Breaking News

ರಾಜ್ಯ

ಸಂಗೊಳ್ಳಿ ರಾಯಣ್ಣನ ಮುರ್ತಿ ಪಕ್ಕದಲ್ಲಿ ವಿದ್ಯುತ್ ಮೇನ್ ಸ್ಥಳಾರ್ತಿಸುವಂತೆ ಮನವಿ..

ಗೋಕಾಕ: ತಾಲೂಕಿನ ದೂಪದಾಳ ಗ್ರಾಮದ ಸರ್ಕಲನಲ್ಲಿ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಲು ಗಣ್ಯ ವ್ಯಕ್ತಿಗಳು ಬರುತ್ತಿದು ದೂಪದಾಳ ಗ್ರಾಮದ ಮುಖ್ಯ ವೃತ್ತದಲ್ಲಿ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮುರ್ತಿ ಪಕ್ಕದಲ್ಲಿ ವಿದ್ಯುತ್ ಮೇನ್ ಲೈನ್ ಇರುವುದರಿಂದ ತೊಂದರೆ ಆಗುತ್ತಿದು ಮುನ್ನ ಎಚ್ಚರಿಕಾ ಕ್ರಮವಾಗಿ ವಿದ್ಯುತ್ ಲೈನ್ ಅನ್ನು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿ ವಿದ್ಯುತ್ ಲೈನ್ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಧುಪದಾಳ ಗ್ರಾಮದ …

Read More »

ವಾಹನ ಮತ್ತು ರೂ. 2 ಲಕ್ಷ ಹಣ ಲಪಟಾಯಿಸುತ್ತಿದ್ದ ಖದೀಮನ ಬಂಧನ

ಗೋಕಾಕ: ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಲಾಭದ ಆಮಿಷ ತೋರಿಸಿ ವಾಹನ ಹಾಗೂ ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗುತ್ತಿದ ಖದೀಮನನ್ನು ಗೋಕಾಕ ಪೊಲೀಸರು ಸೆರೆಹಿಡಿದಿದ್ದಾರೆ.   ನಂಬಿಕೆ ದ್ರೋಹ ಮಾಡಿ ಬುಲೆರೋ ವಾಹನ ಹಾಗೂ 2 ಲಕ್ಷ ರೂಪಾಯಿ ಪಡೆದುಕೊಂಡು ಪರಾರಿಯಾಗುತ್ತಿದ್ದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ತಾಂಡಾದ ಶಿವಾನಂದ (ರಾಜು) ಪ್ರೇಮಸಿಂಗ ಚವ್ಹಾಣ ಎಂಬ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ.   ಗೋಕಾಕ ಶಹರ್ ಪೊಲೀಸ್ ಠಾಣೆಯ ಡಿಎಸ್ಪಿ ಜಾವೀದ್ ಇನಾಮದಾರ …

Read More »

ಮುಂದಿನ ವಾರ ರಾಣಿ ಚನ್ನಮ್ಮ ಮೃಗಾಲಯಕ್ಕೆ ಎರಡು ಹುಲಿ ಸೇರ್ಪಡೆ : ಬಿ.ಪಿ.ರವಿ

ಬೆಳಗಾವಿ : ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯಕ್ಕೆ ಮುಂದಿನ ವಾರದಲ್ಲಿ ಎರಡು ಹುಲಿಗಳು ಬರಲಿವೆ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರ ಸದಸ್ಯ, ಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು. ನಿನ್ನೆ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಯಲಕ್ಕೆ ಭೇಟಿ ನೀಡಿ, ಮೃಗಾಲಯದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಬಳಿಕಮಾತನಾಡಿದ ಅವರು, ಈ ಮೃಗಾಲಯಕ್ಕೇ ಶೀಘ್ರವೇ ನುರಿತ ತಜ್ಞರ ತಂಡ ಭೇಟಿ ನೀಡಿ, ಇಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿ, ವರದಿ ನೀಡಿದ ನಂತರ ಎರಡು ಹುಲಿಗಳು ಇಲ್ಲಿಗೆ …

Read More »

ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯ : ಸಚಿವ ರಮೇಶ್ ಜಾರಕಿಹೊಳಿ‌ ಭೇಟಿಯಾದ ರೈತರ ನಿಯೋಗ

ಕಳಸಾ ಬಂಡೂರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ನಮ್ಮ ಸರ್ಕಾರದ ಆದ್ಯತೆಯ ಯೋಜನೆಯಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಹೇಳಿದರು.   ಮಹದಾಯಿ ಹೋರಾಟಗಾರರು ಮತ್ತು ನವಲಗುಂದದ ರೈತ ಮುಖಂಡರ ನಿಯೋಗದೊಂದಿಗೆ ಮಾತನಾಡಿದ ಸಚಿವ *ರಮೇಶ್ ಜಾರಕಿಹೊಳಿ‌*, ನಮ್ಮ ಪಾಲಿನ‌ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ನಮ್ಮ ಹಕ್ಕು ಎಂದು ಹೇಳಿದರು. ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು, ಕೂಡಲೇ …

Read More »

ಏರೋ‌ ಇಂಡಿಯಾ 2021 ಚಾಲನೆಗೆ ಕ್ಷಣಗಣನೆ : ಟ್ರಾಫಿಕ್ ದಟ್ಟಣೆ

ಬೆಂಗಳೂರು    ಐತಿಹಾಸಿಕ‌ 13ನೇ ಆವೃತ್ತಿಯ ಏರೋ ಇಂಡಿಯಾ 2021ಗೆ ಕ್ಷಣಗಣನೆ ಆರಂಭವಾಗಿದ್ದು, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್‌ ಏರೋ‌ ಇಂಡಿಯಾ 2021 ಉದ್ಘಾಟಿಸಲಿದ್ದಾರೆ.. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ‌ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಫೆ.3ರಿಂದ 5ರ ತನಕ ಏರ್​​ ಶೋ ನಡೆಯಲಿದೆ. ಏರ್ ಶೋ ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶವಿದ್ದು, ಬೆಳ್ಳಂಬೆಳಗ್ಗೆಯೇ ಹೆಬ್ಬಾಳದ ಎಸ್ಟೀಮ್ ಮಾಲ್‌ ಬಳಿಯಿಂದಲೇ ಟ್ರಾಫಿಕ್ ಜಾಮ್‌ ಶುರುವಾಗಿದೆ. ಸಾರ್ವಜನಿಕರು ಏರ್ ಶೋ ವೀಕ್ಷಿಸಲು …

Read More »

ನಟಿಯ ಕಾರನ್ನು ಹಿಂಬಾಲಿಸಿ ಅಪಘಾತ ಮಾಡಿದ ಕುಡುಕರು: ದೂರು ದಾಖಲು

ಪತಿಯೊಂದಿಗೆ ರಾತ್ರಿ ಊಟ ಮುಗಿಸಿ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ನಟಿಯ ಕಾರನ್ನು ನಾಲ್ವರು ಕುಡುಕರು ಹಿಂಬಾಲಿಸಿ ಅಪಘಾತ ಮಾಡಿದ್ದಾರೆ. ಹಿಂದಿ ಧಾರಾವಾಹಿ ನಟಿಗೆ ಈ ಕೆಟ್ಟ ಅನುಭವ ಆಗಿದ್ದು, ನಟಿಯು ತನ್ನ ಪತಿಯೊಂದಿಗೆ ಜನವರಿ 31 ರಂದು ದೆಹಲಿಯ ಐಶಾರಾಮಿ ಹೋಟೆಲ್ ಒಂದಕ್ಕೆ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಊಟ ಮುಗಿಸಿ ರಾತ್ರಿ 2 ಗಂಟೆ ವೇಳೆಗೆ ವಾಪಸ್ಸಾಗಬೇಕಾದರೆ ಘಟನೆ ನಡೆದಿದೆ. ದೆಹಲಿಯ ಮಧುಬನ್ ಚೌಕ್ ಬಳಿ ನಟಿಯ ಕಾರು ಹೋಗಬೇಕಾದರೆ ನಾಲ್ವರು …

Read More »

ಫೆ. 28ರ ವರೆಗೆ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಆಸನ ಭರ್ತಿ ಆದೇಶ ಮುಂದುವರಿಕೆ

ಬೆಂಗಳೂರು: ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿತ್ತು. ಅಲ್ಲದೇ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಕೂಡ ಸೂಚಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡದೆ ಶೇ. 50 ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿ ಬಿಡುಗಡೆ …

Read More »

ಮೇ 2ರಿಂದ ನೆಟ್‌, 4ರಿಂದ ಸಿಬಿಎಸ್‌ಇ ಪರೀಕ್ಷೆ

ಹೊಸದಿಲ್ಲಿ: ಯುಜಿಸಿ ನೆಟ್‌ (ರಾಷ್ಟ್ರೀಯ ಪ್ರವೇಶ ಪರೀಕ್ಷೆ ) ಪರೀಕ್ಷೆಯ ದಿನಾಂಕ ಮಂಗಳವಾರ ಹೊರಬಿದ್ದಿದ್ದು, ಮೇ 2ರಂದು ಪರೀಕ್ಷೆಗಳು ಆರಂಭವಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಮಾಹಿತಿ ನೀಡಿದ್ದಾರೆ. ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಹಾಗೂ ಸಹಾಯಕ ಪ್ರೊಫೆಸರ್‌ ಹುದ್ದೆಗೆ ಅರ್ಹತೆ ಪಡೆಯಲು ಇರುವ ಯುಜಿಸಿ- ನೆಟ್‌ ಪರೀಕ್ಷೆ ಗಳು ಮೇ 2ರಿಂದ ಆರಂಭ ವಾಗಿ 17ರವರೆಗೆ ನಡೆಯಲಿವೆ. ಪರೀಕ್ಷೆ ಬರೆಯ ಲಿಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ugcnet.nta.nic.in ಮೂಲಕ ಅರ್ಜಿಯನ್ನು ಆನ್‌ಲೈನ್‌ನಲ್ಲೇ ಭರ್ತಿ …

Read More »

ಯಶಸ್ವಿ ಅನುಷ್ಠಾನವಾಗಲಿ ಗುಜರಿ ನೀತಿ

ಸೋಮವಾರ ಮಂಡನೆಯಾದ ಕೇಂದ್ರ ಬಜೆಟ್‌ ಮೂಲಸೌಕರ್ಯಾ ಅಭಿವೃದ್ಧಿಗೆ ಹಾಗೂ ಸ್ವಾಸ್ಥ್ಯವಲಯಕ್ಕೆ ಕೊಟ್ಟಿರುವ ಆದ್ಯತೆ ಗಮನಾರ್ಹ. ಅದರ ಜತೆಗೆ ಪರಿಸರ ರಕ್ಷಣೆಯ ನಿಟ್ಟಿನಲ್ಲೂ ಅದು ಮಹತ್ವ ಪೂರ್ಣ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದೂ ಶ್ಲಾಘನೀಯ. ಈ ಬಜೆಟ್‌ನಲ್ಲಿ ಕೇಂದ್ರ ಸರಕಾರ “ವಾಹನ ಗುಜರಿ’ ನೀತಿಯನ್ನು ಘೋಷಣೆ ಮಾಡಿದೆ. ಇದರನ್ವಯ 20 ವರ್ಷ ದಾಟಿದ ಖಾಸಗಿ ವಾಹನಗಳು ಹಾಗೂ 15 ವರ್ಷ ತುಂಬಿದ ವಾಣಿಜ್ಯ ವಾಹನ ಗಳು ಕಡ್ಡಾಯ ಫಿಟೆ°ಸ್‌ ಪರೀಕ್ಷೆಗೆ ಒಳಪಡಬೇಕು. ಆಗ ಅವು …

Read More »

ಕಾಮಗಾರಿ ಮಾಡದೇ ವರ್ಷದ ಹಿಂದೆ ಬಿಲ್ ಎತ್ತುವಳಿ; ಮಾಹಿತಿ ಹಕ್ಕಿನಡಿ ಅಕ್ರಮ ಬಯಲು

ಬಾಗಲಕೋಟೆ: ಬಾದಾಮಿ ತಾಲೂಕಿನ ಗಣಿ ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಕಗಲಗೊಂಬ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣದ ಹೆಸ್ರಲ್ಲಿ ಕಾಮಗಾರಿ ಮಾಡದೇ ಅಧಿಕಾರಿಗಳು, ಗುತ್ತಿಗೆದಾರರು ಬರೋಬ್ಬರಿ 5.98 ಲಕ್ಷ ಬಿಲ್ ಎತ್ತುವಳಿ ಮಾಡಿರುವ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಸೂಳಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗಲಗೊಂಬ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ …

Read More »