Breaking News

ರಾಜ್ಯ

ಮಸ್ಕಿ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಪ್ರಚಾರ ಇಲ್ಲ: ಬಿಜೆಪಿ ಅಭ್ಯರ್ಥಿ ಸ್ಪಷ್ಟನೆ

ರಾಯಚೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬರಲು ಕಾರಣವಾದ ಮುಂಬೈ ಫ್ರೆಂಡ್ಸ್ ಎಂದು ಖ್ಯಾತರಾದ 17 ಜನ ಶಾಸಕರ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿ ಪ್ರಕರಣದಲ್ಲಿ ಸಿಕ್ಕು ಒತ್ತಾಡುತ್ತಿದ್ದಾರೆ. ಈ ಗೊಂದಲ ಮಧ್ಯೆ ಬೆಳಗಾವಿ ಸಾಹುಕಾರ್ ಮಸ್ಕಿ ಬೈ ಎಲೆಕ್ಷನ್ ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಅವರು ಮಸ್ಕಿ ಉಪಚುನಾವಣೆಯಿಂದ ದೂರ ಉಳಿಯುತ್ತಾರೆ ಎಂದು ಸ್ವತಃ …

Read More »

ಈಶ್ವರಪ್ಪ ನೀಡಿರುವ ದೂರು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿ : ಎಚ್‌ಡಿಕೆ

ಬೆಂಗಳೂರು,ಏ.1- ರಾಜ್ಯ ಸರ್ಕಾರದ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ದ ನೀಡಿರುವ ದೂರು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಅವರು ನೀಡಿರುವ ದೂರನ್ನು ರಾಜ್ಯದ ಆಡಳಿತದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸಚಿವರು ನೀಡಿದ ದೂರಿನಿಂದಾಗಿ ಅನುದಾನ ಎಲ್ಲ …

Read More »

ಲಿವಿಂಗ್ ಟುಗೆದರ್ ಇದ್ದಾಗ ಹುಟ್ಟಿರೋ ಸರ್ಕಾರವಿದು- ಎಸ್​.ಆರ್. ಪಾಟೀಲ್ ವಾಗ್ದಾಳಿ

ಬಾಗಲಕೋಟೆ: ರಾಜ್ಯದಲ್ಲಿ ಇರುವುದು ಲಿವಿಂಗ್ ಟುಗೆದರ್​ನಿಂದ ಹುಟ್ಟಿದ ಅನೈತಿಕ ಶಿಶುವಿನಿಂದ ಕೂಡಿದ ಸರ್ಕಾರ.. ಹೀಗಾಗಿ ಈ ಸರ್ಕಾರದಲ್ಲಿ ಮುಂದೆ ನಡೆಯುತ್ತಿರುವುದೆಲ್ಲವೂ ಅನೈತಿಕವೇ ಎಂದು ಬಾಗಲಕೋಟೆಯಲ್ಲಿ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ವ್ಯಂಗ್ಯವಾಡಿದ್ದಾರೆ. ಸಿಡಿ ವಿಚಾರದಲ್ಲಿ ಬಹಳಷ್ಟು ಕೆಸರೆರಚಾಟ ನಡೆದಿದೆ. ಈ ಸರ್ಕಾರದಲ್ಲಿ 6 ಜನ ಮಂತ್ರಿಗಳು ಸ್ಟೇ ತಂದ್ರು. ಒಬ್ಬರ ಮೇಲೆ ಈಗಾಗಲೇ ಕಂಪ್ಲೇಂಟ್, ಎಫ್ ಆರ್ ಐ ಫೈಲ್ ಆಗಿದೆ. ಬಿಎಸ್​ವೈ ಸರ್ಕಾರ ಸಿಡಿ ಸರ್ಕಾರ. ನೈತಿಕ ಅಧಃಪತನಕ್ಕೆ …

Read More »

ಸಿಡಿ ಪ್ರಕರಣಕ್ಕೆ ಇದೊಂದು ಹೆಸರಿನಿಂದಲೇ ಹೆಚ್ಚು ಮಾರ್ಕೆಟಿಂಗ್”!

ಬೆಂಗಳೂರು, ಏಪ್ರಿಲ್ 1: ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ನನ್ನ ಹೆಸರು ಹೇಳಿದರಷ್ಟೇ ಮಾರ್ಕೆಟಿಂಗ್ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರಿಗೆ ನನ್ನ ಹೆಸರು ಬಳಸಿಕೊಳ್ಳದೇ ಮಾರುಕಟ್ಟೆಯೇ ಸಿಗುವುದಿಲ್ಲ ಎಂದರು. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ನನಗೆ ಸಂಬಂಧವಿಲ್ಲದ ವಿಚಾರದಲ್ಲಿ ನನ್ನ …

Read More »

1200 ಕೋಟಿ ರೂ.ಗಳ ಹಗರಣ : ಯಡಿಯೂರಪ್ಪ ರಾಜೀನಾಮೆಗೆ ಡಿಕೆಶಿ ಆಗ್ರಹ

ಬೆಂಗಳೂರು, ಏ.1- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅವರ ಸಂಪುಟದಲ್ಲೇ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು 1200 ಕೋಟಿ ರೂ.ಗಳ ಹಗರಣದ ಆರೋಪ ಮಾಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ಸಂಪುಟದ ಸಚಿವರೊಬ್ಬರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ ಗಂಭೀರ ಆರೋಪ ಮಾಡಿದ್ದಾರೆ. 1200 ಕೋಟಿ ರೂ.ಗಳ ಹಗರಣ …

Read More »

ಈಶ್ವರಪ್ಪ ನಾಲ್ಕು ಗೋಡೆಗಳ ನಡುವೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕಿತ್ತು: ರೇಣುಕಾಚಾರ್ಯ ಕಿಡಿ

ಬೆಂಗಳೂರು: ಕೆ.ಎಸ್. ಈಶ್ವರಪ್ಪನವರಂತಹ ಹಿರಿಯ ಸಚಿವರೇ ಮುಖ್ಯಮಂತ್ರಿಗಳ ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ ಎಂದರೆ ಹೇಗೆ? ನಾಲ್ಕು ಗೋಡೆಗಳ ನಡುವೆ ಚರ್ಚೆ ಮಾಡಿ ಇದನ್ನು ಬಗೆ ಹರಿಸಿಕೊಳ್ಳಬೇಕಿತ್ತು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರು ಹೀಗೆ ಮಾಡಿರುವುದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲ್ವಾ? ಪಕ್ಷದ ಇಮೇಜ್ ಹಾಳಾಗೋದಿಲ್ವಾ ಎಂದು ಅಸ‌ಮಾಧಾನ ವ್ಯಕ್ತಪಡಿಸಿದ್ದಾರೆ. ನಾವು 60 ಮಂದಿ ಶಾಸಕರು ಮುಖ್ಯಮಂತ್ರಿಗಳನ್ನು …

Read More »

ಹಾಲು ಖರೀದಿಸಲು ಹೋದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಡೈರಿ ಮಾಲೀಕ..!

ಉತ್ತರಪ್ರದೇಶ : ಹಾಲು ಖರೀದಿ ಮಾಡಲು ಹೋದ 16 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಡೈರಿ ಮಾಲೀಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿ ಆರೋಪ ಮಾಡಿದ್ದಾಳೆ. ಸಂತ್ರಸ್ತೆ ಹಾಲು ಖರೀದಿಸಲು ಹೋದಾಗ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ಹಿನ್ನಲೆ ಗಾಬರೊಗೊಂಡ ಮಾಲೀಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಆಕೆಯನ್ನ ಬಿಟ್ಟು ಕಳುಹಿಸಿದ್ದಾನೆ ಎನ್ನಲಾಗಿದೆ. ಆದ್ರೆ ಬೆದರಿಕೆ ಹೆದರದ …

Read More »

ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯುವತಿ ಸಹೋದರ

ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ಸಹೋದರ ಮತ್ತೊಂದು ಬಾಂಬ್ ಸಿಡಿಸಿದ್ದು, ನಮ್ಮ ಬಳಿ 11 ಆಡಿಯೋ ಸಾಕ್ಷ್ಯಗಳಿವೆ. ಅದರಲ್ಲಿ ಎರಡನ್ನು ಮಾತ್ರ ಈಗಗಾಲೇ ಎಸ್ ಐಟಿ ಅಧಿಕಾರಿಗಳಿಗೆ ನೀಡಿದ್ದೇವೆ ಎಂದರು. ಇನ್ನುಳಿದ 9 ಆಡಿಯೋ ಸಾಕ್ಷ್ಯಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಬಗ್ಗೆ ಪ್ರಸ್ತಾಪಿಸಿರುವುದೂ ಇದೆ. ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂದು ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ …

Read More »

ಎಪ್ರೀಲ್ 1: ಮೂರ್ಖರ ದಿನವಲ್ಲ, ಹೊಸತನದ ದಿನ

ಸಕಾಲಿಕ ಸಂತೋಷಕುಮಾರ್ ಮೆಹಂದಳೆ ಅಂದು 2004 ಏಪ್ರಿಲ್ 1. ಗೂಗಲ್ ಹೊಸ ಕೊಡುಗೆಯನ್ನು ಘೊಷಿಸಿತ್ತು. ಅದನ್ನು ‘ಜಗತ್ತಿನ ಅತಿ ದೊಡ್ಡ ಜೋಕ್’ ಎಂದೇ ಜಾಗತಿಕ ತಮಾಷೆಯಾಗಿ ದಾಖಲೆಯಾಗುವ ಮಟ್ಟಿಗೆ ಜನರು ಆಡಿಕೊಂಡಿದ್ದರು. ಗೂಗಲ್ ಗಿಗಾಬೈಟ್ ಸಾಮರ್ಥ್ಯದ ‘ಜೀ ಮೇಲ್’ ಎಂಬ ಅದ್ಭುತವನ್ನು ಘೊಷಿಸಿದ್ದು ಏಪ್ರಿಲ್ 1ರ ತಡರಾತ್ರಿ. ಮೊದಲ ಗಳಿಗೆಯಲ್ಲಿ ಅದನ್ನು ಟೀಕಿಸಿ, ಮಾಹಿತಿ ಹಂಚಿಕೊಂಡಿದ್ದು ಯಾಹೂ. ಜೊತೆಗೆ ಹಾಟ್​ವೆುೕಲ್ ಮತ್ತು ರಿಡಿಫ್​ನಲ್ಲಿ. ಕಾರಣ ಇವೆರಡೂ ಗ್ರಾಹಕರಿಗೆ ಕೊಡುತ್ತಿದ್ದುದು 2-4 …

Read More »

ಬ್ಯಾಂಕ್ ಗ್ರಾಹಕರೇ ಗಮನಿಸಿ.! ಸಾಲು ಸಾಲು ರಜೆ ಸೇರಿ ಈ ತಿಂಗಳು ಬರೋಬ್ಬರಿ 15 ದಿನ ಬ್ಯಾಂಕ್ ಗಳು ಬಂದ್

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 15 ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆ ಸೇರಿದಂತೆ ದೇಶಾದ್ಯಂತ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಏಪ್ರಿಲ್ ತಿಂಗಳಲ್ಲಿ 15 ದಿನ ರಜೆ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಜಾದಿನಗಳ ಕ್ಯಾಲೆಂಡರ್ ತಿಳಿಸಿದೆ. ಆದರೆ, ಈ ರಜೆಗಳು ಆಯಾ ಪ್ರದೇಶ ಮತ್ತು ರಾಜ್ಯಗಳಿಗೆ ಅನ್ವಯವಾಗುವಂತೆ ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿದೆ. …

Read More »