Breaking News

ರಾಜ್ಯ

ತಂಬಾಕು ಮಾರಾಟಕ್ಕೂ ಕಡ್ಡಾಯ ಪರವಾನಿಗಿ ನೀಡಿ

ಬೆಂಗಳೂರು, ಫೆ.17- ರಾಜ್ಯದಲ್ಲಿ ತರಕಾರಿ, ಹಾಲು ಮಾರಾಟ ಮಳಿಗೆ ಮತ್ತು ಬೇಕರಿಯಂತಹ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳು ಸಿಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಕಡ್ಡಾಯವಾಗಿ ಪರವಾನಗಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ ಅವರು, ಮದ್ಯದ ಅಂಗಡಿಗಳಿಗೆ ಪರವಾನಗಿ ಇರುವಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯ ಪರವಾನಗಿ …

Read More »

ಟೂಲ್‌ಕಿಟ್‌ ಪ್ರಕರಣ: ನಿಕಿತಾಗೆ ಜಾಮೀನು

ಮುಂಬೈ: ಟೂಲ್‌ಕಿಟ್‌ ಪ್ರಕರಣದ ಆರೋಪಿ, ಮುಂಬೈನ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್‌ ಅವರಿಗೆ ಬಾಂಬೆ ಹೈಕೋರ್ಟ್‌ ಬುಧವಾರ ಮೂರು ವಾರಗಳ ತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದೆ. ನಿಕಿತಾ ವಿರುದ್ಧ ದೆಹಲಿ ಪೊಲೀಸರು ಜಾಮೀನುರಹಿತ ವಾರಂಟ್‌ ಪಡೆದುಕೊಂಡಿದ್ದಾರೆ. ಬಂಧನದಿಂದ ರಕ್ಷಣೆ ಪಡೆಯಲು ದೆಹಲಿಯ ನ್ಯಾಯಾಲಯಕ್ಕೆ ಹೋಗುವುದಕ್ಕಾಗಿ ಜಾಮೀನು ಮಂಜೂರು ಮಾಡಲಾಗಿದೆ. ಇನ್ನೊಬ್ಬ ಆರೋಪಿ ಶಾಂತನು ಮುಲುಕ್‌ ಅವರಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಮಂಗಳವಾರವೇ ಜಾಮೀನು ನೀಡಿದೆ. ಈ …

Read More »

‘ಸಲಗ’ ಟ್ಯಾಟೂ ಹಾಕಿಸಿಕೊಂಡು ದುನಿಯಾ ವಿಜಯ್ ಅಭಿಮಾನಿ

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಸಲಗ’ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ಅಭಿಮಾನಿಗಳು ಸಲಗ ಹೆಸರಿನ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಒಬ್ಬರು ಕೈ ಮೇಲೆ ಟ್ಯಾಟೂ ಹಾಕಿಸಿದರೆ ಇನ್ನೊಬ್ಬರು ಎದೆ ಮೇಲೆ ಹಾಕಿಸಿಕೊಂಡು ತಮ್ಮ ಅಭಿಮಾನ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಸೇರಿದಂತೆ ಡಾಲಿ ಧನಂಜಯ್ ಹಾಗೂ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ …

Read More »

ಇಂದು ಐಪಿಎಲ್‌ ಮಿನಿ ಹರಾಜು; 61 ಸ್ಥಾನಕ್ಕೆ 292 ಕ್ರಿಕೆಟಿಗರ ರೇಸ್‌

ಚೆನ್ನೈ: ಬಹು ನಿರೀಕ್ಷೆಯ 14ನೇ ಐಪಿಎಲ್‌ ಪಂದ್ಯಾವಳಿಗಾಗಿ ಗುರುವಾರ ಚೆನ್ನೈಯಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇಲ್ಲಿನ “ಐಟಿಸಿ ಗ್ರ್ಯಾಂಡ್‌ ಚೋಳ ಹೊಟೇಲ್‌’ನಲ್ಲಿ ಅಪರಾಹ್ನ ಮೂರರಿಂದ ಹರಾಜು ಆರಂಭವಾಗಲಿದ್ದು, ನೇರ ಪ್ರಸಾರ ಸ್ಟಾರ್‌ ಸ್ಪೋರ್ಟ್ಸ್ ನಲ್ಲಿರಲಿದೆ. ಎಲ್ಲ ತಂಡಗಳು ತಮ್ಮ ಸೀಮಿತ ಮೊತ್ತದ ಚೌಕಟ್ಟಿನಲ್ಲಿ ಸ್ಟಾರ್‌ ಆಟಗಾರರನ್ನು ಖರೀದಿಸಲು ಪೈಪೋಟಿಗೆ ಇಳಿಯಲಿವೆ. 8 ಫ್ರಾಂಚೈಸಿಗಳಿಗೆ ಒಟ್ಟು 61 ಆಟಗಾರರ ಅಗತ್ಯವಿದೆ. ರೇಸ್‌ನಲ್ಲಿರುವವರು 292 ಮಂದಿ. ಇದರಲ್ಲಿ ಭಾರತದ 164, …

Read More »

ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರ ಬಂಧನ

ಅಥಣಿ – ನೀರಿನ ಪಾಳಿಗಾಗಿ ಜಗಳವಾಡಿ, ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರನ್ನು ಬಂಧಿಸಲಾಗಿದೆ. ಶಂಕರ ಸದಾಶಿವ ಮಾದರ, ಸದಾಶಿವ ಸಿದ್ರಾಮ ಮಾದರ,  ಸುನೀಲ ಸದಾಶಿವ ಮಾದರ (ಸಾ|| ಎಲ್ಲರೂ ಕೊಕಟನೂರ) ಬಂಧಿತರು.  ಮಹಾದೇವ ಸಿದ್ರಾಮ ಮಾದರ (ವಯಾ 51 ವರ್ಷ ಸಾ|| ಕೊಕಟನೂರ) ಇವನು ಹಾಗೂ  ಸದಾಶಿವ ಸಿದ್ರಾಮ ಮಾದರ (ಸಾ|| ಕೊಕಟನೂರ) ಇವರಿಬ್ಬರೂ ಖಾಸ ಅಣ್ಣತಮ್ಮಂದಿರು. ಇವರ ತಂದೆ ಸಿದ್ರಾಮ ರಾಮಪ್ಪ ಮಾದರ ಇವರ …

Read More »

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಮೂಡಲಗಿ ತಾಲೂಕಿನ ಅರಭಾವಿ (ಹಟ್ಟಿಗುಡ್ಡ) ಪಟ್ಟಣದ ಕುತುಬಸಾಬ ಬಾಗವಾನ ಅವರ ವಾರಸುದಾರರಿಗೆ ಇಂಧನ ಇಲಾಖೆಯಿಂದ 5ಲಕ್ಷ ರೂಗಳ ಪರಿಹಾರಧನದ ಚೆಕ್‍ನ್ನು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕೆಎಮ್‍ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಧನ ಇಲಾಖೆಯಿಂದ ಮಂಜೂರಾದ ಪರಿಹಾರ ಧನವನ್ನು ಕುಟುಂಬದವರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಹಣವನ್ನು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬ್ಯಾಂಕ್‍ನಲ್ಲಿ ಠೇವಣಿಯಾಗಿಟ್ಟು …

Read More »

ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ:

ವಿಜಯಪುರ : ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ಬಾಂಬ್ ಹಾಕಿದ್ದಾರೆ. ಇಲ್ಲನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಆದ್ರೆ ಸಧ್ಯ ನಮಗೆ ಅವಶ್ಯಕತೆ ಇಲ್ಲ ಎಂದು ನಾವೇ ಸುಮ್ಮನಾಗಿದ್ದೀವಿ, ಆದರೂ ಅವರೇ ನಮಗೆ ಕೇಳ್ತಿದ್ದಾರೆ ಎಂದರು. ಕಾಂಗ್ರೆಸ್​ನಲ್ಲಿ ಅಸಮಧಾನವಿದ್ದಂತೆ ಕಾಣ್ತಿದೆ, ಮುಂದೆ ಚುನಾವಣೆಯಲ್ಲಿ ಅವರನ್ನ …

Read More »

ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆ…?

ನವದೆಹಲಿ, ಫೆಬ್ರವರಿ 17: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬುಧವಾರ(ಫೆ.17) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಒಂಭತ್ತನೇ ದಿನದಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಬುಧವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಲಾ 25 ಪೈಸೆ ಏರಿಕೆ ಕಂಡಿದೆ. ರಾಜಸ್ಥಾನದಲ್ಲಿ ಅತಿ …

Read More »

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್​ ರದ್ದು ಮಾಡಿದೆ. ತನಗಾದ ಕಹಿ ಅನುಭವವನ್ನು ಹಲವು ವರ್ಷಗಳ ನಂತರವೂ ವ್ಯಕ್ತಪಡಿಸುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ ಎಂದು ಕೋರ್ಟ್​ ಹೇಳಿದೆ. 2018ರಲ್ಲಿ #Metoo ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರರಂಗದವರು ಸೇರಿ ಅನೇಕ ಕ್ಷೇತ್ರದ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದರು. ಆಗ ಪತ್ರಕರ್ತೆ …

Read More »

IPL Auction 2021: ಐಪಿಎಲ್​ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹುದಾದ ದೇಶಿ-ವಿದೇಶಿ ಆಟಗಾರರು ಇವರೆ

ಚೆನ್ನೈ: ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದಂತಹ ಐಪಿಎಲ್​ 2020 ಕೊರೊನಾ ಸಾಂಕ್ರಾಮಿಕ ಮಹಾಮಾರಿಯ ನಡುವೆಯೂ ಭಾರಿ ಯಶಸ್ಸು ಪಡೆದಿತ್ತು. ಗ್ಯಾಲರಿಯಲ್ಲಿ ಪ್ರೇಕ್ಷಕರಿಲ್ಲದೆ ನಡೆದ ಸರಣಿಯಾದರೂ, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಾವುದೇ ರೀತಿಯಾಗಿ ಹಿಂದೇಟು ಹಾಕಲಿಲ್ಲ. ಹೀಗಾಗಿ ಐಪಿಎಲ್​ 2020 ಕ್ರಿಕೆಟ್​ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಐಪಿಎಲ್​ 2020 ಗಾಗಿ, 2019 ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಆಟಗಾರರು ನಿರೀಕ್ಷೆಗೂ ಮೀರಿದ ಹಣಕ್ಕೆ ಹರಾಜಾಗಿದ್ದರು. ಅಂತಹ ಟಾಪ್​ 10 …

Read More »