ಹುಬ್ಬಳ್ಳಿ, (ಫೆಬ್ರವರಿ 09): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Loksabha Elections 2024) ರಾಜಕೀಯ ಗರಿಗೆದರಿದ್ದು, ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ (BJP And JDS Alliance) ಮಾಡಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸುವ ತಂತ್ರರೂಪಿಸುತ್ತಿವೆ. ಆದ್ರೆ, ಜೆಡಿಎಸ್ಗೆ ಯಾವೆಲ್ಲಾ ಕ್ಷೇತ್ರ ಎನ್ನುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಇದರ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ(HD Kumaraswamy) ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಜಿಟಿ ದೇವೇಗೌಡ(GT Devegowda) ಸುಳಿವು …
Read More »ಜೈನ ನಿಗಮ ಸ್ಥಾಪನೆಗೆ ಸಲ್ಲೇಖನ ವ್ರತಕ್ಕೂ ಸಿದ್ಧ’
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರಾಜ್ಯದ ಜೈನ ಸಮುದಾಯದ ಏಳ್ಗೆಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದಕ್ಕಾಗಿ ನಾನು ಸಲ್ಲೇಖನ ವೃತ ಕೈಗೊಂಡು ಪ್ರಾಣತ್ಯಾಗಕ್ಕೂ ಸಿದ್ಧ’ ಎಂದು ಆಚಾರ್ಯ ಗುಣಧರನಂದಿ ಮಹಾರಾಜ ಹೇಳಿದರು. ತಾಲ್ಲೂಕಿನ ಶಮನೇವಾಡಿಯಲ್ಲಿ ತಮ್ಮ 33ನೇ ದೀಕ್ಷಾ ಜಯಂತಿ ಪ್ರಯುಕ್ತ ಗುರುವಾರ ನಡೆದ ಜೈನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಜೈನರ ಸಮಸ್ಯೆಗಳ ನಿವಾರಣೆಗೆ ಮುಂದಾಗುವ ನಾಯಕರಿಗೆ ನಿಮ್ಮ ಮತ ನೀಡಿ. ಇನ್ನುಳಿದ ಧರ್ಮಗಳ ಮೇಲೆ ಗೌರವ ಇರಲಿ. …
Read More »ಬೆಳಗಾವಿ | ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಅಪಾರ ಹಾನಿ
ಬೆಳಗಾವಿ: ಇಲ್ಲಿನ ವಡಗಾವಿಯ ಡೋಹರ ಗಲ್ಲಿಯಲ್ಲಿ ಶುಕ್ರವಾರ ನಸುಕಿನಲ್ಲಿ ಕಿಡಿಗೇಡಿಗಳು ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಾಲ್ಕು ಅಂಗಡಿಗಳಿಗೆ ಹತ್ತಿಕೊಂಡಿದ್ದರಿಂದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಸುಟ್ಟಿವೆ. ಹಳೆ ತಗಡಿನ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿ, ಗೋಣಿ ಚೀಲ, ವಾಹನಗಳ ಟೈರ್, ಡ್ಯೂಬ್, ರದ್ದಿಪೇಪರ್ ಮುಂತಾದ ವಸ್ತುಗಳು ಅಂಗಡಿಗಳಲ್ಲಿ ಇದ್ದವು. ಇದರಿಂದ ಬೆಂಕಿ ಕೆನ್ನಾಲಿಗೆ ಬೇಗ ಹೊತ್ತಿಕೊಂಡಿತು. ಹೊತ್ತಿ ಉರಿಯುತ್ತಿರುವ ಗುಜರಿ ಅಂಗಡಿ ಎಚ್ಚರಗೊಂಡ ಗುಜರಿ ವ್ಯಾಪಾರಿಗಳು ಬೆಂಕಿ ನಂದಿಸಲು ಯತ್ನಿಸಿದರೂ …
Read More »ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆ ಜಾರಿ, ಏನಿದು?
ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗ್ತಲೇ ಇದ್ದು, ಇದೀಗ ಪೆನ್ನು ಪೇಪರ್ ಹಿಡಿದು ಪೊಲೀಸರು ದಂಡ ವಿಧಿಸೋದಿಲ್ಲ. ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಏನಿದು ಇ-ಚಲನ್? ರಾಜ್ಯದಲ್ಲಿ ಶೇ.100 ರಷ್ಟು ಪೇಪರ್‌ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲಿ ಇದೇ ಮೊದಲ ರಾಜ್ಯವಾಗಿದ್ದು, ಸಂಚಾರ …
Read More »ರಾಜ್ಯಾದ್ಯಂತ ಇಂದಿನಿಂದ ಮೂರು ದಿನ ಬಿಜೆಪಿ ‘ಗ್ರಾಮ ಚಲೋ ಅಭಿಯಾನ
ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಮೂರು ದಿನ ರಾಜ್ಯ ಬಿಜೆಪಿ ವತಿಯಿಂದ ಗ್ರಾಮ ಚಲೋ ಅಭಿಯಾನ ಕೈಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಫೆಬ್ರವರಿ 9 ರಿಂದ 11 ರವರೆಗೆ ಮೂರು ದಿನ ಗ್ರಾಮ ಚಲೋ ಅಭಿಯಾನ ಕೈಗೊಳ್ಳಲಾಗಿದೆ. ಮೂರು ದಿನದ ಕಾರ್ಯಕ್ರಮದಲ್ಲಿ 42000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದ 28,000 ಹಳ್ಳಿಗಳು, 19000 ನಗರ ಬೂತ್ ಗಳಲ್ಲಿ 42000 ಕಾರ್ಯಕರ್ತರು ಮೂರು ದಿನ …
Read More »ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಭಾರಿ ಪ್ಲಾನ್
ಉತ್ತರ ಕನ್ನಡ, :ಲೋಕಸಭೆ ಚುನಾವಣೆಗೆ (Lok Sabha Election) 2-3 ತಿಂಗಳು ಬಾಕಿ ಉಳಿದಿವೆ. ಈಗಾಗಲೆ ರಾಜ್ಯದಲ್ಲಿ ಟಿಕೆಟ್ಗಾಗಿ ಲಾಭಿ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ (Congress) ಘಟಕ ಹಾಲಿ ಶಾಸಕರು ಅಥವಾ ಸಚಿವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಮುಂದಾಗಿದೆ. ಜಾರಿಯಾಗಿರುವ ಐದು ಗ್ಯಾರೆಂಟಿ ಮತ್ತು ಸ್ಥಳೀಯ ನಾಯಕರ ಪ್ರಭಾವ ಎರಡನ್ನೂ ಒಟ್ಟುಗೂಡಿಸಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲ …
Read More »ಜನಸ್ಪಂದನೆಗೆ ಜನರ ವೇದನೆಯೇ ಉತ್ತರ: ಬಿಜೆಪಿ ವ್ಯಂಗ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗುರುವಾರ ರಾಜ್ಯಮಟ್ಟದ ಜನಸ್ಪಂದನ (Jana Spandana) ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. 12,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ(BJP) ವ್ಯಂಗ್ಯವಾದಿದ್ದು, ಜನಸ್ಪಂದನೆಗೆ ಜನರ ವೇದನೇಯೇ ಉತ್ತರ ಎಂದು ಹೇಳಿದೆ. ಈ ಬಗ್ಗೆ ಎಕ್ಸ್ ನಲ್ಲಿ (X) ಟೀಕೆ ಮಾಡಿರುವ ಬಿಜೆಪಿ, “ಕಾಂಗ್ರೆಸ್ಸಿಗರ ಪೊಲಿಟಿಕಲ್ ಸ್ಟಂಟ್ ಜನಸ್ಪಂದನೆಗೆ ಜನರ ವೇದನೆಯೇ ಉತ್ತರ” ಎಂದು ಬರೆದುಕೊಂಡಿದೆ. ಅಲ್ಲದೇ, …
Read More »ಯೋಧೆ ಪದ್ಮಶ್ರೀಗೆ ನಾಗರಿಕ ಸನ್ಮಾನ
ಪರಮಾನಂದವಾಡಿ: ‘ದೇಶಾಭಿಮಾನವೇ ನಮ್ಮ ಸೈನಿಕರಿಗೆ ಧೈರ್ಯ, ಶೌರ್ಯ ತುಂಬುತ್ತದೆ. ಹೀಗಾಗಿ ಸೈನಿಕರು ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡುವುದಕ್ಕೂ ಹಿಂದೆ ಸರಿಯುವುದಿಲ್ಲ. ಈ ದೇಶಾಭಿಮಾನ ಎಲ್ಲರಿಗೂ ಮಾದರಿ’ ಎಂದು ಮುಖಂಡ ಬಸವರಾಜ ಸನದಿ ಹೇಳಿದರು. ರಾಯಬಾಗ ತಾಲ್ಲೂಕಿನ ಪ್ರಥಮ ಮಹಿಳಾ ಯೋಧರಾದ ಪದ್ಮಶ್ರೀ ಸಂಜು ವಾಳಕೆ ಅವರು ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡು, ರಾಷ್ಟ್ರಪತಿ ಅವರಿಂದ ಗೌರವ ಪ್ರಶಸ್ತಿ ಪಡೆದ ಕಾರಣ, ಗ್ರಾಮದಲ್ಲಿ ಗುರುವಾರ …
Read More »ಮತ್ತೆ ಮೋದಿ ಸರ್ಕಾರ ಪಕ್ಕಾ! ‘ಇಂಡಿಯಾ’ ಕೂಟಕ್ಕೆ ಸೋಲೇ ಗತಿ?
ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election) ಪೂರ್ವ ಸಮೀಕ್ಷೆಗಳ ವರದಿ ಹೊರಬಿದ್ದಿದ್ದು, ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಸಿಗುವ (Win for NDA) ಸಾಧ್ಯತೆ ಗೋಚರಿಸಿದೆ(Lok Sabha Pre Poll Survey). ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಟೈಮ್ಸ್‌ನೌ ಹಾಗೂ ಇಂಡಿಯಾ ಟುಡೆ- ಸಿ ವೋಟರ್ ನಡೆಸಿದ ಪ್ರತ್ಯೇಕ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಉತ್ತರ …
Read More »ಸಿಲ್ಲಿವಿಚಾರ ಬಿಟ್ಟು ಬಡತನ.. ನಿರುದ್ಯೋಗದ ಬಗ್ಗೆ ಮಾತಾಡಿ: ಸಿಎಂ ಕಿಡಿ
ಬೆಂಗಳೂರು: ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯದ ಕುರಿತು ಜನಸ್ಪಂದನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು. ಈ ದೇಶದ ಬಡವರ ಬಗ್ಗೆ, ಬೆಲೆ ಏರಿಕೆ, ನಿರುದ್ಯೋಗಿಗಳ ಸಮಸ್ಯೆಗಳ ಬಗ್ಗೆ …
Read More »
Laxmi News 24×7