ಬೆಳಗಾವಿ, ಜ.02: ಬೆಳಗಾವಿಯ ಮಜಗಾವಿ ಬಳಿ ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರು ಡಿಕ್ಕಿಯ(Accident) ರಭಸಕ್ಕೆ ಯುವತಿ ಬರೊಬ್ಬರಿಐವತ್ತು ಮೀಟರ್ಹಾರಿ ಬಿದ್ದಿದ್ದಾರೆ. ಬ್ರಹ್ಮನಗರದ ನಿವಾಸಿ ದಿವ್ಯಾ ಪಾಟೀಲ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟೆ ಅಲ್ಲ, ಸ್ಕೂಟಿಗೆ ಗುದ್ದಿದ ಬಳಿಕ ಎದರಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಘಟನೆ ಬೆಳಗಾವಿ ದಕ್ಷಿಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Read More »ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಮಂದಿರ ಕಟ್ಟುತ್ತೇವೆ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂಬ ತೀರ್ಮಾನವಾಗುತ್ತಿದ್ದಂತೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲು ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದರು. ಮಸೀದಿ ಕಟ್ಟಿ ಬಾಬರ್ ಮಸೀದಿ ಕಟ್ಟಿದ್ದರು. ಗುಲಾಮಗಿರಿ …
Read More »Ram Mandir ಲೋಕಾರ್ಪಣೆಗೆ ನನಗೂ ಆಹ್ವಾನವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ವಿಜಯಪುರ: ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ ದೇಶದಲ್ಲಿ ಬಿಜೆಪಿ ಆಡಳಿತ ಇರುವ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿಲ್ಲ. ಭಾರತ ಸರ್ಕಾರದ ಸಚಿವನಾಗಿರುವ ನನಗೂ ಆಹ್ವಾನವಿಲ್ಲ. ನನ್ನನ್ನು ಕರೆಯುವ ಮಾತಿರಲಿ, ಬರಬೇಡವೆಂದೂ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ರಾಮ ಮಂದಿರ ಸಮಿತಿ ನಿರ್ಧರಿಸುತ್ತದೆ. ಈ …
Read More »ನೀನು ಕುಟುಂಬದಿಂದ ದೂರನೇ ಇರಬೇಕು.. Bigg Boss ಮನೆಯಲ್ಲಿ ಪ್ರತಾಪ್ ಭವಿಷ್ಯ ನುಡಿದ ಗುರೂಜಿ
ಬೆಂಗಳೂರು: ಬಿಗ್ ಬಾಸ್ ಸೀಸನ್ -10 ಶುರುವಾಗಿ 80 ದಿನ ಮೇಲಾಗಿದೆ. ಫಿನಾಲೆ ವಾರದತ್ತ ಮನೆಯ ಆಟ ಸಾಗುತ್ತಿದ್ದಂತೆ ಸ್ಪರ್ಧಿಗಳ ಆಟವೂ ಕಾವು ಪಡೆದುಕೊಳ್ಳುತ್ತಿದೆ. ಈ ವಾರ ಪ್ರತಾಪ್, ಮೈಕಲ್, ಕಾರ್ತಿಕ್ , ತುಕಾಲಿ ಸಂತೋಷ್, ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆ ಬಿಟ್ಟು ಹೋಗುತ್ತಾರೋ ಅಥವಾ ಎಲಿನೇಷನ್ ನಲ್ಲಿ ಏನಾದರೂ ಟ್ವಿಸ್ಟ್ & ಟರ್ನ್ ಇರಲಿದೆಯೋ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನೊಂದೆಡೆ ಬಿಗ್ ಬಾಸ್ ಮನೆಗೆ ಶ್ರೀವಿದ್ಯಾಶಂಕರಾನಂದ ಸರಸ್ವತಿ …
Read More »806 ಕೋಟಿ ರೂಪಾಯಿ ಬಾಕಿ ಪಾವತಿಸಿ: ಮಹಾರಾಷ್ಟ್ರ ಎಲ್ ಐಸಿಗೆ ಜಿಎಸ್ ಟಿ ನೋಟಿಸ್
ಮುಂಬೈ: ಸಾರ್ವಜನಿಕ ವಲಯದ ಪ್ರಮುಖ ಇನ್ಸೂರೆನ್ಸ್ (ಎಲ್ ಐಸಿ) ಕಂಪನಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು 806 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಮಹಾರಾಷ್ಟ್ರದ ಜಿಎಸ್ ಟಿ ಅಧಿಕಾರಿಗಳು ಈ ನೋಟಿಸ್ ಜಾರಿಗೊಳಿಸಿದ್ದಾರೆ. 2017-18ನೇ ಸಾಲಿನ ಜಿಎಸ್ ಟಿ ಪಾವತಿಯಲ್ಲಿನ ತೆರಿಗೆ ಪಾವತಿಗೆ ಸಂಬಂಧಿಸಿದ ನೋಟಿಸ್ ಅನ್ನು 2024ರ ಜನವರಿ 1ರಂದು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017-18ನೇ ಸಾಲಿನ ಬಾಕಿ …
Read More »ಪ್ರೇಮ ವಿಚಾರಕ್ಕೆ ಕಲ್ಲು ತೂರಾಟ. ಮನೆ, ವಾಹನಗಳು ಧ್ವಂಸ, ಬಿಗುವಿನ ವಾತಾವರಣ
ಬೆಳಗಾವಿ: ಯುವಕ ಹಾಗೂ ಅಪ್ರಾಪ್ತ ಬಾಲಕಿಯ ನಡುವಿನ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿಯ ಮನೆಯ ಮೇಲೆ 25 ರಿಂದ 30 ಜನರ ಗುಂಪೊಂದು ಸೋಮವಾರ ರಾತ್ರಿ ಏಕಾಏಕಿ ದಾಳಿ ನಡೆಸಿ ಮನೆ ಧ್ವಂಸಗೊಳಿಸಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ತಾಲೂಕಿನ ಕರ್ಲೆ ಗ್ರಾಮದ ಹೈಸ್ಕೂಲ್ ವಿದ್ಯಾರ್ಥಿನಿ ಹಾಗೂ ನಾವಗೆ ಗ್ರಾಮದ ಕಾಲೇಜು …
Read More »ಶಾಲೆಯ ಬೀಗ ಮುರಿದ ಕಳ್ಳ
ದಾಂಡೇಲಿ : ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆ ಮತ್ತು ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಶಾಲೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಆನಂತರ ಕಚೇರಿ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿದ್ದ ಗೋಡ್ರೇಜ್ ಕಬಾಟಿನ ಬೀಗ ಒಡೆದು ಸರಿಸುಮಾರು 5 ರಿಂದ 7 ಸಾವಿರ ರೂಪಾಯಿ ನಗದನ್ನು ಕಳ್ಳತನ …
Read More »ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಹಣ ವಸೂಲಿ : ವಂಚಕ ಸೆರೆ
ಬೆಂಗಳೂರು,ಜ.2- ಸಿನಿಮಾ ನೋಡಿ ಪ್ರೇರಣೆಗೊಂಡು ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಶ್ರೀನಾಥ ರೆಡ್ಡಿ(34) ಬಂಧಿತ ವಂಚಕ. ಈತ 10ನೇ ತರಗತಿ ವ್ಯಾಸಂಗ ಮಾಡಿದ್ದು, ಆಂಧ್ರಪ್ರದೇಶದಲ್ಲೂ ಸರ್ಕಾರಿ ನೌಕರರಿಗೆ ಇದೇ ರೀತಿ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಅನಾ ಮಧೇಯ ವ್ಯಕ್ತಿಯೊಬ್ಬ ಸರ್ಕಾರಿ …
Read More »ಶಾಲೆಯಲ್ಲಿ ಮಾರಕಾಸ್ತ್ರ ಹಿಡಿದ ಮಕ್ಕಳು : ಮುಚ್ಚಿಡುವ ಯತ್ನದಲ್ಲಿ ಶಿಕ್ಷಣ ಇಲಾಖೆ..?
ರಾಯಚೂರಿನಲ್ಲಿ 7 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಶಾಲೆಗೆ ಪೆನ್ ಬದಲು ಗನ್ ತೆಗೆದುಕೊಂಡು ಬಂದಿದ್ದಾನೆ ಶಾಲಾ ವಿದ್ಯಾರ್ಥಿ. ರಾಯಚೂರು ನಗರದ ಶ್ರೀಮಲ್ ರಿಖನ್ ಚಂದ್ ಸುಖಾಣಿ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ಗನ್, ಚಾಕು ಹಾಗೂ ಮಾರಾಕಾಸ್ತ್ರಗಳನ್ನು ತಂದಿದ್ದಾನೆ ವಿದ್ಯಾರ್ಥಿ. 7ನೇ ತರಗತಿ ವಿದ್ಯಾರ್ಥಿ ಶಾಲೆಗೆ ಗನ್ ತೆಗೆದುಕೊಂಡು ಬಂದಿದ್ದು, ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ರಾಯಚೂರು ನಗರ ಪಶ್ಚಿಮ ಠಾಣೆ …
Read More »ಬೆಳಗಾವಿ: ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ ಅರೆಸ್ಟ್
ಬೆಳಗಾವಿ, ಜ.1: ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದ ಘಟನೆಬೆಳಗಾವಿ (Belagavi)ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಎಂಬವನೊಂದಿಗೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪ ಕೂಡ ಬುಕ್ ಮಾಡಲಾಗಿತ್ತು. 2023ರ ಡಿಸೆಂಬರ್ 30 ರಂದು ನಡೆದ ಮದುವೆ ನಿಶ್ಚಿತಾರ್ಥ …
Read More »