Breaking News

ರಾಷ್ಟ್ರೀಯ

ಫೆಬ್ರವರಿಯಲ್ಲಿ ಪ್ರತಿ ದಿನ 998 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಸೂಚನೆ

ನವದೆಹಲಿ, ಜನವರಿ 19: ಕಾವೇರಿ ನೀರು ವ್ಯಾಜ್ಯ ನ್ಯಾಯಾಧಿಕರಣದ (CWDT) ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಅಂತಿಮ ಆದೇಶದಲ್ಲಿ ಹೇಳಿದ ಪ್ರಮಾಣದಲ್ಲಿ ತಮಿಳುನಾಡಿಗೆ ಜನವರಿಯ ಬಾಕಿ ಉಳಿದಿರುವ ದಿನಗಳು ಹಾಗೂ ಫೆಬ್ರವರಿಯಲ್ಲಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಗುರುವಾರ ಆದೇಶ ನೀಡಿದೆ. ಸಿಡಬ್ಲ್ಯುಆರ್​ಸಿ ಅಧ್ಯಕ್ಷರಾದ ವಿನೀತ್ ಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಾವೇರಿ ಜಲಾನಯನ ಪ್ರದೇಶದ ನೀರಿನ ಸ್ಥಿತಿಗತಿ ಮತ್ತು ಬೆಳೆಗಳ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಜನವರಿಯ …

Read More »

ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದು ಬಿದ್ದು ಇಬ್ಬರು ಸಾವು, 20

ಆನೇಕಲ್, ಜನವರಿ 18: ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದು ಬಿದ್ದು ಇಬ್ಬರು ಮೃತಪಟ್ಟು 20 ಜನ ಗಾಯಗೊಂಡ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಸಂಭವಿಸಿದೆ. ಮೃತರನ್ನು ಜಾರ್ಖಂಡ್​​ ಮೂಲದ ಮಿನರ್​ ಬಿಸ್ವಾಸ್​​, ಶಾಹೀದ್​ ಎಂದು ಗುರುತಿಸಲಾಗಿದೆ. ಗಾಯಾಳು ಕಾರ್ಮಿಕರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನೂ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಎರಡನೇ …

Read More »

ಉತ್ತರ ಕನ್ನಡದಲ್ಲಿ ಅರ್ಹರಾದರು ಸಿಗದ ಗೃಹಲಕ್ಷ್ಮಿ ಯೋಜನೆ ಲಾಭ: ಮಾಹಿತಿ ವಿವರ ತಿಳಿಯಿರಿ

ಕಾರವಾರ, ಜನವರಿ 18: ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರು ಕೂಡ ಜಿಲ್ಲೆಯಲ್ಲಿ ಮಾತ್ರ ಗೃಹಲಕ್ಷ್ಮಿ ಯೋಜನೆ ಸೂಕ್ತ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ. ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಇನ್ನೂ ಕೂಡ ಕೆಲ ಮಹಿಳೆಯರು ಮೊದಲ ಕಂತಿನ ಹಣವನ್ನೇ ಪಡೆಯಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರು ಅರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಪಡೆಯಲಾಗದೇ ಯೋಜನೆಯ ಲಾಭ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ ತಿಂಗಳಲ್ಲಿ ಚಾಲನೆ ಲಭಿಸಿದೆ. ಯೋಜನೆಯ ಲಾಭ ಪಡೆದುಕೊಳ್ಳಲು ಜಿಲ್ಲೆಯಲ್ಲಿ …

Read More »

ಉತ್ತರ ಕರ್ನಾಟಕ ಭಾಗದ ಬೇಡಿಕೆ; ಬಸವರಾಜ ಹೊರಟ್ಟಿ ಪತ್ರ

ಬೆಳಗಾವಿ, ಜನವರಿ 17: ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಕೆಯ ಕುರಿತು ಸದಾ ಚರ್ಚೆ ನಡೆಯುತ್ತದೆ. ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಉತ್ತರ ಕರ್ನಾಟಕ ಭಾಗದ ಜನರು ಸದಾ ಬೇಡಿಕೆ ಮುಂದಿಡುತ್ತಾರೆ. 2023ರ ಡಿಸೆಂಬರ್‌ನಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಸುವರ್ಣ ವಿಧಾನಸೌಧದಲ್ಲಿ ನಡೆದಿತ್ತು. ಬಳಿಕ ಮತ್ತೆ ವಿಧಾನಸೌಧ ಖಾಲಿಯಾಗಿದೆ. ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡುವ ಕುರಿತು ವಿಧಾನ ಪರಿಷತ್ ಸಭಾಪತಿಗಳು ಪತ್ರವನ್ನು ಬರೆದಿದ್ದಾರೆ. ಸುವರ್ಣ ವಿಧಾನಸೌಧವನ್ನು ಪ್ರವಾಸಿ ತಾಣವನ್ನಾಗಿ ಮಾಡಲು …

Read More »

ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅರ್ಧ ದಿನ ರಜೆ

ಬೆಂಗಳೂರು, : ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕಛೇರಿಗಳಿಗೆ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರ ಜನವರಿ 22ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಿದೆ. Ayodhya Ram Mandir: ರಾಮ ಮಂದಿರ ಉದ್ಘಾಟನೆ: ಏಳು ದಿನಗಳ ಆಚರಣೆಗಳು …

Read More »

ಉಡುಪಿ: ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದರು. ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದರು. ಶ್ರೀ ಮಧ್ವಾಚಾರ್ಯರ ದ್ವೈತ ತತ್ವವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಧ್ಯೇಯ ಹೊಂದಿರುವ ಪ್ರಗತಿಪರ ದೃಷ್ಟಿಗೆ ಹೆಸರಾದ ಉಡುಪಿಯ ಶ್ರೀ ಪುತ್ತಿಗೆ …

Read More »

ಅಪ್ಪ-ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ; ರಾಮ ಮಂದಿರ ಕಟ್ಟಿದ್ದು ಹಿಂದೂಗಳು: ಅನಂತ್ ಕುಮಾರ್ ಹೆಗಡೆ

ನಾವು ಮೊದಲು ಹಿಂದೂಗಳು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದರೆ ಅವರ ಜಾತಿ ಹೆಸರು ಹೇಳುತ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ ಎಂದು ಎಂದು ಮತ್ತೊಮ್ಮೆ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ: ನಾವು ಮೊದಲು ಹಿಂದೂಗಳು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದರೆ ಅವರ ಜಾತಿ ಹೆಸರು …

Read More »

ರಾಜ್ಯದಲ್ಲಿ ಇಂದು 149 ಮಂದಿಗೆ ಕೊರೋನಾ ಪಾಸಿಟಿವ್;

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಗುರುವಾರ 149 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 669ಕ್ಕೆ ಇಳಿಕೆಯಾಗಿದೆ. ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಗುರುವಾರ 149 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 669ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 89 ಪಾಸಿಟಿವ್ ಪ್ರಕರಣ ಸೇರಿದಂತೆ ರಾಜ್ಯದಲ್ಲಿ 149 ಮಂದಿಗೆ …

Read More »

ಉಚಿತ ವಿದ್ಯುತ್: ವಾರ್ಷಿಕ ಸರಾಸರಿ ಮೇಲೆ ಶೇ.10ರಷ್ಟು ಬದಲು 10 ಯುನಿಟ್‌ ನೀಡಲು ಸಂಪುಟ ತೀರ್ಮಾನ

ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ವಾರ್ಷಿಕ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ.10 ರಷ್ಟು ಉಚಿತ ವಿದ್ಯುತ್ ನೀಡುವ ಮಾನದಂಡವನ್ನು 10 ಯೂನಿಟ್ ಗೆ… ಬೆಂಗಳೂರು: ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ವಾರ್ಷಿಕ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ.10 ರಷ್ಟು ಉಚಿತ ವಿದ್ಯುತ್ ನೀಡುವ ಮಾನದಂಡವನ್ನು 10 ಯೂನಿಟ್ ಗೆ ಬದಲಾಯಿಸಲು …

Read More »

ಫೆ.16ಕ್ಕೆ ರಾಜ್ಯ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ

ಲೋಕಸಭೆ ಎಲೆಕ್ಶನ್ ಗೆ (MP election) ಕೆಲವೇ ತಿಂಗಳು ಬಾಕಿ ಉಳಿದಿದೆ. ಬಿಜೆಪಿ ಸದೆಬಡಿಯಲು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ (Siddaramiah) ಚಕ್ರವ್ಯೂಹವನ್ನೇ ಸೃಷ್ಟಿ ಮಾಡೋಜೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಗ್ಯಾರಂಟಿ ಮೂಲಕ ಜನರ ಮನಗೆಲ್ಲೊ ಪ್ರಯತ್ನ ಮಾಡಿರೋ ಕಾಂಗ್ರೆಸ್ ಸರ್ಕಾರದ ಸಾರಥಿ ಸಿಎಂ ಸಿದ್ದರಾಮಯ್ಯ ಫೆ.16ಕ್ಕೆ ಬಜೆಟ್ (Budget) ಮಂಡನೆ ಮಾಡಲು ರೆಡಿಯಾಗಿದ್ದಾರೆ.   ಫೆಬ್ರವರಿ 12ರಿಂದ ಫೆಬ್ರವರಿ 23ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಸಲು ಗುರುವಾರ ನಡೆದ ರಾಜ್ಯ …

Read More »