ಬೆಂಗಳೂರು,): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಚ್ಚರಿ ಎಂಬಂತೆ ಕಾಂಗ್ರೆಸ್ಗೆ ಕೈಕೊಟ್ಟು ವಾಪಸ್ ಬಿಜೆಪಿಗೆ ಸೇರ್ಪಡೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಲಕ್ಷ್ಮಣ ಸವದಿ ಅವರು ಸಹ ಬಿಜೆಪಿಗೆ ವಾಪಸ್ ಆಗುತ್ತಾರಾ ಎನ್ನುವ ಚರ್ಚೆಗಳು ನಡೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದೀಗ ಇದಕ್ಕೆ ಸ್ವತಃ ಲಕ್ಷ್ಮಣ ಸವಧಿ ಪ್ರತಿಕ್ರಿಯಿಸಿದ್ದು, ಮತ್ತೆ ಬಿಜೆಪಿ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ನಾನು ಮತ್ತೆ ಬಿಜೆಪಿಗೆ ಹೋಗಲ್ಲ. ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ …
Read More »ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಶಿಫ್ಟ್ ಆಗಲು ಅವಕಾಶ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. 2006ರ ಏಪ್ರಿಲ್ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆಯಾದ ನೌಕರರು, ರಾಷ್ಟ್ರೀಯ ಪಿಂಚಣಿ ಯೋಜನೆ (National pension scheme-NPS) ವ್ಯಾಪ್ತಿಯಿಂದ ಹಳೆಯ ಪಿಂಚಣಿ ಯೋಜನೆಗೆ (Old Pension Scheme-OPS) ಬದಲಾಗಲು ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಆಡಳಿತ ಮತ್ತು ಸಮನ್ವಯ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆಗೆ ಒಳಪಡಲು 6 ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ. ಹಳೆಯ …
Read More »ಘರ್ ವಾಪಸ್ಸಿ ಪಕ್ಕಾ ಆಯ್ತಾ?.. ದೆಹಲಿಗೆ ಹಾರಿದ ಶೆಟ್ಟರ್
ಬೆಂಗಳೂರು: ಸದ್ಯ ಕಾಂಗ್ರೆಸ್‌ನಲ್ಲಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಘರ್ ವಾಪಸ್ಸಿ ಸುದ್ದಿ ಕೇಳಿ ಬರುತ್ತಿರುವ ಬೆನ್ನಲ್ಲೆ ಇಂದು ಅವರು ದೆಹಲಿಗೆ ಹಾರಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಜಗದೀಶ ಶೆಟ್ಟರ ಅವರು ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಜೊತೆಯಲ್ಲಿ ದೆಹಲಿಗೆ ಭೇಟಿ ನೀಡಿರೋದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿದ್ದಾರೆ. …
Read More »ಉತ್ತರ ಕನ್ನಡ ಜಿಲ್ಲಾ BJP ಪ್ರಧಾನ ಕಾರ್ಯದರ್ಶಿ ನೇಮಕ ಸಭೆಯಲ್ಲಿ ವಾಗ್ವಾದ; ಹೊರನಡೆದ ಅನಂತ್ ಕುಮಾರ್ ಹೆಗಡೆ
ಕಾರವಾರ, ಜ.25: ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದಅನಂತ್ ಕುಮಾರ್ ಹೆಗಡೆ(Ananth Kumar Hegde) ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ (Uttara Kannada) ಕ್ಷೇತ್ರದಲ್ಲಿ ಆಯಕ್ಟಿವ್ ಆಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಂಸದರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ಮಣ್ಣನೆ ಸಿಗುತ್ತಿಲ್ಲ ಎಂಬ ಅಂಶ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದಾಗಿ ಹೊರಬಿದ್ದಿದೆ. ಜಿಲ್ಲೆಯ ಪ್ರಧಾನ …
Read More »ಕಟೀಲ್ಗೆ ಟಿಕೆಟ್ ಡೌಟ್ : ಹೊಸ ಮುಖ ಕಣಕ್ಕಿಳಿಸಲು ಬಿಜೆಪಿ ಸಿದ್ದತೆ
ಮಂಗಳೂರು: ಮುಂಬರುವ ಲೋಕಸಭೆಯ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮುಖ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಹಾಲಿ ಸಂಸದ ನಳಿನ್ ಕುಮಾರ ಕಟೀಲ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ನಳಿನ ಕುಮಾರ ಬದಲಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಆದರೆ ಈ ಬಾರಿ ಅವರಿಗೆ …
Read More »ನಾವೇನು ಹೈಕಮಾಂಡ್ ಗುಲಾಮರಾ? : ಕೆಎನ್ ರಾಜಣ್ಣ ಕೆಂಡ
ತುಮಕೂರು: ದೆಹಲಿಯಲ್ಲಿ (Delhi) ಕೂತು ಪಟ್ಟಿಮಾಡಿ ಲಾಟರಿ ಟಿಕೆಟ್ ಹಂಚುವಂತೆ ಹಂಚಿದರೆ ಹೇಗೆ? ಎಂದು ನಿಗಮ ಮಂಡಳಿ ಆಯ್ಕೆ ವಿಚಾರವಾಗಿ ಹೈಕಮಾಂದ್ ವಿರುದ್ಧ ಕೆ.ಎನ್.ರಾಜಣ್ಣ (KN Rajanna) ಗುಡುಗಿದ್ದಾರೆ. ಈ ಬಗ್ಗೆ ತುಮಕೂರಿನಲ್ಲಿ (Tumkur) ಮಾತನಾಡಿದ ಅವರು, ನಮ್ಮನ್ನು ಕೇಳಿ ನಿಗಮ ಮಂಡಳಿಗೆ ಆಯ್ಕೆ ಮಾಡಬೇಕಾ ಅಥವಾ ದೆಹಲಿಯಲ್ಲಿ ಕುಂತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದರೆ ಹೇಗೆ? ನಮಗೊಂದು ಮಾತು ಕೇಳಬೇಕಲ್ಲ. ಸ್ಥಳೀಯವಾಗಿ ಯಾರ್ಯಾರು ಕೆಲಸ ಮಾಡಿದ್ದಾರೆ ಎಂದು ನಮಗೆ …
Read More »ನ್ಯೂ ವಂಟಮೂರಿ ತನಿಖೆ ಪೂರ್ಣಗೊಳಿಸಿ ಚಾರ್ಜ್ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಸಿಐಡಿಗೆ (
ಬೆಳಗಾವಿ, : ಜಿಲ್ಲೆಯ ನ್ಯೂ ವಂಟಮೂರಿ ಗ್ರಾಮದಲ್ಲಿ ಡಿಸೆಂಬರ್ 11 ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳಿಸುತ್ತು. ಪ್ರಕರಣದ ತನಿಖೆಸಿಐಡಿಗೆ (CID)ಒಪ್ಪಿಸುವ ಒತ್ತಡ ಬಂದ ಹಿನ್ನೆಲೆ ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತಿಸಿತ್ತು. ಅದರಂತೆ, ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಒಂದೂವರೆ ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಚಾರ್ಜ್ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಇದೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು …
Read More »ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ
ಬೆಂಗಳೂರು,: ಬಿಟ್ ಕಾಯಿನ್ ಪ್ರಕರಣದಲ್ಲಿ(bitcoin case) ಮಹತ್ತರ ಬೆಳವಣಿಗೆ ನಡೆದಿದೆ. ಎಸ್ ಐಟಿ ಯಿಂದ ಇಂದು ಮಹತ್ತರ ಕಾರ್ಯಚರಣೆ ನಡೆಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಮತ್ತೊಂದು ಹೊಸ ಕೇಸ್ ದಾಖಲಿಸಿದೆ. ಈ ಕೇಸಿನಲ್ಲಿ ವಿಚಾರಣೆಗೆ ಕರೆದಿದ್ದವರನ್ನು ಇದೀಗ ಎಸ್ಐಟಿ ತನ್ನ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದೆ. ಇದುವರೆಗೆ ನಡೆದಿದ್ದ ತನಿಖೆ ಆಧಾರದ ಮೇಲೆ ಈಗ ಸಿಐಡಿಯಲ್ಲಿಯೇ ಎಸ್ಐಟಿ ಮತ್ತೊಂದು ಹೊಸ ಎಫ್ಐಆರ್ ದಾಖಲಿಸಿದ್ದು, ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ …
Read More »ಚೆಸ್ಕಾಂ ಎಂಡಿ ಸಿಎನ್ ಶ್ರೀಧರ್ ಅಮಾನತು- ರಾಜ್ಯ ಸರ್ಕಾರ ಆದೇಶ
ಬೆಂಗಳೂರು,: ಚೆಸ್ಕಾಂ ಎಂಡಿ(chescom md) ಸಿ.ಎನ್.ಶ್ರೀಧರ್ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರು(Mysore) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಸಿಎಂ ಹಮ್ಮಿಕೊಂಡಿದ್ದರು. ಈ ವೇಳೆ ಬಟನ್ ಒತ್ತುವ ಮೂಲಕ ಸಿಎಂ ಯೋಜನೆಗೆ ಚಾಲನೆ ನೀಡಬೇಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಒತ್ತಿದ ವೇಳೆ ಬಟನ್ ಚಾಲನೆಯಾಗಿಲ್ಲವಾಗಿತ್ತು. ಮುಜುಗರಕ್ಕೆ ಸಿಲುಕಿದ್ದ ಸಿಎಂ …
Read More »660 ಪಿಎಸ್‌ಐ ಹುದ್ದೆ ನೇಮಕಾತಿಗೆ ಅಧಿಸೂಚನೆ: ಡಾ.ಜಿ. ಪರಮೇಶ್ವರ್
ಬೆಂಗಳೂರು: ನಿರೀಕ್ಷೆಯಂತೆ ಪಿಎಸ್‌ಐ ಮರುಪರೀಕ್ಷೆ ಬಹಳ ಸುಗಮವಾಗಿ ನಡೆದಿದೆ. ಇದರ ಬಳಿಕ 403 ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ನಂತರ 660 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ (PSI Recruitment) ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು(ಜ.23ರಂದು) 54 ಸಾವಿರ ಅಭ್ಯರ್ಥಿಗಳು ಬರೆಯಬೇಕಿತ್ತು. ಕೆಲವರು ಗೈರಾಗಿದ್ದು, ಶೇ.65ರಿಂದ 70ರಷ್ಟು ಮಂದಿ ಪರೀಕ್ಷೆ …
Read More »