Breaking News

ಜಿಲ್ಲೆ

ನಾಗಾಲ್ಯಾಂಡ್ ಮೂಲದ ಯುವತಿ ಆತ್ಮಹತ್ಯೆ

ಚಿಕ್ಕಮಗಳೂರು: ನಾಗಾಲ್ಯಾಂಡ್  ಮೂಲದ ಯುವತಿಯೊಬ್ಬಳ ಶವ ಚಿಕ್ಕಮಗಳೂರಿನ   ಅರವಿಂದ ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಲಿನ್ಸುಲಾ (22) ಎಂದು ಗುರುತಿಸಲಾಗಿದೆ. ಯುವತಿ ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ದಿನದ ಹಿಂದೆ ಕಿವಿಶೆ ಕಿನಿಮಿ ಎಂಬವರ ಜೊತೆ ಅರ್ಧ ಗಂಟೆ ಮಾತನಾಡಿದ್ದಳು ಎಂದು ತಿಳಿದು ಬಂದಿದೆ. ಯುವತಿ ಸಾವಿಗೂ ಮುನ್ನ ರಾಜೇಶ್ ಹಾಗೂ ತೇಜಸ್ ಎಂಬವರ ಹೆಸರನ್ನು ಡೈರಿಯಲ್ಲಿ ಬರೆದಿಟ್ಟಿದ್ದಾಳೆ. ಲಿನ್ಸುಲಾಳಿಗೆ ರಾಜೇಶ್ ಹಾಗೂ ತೇಜಸ್ …

Read More »

ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ – ಶಾಮನೂರು ಆಪ್ತ ಸಾಧಿಕ್ ಪೈಲ್ವಾನ್ ಸವಾಲ್

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ  ಕಾಂಗ್ರೆಸ್‍ನಬಂಡಾಯ ಅಭ್ಯರ್ಥಿ ಶಾಮನೂರು ಆಪ್ತ ಸಾಧಿಕ್ ಪೈಲ್ವಾನ್  ಕಣಕ್ಕಿಳಿದಿದ್ದಾರೆ. ಅವರ ಸ್ಪರ್ಧೆ ಕಾಂಗ್ರೆಸ್‍ಗೆ ತಲೆನೋವಾಗಿ ಪರಿಣಮಿಸಿದೆ. ತಮ್ಮ ಸ್ಪರ್ಧೆ ಬಗ್ಗೆ ವಿಡಿಯೋ ಒಂದನ್ನು ಅವರು ಹರಿಬಿಟ್ಟಿದ್ದು, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಕಾಂಗ್ರೆಸ್‍ಗೆ ಸವಾಲು ಎಸೆದಿದ್ದಾರೆ. ಅಹಿಂದ ಸಮುದಾಯದ ಬೆಂಬಲದಿಂದ ಈ ಬಾರಿ ಚುನಾವಣೆ ಕಣದಲ್ಲಿ ಇದ್ದೇನೆ. ಅಹಿಂದ ಸಮುದಾಯ ಬಿಟ್ಟು …

Read More »

ಹೈಕಮಾಂಡ್ ತೀರ್ಮಾನಿಸೋವರೆಗೂ ನಾನೇ ಸಿಎಂ: ಸಿದ್ದರಾಮಯ್ಯ

ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡೋವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ  ಪುನರುಚ್ಚರಿಸಿದ್ದಾರೆ. ಬಜೆಟ್ ಉತ್ತರ ವೇಳೆ ಸದನದಲ್ಲಿ ಡಿಕೆಶಿ ಹೆಸರು ಹಾಗೂ ಸ್ಪೀಕರ್ ಖಾದರ್ ಫೋಟೋ ಸೆಷನ್ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಸಿಎಂಗೆ ಕಾಲೆಳೆಯುತ್ತಿದ್ರು. ವಿಪಕ್ಷಗಳ ಲೇವಡಿಗೆ ಉತ್ತರಿಸಿದ ಸಿಎಂ, ನಮ್ಮಲ್ಲಿ ಎಲ್ಲ ಶಾಸಕರೂ ಅರ್ಹರು, ಯಾರಾದ್ರೂ ಸಿಎಂ ಆದರೂ ನನಗೆ ಖುಷಿಯಾಗುತ್ತದೆ. ಹೈಕಮಾಂಡ್ ಎಲ್ಲಿಯವರೆಗೆ ಇರು ಅಂತಾರೋ, ಅಲ್ಲೀವರೆಗೂ ಖಾದರ್ ಸ್ಪೀಕರ್ ಆಗಿರುತ್ತಾರೆ. ವಿಪಕ್ಷಗಳು …

Read More »

ಬೊಮ್ಮಣಗಿಯಲ್ಲಿ ಛಲವಾದಿ ಸಮಾಜ ಬಿಜೆಪಿ ಸೇರ್ಪಡೆ

ಬಾಗಲಕೋಟೆ: ಉಪಚುನಾವಣೆಯ ಹಿನ್ನೆಲೆ ಮತಕ್ಷೇತ್ರದ ಬೊಮ್ಮಣಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಭಾಗವಹಿಸಿ ಮತಯಾಚನೆ ನಡೆಸಿದರು. ಈ ವೇಳೆ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಜಿ.ಎನ್. ಪಾಟೀಲ, ಸಂಗಣ್ಣ ಕಲಾದಗಿ, ದುಂಡಪ್ಪ ಏಳಮ್ಮಿ, ಮಂಜುನಾಥ ಮಿಶೆ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಮೂರ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಸುಭಾಸಚಂದ್ರ ಬಸಪ್ಪ ರಾಮೋಡಗಿ, ರಾಚಯ್ಯ ಬಸಯ್ಯ ಹಿರೇಮಠ್, ಹಣಮಂತ …

Read More »

ಲೇಡಿ ರೌಡಿಯನ್ನ ಮಂಚಕ್ಕೆ ಕರೆದ ಪೊಲೀಸ್ ಇನ್‌ಸ್ಪೆಕ್ಟರ್ – ಅಶ್ಲೀಲ ಆಡಿಯೊ, ಮೆಸೇಜ್ ಸಮೇತ ಕಮಿಷನರ್‌ಗೆ ದೂರು

ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಲೇಡಿ ರೌಡಿ ಮೇಲೆ ಲವ್ ಆಗಿ ಚಿನ್ನು, ಮುದ್ದು ಅಂತಾ ಮಂಚಕ್ಕೆ ಕರೆದು ಪೇಚಿಗೆ ಸಿಲುಕಿದ್ದಾನೆ. ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಲೇಡಿ ರೌಡಿ ಕಮಿಷನರ್‌ಗೆ ದೂರು ನೀಡಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ, ನಟೋರಿಯಸ್ ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇಬ್ಬರ ನಡುವಿನ ಸಂಭಾಷಣೆ ಹಾಗೂ ಅಶ್ಲೀಲ ಚಾಟ್ ಸಮೇತ ಮಹಿಳಾ ರೌಡಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪೊಲೀಸ್ …

Read More »

ವಿದ್ಯಾರ್ಥಿನಿ ಕಾಲಿನ ಮೇಲೆ ಹರಿದ ಬಸ್ ಟೈರ್ – ಕಾಲು ಮುರಿತ

ತುಮಕೂರು: ಬಸ್  ಹತ್ತಲು ಹೋದ ವೇಳೆ ವಿದ್ಯಾರ್ಥಿನಿ  ಕಾಲಿನ ಮೇಲೆ ಬಸ್ ಟೈರ್  ಹರಿದು ಕಾಲು ಮುರಿದಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ  ನಡೆದಿದೆ. ಹರ್ಷಿತ (17) ಕಾಲು ಮುರಿತಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ. ಬಸ್ ತುಮಕೂರಿನಿಂದ ಮಧುಗಿರಿಗೆ ಹೊರಟಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ನೂಕಾಟ ತಳ್ಳಾಟ ಉಂಟಾಗಿ ಅವಘಡ ಸಂಭವಿಸಿದೆ. ವಿದ್ಯಾರ್ಥಿನಿ ಕಾಲಿನ ಮೇಲೆ ಹತ್ತಿದ ಬಸ್ ಟೈರ್ ಹತ್ತಿದ ಪರಿಣಾಮ ಕಾಲು ಮುರಿದಿದೆ. ಸದು ಅಂಬುಲೆನ್ಸ್ ಮೂಲಕ …

Read More »

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ತೀವ್ರ ಪ್ರಚಾರ

ಬಾಗಲಕೋಟೆ : ನಗರದಲ್ಲಿ ಉಪಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರ ಪರ ವಿವಿಧ ಪ್ರದೇಶಗಳಲ್ಲಿ ಬುಧವಾರ ಕಾರ್ಯಕರ್ತರಿಂದ ಪ್ರಚಾರ ನಡೆಯಿತು. ನಗರದ ಕೌಲಪೇಟೆ ಪ್ರದೇಶದಲ್ಲಿರುವ ಶ್ರೀ ಆನಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ, ವೀರಣ್ಣ ಚರಂತಿಮಠ ಅವರು ಸ್ಥಳೀಯ ನಾಗರಿಕರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ತಮ್ಮ ಪರ ಮತ ನೀಡುವಂತೆ ಮನವಿ ಮಾಡಿದರು. ವಾರ್ಡ್ ಸಂಖ್ಯೆ …

Read More »

ಚಿಕ್ಕೋಡಿಯ ಜಿಲ್ಲಾ ಕೋರ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

​ಚಿಕ್ಕೋಡಿಯ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಮಹಿಳಾ ದಿನಾಚರಣೆ ಹಾಗೂ ಕಾನೂನು ಮತ್ತು ಆಧ್ಯಾತ್ಮ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದು ನನಗೆ ಅತ್ಯಂತ ಸಂತಸ ಮತ್ತು ತೃಪ್ತಿ ನೀಡಿದ ಅನುಭವ ವಾಗಿದೆ. ​ಕಾನೂನು ಎನ್ನುವುದು ಸಮಾಜದ ಶಿಸ್ತಿನ ಕವಚವಾದರೆ, ಆಧ್ಯಾತ್ಮ ಎನ್ನುವುದು ಬದುಕಿನ ಅಂತರಂಗದ ಬೆಳಕು. ಈ ಎರಡೂ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿದ್ದು ಕಾರ್ಯಕ್ರಮದ ವಿಶಿಷ್ಟತೆಯಾಗಿತ್ತು. ​ ಕಾರ್ಯಕ್ರಮದ ಉದ್ಘಾಟಕರಾದ ಸನ್ಮಾನ್ಯ ಶ್ರೀ ಎ. ಎಸ್. …

Read More »

ಉದ್ಯೋಗ ಭೇಟೆಗೆ ಸ್ಪರ್ಧಾತ್ಮಕ ತಯಾರಿ ಅಸ್ತ್ರವಿದ್ದಂತೆ

ಬಾಗಲಕೋಟೆ : ಇವತ್ತಿನ ವಿದ್ಯಾರ್ಥಿ ನಾಳಿನ ಸ್ಪರ್ಧಾರ್ಥಿ ಮುಂದಿನ ಅಧಿಕಾರಿಗಳಾಗಲು ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ. ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ ಎಂದು ಧಾರವಾಡ ಐಎಎಸ್, ಕೆಎಎಸ್, ಅಕಾಡೆಮಿ ಎಮ್. ಎ. ಬಡೆಮೀಯಾ ಅವರು ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಭೂಗೋಳಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರದ ಮಹತ್ವದ ಕುರಿತು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಭೂಗೋಳದ …

Read More »

ನಾಳೆಯಿಂದ ವಾರ್ಷಿಕ ವಿಶೇಷ ಶಿಬಿರ

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧುಮಠದಲ್ಲಿ ನಾಳೆಯಿಂದ ರಿಂದ ಏ.೧ ರವರೆಗೆ ಆಯೋಜಿಸಲಾಗಿದೆ. ೨೬ರ ಸಾಯಂಕಾಲ ೬:೩೦ಕ್ಕೆ ಶಿಬಿರದ ಉದ್ಘಾಟನಾ ಜರುಗಲಿದ್ದು, ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧು ಮಠದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಲಿದ್ದು, ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ …

Read More »