Breaking News

ರಾಜ್ಯ

ಖಾಲಿ ಸರ್ಕಾರಿ ಕಟ್ಟಡಗಳನ್ನು ಕೊರೋನ ಚಿಕಿತ್ಸೆಗೆ ಬಳಸಿ : ಎಚ್‌ಡಿಕೆ ಸಲಹೆ

ಬೆಂಗಳೂರು,ಮಾ.15-ಕೊರೋನ ವೈರಸ್ ಸೋಂಕಿತರಿಗೆ ಖಾಲಿ ಇರುವ ಸರ್ಕಾರಿ ಕಟ್ಟಡಗಳನ್ನು ಚಿಕಿತ್ಸೆ ನೀಡಲು ಬಳಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಇತರೆ ರೋಗಿಗಳ ಜೊತೆ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ ಎಂದು ಅವರು ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ. ಕೊರೋನ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮವಾಗಿದ್ದು ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಆಸ್ಪತ್ರೆ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಇತರೆ ರೋಗಿಗಳ ಜೊತೆ ಕೊರೋನ ಸೋಂಕಿತರಿಗೂ ಚಿಕಿತ್ಸೆ ನೀಡುವ …

Read More »

“ಮನೆ ಮನೆಯಲ್ಲೂ ಪೋಷಣ್ ಪಕ್ವಾಡ್”

“ಮನೆ ಮನೆಯಲ್ಲೂ ಪೋಷಣ್ ಪಕ್ವಾಡ್” ನಿಪ್ಪಾಣಿ ಮತಕ್ಷೇತ್ರದ ಯಮಗರ್ಣಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ ಕಟ್ಟಡದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ, ಯವರ ಪೋಷಣ ಅಭಿಯಾನದ ಮುಂದವರೆದ ಪೋಷಣ ಪಕ್ವಾಡ್ ಯೋಜನೆಯ ತಿಳವಳಿಕೆ ಕಾರ್ಯಕ್ರಮದಲ್ಲಿ *ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ …

Read More »

ಮಹೇಶ ಫೌಂಡೇಶನ’ಗೆ ಬೆಳಗಾವಿಯ ವಡಗಾಂವ’ನ ಪಿಎಸ್‌ಐ ಶ್ರೀಮತಿ ಕೃಷ್ಣವೇಣಿ ಸಿ ಜಿ ಅವರು ಸ್ಪೂರ್ತಿದಾಯಕ ಮಾತುಕತೆ..

ಮಹೇಶ ಫೌಂಡೇಶನ’ಗೆ ಬೆಳಗಾವಿಯ ವಡಗಾಂವ’ನ ಪಿಎಸ್‌ಐ ಶ್ರೀಮತಿ ಕೃಷ್ಣವೇಣಿ ಸಿ ಜಿ ಅವರು ಸ್ಪೂರ್ತಿದಾಯಕ ಮಾತುಕತೆಯಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಜೀವನದಲ್ಲಿ ಆದ ಅನುಭವದ ಪ್ರಯಾಣವನ್ನು ನಮ್ಮ ಮಕ್ಕಳು ಮತ್ತು ತಂಡದ ಸದಸ್ಯರೊಂದಿಗೆ ಹಂಚಿಕೊಂಡರು. ಸರ್ಕಾರಿ ಶಾಲಾ ಶಿಕ್ಷಕರಾಗಿರುವ ತಂದೆಯ ಕಿರಿಯ ಮಗಳಾಗಿ ಜನಿಸಿದ ಇವರು, ನಾವೆಲ್ಲರೂ ಆನಂದಿಸುವಂತೆಯೇ ಅವರ ಜೀವನವನ್ನು ಸಹ ಆನಂದಿಸಿದ್ದಾರೆ. ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಶಿಕ್ಷಕರಾಗಲು ಧಾರವಾಡಕ್ಕೆ ಕಳುಹಿಸಿದಾಗ ಅವರ ಜೀವನವು ಒಂದು ತಿರುವು …

Read More »

ಮದುವೆಗಳನ್ನು ಮುಂದೂಡಲು ಆದೇಶಿಸಿ ತಾನೇ ಭವ್ಯ ಮದುವೆಯಲ್ಲಿ ಪಾಲ್ಗೊಂಡ ಸಿಎಂ ಯಡಿಯೂರಪ್ಪ

ಕೊರೊನಾ ವೈರಸ್‌ ಹರಡುವಿಕೆಯ ಮುನ್ನೆಚ್ಚರಿಕೆಯ ಕ್ರಮವಾಗಿ 100 ಜನರಿಗಿಂತ ಹೆಚ್ಚು ಸೇರುವ ವಿವಾಹಗಳನ್ನು ಮುಂದೂಡುವಂತೆ ಆದೇಶಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಂದು ಬೆಳಗಾವಿಯಲ್ಲಿ ಭವ್ಯ ವಿವಾಹದಲ್ಲಿ ಭಾಗಿಯಾಗಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಉದ್ಯಮ್‌ ಬಾಗ್‌ ಕೈಗಾರಿಕಾ ಪ್ರದೇಶದ ಶಗುನ್‌ ಗಾರ್ಡ್‌‌ನ್ಸ್‌ನಲ್ಲಿ ನಡೆದ ಬಿಜೆಪಿ ಎಂಎಲ್‌ಸಿ ಮಹಾಂತೇಶ್‌ ಕವತಗಿಮಠ್‌ರವರ ಮಗಳ ಮದುವೆಯಲ್ಲಿ ಯಡಿಯೂರಪ್ಪನವರು ಭಾಗವಹಿಸಿದ್ದು ಆ ಮದುವೆಯಲ್ಲಿ ಸುಮಾರು 3000ಕ್ಕಿಂತ ಹೆಚ್ಚಿನ ಜನ ಭಾಗವಹಿಸಿದ್ದರು ಎನ್ನಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಸೇರಿದಂತೆ ಹಲವಾರು …

Read More »

ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ: ಶ್ರೀರಾಮುಲು

ಕಲಬುರ್ಗಿ: ಕೊರೊನಾ ಸೋಂಕು ಗಾಳಿಯಲ್ಲಿ ಹರಡುವ ಸೂಕ್ಷ್ಮಾಣು ಅಲ್ಲವಾದ್ದರಿಂದ ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಶಂಕಿತರನ್ನು ಭೇಟಿಯಾದವರು ಅಥವಾ ಅವರ ಮನೆಯ ಸುತ್ತಮುತ್ತ ಸುಳಿದಾಡುವವರು ಮಾಸ್ಕ್ ಧರಿಸಬಹುದು. ಉಳಿದವರಿಗೆ ಮಾಸ್ಕ್ ಬೇಕಿಲ್ಲ. ಸ್ವಚ್ಛವಾಗಿ ಸಾಬೂನಿನಿಂದ ಕೈ ತೊಳೆದರೂ ಸಾಕು. ಇಲ್ಲಿ ಕುಳಿತಿರುವ ನಾನು, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಡಾ.ಅವಿನಾಶ್‌ …

Read More »

ಕೊರೊನಾ ವೈರಸ್: ಕೆಎಲ್ಇ ಆಸ್ಪತ್ರೆ ವಿಶೇಷ ಮನವಿ ಜನಸಂದಣಿ ತಪ್ಪಿಸಲು ಸಹಕರಿಸಿ -ಡಾ. ಎಂ ವಿ ಜಾಲಿ ಮನವಿ

ಕೊರೊನಾ ವೈರಸ್: ಕೆಎಲ್ಇ ಆಸ್ಪತ್ರೆ ವಿಶೇಷ ಮನವಿ ಜನಸಂದಣಿ ತಪ್ಪಿಸಲು ಸಹಕರಿಸಿ -ಡಾ. ಎಂ ವಿ ಜಾಲಿ ಮನವಿ ಬೆಳಗಾವಿ – ಕೊರೊನಾ ವೈರಸ್ ಅಲ್ಲಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ವಿಶೇಷ ಮನವಿ ಮಾಡಿದೆ. ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ರೋಗಿಗಳನ್ನು ನೋಡಲು ಅವರ ಸಂಬಂಧಿಕರು ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿ, ರೋಗಿಗಳಿಗೆ ಚಿಕಿತ್ಸೆ …

Read More »

ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ ಬೃಹತ್ ನೀರಾವರಿ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ಹೊರವಲಯದಲ್ಲಿ ಗಟ್ಟಿ ಬಸವಣ್ಣ ಮಲ್ಟಿಪರ್ಪಜ ಯೋಜನೆಯ ಸ್ಥಳ ಪರೀಶಿಲನೆ ನಡೆಸಿ ಮಾತನಾಡುತ್ತಾ ಈ ಯೋಜನೆ ನನ್ನ ಬಾಲ್ಯದ ಕನಸಾಗಿದ್ದು, ಸರಕಾರದಿಂದ …

Read More »

ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಸಕಲ ಸಿದ್ದತೆ: ಸಿಎಂ ಯಡಿಯೂರಪ್ಪ

ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಸಕಲ ಸಿದ್ದತೆ: ಸಿಎಂ ಯಡಿಯೂರಪ್ಪ  ರಾಜ್ಯದಲ್ಲಿ 100 ಜನ ಕೊರೋನಾ ಶಂಕಿತರ ಮೇಲೆ ನಿಗಾ/ಕೊರೋನಾ ವೈರಸ್ ತಡೆಯಲು ಸರ್ಕಾರ ಸನ್ನದ್ಧ/ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ಸರಕಾರ ಕೊರೋನಾ ಎದುರಿಸಲು ಸನ್ನದ್ದವಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ 100ಜನ ಕರೋನಾ ಶಂಕಿತರ ಮೇಲೆ ನಿಗಾ ಇಡಿಸಲಾಗಿದೆ. ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಅವರು ಇಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಹಾಂತೇಶ್ ಕವಟಗಿಮಠ …

Read More »

Be Alert : ಭಾರತದಲ್ಲಿ ಕೊರೊನ ಪೀಡಿತರ ಸಂಖ್ಯೆ 103ಕ್ಕೇರಿಕೆ..!

ನವದೆಹಲಿ/ಮುಂಬೈ, ಮಾ.15- ದೇಶದಲ್ಲಿ ಮಾರಕ ಕೊರೊನಾ ಸೋಂಕಿನ ದೃಢೀಕೃತ ಪ್ರಕರಣಗಳ ಸಂಖ್ಯೆ 103ಕ್ಕೆ ಏರಿದೆ. ಅಲ್ಲದೆ ಇನ್ನೂ ಹಲವು ಶಂಕಿತರಲ್ಲಿ ಮತ್ತಷ್ಟು ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಮುಂದಿನ 24 ತಾಸುಗಳಲ್ಲಿ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕವಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ 31ಕ್ಕೇರಿದೆ. ಕೇರಳ ಎರಡನೆ ಸ್ಥಾನದಲ್ಲಿದ್ದು , ಅಲ್ಲಿ 26 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ …

Read More »

ಪತ್ರಕರ್ತರೇ ಎಚ್ಚರ..! ಕೊರೊನಾ ವೈರಸ್ ಸುದ್ದಿ ಕೊಡೋ ಧಾವಂತ ನಿಮ್ಮ ಜೀವಕ್ಕೇ ಎರವಾಗದಿರಲಿ.

ಕಲಬುರಗಿ: ವಿಶ್ವಾದ್ಯಂತ ಕೊರೊನಾ ವೈರಸ್ ಅಬ್ಬರಿಸುತ್ತಿರುವ ನಡುವಲ್ಲೇ, ಈ ಕುರಿತ ಸುದ್ದಿಗಳನ್ನು ಸಂಗ್ರಹಿಸುವ ಹಾಗೂ ಅದನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಮಾಧ್ಯಮ ಪ್ರತಿನಿಧಿಗಳೂ ಜೀವ ಕೈಯ್ಯಲ್ಲಿ ಹಿಡಿದು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸುದ್ದಿ ಕೊಡುವ ಧಾವಂತದಲ್ಲಿ ಮಾಧ್ಯಮ ಪ್ರತಿನಿಧಿಗಳು ಸೋಂಕಿತರ ಹಾಗೂ ಅವರ ಒಡನಾಟದಲ್ಲಿ ಇರುವವರ ಸಂಪರ್ಕಕ್ಕೆ ಬರುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಇದಕ್ಕೆ ಕಲಬುರಗಿಯ ಪ್ರಕರಣವೇ ಸಾಕ್ಷಿ. ಮಾಧ್ಯಮಕ್ಕೂ ತಟ್ಟಿದ ಕೊರೊನಾ ಬಿಸಿ..! ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ …

Read More »