ಬೆಂಗಳೂರು: ಕಳೆದ 10 ವರ್ಷಗಳ ಬಿಜೆಪಿ (BJP) ಆಡಳಿತವನ್ನು ಮೋದಿಯವರು (Narendra Modi) ಮತ್ತು ಬಿಜೆಪಿಯ ನಾಯಕರು ಅಮೃತ ಕಾಲ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಿಎಂ, 10 ವರ್ಷ ಅನ್ಯಾಯದ ಕಾಲ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೋದಿಯವರ ಅನ್ಯಾಯ ಕಾಲದ ವಿವರಗಳನ್ನು ಅಂಕಿಅಂಶಗಳ ಸಹಿತ ಕರ್ನಾಟಕದ ಜನತೆಯ ಮುಂದೆ …
Read More »ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಅದ್ದೂರಿ ರೊಟ್ಟಿ ಜಾತ್ರೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಹತ್ತೂರು ಗ್ರಾಮದ ಸಾವಿರಾರು ಮಹಿಳೆಯರು ಎರಡು ವಾರಗಳ ಕಾಲ ರೊಟ್ಟಿ ಮಾಡಿ, ಬಳಿಕ ಮಠವೊಂದಕ್ಕೆ ಸಮರ್ಪಣೆ ಮಾಡಿದ್ದರು. ತಲೆ ಮೇಲಿನ ಬುತ್ತಿ ಗಂಟಿಗೆ ತಿರಂಗಾ ಧ್ವಜವನ್ನು ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಬುತ್ತಿ ಜಾತ್ರೆ ಮಾಡೋದ್ಯಾಕೆ? ಈ ರೊಟ್ಟಿ ಬುತ್ತಿ ಜಾತ್ರೆ ಸ್ಟೋರಿ ಇಲ್ಲಿದೆ.ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು, ತ್ರಿವರ್ಣ …
Read More »ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ
ನವದೆಹಲಿ : ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹ ರಾವ್ ಮತ್ತು ಖ್ಯಾತ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಕೆಲವು ದಿನಗಳ ಹಿಂದೆ ಮೋದಿ ಸರ್ಕಾರ ಎಲ್.ಕೆ ಅಡ್ವಾಣಿ ಮತ್ತು ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿತ್ತು. ಭಾರತ ರತ್ನ ಪ್ರಶಸ್ತಿ ಪಡೆಯುವ ಆ ವಿಶೇಷ ಸಾಧಕರು …
Read More »ನಾನು ಸುಳ್ಳು ಹೇಳಿದ್ದರೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ: ಸಿಎಂ
ಬೆಂಗಳೂರು: ನಾನು ಸುಳ್ಳು ಹೇಳುತ್ತಿದ್ದೇನೆ ಎಂದಾದರೇ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಕರ್ನಾಟಕ ತೆರಿಗೆ ಕಟ್ಟುವುದರಲ್ಲಿ 2ನೇ ಸ್ಥಾನದಲ್ಲಿದೆ. ನಮಗೆ ಸರಿಯಾಗಿ ಅನುದಾನ ಹಂಚಿಕೆಯಾಗಿಲ್ಲ. ಈ ವಿಷಯವನ್ನು ನಾವು ಕೇಳದೇ ಸುಮ್ಮನಿರಬೇಕಾ? ಎಂದು ತೆರಿಗೆ ವಿಷಯದಲ್ಲಿ ಅನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಕಿಡಿ ಕಾರಿದರು. ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರದ ಪ್ರತಿಭಟನೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿಂದು ಟೀಕೆ ವ್ಯಕ್ತಪಡಿಸಿದ್ದರು. ಈ ಬಗ್ಗೆ …
Read More »ಕುಮಾರಸ್ವಾಮಿ ಲೋಕಸಭೆಗೆ ಸ್ಪರ್ಧಿಸುವ ಸುಳಿವು ನೀಡಿದ ದೇವೇಗೌಡ,
ಹುಬ್ಬಳ್ಳಿ, (ಫೆಬ್ರವರಿ 09): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Loksabha Elections 2024) ರಾಜಕೀಯ ಗರಿಗೆದರಿದ್ದು, ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ (BJP And JDS Alliance) ಮಾಡಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸುವ ತಂತ್ರರೂಪಿಸುತ್ತಿವೆ. ಆದ್ರೆ, ಜೆಡಿಎಸ್ಗೆ ಯಾವೆಲ್ಲಾ ಕ್ಷೇತ್ರ ಎನ್ನುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಇದರ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ(HD Kumaraswamy) ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಜಿಟಿ ದೇವೇಗೌಡ(GT Devegowda) ಸುಳಿವು …
Read More »ಜೈನ ನಿಗಮ ಸ್ಥಾಪನೆಗೆ ಸಲ್ಲೇಖನ ವ್ರತಕ್ಕೂ ಸಿದ್ಧ’
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರಾಜ್ಯದ ಜೈನ ಸಮುದಾಯದ ಏಳ್ಗೆಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದಕ್ಕಾಗಿ ನಾನು ಸಲ್ಲೇಖನ ವೃತ ಕೈಗೊಂಡು ಪ್ರಾಣತ್ಯಾಗಕ್ಕೂ ಸಿದ್ಧ’ ಎಂದು ಆಚಾರ್ಯ ಗುಣಧರನಂದಿ ಮಹಾರಾಜ ಹೇಳಿದರು. ತಾಲ್ಲೂಕಿನ ಶಮನೇವಾಡಿಯಲ್ಲಿ ತಮ್ಮ 33ನೇ ದೀಕ್ಷಾ ಜಯಂತಿ ಪ್ರಯುಕ್ತ ಗುರುವಾರ ನಡೆದ ಜೈನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಜೈನರ ಸಮಸ್ಯೆಗಳ ನಿವಾರಣೆಗೆ ಮುಂದಾಗುವ ನಾಯಕರಿಗೆ ನಿಮ್ಮ ಮತ ನೀಡಿ. ಇನ್ನುಳಿದ ಧರ್ಮಗಳ ಮೇಲೆ ಗೌರವ ಇರಲಿ. …
Read More »ಬೆಳಗಾವಿ | ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಅಪಾರ ಹಾನಿ
ಬೆಳಗಾವಿ: ಇಲ್ಲಿನ ವಡಗಾವಿಯ ಡೋಹರ ಗಲ್ಲಿಯಲ್ಲಿ ಶುಕ್ರವಾರ ನಸುಕಿನಲ್ಲಿ ಕಿಡಿಗೇಡಿಗಳು ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಾಲ್ಕು ಅಂಗಡಿಗಳಿಗೆ ಹತ್ತಿಕೊಂಡಿದ್ದರಿಂದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಸುಟ್ಟಿವೆ. ಹಳೆ ತಗಡಿನ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿ, ಗೋಣಿ ಚೀಲ, ವಾಹನಗಳ ಟೈರ್, ಡ್ಯೂಬ್, ರದ್ದಿಪೇಪರ್ ಮುಂತಾದ ವಸ್ತುಗಳು ಅಂಗಡಿಗಳಲ್ಲಿ ಇದ್ದವು. ಇದರಿಂದ ಬೆಂಕಿ ಕೆನ್ನಾಲಿಗೆ ಬೇಗ ಹೊತ್ತಿಕೊಂಡಿತು. ಹೊತ್ತಿ ಉರಿಯುತ್ತಿರುವ ಗುಜರಿ ಅಂಗಡಿ ಎಚ್ಚರಗೊಂಡ ಗುಜರಿ ವ್ಯಾಪಾರಿಗಳು ಬೆಂಕಿ ನಂದಿಸಲು ಯತ್ನಿಸಿದರೂ …
Read More »ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆ ಜಾರಿ, ಏನಿದು?
ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗ್ತಲೇ ಇದ್ದು, ಇದೀಗ ಪೆನ್ನು ಪೇಪರ್ ಹಿಡಿದು ಪೊಲೀಸರು ದಂಡ ವಿಧಿಸೋದಿಲ್ಲ. ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಏನಿದು ಇ-ಚಲನ್? ರಾಜ್ಯದಲ್ಲಿ ಶೇ.100 ರಷ್ಟು ಪೇಪರ್‌ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲಿ ಇದೇ ಮೊದಲ ರಾಜ್ಯವಾಗಿದ್ದು, ಸಂಚಾರ …
Read More »ರಾಜ್ಯಾದ್ಯಂತ ಇಂದಿನಿಂದ ಮೂರು ದಿನ ಬಿಜೆಪಿ ‘ಗ್ರಾಮ ಚಲೋ ಅಭಿಯಾನ
ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಮೂರು ದಿನ ರಾಜ್ಯ ಬಿಜೆಪಿ ವತಿಯಿಂದ ಗ್ರಾಮ ಚಲೋ ಅಭಿಯಾನ ಕೈಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಫೆಬ್ರವರಿ 9 ರಿಂದ 11 ರವರೆಗೆ ಮೂರು ದಿನ ಗ್ರಾಮ ಚಲೋ ಅಭಿಯಾನ ಕೈಗೊಳ್ಳಲಾಗಿದೆ. ಮೂರು ದಿನದ ಕಾರ್ಯಕ್ರಮದಲ್ಲಿ 42000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದ 28,000 ಹಳ್ಳಿಗಳು, 19000 ನಗರ ಬೂತ್ ಗಳಲ್ಲಿ 42000 ಕಾರ್ಯಕರ್ತರು ಮೂರು ದಿನ …
Read More »ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಭಾರಿ ಪ್ಲಾನ್
ಉತ್ತರ ಕನ್ನಡ, :ಲೋಕಸಭೆ ಚುನಾವಣೆಗೆ (Lok Sabha Election) 2-3 ತಿಂಗಳು ಬಾಕಿ ಉಳಿದಿವೆ. ಈಗಾಗಲೆ ರಾಜ್ಯದಲ್ಲಿ ಟಿಕೆಟ್ಗಾಗಿ ಲಾಭಿ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ (Congress) ಘಟಕ ಹಾಲಿ ಶಾಸಕರು ಅಥವಾ ಸಚಿವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಮುಂದಾಗಿದೆ. ಜಾರಿಯಾಗಿರುವ ಐದು ಗ್ಯಾರೆಂಟಿ ಮತ್ತು ಸ್ಥಳೀಯ ನಾಯಕರ ಪ್ರಭಾವ ಎರಡನ್ನೂ ಒಟ್ಟುಗೂಡಿಸಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲ …
Read More »