Breaking News

ರಾಜ್ಯ

ನೋಟುಗಳನ್ನ ಸೋಪಿನ ನೀರಿನಲ್ಲಿ ತೊಳೆದ ರೈತ……..

ಮಂಡ್ಯ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಇಷ್ಟು ದಿನ ಸಕ್ಕರೆ ನಾಡು ಮಂಡ್ಯದಿಂದ ದೂರವೇ ಉಳಿದಿತ್ತು. ಆದರೆ ಈಗ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದ ಏಳು ಜನರಿಂದ ಮಂಡ್ಯದಲ್ಲೂ ಸಹ ಕೊರೊನಾ ವೈರಸ್ ಕಂಡು ಬಂದಿದೆ. ಈ ಭಯದಿಂದಲೇ ಜಿಲ್ಲೆಯಲ್ಲಿ ರೈತನೊಬ್ಬ ನೋಟುಗಳನ್ನು ಸೋಪಿನ ನೀರಿನಿಂದ ತೊಳೆದಿದ್ದಾನೆ. ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೋಟಿನಿಂದ ಕೊರೊನಾ ಹರಡುತ್ತೆ ಎಂದು ನೋಟುಗಳನ್ನು ನೀರಿನಿಂದ ರೈತ ತೊಳೆದಿದ್ದಾನೆ. ರೈತ …

Read More »

ತುಮಕೂರು:ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ

ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಜನರು ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. ಮಹಾಮಾರಿಗೆ ‘ಕೊರೊನಾ ಅಮ್ಮ’ ಎಂದು ಹೆಸರಿಟ್ಟು ಪೂಜಿಸಲಾಗುತ್ತಿದೆ. ಗ್ರಾಮಗಳ ಹೊರವಲಯದಲ್ಲಿ ಎಮ್ಮೆಯ ಮುಖದ ರೀತಿಯಲ್ಲಿ ಮಣ್ಣಿನಲ್ಲಿ ಗೊಂಬೆ ತಯಾರಿಸಲಾಗಿದೆ. ಈ ಗೊಂಬೆಯನ್ನು ಕೊರೊನಾ ಅಮ್ಮನ ಪ್ರತಿರೂಪ ಎಂದು ಹೇಳ್ತಿರುವ ಜನರು ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಪೂಜೆ ಮಾಡುತ್ತಿದ್ದಾರೆ. ಈ ಹಿಂದೆ ಗ್ರಾಮಗಳಲ್ಲಿ ಪ್ಲೇಗ್ ಬಂದಾಗ ಇದೇ ರೀತಿ ಊರಿನ ಹೊರಗಿನ ಕೆರೆ, ಕಟ್ಟೆ …

Read More »

ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ

ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ. ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ: ಸಲಹೆ …

Read More »

ಅಧಿಕಾರಿಗಳ ದಾಳಿ – ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಜಾಲ ಪತ್ತೆ

ಶಿವಮೊಗ್ಗ: ಕೊರೊನಾ ಭೀತಿಯಿಂದ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂಬ ಕಾರಣದಿಂದ ರಾಜ್ಯ ಸರ್ಕಾರ ಕಳೆದ ಎರಡು ದಿನಗಳಿಂದ ಎರಡು ತಿಂಗಳಿನದ್ದು ಪಡಿತರ ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರದ ಹೊರ ವಲಯದ ಕಲ್ಲೂರು ಬಳಿಯ ಫಾರಂ ಹೌಸ್‍ವೊಂದರ …

Read More »

ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್

ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆ ಒಂದು ಸಾವಿರ ಸೋಂಕಿತರ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 150 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,018ಕ್ಕೆ ಕಂಡಿದೆ. ದೇಶದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಒಂದು …

Read More »

ಪ್ರಿಯಕನೊಂದಿಗೆ ಸೇರಿ ಗಂಡನ ಕೊಂದ ಹೆಂಡತಿ

  ಗೋಕಾಕ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶೆಟ್ಟೆವ್ವನ ತೋಟದ ಹತ್ತಿರ ನದಿಯಲ್ಲಿ ಅನುಮಾನಸ್ಪದವಾಗಿ ಶವ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ   ಬೆಳಗಾವಿ ಎಸ್, ಪಿ, ಮತ್ತು ಹೆಚ್ಚುವರಿ ಎಸ್,ಪಿ,ಹಾಗೂ ಗೋಕಾಕ ವಲಯ ಡಿ,ವಾಯ್,ಎಸ್,ಪಿ,ಇವರ ಮಾರ್ಗದರ್ಶನದಲ್ಲಿ ಗೋಕಾಕ ಪೋಲಿಸ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಕೊನೆಗೂ ಕೊಲೆಯ ರಹಸ್ಯ ಬೇದಿಸಿ ಆರೋಪಿಯನ್ನು ಬಂದಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಸಂಶಯಾಸ್ಪದ ಮೇಲೆ ಮೆಳವಂಕಿ ಗ್ರಾಮದಲ್ಲಿನ ವಿರೂಪಾಕ್ಷಿ ಚಂದ್ರಯ್ಯಾ ಮಠಪತಿಯನ್ನು ಪೋಲಿಸರು ವಿಚಾರಿಸಿದಾಗ ಕೊಲೆಯಾದ ಅಪ್ಪಣ್ಣ …

Read More »

ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ…..

ಮಂಗಳೂರು: ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಮಧ್ಯ ವಯಸ್ಕನೊಬ್ಬ ಮಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಹುಸೈನ್ ಅಲಿ (58) ಬಂಧಿತ ನಕಲಿ ಪತ್ರಕರ್ತ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಆದರೆ ತುರ್ತು ಸೇವೆಯಲ್ಲಿ ಇರುವವರಿಗೆ, ವಿವಿಧ ಮಾಧ್ಯಮಗಳಲ್ಲಿ ವೃತ್ತಿ ಮಾಡುವವರಿಗೆ ವಿನಾಯಿತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ …

Read More »

ಕೆ.ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ಪಟ್ಟಣದಲ್ಲಿ ಉಚಿತವಾಗಿ ನಂದಿನಿ ಹಾಲನ್ನು ವಿತರಿಸಲಾಯಿತು.

ಮೂಡಲಗಿ: ಕೋವಿಡ್19 ಸೊಂಕಿನ ಹಿನ್ನೆಲೆಯಲ್ಲಿ ರಾಜದಲ್ಲಿ ಲಾಕ್ ಡೌನ್ ಘೋಷಿಸಲಾಗಿದು, ಹಾಲು ಒಕ್ಕೂಟದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ಕೆ.ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ಪಟ್ಟಣದಲ್ಲಿರುವ ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೋಳಗೇರಿ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಉಚಿತವಾಗಿ ನಂದಿನಿ ಹಾಲನ್ನು ವಿತರಿಸಲಾಯಿತು. ಪಟ್ಟಣದ ಈರಣ್ಣಾ ನಗರ, ವಿಜಯ ನಗರ, ವಿದ್ಯಾನಗರ, ವೆಂಕಟೇಶ್ವರ ನಗರ, ಗಂಗಾ ನಗರ, ರಾಜೀವ ಗಾಂಧಿ ನಗರ, ಕಜಾಳ ಮಡ್ಡಿ, ವಡ್ಡರ ಓಣಿಯಲ್ಲಿರುವ …

Read More »

ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಕಾರ್ಯನಿರತ‌ ಪತ್ರಕರ್ತರಿಗೆ ಮಾಸ್ಕ್ ವಿತರಿಸಿ ಬಳಿಕ ಮಾತನಾಡಿದರು.

ಬೆಳಗಾವಿ: ಮಾಹಾಮಾರಿ ಕೊರೊನಾ ಸೋಂಕಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ‌. ಇಂಥಹ ಪರಿಸ್ಥಿತಿಯಲ್ಲಿಯೂ ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು‌ ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಬಣ್ಣಿಸಿದರು. ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾ ಭವನದಲ್ಲಿ ನಿಯತಿ ಫೌಂಡೇಶನ್ ಹಾಗೂ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ‌ ಪತ್ರಕರ್ತರಿಗೆ ಮಾಸ್ಕ್ ವಿತರಿಸಿ ಬಳಿಕ ಮಾತನಾಡಿದರು. ಮಾರಕ ಕೊರೊನಾ ಸೋಂಕು ಭೀತಿ …

Read More »

ಚಿಕ್ಕೋಡಿ: ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಮತ್ತೆ ಹಲ್ಲೆ

ಚಿಕ್ಕೋಡಿ: ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಮತ್ತೆ ಹಲ್ಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಪಟ್ಟಣದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆ ಮನೆ ಆರೋಗ್ಯ ಸರ್ವೆ ಕಾರ್ಯಕ್ಕೆ ಮುಂದಾಗಿದೆ. ಇದೇ ಕೆಲಸ ನಿಮಿತ್ತವಾಗಿ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ …

Read More »