Breaking News

ರಾಷ್ಟ್ರೀಯ

ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮಂಗಳೂರು: ಹಿರಿಯ ಚಿಂತಕ, ಲೇಖಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಇವರ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’ ಎಂಬ ಪ್ರಬಂಧ ಕೃತಿಗೆ ಪ್ರಶಸ್ತಿ ಸಂದಿದೆ.   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರಾದ ಲಕ್ಷ್ಮೀಶ ತೋಳ್ಪಾಡಿಯವರದ್ದು ಸಂತನಂತಹ ಬದುಕು. ಸದಾ ಆಧ್ಯಾತ್ಮಿಕ ಚಿಂತನೆ ಹೊಂದಿರುವವರು. ಜೊತೆಗೊಂದಿಷ್ಟು ಬರಹ, ಮಾತು, ಮೌನ ಎಲ್ಲವನ್ನೂ ಒಳಗಿಟ್ಟುಕೊಂಡವರು. ಇವರು ಬರೆದಿರುವ ಅನೇಕ ಲೇಖನಗಳು ನಾಡಿನ …

Read More »

ರಾಜ್ಯ ಗಿಗ್ ಕಾರ್ಮಿಕರು ಮತ್ತು ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಜೀವ ವಿಮೆ ಹಾಗೂ ಅಪಘಾತ ಪರಿಹಾರ ಯೋಜನೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ಜೀವ ವಿಮೆ ಹಾಗೂ ಅಪಘಾತ ಪರಿಹಾರ ಯೋಜನೆ ಮತ್ತು ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.   ಗಿಗ್ ಕಾರ್ಮಿಕರುಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಎರಡು ಲಕ್ಷ ರೂ.ಗಳ ಜೀವ ವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿದಂತೆ …

Read More »

ಪರೀಕ್ಷಾ ಅಕ್ರಮ: ಆರ್‌.ಡಿ.ಪಾಟೀಲ್ ಸೇರಿ 12 ಆರೋಪಿಗಳ ಮೇಲೆ ಕೋಕಾ ಆಯಕ್ಟ್‌ನಡಿ ಪ್ರಕರಣ

ಕಲಬುರಗಿ: ಪಿಎಸ್‌ಐ ನೇಮಕಾತಿ‌ ಪರೀಕ್ಷೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್ ಸೇರಿ 12 ಜನ ಆರೋಪಿಗಳ ಮೇಲೆ ಕೋಕಾ ಆಯಕ್ಟ್ ಜಾರಿಗೊಳಿಸಲಾಗಿದೆ. ಪದೇ ಪದೇ ಒಂದೇ ರೀತಿಯ ಅಪರಾಧ ಕೃತ್ಯ ಮುಂದುವರೆಸುವವರ ವಿರುದ್ದ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಕೋಕಾ ಅಸ್ತ್ರ ಪ್ರಯೋಗಿಸಲಾಗುತ್ತದೆ.‌ ಅಶೋಕ ನಗರ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ …

Read More »

ಬೆಳಗಾವಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಿಎಂ ಘೋಷಣೆ

ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ‌. ದಿನ ದಿನಕ್ಕೆ ಕುಂದಾನಗರಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಅದಕ್ಕೆ ತಕ್ಕುದಾಗಿ ಬೃಹತ್ ಕೈಗಾರಿಕೆಗಳು ಇಲ್ಲಿಲ್ಲ. ಪರಿಣಾಮ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಪುಣೆ ಸೇರಿ ಇನ್ನಿತರ ಕಡೆ ವಲಸೆ ಹೋಗುವ ದುಸ್ಥಿತಿಯಿದೆ. ಹಾಗಾಗಿ, ಬೆಳಗಾವಿಯಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಫೌಂಡ್ರಿ ಪಾರ್ಕ್ ನಿರ್ಮಿಸುವಂತೆ ಆಗ್ರಹಿಸಿದ್ದ ಈ ಭಾಗದ ಉದ್ಯಮಿಗಳಿಗೆ ಸಾಥ್ ಕೊಟ್ಟಿತ್ತು. ಫೈವ್ ಸ್ಟಾರ್ ಇಂಡಸ್ಟ್ರೀಸ್ …

Read More »

ಭೂತಾಯಿಯ ರಕ್ಷಣೆಗೆ 12, 13ರಂದು ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಸಂತರ-ರೈತರ ಸಮಾವೇಶ

ಚಿಕ್ಕೋಡಿ: ಮನುಷ್ಯನ ಜೀವನ ಶೈಲಿಯ ಬದಲಾವಣೆಯಿಂದ ನಿಸರ್ಗ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಮಣ್ಣು, ಗಾಳಿ ಹಾಗು ನೀರಿನಲ್ಲಿ ರಾಸಾಯನಿಕ ಸೇರಿಕೊಂಡು ಹೊಸ ಸಮಸ್ಯೆಗಳಿಗೆ ನಿಸರ್ಗ ಜನ್ಮ ನೀಡುತ್ತಿದೆ. ಹೀಗಾಗಿ ಮಣ್ಣು, ನೀರು, ಗಾಳಿ, ಇಂಧನ ರಕ್ಷಣೆಗೆ ಜನವರಿ 12, 13ರಂದು ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ …

Read More »

ಕನ್ನಡ ಧ್ವಜ ಹಾಕಿದ್ದಕ್ಕೆ ದುಷ್ಕರ್ಮಿಗಳು ಯುವಕರಿಗೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಚಿಕ್ಕೋಡಿ(ಬೆಳಗಾವಿ): ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಕಲಿ ಗ್ರಾಮದ ಬಸವರಾಜ ಪಾಟೀಲ, ಹಾಗೂ ಶುಭಂ ಕಿವುಂಡಾ ಎಂಬವರ ಮೇಲೆ ಹಲ್ಲೆಯಾಗಿದೆ. ಅಂಗತ ಕರಮೆ, ಅನಿಕೇತ್ ಕರಮೆ, ಶಾಹು ಮಗದುಮ್ ಸೇರಿದಂತೆ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂಕಲಿ ಗ್ರಾಮದಲ್ಲಿ ಕೆಲವು ಯುವಕರು ಶಿವಾಜಿ …

Read More »

ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ​ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್​ಡಿಎಲ್) ಟೆಂಡರ್​ಗಾಗಿ ಲಂಚ ಪಡೆದ ಆರೋಪದಲ್ಲಿ ಬಿಜೆಪಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಇಂದು ರದ್ದುಪಡಿಸಿ ಆದೇಶಿಸಿತು. ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಮಾಡಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಹಾಕಿತು. ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಸೆ.17 ಎ …

Read More »

ಶಕ್ತಿ ಯೋಜನೆಯಿಂದ ಹೆಚ್ಚಿದ ಸಾರಿಗೆ ನಿಗಮಗಳ ಆದಾಯ: ಸದ್ಯಕ್ಕಿಲ್ಲ ಬಸ್ ಪ್ರಯಾಣ ದರ ಹೆಚ್ಚಳ

ಬೆಂಗಳೂರು : ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 15-20 ರಷ್ಟು ಹೆಚ್ಚಳವಾಗಿರುವುದರಿಂದ ನಾಲ್ಕು ಸಾರಿಗೆ ನಿಗಮಗಳ ಆದಾಯದಲ್ಲಿಯೂ ಹೆಚ್ಚಳವಾಗಿದೆ. ಹಾಗಾಗಿ ಸದ್ಯದ ಮಟ್ಟಿಗೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪದಿಂದ ಸಾರಿಗೆ ನಿಗಮಗಳು ದೂರ ಸರಿದಿವೆ. ಉಚಿತ ಟಿಕೆಟ್ ದರದ ಮೊತ್ತ ರೀ ಎಂಬರ್ಸ್ ಮೆಂಟ್ ಸರಿಯಾಗಿ ಮಾಡಿದಲ್ಲಿ ಸಾರಿಗೆ ನಿಗಮಗಳ ನಿರ್ವಹಣೆಗೆ ಯಾವುದೇ ತೊಂದರೆ ಆಗಲ್ಲ. ಟಿಕೆಟ್ ದರ ಪರಿಷ್ಕರಣೆ ಪ್ರಸ್ತಾಪದ ಪ್ರಮೇಯವೂ ಎದುರಾಗಲ್ಲ ಎನ್ನುವ ಲೆಕ್ಕಾಚಾರದಲ್ಲಿ ಸಾರಿಗೆ …

Read More »

64 ವರ್ಷದ ವಿಧವಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ(ಮಹಾರಾಷ್ಟ್ರ): 64 ವರ್ಷದ ವಿಧವಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಹೀನ ಕೃತ್ಯ ಈಶಾನ್ಯ ಮುಂಬೈನ ಟ್ರಾಂಬೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.   ಘಟನೆಯ ವಿವರ: ಸಂತ್ರಸ್ತೆಯ ಮಗಳು ನೀಡಿರುವ ದೂರಿನ ಆಧಾರದ ಪ್ರಕಾರ ಘಟನೆ ಕುರಿತು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. “ಮಹಿಳೆಯು ಸೋಮವಾರ ರಾತ್ರಿ ಕುರ್ಲಾದ ನೆಹರು ನಗರ ಪ್ರದೇಶದ ಸಮೀಪದ ಖಂಡೋಬಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ಅಲ್ಲಿದ್ದ ಅಪರಿಚಿತ ಮೂವರು ವ್ಯಕ್ತಿಗಳು ಅಪಹರಿಸಿ …

Read More »

ಚಾಕು ತೋರಿಸಿ ಹೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಕಲಬುರಗಿ: ಚಾಕು ತೋರಿಸಿ ಬೇದರಿಕೆ ಹಾಕಿ ಅಪ್ರಾಪ್ತೆ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಜರುಗಿದೆ. ಬಾಲಕಿ ಕುಟುಂಬಸ್ಥರು ದುಡಿಯಲು ಮುಂಬೈಗೆ ತೆರಳಿದ್ದು, ವಿದ್ಯಾಭ್ಯಾಸಕ್ಕಾಗಿ ಹತ್ತು ವರ್ಷದ ಬಾಲಕಿ ಸಂಬಂಧಿ‌ಕರ ಮನೆಯಲ್ಲಿದ್ದಾಳೆ. ಹೀಗಿರುವಾಗ 14 ಮತ್ತು 16 ವರ್ಷದ ಇಬ್ಬರು ಬಾಲಕರು ಸೇರಿ ಬಾಲಕಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಮಾಡಿರುವ ದೃಶ್ಯ ತಮ್ಮ‌ ಮೊಬೈಲ್​​​ನಲ್ಲಿ ವಿಡಿಯೋ …

Read More »