ಹಾವೇರಿ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಶನಿವಾರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾನೆ. ಈ ಮಧ್ಯೆ ಕಳೆದು ಏಳು ದಿನಗಳಲ್ಲಿ ಸರಾಸರಿ ವಾಡಿಕೆ ಮಳೆ 33.4 ಮಿಮೀ ಮಳೆಯಾಗಬೇಕಿತ್ತು. ಆದರೆ, ಸುಮಾರು 108 ಮಿಮೀ ಮಳೆಯಾಗಿದೆ. ಒಟ್ಟಾರೆಯಾಗಿ ಮೇ, ಜೂನ್, ಜುಲೈ ತಿಂಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು 1130 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 989 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 14 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಹಾವೇರಿ ನಗರದಲ್ಲಿ ಎರಡು …
Read More »ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ: ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ
ದೆಹಲಿ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಶಿರಾಡಿಘಾಟ್ನಲ್ಲಿ ಸುರಂಗ ನಿರ್ಮಾಣ ಸೇರಿದಂತೆ 20 ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ನಿತಿನ್ ಗಡ್ಕರಿ ಜೊತೆಗಿನ ಸಭೆ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಕುರಿತಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. …
Read More »ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ ವ್ಯಕ್ತಿಯೊರ್ವಕಂಬಳಿ ಹಾಸಿ ಕುಳಿತ
ವಿಜಯಪುರ… ವಿಜಯಪುರ ಜಿಲ್ಲೆಯಲ್ಲಿ ಮೊಹರಂ ಸಂಭ್ರಮ ಕಳೆಗಟ್ಟಿದೆ. ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ ವ್ಯಕ್ತಿಯೊರ್ವ ಕಂಬಳಿ ಹಾಸಿ ಕುಳಿತ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ. ಇಂದು ನಸುಕಿನ ಜನ ಜಾವ ಗ್ರಾಮದ ಅಲಾಯಿ ದೇವರ ಎದುರುಗೆ ಹಾಕಿದ ನಿಗಿನಿಗಿ ಕೆಂಡದ ಮೇಲೆ ಯಲ್ಲಾಲಿಂಗ ಹಿರೇಹಾಳ ಎನ್ನುವವರು ನೀಗಿ ನೀಗಿ ಕೆಂಡದ ಮೇಲೆ ಕೆಲ ಕ್ಷಣ ಕಂಬಳಿ ಹಾಸಿ ಭಕ್ತಿ ಸಮರ್ಪನೆ ಮಾಡಿದರು. ಬಳಿಕ ಬರಿಗೈಯ್ಯಲ್ಲಿ …
Read More »ಶಿವಶರಣ ಹಡಪದ ಅಪ್ಪಣ್ಣ ನವರ 889 ನೇ ಜಯಂತಿ
ಶ್ರೀ ಶಿವಶರಣ ಹಡಪದ ಅಪ್ಪಣ್ಣವರ 889 ನೇ ಜಯಂತಿ ಮಹೋತ್ಸವ ನಿಮಿತ್ಯ ಕಾಗವಾಡ ತಾಲೂಕಿನ ಉಗಾರದಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ನೆರವೇರಿತು. ಶುಕ್ರವಾರ ರಂದು ಪರಮಪೂಜ್ಯ ಜಗದ್ಗುರು ಅನ್ನದಾನ ಭಾರತೀ ಅಪ್ಪನ ಮಹಾಸ್ವಾಮೀಜಿ ಸುಕ್ಷೇತ್ರ ತಂಗಡಗಿ ಇವರ ದಿವ್ಯ ಸಾನಿಧ್ಯದಲ್ಲಿ ಸಮಾಜದ ಎಲ್ ಸುಮಂಗಲೆರು ಒಂದುಗೂಡಿ ಜಲ ಕುಂಬ ತೆಗೆದುಕೊಂಡು ಬಸವೇಶ್ವರ ವೃತ್ತದಿಂದ ಹನುಮಾನ ಮಂದಿರದ ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡು ಹನುಮಾನ ಮಂದಿರ ಸಭಾಭವನದಲ್ಲಿ ಬೃಹತ್ ಸಮಾವೇಶ ನೆರವೇರಿಸಿದರು. …
Read More »ವಿದೇಶಿ ರಾಜಕೀಯಕ್ಕೆ ಹೊಸ ತಿರುವು ಯುರೋಪ್ ಪ್ರವಾಸದಲ್ಲಿ ಹೆಚ್ಡಿಕೆ ಕುಟುಂಬ
ಬೆಂಗಳೂರು: ಸರ್ಕಾರ ಕೆಡವಲು ಸಿಂಗಪುರ್ನಲ್ಲಿ ಕುಳಿತು ತಂತ್ರ ಹೆಣೆಯಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಫೋಟೋಗಳ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಯೂರೋಪ್ ಪ್ರವಾಸದಲ್ಲಿರುವ ಫೋಟೋಗಳನ್ನು ಜೆಡಿಎಸ್ ನಾಯಕರು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಯುರೋಪ್‌ನ ಫಿನ್ಲ್ಯಾಂಡ್ನಲ್ಲಿ ಹೆಚ್ಡಿಕೆ ಹಾಗೂ ಕುಟುಂಬ ಸದಸ್ಯರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಅಧಿವೇಶನ ಮುಗಿದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ ಬಾಲಕೃಷ್ಣ …
Read More »ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮಸಭೆ:
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್ ಡಿಬಿ) ಸಭೆ ನಡೆಯಿತು. ಸಭೆಯಲ್ಲಿ ಕಾಮಗಾರಿಗಳ ಮಂಜೂರಾತಿ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಲಾಯಿತು. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಆ ಭಾಗದ ಸಚಿವ ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪೂರ, ರಹೀಂಖಾನ್, ಶಿವರಾಜ ತಂಗಡಗಿ, ಬಿ.ನಾಗೇಂದ್ರ ಪಾಲ್ಗೊಂಡಿದ್ದರು. …
Read More »ಡೇಟಿಂಗ್ ಆಯಪ್ ಜಾಲ.. ಮಹಿಳೆ ಮಾತಿಗೆ ಮರುಳಾಗಿ ಕೋಟಿ ಕೋಟಿ ಕಳೆದುಕೊಂಡ
ಚೆನ್ನೈ, ತಮಿಳುನಾಡು: ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿರುವ ಉತ್ತರ ರಾಜ್ಯದ ಹಲವು ಗ್ಯಾಂಗ್‌ಗಳು ದೇಶಾದ್ಯಂತ ನಾನಾ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ವಂಚನೆ ನಡೆಸಿ ಸಾರ್ವಜನಿಕರಿಂದ ನಿರಂತರವಾಗಿ ಹಣ ದೋಚುತ್ತಿದ್ದಾರೆ. ಅಷ್ಟೇ ಅಲ್ಲ ಚೆನ್ನೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಗೆ ಕೋಟಿಗಟ್ಟಲೆ ವಂಚಿಸಿದ ಪ್ರಕರಣದಲ್ಲಿ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಸೈಬರ್ ಕ್ರೈಂ ಪೊಲೀಸರು ಉತ್ತರ ರಾಜ್ಯದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಡೇಟಿಂಗ್ ಆಯಪ್ ಮೂಲಕ ವಂಚನೆ: ತಮಗೆ ಆದ ವಂಚನೆ ಬಗ್ಗೆ ಚೆನ್ನೈನ ಪಾರ್ಕ್ …
Read More »ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮೂಲಕ ಚಿನ್ನಾಭರಣ ಕಳ್ಳತನ
ಬೆಂಗಳೂರು: ಒಂದೂವರೆ ವರ್ಷಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಮನೆ ಗೆಲಸ ಮಾಡುತ್ತಿದ್ದ ಆರೋಪಿತೆಯನ್ನ ಬಂಧಿಸಿದ್ದಾರೆ. ಹಲವು ಬಾರಿ ನೋಟೀಸ್ ನೀಡಿ ಸುಳ್ಳು ಪತ್ತೆ ಪರೀಕ್ಷೆಗೆ (ಪಾಲಿಗ್ರಪಿ) ಒಳಪಡಿಸಿದರೂ ಗುಟ್ಟು ಬಿಟ್ಟುಕೊಡದ ಕಿಲಾಡಿ ಮಹಿಳಾ ಆರೋಪಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಪರೀಕ್ಷೆ ವೇಳೆ ನೀಡಿದ ಸುಳಿವು ಆಧರಿಸಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗದಗ ಜಿಲ್ಲೆಯ ಜನತಾ ಕಾಲೊನಿಯ …
Read More »50 ದಿನಗಳ ಬಳಿಕ ಹೈದರಾಬಾದ್‌ಗೆ ಮರಳಿದ ಪ್ರಭಾಸ್
ಹೈದರಾಬಾದ್: ಆದಿಪುರುಷ್ ಬಿಡುಗಡೆ ಬಳಿಕ ವಿದೇಶಕ್ಕೆ ಹಾರಿದ್ದ ಡಾರ್ಲಿಂಗ್ ಪ್ರಭಾಸ್, ಇದೀಗ ಮತ್ತೆ ವಾಪಸ್ ಭಾರತಕ್ಕೆ ಬಂದಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ಈವೆಂಟ್ನಲ್ಲಿ ಭಾಗವಹಿಸಿದ್ದ ಅವರು, ಇಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಂತಾರಾಷ್ಟ್ರೀಯ ಮಟ್ಟದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಸಮಾರಂಭದಲ್ಲಿ ಪ್ರಭಾಸ್ ಜೊತೆಗೆ ‘ಕಲ್ಕಿ 2898 AD’ ಚಿತ್ರ ತಂಡದ ಎಲ್ಲ ನಟ-ನಟಿಯರು ಕೂಡ ಭಾಗಿಯಾಗಿದ್ದರು. ಚಿತ್ರೀಕರಣ ವೇಳೆ ಪೆಟ್ಟು ಬಿದ್ದು ಸುರಿಸುಮಾರು 50 ದಿನಗಳನ್ನು …
Read More »100 ರೂಪಾಯಿಗಾಗಿ ಮಗನನ್ನೇ ಕೊಂದ ಕುಡುಕ ತಂದೆ!
ಬಿಹಾರದ ಸಮಸ್ತಿಪುರ ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಅಮಾಯಕ ಮಗನನ್ನೇ ಕತ್ತು ಸೀಳಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಹಿಯುದ್ದೀನ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾದಯ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗನನ್ನು ಕೊಂದ ತಂದೆ : ಘಟನೆಗೆ ಸಂಬಂಧಿಸಿದಂತೆ ಭದಯ್ಯ ಗ್ರಾಮದಲ್ಲಿ ತಂದೆ ತನ್ನ ಮೂರು ವರ್ಷದ ಅಮಾಯಕ ಮಗನ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಮಗು ಗಂಭೀರವಾಗಿ …
Read More »