ಲಿ ಮೃತಪಟ್ಟಿರುವ ಮಹಿಳೆಯ ಹೆಸರು ಲಭ್ಯವಾಗಿಲ್ಲ. ಅಲ್ಲದೇ, ಅಪಘಾತದಲ್ಲಿ ನಾಲ್ವರು ಮಹಿಳೆಯರು, ಓರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ‌‌. ಗಾಯಾಳುಗಳನ್ನುಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಶಕ್ತಿ ಯೋಜನೆ’ಯ `ಲೋಗೋ’ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡುವ `ಶಕ್ತಿ ಯೋಜನೆ’ಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರ ಉಚಿತ ಬಸ್ ಸೇವೆಗೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು, ಇಂದು ಮಧ್ಯಾಹ್ನ 1 ಗಂಟೆಯಿಂದ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.   ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, …

Read More »

ಎಣ್ಣೆ ಪ್ರಿಯರಿಗೆ ಸರ್ಕಾರದ ಶಾಕ್​… ಶೇ. 20ರಷ್ಟು ಮದ್ಯದ ಬೆಲೆ ದಿಢೀರ್​ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಉಚಿತ ಐದು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವುದು ಒಂದೆಡೆ ಜನರಿಗೆ ಸಂತಸ ತಂದಿದೆ. ಆದರೆ, ಇನ್ನೊಂದೆಡೆ ಉಚಿತ ನೆಪದಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿದೆ. ಜೊತೆಗೆ ಮದ್ಯ ಪ್ರಿಯರಿಗೂ ಶಾಕ್ ನೀಡಲಾಗಿದೆ. ಆದಾಯ ಸಂಗ್ರಹಿಸಲು ಸರ್ಕಾರ ಶೇ. 20 ರಷ್ಟು ಮದ್ಯದ ಬೆಲೆ ಏರಿಕೆ ಮಾಡಿದೆ. ನಿನ್ನೆಯಿಂದಲೇ ಬಿಯರ್ ಬೆಲೆ ಹೆಚ್ಚಳವಾಗಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದೆ ಜಾರಿಗೊಳಿಸುತ್ತಿದೆ. ನಾಳೆ ಮಹಿಳೆಯರಿಗೆ ಉಚಿತ ಬಸ್ …

Read More »

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು : H.K.ಪಾಟೀಲ್

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ಪ್ರಮುಖ ಇಲಾಖೆಗಳಲ್ಲಿ ಒಂದು. ಅದರಲ್ಲೂ ಉತ್ತರ ಕರ್ನಾಟಕಕ್ಕೆ ವಿಶೇಷ ಒತ್ತು ನೀಡುವ ಅಗತ್ಯ ಇದೆ. ಈ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳವಣಿಗೆಗೆ ನಿರೀಕ್ಷೆ ಮಟ್ಟದಲ್ಲಿ ಆದ್ಯತೆ ಸಿಕ್ಕಿಲ್ಲ. ಅದಕ್ಕೆ ಹಲವು ಕಾರಣಗಳಿವೆ. …

Read More »

ಹಾವೇರಿ ಗೋಲಿಬಾರ್​ಗೆ 16 ವರ್ಷ.

ಹಾವೇರಿ: ಇಂದಿಗೆ ಹಾವೇರಿಯಲ್ಲಿ ಗೋಲಿಬಾರ್ ನಡೆದು 16 ವರ್ಷ ಕಳೆದಿವೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ನಗರದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತರು ಭಾಗವಹಿಸುವ ಮೂಲಕ ಬಸ್ ನಿಲ್ದಾಣದ ಬಳಿ ಇರುವ ಹುತಾತ್ಮ ರೈತ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಈ ವೇಳೆ ವಿವಿಧ ರೈತ ಮುಖಂಡರು ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ ಸಲ್ಲಿಸಿದರು. 10 ಜೂನ್ 2008 ರ ಗೋಲಿಬಾರ್‌ನಲ್ಲಿ ಹುತಾತ್ಮರಾಗಿದ್ದ …

Read More »

ಬೆಳಗಾವಿಯಲ್ಲಿ ನೀರಿಗಾಗಿ‌ ಹಾಹಾಕಾರ: ಟ್ಯಾಂಕರ್ ಮೊರೆ ಹೋದ ಕುಂದಾನಗರಿಯ ಜನ..

ಬೆಳಗಾವಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಜೀವ ಜಲಕ್ಕಾಗಿ ಕುಂದಾನಗರಿ ಜನ ಪರದಾಡುತ್ತಿದ್ದು, ನೀರಿಗಾಗಿ ಟ್ಯಾಂಕರ್​ಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮತ್ತಷ್ಟು ನೀರಿನ‌ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ. ಇಷ್ಟೊತ್ತಿಗಾಗಲೇ ಮಳೆಗಾಲ ಆರಂಭವಾಗಿ ಜನರ ಮೊಗದಲ್ಲಿ ಮಂದಹಾಸ ಮೂಡಬೇಕಿತ್ತು. ಆದರೆ ಜೂನ್ 10 ದಾಟಿದ್ರೂ ಇನ್ನು ಮಳೆಯ ಸುಳಿವೇ ಸಿಗುತ್ತಿಲ್ಲ. ಇದರಿಂದ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಎಂಟು ದಿನ ದಿನಗಳಿಗೊಮ್ಮೆ ನೀರು ಸರಬರಾಜು …

Read More »

13ನೇ ಫೋನ್‌ ಇನ್‌ ಕಾರ್ಯಕ್ರಮ: ಜನರ ಸಮಸ್ಯೆ ಆಲಿಸಿದ ಬೆಳಗಾವಿ ಡಿಸಿ, ಎಸ್​​ಪಿ

ಬೆಳಗಾವಿ: ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ ಪಾಟೀಲ್ ನೇತೃತ್ವದಲ್ಲಿ 2022ರ ನವೆಂಬರ್‌ನಿಂದ ಈವರೆಗೆ 12 ಬಾರಿ ಫೋನ್‌ ಇನ್‌ ಕಾರ್ಯಕ್ರಮ ನಡೆದಿದ್ದು, ಇಂದು 13ನೇ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಡಿಸಿಪಿ ಶೇಖರ್ ಎಚ್.ಟಿ. ಕೂಡ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ 62 ಜನರು ಕರೆ ಮಾಡಿ, ತಮ್ಮ ಸಮಸ್ಯೆ ಹೇಳಿಕೊಂಡರು. ಕೆಲ ಜನರಿಗೆ ಸ್ಥಳದಲ್ಲೇ ಪರಿಹಾರವನ್ನು ಕೂಡ ಅಧಿಕಾರಿಗಳು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಕಚೇರಿಯಲ್ಲಿ …

Read More »

ಮದುವೆ ನಿಶ್ಚಯಕ್ಕೆ ಗ್ರಾಮಕ್ಕೆ ಬರುತ್ತಿದ್ದ ಯೋಧ ರೈಲಿನಿಂದ ಬಿದ್ದು ಸಾವು: ಕುಟುಂಬಸ್ಥರ ಆಕ್ರಂದನ

ಬೆಳಗಾವಿ: ವಿವಾಹ ಎಂಬುದು ಎಲ್ಲರಿಗೂ ಸಂತಸದ ಕ್ಷಣ. ವ್ಯಕ್ತಿಯ ಜೀವನದಲ್ಲಿ ಪ್ರಮುಖ ಘಟ್ಟ ಎಂದೇ ಪರಿಗಣಿಸಬಹುದು. ಏಕೆಂದರೆ ಜೀವನ ಸಂಗಾತಿಯನ್ನು ಪಡೆದು ಆಕೆಯೊಂದಿಗೆ ಮುಂದಿನ ಜೀವನ ಕಳೆಯುವುದು ಎಲ್ಲರಿಗೂ ಅವಿಸ್ಮರಣೀಯವೇ. ಆದರೆ ಇಂತಹ ಶುಭ ಕಾರ್ಯಕ್ಕೆಂದು ತೆರಳುವಾಗ ಮದುವೆ ಆಗಬೇಕಾದ ಹುಡುಗನೇ ನಿಧನನಾಧರೆ ಕುಟುಂಬಕ್ಕೆ ಅಂತಹ ದುಃಖವನ್ನು ಭರಿಸುವುದು ಕಷ್ಟ ಆಗುತ್ತದೆ. ಈ ರೀತಿಯ ಹೃದಯವಿದ್ರಾವಕ ಘಟನೆ ಒಂದು ಬೆಳಗಾವಿಯಲ್ಲಿ ನಡೆದಿದೆ. ಮದುವೆ ದಿನಾಂಕ ನಿಗದಿ ಮಾಡಲು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ ಯೋಧ …

Read More »

ಹಾವೇರಿಯ ಕರ್ಜಿಗಿಯಲ್ಲಿ ಕಳೆಗಟ್ಟಿದ ಕಾರಹುಣ್ಣಿಮೆ ಸಂಭ್ರಮ

ಹಾವೇರಿ : ಕಾರಹುಣ್ಣಿಮೆ ರೈತರ ಪಾಲಿನ ಸಂಭ್ರಮದ ಹಬ್ಬಗಳಲ್ಲೊಂದು. ಪ್ರತಿ ವರ್ಷ ಉತ್ತರ ಕನಾ೯ಟಕ ಭಾಗದ ರೈತರು ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹಾವೇರಿಯ ಕರ್ಜಗಿ ಗ್ರಾಮದಲ್ಲೂ ಸಹ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹಬ್ಬದ ಆಚರಣೆ ಹೇಗಿರುತ್ತದೆ? : ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸಕ್ಕೆ ಬ್ರಹ್ಮಲಿಂಗೇಶ್ವರ ಜಾತ್ರೆ ಎಂದೇ ಕರೆಯಲಾಗುತ್ತದೆ. ಮೊದಲ ದಿನ ಹೂನ್ನುಗ್ಗಿ ಆಚರಿಸಿದರೆ, ಕೊನೆಯ ಎರಡು ದಿನ ದೊಡ್ಡಕ್ಕಿ ಮತ್ತು ಸಣ್ಣಕ್ಕಿ ಬಂಡಿ ಓಡಿಸಲಾಗುತ್ತದೆ. …

Read More »