Breaking News

ರಾಷ್ಟ್ರೀಯ

806 ಕೋಟಿ ರೂಪಾಯಿ ಬಾಕಿ ಪಾವತಿಸಿ: ಮಹಾರಾಷ್ಟ್ರ ಎಲ್‌ ಐಸಿಗೆ ಜಿಎಸ್‌ ಟಿ ನೋಟಿಸ್

ಮುಂಬೈ: ಸಾರ್ವಜನಿಕ ವಲಯದ ಪ್ರಮುಖ ಇನ್ಸೂರೆನ್ಸ್‌ (ಎಲ್‌ ಐಸಿ) ಕಂಪನಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು 806 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಮಹಾರಾಷ್ಟ್ರದ ಜಿಎಸ್‌ ಟಿ ಅಧಿಕಾರಿಗಳು ಈ ನೋಟಿಸ್‌ ಜಾರಿಗೊಳಿಸಿದ್ದಾರೆ.   2017-18ನೇ ಸಾಲಿನ ಜಿಎಸ್‌ ಟಿ ಪಾವತಿಯಲ್ಲಿನ ತೆರಿಗೆ ಪಾವತಿಗೆ ಸಂಬಂಧಿಸಿದ ನೋಟಿಸ್‌ ಅನ್ನು 2024ರ ಜನವರಿ 1ರಂದು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017-18ನೇ ಸಾಲಿನ ಬಾಕಿ …

Read More »

ಪ್ರೇಮ ವಿಚಾರಕ್ಕೆ ಕಲ್ಲು ತೂರಾಟ. ಮನೆ, ವಾಹನಗಳು ಧ್ವಂಸ, ಬಿಗುವಿನ ವಾತಾವರಣ

ಬೆಳಗಾವಿ: ಯುವಕ ಹಾಗೂ ಅಪ್ರಾಪ್ತ ಬಾಲಕಿಯ ನಡುವಿನ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿಯ ಮನೆಯ ಮೇಲೆ 25 ರಿಂದ 30 ಜನರ ಗುಂಪೊಂದು ಸೋಮವಾರ ರಾತ್ರಿ ಏಕಾಏಕಿ ದಾಳಿ ನಡೆಸಿ ಮನೆ ಧ್ವಂಸಗೊಳಿಸಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.   ತಾಲೂಕಿನ ಕರ್ಲೆ ಗ್ರಾಮದ ಹೈಸ್ಕೂಲ್ ವಿದ್ಯಾರ್ಥಿನಿ ಹಾಗೂ ನಾವಗೆ ಗ್ರಾಮದ ಕಾಲೇಜು …

Read More »

ಶಾಲೆಯ ಬೀಗ‌ ಮುರಿದ ಕಳ್ಳ

ದಾಂಡೇಲಿ : ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆ ಮತ್ತು ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಬೀಗ‌ ಮುರಿದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಶಾಲೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಆನಂತರ ಕಚೇರಿ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿದ್ದ ಗೋಡ್ರೇಜ್ ಕಬಾಟಿನ ಬೀಗ ಒಡೆದು ಸರಿಸುಮಾರು 5 ರಿಂದ 7 ಸಾವಿರ ರೂಪಾಯಿ ನಗದನ್ನು ಕಳ್ಳತನ …

Read More »

ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಹಣ ವಸೂಲಿ : ವಂಚಕ ಸೆರೆ

ಬೆಂಗಳೂರು,ಜ.2- ಸಿನಿಮಾ ನೋಡಿ ಪ್ರೇರಣೆಗೊಂಡು ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಶ್ರೀನಾಥ ರೆಡ್ಡಿ(34) ಬಂಧಿತ ವಂಚಕ. ಈತ 10ನೇ ತರಗತಿ ವ್ಯಾಸಂಗ ಮಾಡಿದ್ದು, ಆಂಧ್ರಪ್ರದೇಶದಲ್ಲೂ ಸರ್ಕಾರಿ ನೌಕರರಿಗೆ ಇದೇ ರೀತಿ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಅನಾ ಮಧೇಯ ವ್ಯಕ್ತಿಯೊಬ್ಬ ಸರ್ಕಾರಿ …

Read More »

ಶಾಲೆಯಲ್ಲಿ ಮಾರಕಾಸ್ತ್ರ ಹಿಡಿದ ಮಕ್ಕಳು : ಮುಚ್ಚಿಡುವ ಯತ್ನದಲ್ಲಿ ಶಿಕ್ಷಣ ಇಲಾಖೆ..?

ರಾಯಚೂರಿನಲ್ಲಿ 7 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಶಾಲೆಗೆ ಪೆನ್ ಬದಲು ಗನ್ ತೆಗೆದುಕೊಂಡು ಬಂದಿದ್ದಾನೆ ಶಾಲಾ ವಿದ್ಯಾರ್ಥಿ. ರಾಯಚೂರು ನಗರದ ಶ್ರೀಮಲ್ ರಿಖನ್ ಚಂದ್ ಸುಖಾಣಿ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ಗನ್, ಚಾಕು ಹಾಗೂ ಮಾರಾಕಾಸ್ತ್ರಗಳನ್ನು ತಂದಿದ್ದಾನೆ ವಿದ್ಯಾರ್ಥಿ. 7ನೇ ತರಗತಿ ವಿದ್ಯಾರ್ಥಿ ಶಾಲೆಗೆ ಗನ್ ತೆಗೆದುಕೊಂಡು ಬಂದಿದ್ದು, ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ರಾಯಚೂರು ನಗರ ಪಶ್ಚಿಮ ಠಾಣೆ …

Read More »

ಬೆಳಗಾವಿ: ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ ಅರೆಸ್ಟ್

ಬೆಳಗಾವಿ, ಜ.1: ತಾಳಿ ಕಟ್ಟುವ ಸಮಯದಲ್ಲಿ ಮದುವೆ ‌ಮುರಿದು ಬಿದ್ದ ಘಟನೆಬೆಳಗಾವಿ (Belagavi)ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಎಂಬವನೊಂದಿಗೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪ ಕೂಡ ಬುಕ್ ಮಾಡಲಾಗಿತ್ತು. 2023ರ ಡಿಸೆಂಬರ್ 30 ರಂದು ನಡೆದ ಮದುವೆ ನಿಶ್ಚಿತಾರ್ಥ …

Read More »

ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರು ಅಟ್ಟಹಾಸ

ಬೆಳಗಾವಿ, ಜನವರಿ 02: ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರು ಅಟ್ಟಹಾಸ ಮೆರೆದಿರುವ ಘಟನೆಬೆಳಗಾವಿ(Belagavi) ತಾಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ (ಜ.01) ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು (Police) 6 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಬಂದೂಕು, ತಲ್ವಾರ್, ರಾಡ್​​​​​​ಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ. ಇದರಿಂದ ಮನೆಯ ಕಿಟಕಿ ಗಾಜುಗಳು, …

Read More »

ಸಿಎಂ ಬೆನ್ನಲ್ಲೇ ಗೃಹ ಸಚಿವರಿಂದ ರಾಮ ಮಂದಿರ ಪರ ಹೇಳಿಕೆ

ಬೆಂಗಳೂರು, ಜನವರಿ 2: ಭಗವಾನ್ ರಾಮನ ಆಡಳಿತ ಕೇವಲ ಬಿಜೆಪಿ ನಾಯಕರಿಗೆ ಸಂಬಂಧಿಸಿದ್ದಲ್ಲ. ಅದು ವಿಶ್ವಕ್ಕೇ ಮಾದರಿ ಎಂದು ಗೃಹ ಸಚಿವ ಜಿ ಪರಮೇಶ್ವರ (G Parameshwara) ಹೇಳಿದ್ದಾರೆ. ನಮ್ಮ ಸರ್ಕಾರ ಮತ್ತು ಪಕ್ಷ ರಾಮ ಮಂದಿರದ ಪರವಾಗಿದೆ. ರಾಮ ಮಂದಿರಕ್ಕೆ (Ram Mandir) ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಗೃಹ ಸಚಿವರಿಂದ ಈ ಹೇಳಿಕೆ ಮೂಡಿಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ರಾಮರಾಜ್ಯದ ಪರಿಕಲ್ಪನೆಯು ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಅರ್ಥೈಸುತ್ತದೆ. …

Read More »

ಸಿದ್ದರಾಮಯ್ಯನೇ ಶ್ರೀರಾಮ, ಆ ರಾಮನಿಗೇಕೆ ಪೂಜಿಸಬೇಕು? : ಹೆಚ್. ಆಂಜನೇಯ

ಚಿತ್ರದುರ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಬ್ಬ ಶ್ರೀರಾಮ. ಮತ್ತೆ ಯಾಕೆ ಅಲ್ಲಿಗೆ ಹೋಗಿ ಶ್ರೀರಾಮನನ್ನು ಪೂಜಿಸಬೇಕು ಎಂದು ಮಾಜಿ ಸಚಿವ ಹೆಚ್. ಆಂಜನೇಯ ಪ್ರಶ್ನಿಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯಗೆ ಆಹ್ವಾನವಿಲ್ಲ. ರಾಮಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆಯದಾಯಿತು ಎಂದು ಕುಟುಕಿದ್ದಾರೆ. ಸ್ವತಃ ಸಿದ್ಧರಾಮಯ್ಯ ಅವರೇ ಶ್ರೀರಾಮ, ಆ ರಾಮನಿಗೇಕೆ ಹೋಗಿ ಪೂಜಿಸಬೇಕು. ಸಿದ್ದರಾಮನ ಹುಂಡಿಯಲ್ಲಿ ಶ್ರೀರಾಮನ ದೇವಸ್ಥಾನ ಇದೆ, ಅಲ್ಲಿ ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು …

Read More »

ಅಪಘಾತದಲ್ಲಿ ಮೃತಪಟ್ಟ 3 ಕುಟುಂಬಗಳಿಗೆ ತಲಾ 1 ಕೋಟಿ ಪರಿಹಾರ

ಬೆಂಗಳೂರು : ಅಪಘಾತದಲ್ಲಿ ಮೃತಪಟ್ಟ ಮೂರು ಕುಟುಂಬಕ್ಕೆ KSRTC ಪರಿಹಾರ ನೀಡಿದೆ. ಮೂರು ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 1 ಕೋಟಿ ರೂಪಾಯಿ ಪರಿಹಾರದ ಚೆಕ್‌ ವಿತರಿಸಿದ್ದಾರೆ. ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆ ಅಡಿ ಪರಿಹಾರ ನೀಡಿದ್ದಾರೆ. ಚಾಲಕರಾದ ಬಿ.ಎಂ.ಪುಟ್ಟಸ್ವಾಮಿ, ಅಶೋಕ್‌ ಕುಮಾರ್‌ ಚಾಲಕ ಕಂ ನಿರ್ವಾಹಕ ರಮೇಶ ಜಿ. ಕುಟುಂಬಕ್ಕೆ ಪರಿಹಾರ ನೀಡಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮನೆಯ …

Read More »