ಬಿಂಡಿ(ಮಧ್ಯಪ್ರದೇಶ): ಪ್ರೀತಿ ಮತ್ತು ರಕ್ಷಣೆಯ ಬಂಧವಾಗಿರುವ ರಾಖಿ ಸಹೋದರ ಮತ್ತು ಸಹೋದರಿಯರ ನಡುವಿನ ಮುರಿಯಾಲಾಗದ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವುದು ಸುಳ್ಳಲ್ಲ. ಇಂತಹ ಹಬ್ಬವನ್ನು ಮತ್ತಷ್ಟು ಸ್ಮರಣಿಯವಾಗಿಸಲು ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಅಶೋಕ್ ಭಾರಧ್ವಾಜ್ ಮುಂದಾಗಿದ್ದಾರೆ. ಇದಕ್ಕಾಗಿ ಅವರು ವಿಶ್ವದ ಬೃಹತ್ ಗಾತ್ರದ ರಾಖಿ ತಯಾರಿಸಲು ಮುಂದಾಗಿದ್ದಾರೆ. ಈಗಾಗಲೇ ಭಾರಧ್ವಾಜ್ ಹೆಸರು ಗಿನ್ನೆಸ್ ಸೇರಿದಂತೆ ಅನೇಕ ದಾಖಲೆಗಳನ್ನು ಅಚ್ಚೊತ್ತಿದ್ದು, ಇದೀಗ ಒಎಂಜಿ ಬುಕ್ ಆಫ್ …
Read More »ತಾವು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್
ಬೆಂಗಳೂರು: ನಗರ ಸಾರಿಗೆ ಬಸ್ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿರುವ ರಜನಿಕಾಂತ್ ಸದ್ಯ ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಟ. ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು, ಸಾಕಷ್ಟು ಹೆಸರು ಸಂಪಾದಿಸಿರುವ ಬಹುಭಾಷಾ ನಟ ರಜನಿಕಾಂತ್ ಬದುಕು ಕಟ್ಟಿಕೊಳ್ಳಲು ವೃತ್ತಿಜೀವನ ಆರಂಭಿಸಿದ್ದ ಸ್ಥಳಕ್ಕೆ ಅಚ್ಚರಿಯ ಭೇಟಿ ಕೊಟ್ಟಿದ್ದಾರೆ. ಜೈಲರ್ ಯಶಸ್ಸಿನಲ್ಲಿರುವ ನಟನನ್ನು ಕಂಡ ಬೆಂಗಳೂರು ಸಾರಿಗೆ ಸಿಬ್ಬಂದಿ ಆಶ್ಚರ್ಯಚಕಿತರಾದರು. ಒಂದು ಕ್ಷಣ ತಮ್ಮನ್ನೇ ತಾವು ನಂಬದಂತಾದರು. ಬಿಎಂಟಿಸಿ ಸಿಬ್ಬಂದಿ ಜೊತೆ ತಲೈವಾಕೆಲಸ …
Read More »ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉತ್ಪಾದನೆಯನ್ನು ಪುನಾರಂಭಿಸಿದೆ.
ಶಿವಮೊಗ್ಗ: ಭದ್ರಾವತಿ ಪಟ್ಟಣದ ಆಶಾಕಿರಣವಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉತ್ಪಾದನಾ ಕಾರ್ಯವನ್ನು ಪುನಾರಂಭಿಸಿದೆ. ಇದರಿಂದ ಕಾರ್ಖಾನೆಯ ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದೆ. ನಿನ್ನೆಯಿಂದ ಕಾರ್ಖಾನೆಯ ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ. 6 ದಿನಗಳ ಹಿಂದೆ ಉಕ್ಕು ಪ್ರಾಧಿಕಾರದ ಬಿಲಾಯ್ ಘಟಕದಿಂದ 19 ರೈಲು ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಕಾರ್ಖಾನೆಗೆ ಬಂದಿದ್ದವು. ಇದರಿಂದ ಎನ್‌ಆರ್‌ಎಂ ಘಟಕ ಕಾರ್ಯವನ್ನು ಶುರು ಮಾಡಿದೆ. ವಿಐಎಸ್‌ಎಲ್ ಕಾರ್ಖಾನೆಯು ಆಗಸ್ಟ್ 10 ರಿಂದಲೇ ಪ್ರಾರಂಭವಾಗಬೇಕಿತ್ತು. ಆದರೆ NRM ಘಟಕದ …
Read More »ಹೆಸ್ಕಾಂನಲ್ಲಿ 248 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೆಸ್ಕಾಂನಲ್ಲಿ ಒಂದು ವರ್ಷದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ, ನೇಮಕಾತಿ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿವೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಪ್ರಸಕ್ತ ಸಾಲಿನ ವೃತ್ತಿ ತರಬೇತಿಗಾಗಿ 248 ಐಟಿಐ ಅಪ್ರೆಂಟಿಸ್ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಸ್ಕಾಂನಲ್ಲಿ ಕಾರ್ಯ ನಿರ್ವಹಣೆ ಅನುಭವವನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದ್ದು, ಈ ವೇಳೆ ಆಯ್ಕೆಯಾದ …
Read More »ಪ್ರಮೋದ್ ಶೆಟ್ಟಿ’ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ
ಜಲಪಾತ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ. ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಪ್ರಮೋದ್ ಶೆಟ್ಟಿ. ಇದೀಗ ‘ಜಲಪಾತ’ ಎಂಬ ಸಿನಿಮಾದಲ್ಲಿ ಪ್ರಮೋದ್ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ. ನಿರ್ದೇಶಕ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿರುವ ಜಲಪಾತ ಚಿತ್ರದಲ್ಲಿ …
Read More »ಎಲ್ಲ ರಂಗದಲ್ಲಿ ವೈಫಲ್ಯ ಕಂಡಿರುವುದೇ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಾಧನೆ: ಬೊಮ್ಮಾಯಿ ಟೀಕೆ
ಬೆಂಗಳೂರು: ಎಲ್ಲ ರಂಗದಲ್ಲಿ ವೈಫಲ್ಯ ಕಂಡಿರುವುದೇ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಾಧನೆಯಾಗಿದೆ. ಇಷ್ಟು ದಿನದಲ್ಲಿ ಜನರ ವಿಶ್ವಾಸ ಗಳಿಸುವುದು ದೂರದ ಮಾತು. ಅವರ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಸರ್ಕಾರದ ನೂರು ದಿನದ ಸಂಭ್ರಮವನ್ನು ಟೀಕಿಸಿ ಸರಣಿ ಟ್ಚೀಟ್ ಮಾಡಿರುವ ಬೊಮ್ಮಾಯಿ, ಸಂಪೂರ್ಣ ಬಹುಮತದೊಂದಿಗೆ ಬಂದ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು. ಗ್ಯಾರಂಟಿ ನೆಪದಲ್ಲಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳು …
Read More »ಒಂದು ದಿನ ಮೊದಲೇ ಮುಂಬೈಗೆ ಮಮತಾ: ಇಂಡಿಯಾ ಸಭೆಗೂ ಮುನ್ನ ಬಿಗ್ ಬಿ ಭೇಟಿ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೊಡೆತಟ್ಟಿ 28 ವಿಪಕ್ಷಗಳು ರೂಪಿಸಿಕೊಂಡಿರುವ I.N.D.I.A ಮೈತ್ರಿಕೂಟದ ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಂದು ದಿನ ಮುಂಚೆ ಅಂದರೆ ಆಗಸ್ಟ್ 30 ರಂದು ಮಹಾರಾಷ್ಟ್ರಕ್ಕೆ ಆಗಮಿಸಲಿದ್ದಾರೆ. ಅಂದು ಬಾಲಿವುಡ್ನ ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದು, ರಕ್ಷಾ …
Read More »ವಿಷಾಹಾರ ಸೇವನೆ.. ಸಮತಾ ಆಶ್ರಮ ಶಾಲೆಯ 170 ವಿದ್ಯಾರ್ಥಿಗಳು ಅಸ್ವಸ್ಥ
ಸಾಂಗ್ಲಿ(ಮಹಾರಾಷ್ಟ್ರ): ಸಮತಾ ಆಶ್ರಮ ಶಾಲೆಯ ಮಕ್ಕಳು ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಾಂಗ್ಲಿ – ಜತ್ತ ತಾಲೂಕಿನ ಉಮಡಿಯಲ್ಲಿ ನಡೆದಿದೆ. ಒಟ್ಟು 170 ವಿದ್ಯಾರ್ಥಿಗಳು ಆಹಾರ ಸೇವಿಸಿದ್ದು, ಫುಡ್ ಪಾಯಿಸನ್ ಆಗಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣವೇ ಮದ್ಗ್ಯಾಲ್‌ನಲ್ಲಿರುವ ಗ್ರಾಮೀಣ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕೆಲ ವಿದ್ಯಾರ್ಥಿಗಳನ್ನು ಸಾಂಗ್ಲಿ ಹಾಗೂ ಮಿರಾಜ್ನಲ್ಲಿರುವ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ …
Read More »‘ಬಿಜೆಪಿಯಲ್ಲಿ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರೋದು ಸತ್ಯ,: ಶಂಕರ ಪಾಟೀಲ ಮುನೇನಕೊಪ್ಪ
ಹುಬ್ಬಳ್ಳಿ: ನನಗೆ ಈವರೆಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಬೇಕೆಂಬ ಆಹ್ವಾನ ಕಾಂಗ್ರೆಸ್ ಮುಖಂಡರಿಂದ ಬಂದಿಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕಲವು ದಿನಗಳಿಂದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಅವರು, ”ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸ್ನೇಹಿತರು ಇದ್ದಾರೆ, ಬಂಧುಗಳು …
Read More »ಕಾಂಗ್ರೆಸ್ ಕಾರ್ಯಕರ್ತೆಯ ಅವಹೇಳನ ಆರೋಪ; ಸೂಲಿಬೆಲೆ ವಿರುದ್ಧ ಎಫ್ಐಆರ್
ಶಿವಮೊಗ್ಗ : ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೆ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆ ಪೋಸ್ಟ್ಗೆ ಸೌಗಂಧಿಕ ರಘುನಾಥ್ …
Read More »