Breaking News

ರಾಜಕೀಯ

ಶಾಲಾ ಮಕ್ಕಳಿಗೆ ಪತ್ರ ಬರೆದು ಕುಶಲೋಪರಿ ವಿಚಾರಿಸಿದ ಶಿಕ್ಷಕಿ

ಚಿಕ್ಕಮಗಳೂರು, ; ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಹಾಕಿ ವರ್ಷಗಳೇ ಕಳೆಯುತ್ತಿದೆ. ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ತೆರೆಯದೇ ಎರಡು ವರ್ಷಗಳು ತುಂಬುತ್ತಾ ಬರುತ್ತಿದೆ. ಮಕ್ಕಳು ಶಾಲೆ ಕಡೆ ಮುಖ ಮಾಡಿಲ್ಲ ಇದು ಮಕ್ಕಳ ಮತ್ತು ಶಿಕ್ಷಕರ ಬಾಂಧವ್ಯದ ಬೆಸುಗೆ ಕಳಚುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಿಕ್ಷಕಿಯೊಬ್ಬರು ಮಕ್ಕಳಿಗೆಲ್ಲ ಪತ್ರ ಬರೆಯುವ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.   ಚಿಕ್ಕಮಗಳೂರು ತಾಲೂಕಿನ …

Read More »

ಸಿಎಂ ಬದಲಾವಣೆ : ದೆಹಲಿಯಲ್ಲಾದ ಚರ್ಚೆ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು?

ನವದೆಹಲಿ : ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆದಿಲ್ಲ, ಕರೊನಾ ಮತ್ತು ಐದು ರಾಜ್ಯಗಳ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಆದರೆ ಆಗಾಗ ಸಿಎಂ ಬದಲಾವಣೆ ರೀತಿಯ ಹೇಳಿಕೆಗಳು ಬರುತ್ತಿವೆ. ಹೇಳಿಕೆ ನೀಡಿದವರ …

Read More »

ಕಡಹೆಮ್ಮಿಗೆ: ಶಿಥಿಲಗೊಂಡ ನೀರಿನ ಟ್ಯಾಂಕ್‌; ಆತಂಕದಲ್ಲಿ ಜನರು

ಕಿಕ್ಕೇರಿ: ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದೆ. ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೊಳ ಗ್ರಾ.ಪಂ ವ್ಯಾಪ್ತಿಗೆ ಈ ಗ್ರಾಮ ಸೇರಿದೆ. ಗ್ರಾಮದ ಜೊತೆಗೆ ಕಡಹೆಮ್ಮಿಗೆ ಕೊಪ್ಪಲು ಗ್ರಾಮ ಹೊಂದಿಕೊಂಡಿದೆ. ಸುಮಾರು 1,480 ಜನಸಂಖ್ಯೆ ಇದೆ. ಎರಡು ಗ್ರಾಮಗಳಿಗೆ ಈ ಟ್ಯಾಂಕಿನಿಂದ ನೀರು ಸರಬರಾಜು ಆಗುತ್ತಿದೆ. ಆದರೆ, ಶುಚಿತ್ವವೂ ಇಲ್ಲ. ಟ್ಯಾಂಕ್‌ನ ಪ್ಲಾಸ್ಟರಿಂಗ್‌ ಕಳಚಿ ಬೀಳುತ್ತಿದೆ. ಕಬ್ಬಿಣಗಳು ಹೊರಗೆ ಕಾಣಿಸುತ್ತಿದ್ದು, ತುಕ್ಕು ಹಿಡಿಯುತ್ತಿವೆ. ಕೆಲವೆಡೆ …

Read More »

ಜಪಾನ್‌ ವಿದ್ಯಾರ್ಥಿ ವೇತನಕ್ಕೆ ಗೌರಿ ಬಗಲಿ ಆಯ್ಕೆ

ಇಂಡಿ(ವಿಜಯಪುರ): ಜಪಾನ್‌ ಪ್ರಧಾನಮಂತ್ರಿ ಅವರು ಏಷ್ಯಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಿರುವ (The Asia kakehashi project) ಒಂದು ವರ್ಷದ ಶಿಷ್ಯವೇತನ ಸಹಿತ ಉಚಿತ ಶಿಕ್ಷಣ ಪಡೆಯಲು ಇಂಡಿ ಪಟ್ಟಣದ ಗೌರಿ ಸಂಕೇತ ಬಗಲಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗೌರಿ ಬಗಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಜಪಾನ್‌ನಲ್ಲಿ ಒಂದು ವರ್ಷ ಉಚಿತ …

Read More »

ತೇಲಿ ಹೋಯ್ತು ಸೋಯಾಬೀನ್ ಬೆಳೆ; ಧಾರವಾಡದಲ್ಲಿ ಸುರಿದ ಮಳೆಗೆ ರೈತರು ಕಂಗಾಲು

ಧಾರವಾಡ: ಕಳೆದ ವರ್ಷದಿಂದ ರೈತರು ಕೊರೊನಾ ಸೋಂಕು, ಲಾಕ್​ಡೌನ್ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಕೊರೊನಾ ಎರಡನೇ ಅಲೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದೆಲ್ಲದರ ಮಧ್ಯೆಯೇ ಈ ಬಾರಿ ಉತ್ತಮ ಮುಂಗಾರು ಇದ್ದಿದ್ದರಿಂದ ರೈತರು ಕೊಂಚ ಉತ್ಸಾಹದಿಂದ ಕೃಷಿ ಚಟುವಟಿಕೆ ಆರಂಭಿಸಿದ್ದರು. ಆದರೆ ನಿನ್ನೆ ಸುರಿದ ಮಳೆಗೆ ರೈತರ ಕನಸುಗಳೇ ಕೊಚ್ಚಿಕೊಂಡು ಹೋಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು …

Read More »

ಐಎಎಸ್ ಅನ್ನು ಇವತ್ತು ಧನ ಕಾಯುವವನು ಮಾಡುತ್ತಾನೆ : ರೋಹಿಣಿ ವಿರುದ್ಧ ಎ ಮಂಜು ಕಿಡಿ

ಮೈಸೂರು : ಐಎಎಸ್ ಇವತ್ತು ಧನ ಕಾಯುವವನು ಮಾಡುತ್ತಾನೆ. ಐಎಎಸ್ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಧನ ಕಾಯುವವನು, ಅಡ್ಜೆಸ್ಟ್ ಮೆಂಟ್ ನಲ್ಲೂ ಐಎಎಸ್ ಮಾಡುತ್ತಾನೆ. ಇವಾಗ ಯಾರ್ ಬೇಕಾದ್ರೂ ಐಎಎಸ್ ಮಾಡ್ತರೆ. ಆದ್ರೆ ಜನರ ಸೇವೆ ಹೇಗೆ ಮಾಡುತ್ತೇವೆ ಅನ್ನೋದೇ ಮುಖ್ಯ ಎಂದು ಎ ಮಂಜು ರೋಹಿಣಿ ಸಿಂಧೂರಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಈ …

Read More »

ಗೂಗಲ್ ಬಳಿಕ ‘ಅಮೆಜಾನ್’ನಿಂದಲೂ ಕನ್ನಡಕ್ಕೆ ಅಪಮಾನ : ‘ಕನ್ನಡ ಬಾವುಟ’ದಲ್ಲಿ ‘ಒಳ ಉಡುಪು’ ತಯಾರಿ ಮಾರಾಟ.!

ಬೆಂಗಳೂರು : ಕನ್ನಡವನ್ನು ಕೊಳಕು ಭಾಷೆಗೆ ಎಂಬುದಾಗಿ ತೋರಿಸುವ ಮೂಲಕ, ಕನ್ನಡಕ್ಕೆ ಅವಮಾನ ಮಾಡಿ, ತಪ್ಪು ತಿದ್ದಿಕೊಂಡು, ಕನ್ನಡಿಗರ ಕ್ಷಣೆಯನ್ನು ಗೂಗಲ್ ಕೇಳಿತ್ತು. ಇದು ಮಾಸುವ ಮುನ್ನಾವೇ ಈಗ ಆನ್ ಲೈನ್ ವ್ಯವಹಾರಿಕ ದೈತ್ಯ ಸಂಸ್ಥೆ ಅಮೆಜಾನ್, ಕನ್ನಡ ಬಾವುಟದಿಂದ ಒಳ ಉಡುಪುಗಳನ್ನು ತಯಾರಿಸುವ ಮೂಲಕ, ಕನ್ನಡಕ್ಕೆ ಅಪಮಾನ ಮಾಡಿದೆ.   ಕನ್ನಡ ಬಾವುಟದ ಬಣ್ಣದಲ್ಲಿ ಮಹಿಳೆಯರ ಒಳ ಉಡುಪು ತಯಾರಿಸಿ, ಅದರ ಮೇಲೆ ಕನ್ನಡ ಧ್ವಜ ಲಾಂಛನ, ಭಾರತದ …

Read More »

ಪೆಟ್ರೋಲ್, ಡೀಸೆಲ್ ದರ ಏರಿಸುವುದು, ಇಳಿಸುವುದು ಕೇಂದ್ರದ ತೀರ್ಮಾನ: ಈಶ್ವರಪ್ಪ

ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ದರ ಏರಿಸುವುದು, ಇಳಿಸುವುದು ಕೇಂದ್ರ ಸರಕಾರದ ತೀರ್ಮಾನ. ಯಾಕೆ ಏನು, ಏನು ಕಥೆ ಎಂದು ನನಗೆ ಗೊತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೆಲವು ಸಂದರ್ಭದಲ್ಲಿ ಏರಿಸುತ್ತಾರೆ, ಕೆಲವು ಸಂದರ್ಭದಲ್ಲಿ ಇಳಿಸುತ್ತಾರೆ. ಕೇವಲ ಪೆಟ್ರೋಲ್ ಡೀಸೆಲ್ ಅಷ್ಟೇ ಅಲ್ಲ. ಎಲ್ಲಾ ಪದಾರ್ಥಗಳಿಗೆ ಈ ವ್ಯವಸ್ಥೆ ಇರುತ್ತೆದೆ. ಕಾರಣಗಳು ಕೇಂದ್ರದ ಅರ್ಥ ಸಚಿವರಿಗೆ ಗೊತ್ತಿರುತ್ತದೆ. ಆಡಳಿತ …

Read More »

ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಲು ಇಡಿ ತನಿಖೆ ಭಯ ಕಾರಣ: ಯತ್ನಾಳ್

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೈಕಮಾಂಡ್ ಭೇಟಿಗೆ ಇಡಿ ತನಿಖೆ ಕಾರಣ. ತಮ್ಮ ವಿರುದ್ಧ ಮಾರಿಷಸ್ ಹಣಕಾಸಿನ ಹಗರಣದ ಕುರಿತು ಮೂರು ದಿನಗಳಿಂದ ಇಡಿ ನಡೆಸುತ್ತಿರುವ ತನಿಖೆಯಿಂದ ರಕ್ಷಣೆ ಪಡೆಯಲು ವಿಜಯೇಂದ್ರ ದೆಹಲಿ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಕೋವಿಡ್ ನಿರ್ವಹಣೆ ಬಗ್ಗೆ ಹೈಕಮಾಂಡ್ ಶಹಬ್ಬಾಶ್ …

Read More »

ಹೊಸ ಐಟಿ ನಿಯಮ’ಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಅಂತಿಮ ಸೂಚನೆ

ನವದೆಹಲಿ : ಕೇಂದ್ರ ಸರ್ಕಾರದಿಂದ ಹೊಸ ಐಟಿ ನಿಯಮಗಳನ್ನು ರೂಪಿಸಿ, ಅಧಿಸೂಚನೆಯನ್ನು ಹೊರಡಿಸಿತ್ತು. ಅದಕ್ಕೆ ಮೇ.15ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ಕೂಡ ನೀಡಲಾಗಿತ್ತು. ಇಂತಹ ಕಾಲಾವಕಾಶ ಮುಕ್ತಾಯಗೊಂಡ ಬಳಿಕ, ಈಗಾಗಲೇ ವಾಟ್ಸ್ ಆಪ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಂತ ಕೇಂದ್ರ ಸರ್ಕಾರ, ಈಗ ಟ್ವಿಟ್ಟರ್ ಗೆ ಅಂತಿಮ ಸೂಚನೆ ನೀಡಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯ ಅನುಸರಣಾ ಅಧಿಕಾರಿಯವರು ವಿವರಗಳನ್ನು ಒಳಗೊಂಡಂತ ಹೊಸ …

Read More »