ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಗುರುವಾರ ದೇಶಾದ್ಯಂತ ನಡೆದ ರೈಲು ತಡೆ ಯಶಸ್ವಿಯಾಗಿದೆಯೆಂದು ರೈತರು ಹೇಳಿದ್ದರೆ, ಇತ್ತ ರೈಲ್ವೆ ಇಲಾಖೆ ರೈಲು ತಡೆಯಿಂದ ಉಂಟಾಗಿರುವುದು ನಿರ್ಲಕ್ಷಿಸಬಹುದಾದ ಪರಿಣಾಮ ಎಂದಷ್ಟೇ ಹೇಳಿದೆ. ಪಂಜಾಬ್ ಮತ್ತು ಹರಿಯಾಣದ ಅನೇಕ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೇ ಅಧಿಕಾರಿಗಳು ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಿದ್ದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವೆಡೆ …
Read More »ದನ ಮೇಯಿಸುತ್ತಿದ್ದ ರೈತ ಮಹಿಳೆಯೊಬ್ಬರ ಮೇಲೆ ಕಾಡುಹಂದಿ ದಾಳಿ
ಖಾನಾಪುರ: ತಾಲೂಕಿನ ಭೀಮಗಡ ವನ್ಯಧಾಮದ ಗವ್ವಾಳಿ ಗ್ರಾಮದ ಹೊರವಲಯದಲ್ಲಿ ದನ ಮೇಯಿಸುತ್ತಿದ್ದ ರೈತ ಮಹಿಳೆಯೊಬ್ಬರ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ. ಗವ್ವಾಳಿ ಗ್ರಾಮದ ಸಾವಿತ್ರಿ ಬಾಬು ಗಾವಡಾ (೭೬) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ ಕಾಡುಹಂದಿ ಅವರ ಮೊಣಕಾಲು ಮತ್ತು ಸೊಂಟದ ಭಾಗವನ್ನು ತನ್ನ ಹರಿತವಾದ ಮುಳ್ಳಿನಿಂದ ತಿವಿದು ಗಾಯಗೊಳಿಸಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಭೀಮಗಡ …
Read More »ಕೌಜಲಗಿಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಮಾಳಿ ಸಮಾಜದವರ ಬೇಡಿಕೆಯಂತೆ ಇಷ್ಟರಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಳಿ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ ಮಾಡಿಕೊಳ್ಳುತ್ತೇನೆಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕೌಜಲಗಿ ಗ್ರಾಮದ ಕಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಗುರುವಾರದಂದು ಮಹಾತ್ಮಾ ಜ್ಯೋತಿಬಾ ಫುಲೆ ಮಾಳಿ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, …
Read More »ಶೂಟಿಂಗ್ ನನ್ನನ್ನು ಕಾಪಾಡಿತು: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯೆ
ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಇಂದು (ಫೆಬ್ರವರಿ 18) ಡಿಸ್ಚಾರ್ಜ್ ಆಗಿ ಮನೆಗೆ ತೆರಲಿದ್ದಾರೆ. ಈ ಸಮಯದಲ್ಲಿ ರಾಘಣ್ಣ ಜೊತೆ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್ ಸೇರಿದಂತೆ ಕುಟುಂಬದವರು ಮತ್ತು ಸ್ನೇಹಿತರು ಜೊತೆಯಲ್ಲಿದ್ದರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬಂದ ರಾಘಣ್ಣ ಮಾಧ್ಯಮದವರ ಜೊತೆ ಮಾತನಾಡಿ ಶೂಟಿಂಗ್ ನನ್ನನ್ನು ಕಾಪಾಡಿತು ಎಂದು ಹೇಳಿದ್ದಾರೆ. …
Read More »ಫೆ.19ರಂದು1200 ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ ಧ್ರುವಾ ಸರ್ಜಾ ಅಭಿನಯದ ಪೊಗರು
ಬೆಂಗಳೂರು: ನಾಳೆ ಫೆಬ್ರವರಿ 19 ರಥಸಪ್ತಮಿ. ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ವಿಶೇಷ ದಿನ.. ಕಾರಣ ಧ್ರುವ ಸರ್ಜಾ ಅಭಿನಯದ, ಬಹುನಿರೀಕ್ಷಿತ ಪೊಗರು (Pogaru) ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಕೊರೊನಾ ಲಾಕ್ಡೌನ್ ನಂತರ ಸ್ಯಾಂಡಲ್ವುಡ್ನಲ್ಲಿ ಸಿನಿಜಾತ್ರೆ ಶುರುವಾಗಿದೆ. ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗದಸ್ತಾಗಿ ಬಿಗ್ ಸ್ಕ್ರೀನ್ಗೆ ಎಂಟ್ರಿ ಕೊಡೋಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಅಭಿಮಾನಿಗಳಂತೂ ಫುಲ್ ಉತ್ಸಾಹದಲ್ಲಿದ್ದು, ತಮ್ಮ ನೆಚ್ಚಿನ ನಟನಿಗೆ ಆರತಿ ಎತ್ತಿ, …
Read More »ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಘಟಪ್ರಭಾ ನದಿಗೆ ಎಸೆದ ದುಷ್ಕರ್ಮಿಗಳು
ಬಾಗಲಕೋಟೆ, ಫೆಬ್ರವರಿ 18: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ, ಜಿಲ್ಲೆಯ ಘಟಪ್ರಭಾ ನದಿಯ ಕಲಾದಗಿ ಸೇತುವೆ ಬಳಿ ಶವ ಎಸೆದಿರುವ ಬಗ್ಗೆ ದೂರು ದಾಖಲಾಗಿದೆ. ಅಂಕಲಗಿ ಸೇತುವೆ ಬಳಿ ಯುವತಿಯ ಮೃತ ದೇಹ ಪತ್ತೆಯಾಗಿದ್ದು, ಹನೀಪ್ ಎಂಬ ಯುವಕನೇ ಕೃತ್ಯ ಎಸಗಿದ್ದಾನೆ ಎಂದು ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನರ್ಸಿಂಗ್ ಮುಗಿಸಿರುವ ಯುವತಿಯು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹನೀಪ್ ಸಹ …
Read More »ಐಪಿಎಲ್ ಹರಾಜು: ದುಬಾರಿ ಮೊತ್ತಕ್ಕೆ ಆರ್ ಸಿಬಿಗೆ ಮಾರಾಟವಾದ ಮ್ಯಾಕ್ಸ್ ವೆಲ್
ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಗಾಗಿ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ತಂಡದಲ್ಲಿ ಖಾಲಿ ಇರುವ ಕೆಲ ಸ್ಥಾನಗಳಿಗಾಗಿ ಎಂಟು ತಂಡಗಳು ಆಟಗಾರರನ್ನು ಆಯ್ಕೆ ಮಾಡುತ್ತಿವೆ. ಕಳೆದ ಕೆಲವು ಸೀಸನ್ ನಲ್ಲಿ ಪಂಜಾಬ್ ವಿರುದ್ಧ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಭಾರಿ ಮೊತ್ತಕ್ಕೆ ಹರಾಜಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲಿ ಬಿಡ್ಡಿಂಗ್ ಆರಂಭಿಸಿತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ …
Read More »ಶಾಸಕ ಯತ್ನಾಳ್ ಮೇಲೆ ಯಾವ ಆಸಕ್ತಿಯೂ ಇಲ್ಲ: ಅರುಣ್ ಸಿಂಗ್
ಹಾಸನ: ನನಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೇಲೆ ಯಾವ ಆಸಕ್ತಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಹಾಸನದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನನಗೆ ಗಮನವಿದೆ. ಯತ್ನಾಳ್ ಬಗ್ಗೆ ಯಾವ ಆಸಕ್ತಿಯೂ ಇಲ್ಲ, ನಿಮ್ಮ ಬಗ್ಗೆಯೂ ನನಗೆ ಆಸಕ್ತಿಯಿಲ್ಲ. ನಿಮಗೆ ಯತ್ನಾಳ್ ಮೇಲೆ ಯಾಕೆ ಗಮನ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ನಿಗಮ ಮಂಡಳಿ ಹಂಚಿಕೆ ವಿಚಾರದ ಬಗ್ಗೆ ನನಗೆ …
Read More »‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್ಗೆ ಸತೀಶ್ ಜಾರಕಿಹೊಳಿ ಮಾಸ್ಟರ್ ಸ್ಟ್ರೋಕ್
ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂಎಲ್ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಲಾಯ ತಸ್ಮೈ ನಮಃ. ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ. ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಮೊನ್ನೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ ಈ ಒಂದು ಮಾತು ಬೆಳಗಾವಿಯಲ್ಲಿ ಹೊಸ ಚರ್ಚೆ ಹುಟ್ಟು …
Read More »ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ!
ಅಹ್ಮದ್ನಗರ (ಮಹಾರಾಷ್ಟ್ರ): ಚುನಾವಣೆಗು ಮುನ್ನ ಮತದಾರರನ್ನು ಸೆಳೆಯಲು ಜನಪ್ರತಿನಿಧಿಗಳು ನಾನಾ ಪ್ರಯತ್ನ ಮಾಡುತ್ತಾರೆ. ಗೆಲುವು ಸಾಧಿಸಿದ ಬಳಿಕವು ಡಿಜೆ ಸೌಂಡ್, ಮೆರವಣಿಗೆಯಂತಹ ಸಂಭ್ರಮಾಚರಣೆ ಮಾಡುತ್ತಾರೆ. ಈ ರೀತಿ ಶಾಸಕ ಅಥವಾ ಸಂಸದರ ಚುನಾವಣೆಯಲ್ಲಿ ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್ನಲ್ಲಿ ಬರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಅಂಬಿ-ದುಮಾಲಾ ಗ್ರಾಮದಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪ್ರಮಾಣ …
Read More »
Laxmi News 24×7