Breaking News

ರಾಷ್ಟ್ರೀಯ

ಹಿರಿಯ ಪತ್ರಕರ್ತ ಅಶೋಕ ಜೋಶಿ ನಿಧನ

ಬೆಳಗಾವಿ ; ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಅಶೋಕ ಜೋಶಿ ( ವ.72) ಇವರು ಇಂದು ಬುಧವಾರ ಬೆಳಿಗ್ಗೆ ಅನಾರೋಗ್ಯ ಕಾರಣ ನಿಧನರಾದರು. ಶ್ರೀ ಅಶೋಕ ಜೋಶಿ ಅವರು ಸಂಯುಕ್ತ ಕರ್ನಾಟಕ, ಹಸಿರು ಕ್ರಾಂತಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದರು. ಕಳೆದ ಒಂದು ವಾರದಿಂದ ವಿವಿಧ ಅಂಗಾಂಗಗಳ ವೈಫಲ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು …

Read More »

ಕರವೇ ರ‍್ಯಾಲಿ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ?

ಬೆಂಗಳೂರು, (ಡಿಸೆಂಬರ್ 27): ಅಂಗಡಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ (Kannada) ಬಳಸುವಂತೆ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ( karnataka rakshana- Vedike) ಬೆಂಗಳೂರಿಲ್ಲಿಂದು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ಬೆಂಗಳೂರು (Bengaluru) ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್​​ ಬಳಿಯ ಟೋಲ್​ ಪ್ಲಾಜಾದಿಂದ ಆರಂಭವಾಗುವ ರ‍್ಯಾಲಿ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಅಲ್ಲದೇ ಟ್ರಾಫಿಕ್​ ಜಾಮ್ ಆಗದಂತೆ ಪೊಲೀಸರು ಏರ್​ಪೋರ್ಟ್​ ರಸ್ತೆಯ …

Read More »

ಗೃಹಲಕ್ಷ್ಮಿ ಯೋಜನೆ ಸಮಸ್ಯೆ ಪರಿಹಾರಕ್ಕೆ ಡಿ.27ರಿಂದ ಗ್ರಾಪಂಗಳಲ್ಲಿ ವಿಶೇಷ ಶಿಬಿರ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರೂ ಇನ್ನೂ ಲಕ್ಷಾಂತರ ಮಹಿಳೆಯರು ಯೋಜನೆಯ ಅನುಕೂಲ ಪಡೆಯಲು ಸಾಧ್ಯವಾಗಿಲ್ಲ. ಹಾಗೆಯೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಕೆಲ ತಾಂತ್ರಿಕ ಕಾರಣಗಳಿಂದ ಹಲವರ ಖಾತೆಗೆ ಮಾಸಿಕ 2000 ರೂ. ಸಹಾಯಧನ ತಲುಪಿಲ್ಲ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಲು ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ.27 ರಿಂದ 29 ರವರೆಗೆ ಮೂರು ದಿನಗಳ …

Read More »

ಪತ್ರದ ಮೂಲಕ ವಿವಿಧ ರಾಜ್ಯಗಳ ಸಿಎಂಗಳಿಗೆ ಹೊಸ ವರ್ಷದ ಶುಭಾಷಯ ತಿಳಿಸುವ ಶಿಕ್ಷಕ

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಮದನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಕಳೆದ 34 ವರ್ಷದಿಂದ ತಪ್ಪದೇ ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಷಯವನ್ನು ಪತ್ರ ಬರೆಯುವ ಮೂಲಕ ತಿಳಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಮದನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಕಳೆದ 34 ವರ್ಷದಿಂದ ತಪ್ಪದೇ ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಷಯವನ್ನು ಪತ್ರ ಬರೆಯುವ ಮೂಲಕ ತಿಳಿಸುತ್ತಿದ್ದಾರೆ. …

Read More »

ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯಕ್ಕೆ ಬಿಎಸ್​ವೈ, ಪಂಚಾಚಾರ್ಯರ ನಿಲುವೇನು? ಜಾಮದಾರ್

ಬೆಳಗಾವಿ,): 24ನೇ ಸಮ್ಮೇಳನದಲ್ಲಿ ಕೈಗೊಂಡ ಏಳು ನಿರ್ಣಯ ಸ್ವಾಗತ. ವಿರೇಶೈವ ಸಮ್ಮೇಳನದಲ್ಲಿ ಮೂವರು ಪಂಚಾಚಾರ್ಯರು ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಲಿಂಗಾಯತರು ಹಿಂದುಗಳಲ್ಲ ಎಂದು ನಿರ್ಣಯ ಮಂಡನೆ ಮಾಡಲಾಗಿದೆ. 2017ರಲ್ಲಿ ಲಿಂಗಾಯತ ಧರ್ಮದ ಹೋರಾಟಕ್ಕೆ ವಿರೋಧ ಮಾಡಿದ್ರು. ಈಗ ವೀರಶೈವ ಮಹಾಸಭೆ ಲಿಂಗಾಯತರು ಹಿಂದುಗಳಲ್ಲ ಎಂದು ಘೋಷಿಸಿದೆ. ಪಂಚಾಚಾರ್ಯರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ‌ ಜಾಮದಾರ್ (sm jamadar)ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಇಂದು (ಡಿಸೆಂಬರ್ …

Read More »

7 ದಿನ ಹೋಂ ಐಸೊಲೇಷನ್‌ ಕಡ್ಡಾಯ!

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಆತಂಕ(covid cases) ಇರುವ ಹಿನ್ನೆಲೆ ಹೊಸ ವರ್ಷ(New year celebration) ಆಚರಣೆಯಲ್ಲಿ ಅಧಿಕ ಜಾಗ್ರತೆ ವಹಿಸುವಂತೆ ಈಗಾಗಲೇ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಜೊತೆಗೆ ಕೋವಿಡ್‌ ಸೋಂಕಿತ ವ್ಯಕ್ತಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಲಾಗಿದೆ.   ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೊರೊನಾ ಸೋಂಕಿತ ವ್ಯಕ್ತಿಗಳು ಕಡ್ಡಾಯವಾಗಿ 7 ದಿನ ಹೋಂ ಐಸೊಲೇಷನ್‌ ನಲ್ಲಿ ಇರುವಂತೆ, ಹಾಗೆ ಮಾಸ್ಕ್‌ ಬಳಕೆ ಸೇರಿದಂತೆ ಕೋವಿಡ್‌ …

Read More »

ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಿಸಿ:ಶಾಲಾ ಶಿಕ್ಷಕರ ಸಂಘ ಮನವಿ

ಬೆಂಗಳೂರು: ಬಿಸಿಯೂಟ ಸಿಬ್ಬಂದಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಸ್ವಚ್ಛತೆಗಾಗಿ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (State Primary School Teachers Association) ಅಧ್ಯಕ್ಷ ಕೆ. ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಗಾಗಿ ಮಕ್ಕಳನ್ನು ಬಳಸುತ್ತಿದ್ದಾರೆ ಎಂಬ ಪ್ರಕರಣಗಳು ಬೆಳಕಿಗೆ ಬಂದು ಸಾಕಷ್ಟು …

Read More »

ರೈತರ ಬಗ್ಗೆ ಗೌರವದಿಂದ ಮಾತನಾಡಬೇಕು:C.M.

ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್​ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೌನಮುರಿದಿದ್ದಾರೆ. ಅನ್ನದಾತರಾದ ರೈತರ ಬಗ್ಗೆ ನಾವು ಎಚ್ಚರಿಕೆಯಿಂದ ಮಾತ್ರವಲ್ಲ ಗೌರವದಿಂದ ಮಾತನಾಡಬೇಕು. ಹಗುರ ಮಾತುಗಳ ಮೂಲಕ ರೈತರಿಗೆ ಅವಮಾನವಾಗುವಂತೆ ಮಾಡಬಾರದು ಎಂದು ಸಚಿವ ಶಿವಾನಂದ್ ಪಾಟೀಲ್​ರ ಹೇಳಿಕೆಯನ್ನ ಸಮರ್ಥನೆ ದಾಟಿಯಲ್ಲಿ ಖಂಡಿಸಿದ್ದಾರೆ. ಬೆಂಗಳೂರು, ಡಿಸೆಂಬರ್​26: ಅನ್ನದಾತರಾದ ರೈತರ ಬಗ್ಗೆ ಎಚ್ಚರಿಕೆಯಿಂದ ಮಾತ್ರವಲ್ಲ, ಗೌರವದಿಂದ ಮಾತನಾಡಬೇಕು ಎಂದು ಸಿಎಂ ಸಿದ್ದರಾಮಯ್ಯ   ರೈತ ಕುಟುಂಬದಿಂದ ಬಂದಿರುವ ಕೃಷಿ ಮಾರುಕಟ್ಟೆ ಸಚಿವ …

Read More »

ಬಿಎಸ್‌ವೈ ಸರ್ಕಾರದಲ್ಲಿ ಕೋವಿಡ್‌ ವೇಳೆ ಭಾರಿ ಅವ್ಯವಹಾರ? – ಯತ್ನಾಳ್‌

ವಿಜಯಪುರ : ಕೋವಿಡ್‌ ಮೊದಲ ಅಲೆಯ(Covid first wave) ಸಂದರ್ಭದಲ್ಲಿ ಬಿಎಸ್‌ವೈ(B S Yediyurappa) ಸರ್ಕಾರದ ಅವಧಿಯಲ್ಲಿ ಭಾರಿ ಅವ್ಯವಹಾರ ನಡೆದಿತ್ತು ಈ ಬಗ್ಗೆ ಮಾಜಿ ಸಿಎಂ ಬಿಎಸ್‌ವೈ ಅವರಿಗೆ ಮಾಹಿತಿ ನೀಡಿದ್ದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಸಮಯದಲ್ಲಿ 45 ರೂ ಮಾಸ್ಕ್‌ಗೆ 485 ರೂ ನಿಗದಿಪಡಿಸಲಾಗಿತ್ತು . ಕೊರೊನಾ ರೋಗಿ ಹೆಸರಲ್ಲಿ …

Read More »

ರೈತರ ಅವಹೇಳನ – ಶಿವಾನಂದ ಪಾಟೀಲ್‌ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಬೆಳಗಾವಿ : ರೈತರ (Farmers) ಬಗ್ಗೆ ಅವಹೇಳನಕಾರಿ ಹೇಳಿಕೆ (Controvercial statement) ನೀಡಿದ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ್‌ (Shivanand patil) ಅವರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ (Protest) ನಡೆಸಿರುವ ಘಟನೆ ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ಬಳಿ ನಡೆದಿದೆ. ಕಾರ್ಖಾನೆ ಬಳಿಯಿರುವ ಸಚಿವರ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ಸಚಿವರ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಜೊತೆಗೆ ಸಚಿವರ ವಿರುದ್ದ ಘೋಷಣೆ ಕೂಗಿದರು. …

Read More »