Breaking News

ಬೆಳಗಾವಿ

ಮೋದಿಜೀಯವರ ೭೧ನೇಯ ಜನ್ಮದಿನ ಅಂಗವಾಗಿ ವಿವಿಧ ಕಾರ್ಯಕ್ರಮಗಳಿಗೆ ಶಾಸಕ ರಮೇಶ್ ಜಾರಕಿಹೊಳಿ ಚಾಲನೆ

  ಗೋಕಾಕ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೭೧ನೇಯ ಜನ್ಮದಿನದ ಅಂಗವಾಗಿ ಗೋಕಾಕ ಬಿಜೆಪಿ ವತಿಯಿಂದ ಶಾಸಕ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಶಾಸಕರ ಗೃಹ ಕಚೇರಿಯಲ್ಲಿ ಮೋದಿಯವರ ಜನ್ಮದಿನದ ಆಚರಣೆ ನಡೆಸಿ ಸಿಹಿ ಹಂಚಿ ಸರಳವಾಗಿ ಆಚರಿಸಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್‌ನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.   …

Read More »

ಇಲ್ಲಿನ ಎಲ್ಲ ವಿದ್ಯಾರ್ಥಿಗಳು 20 ಕಿ.ಮೀ. ದೂರ ಪ್ರಯಾಣ ಮಾಡಿದರಷ್ಟೇ ಶಾಲಾ ಕಾಲೇಜು ಗಳಿಗೆ ತಲುಪಲು ಸಾಧ್ಯ.

    ಗೋಕಾಕ: ಸಾರಿಗೆ ಸಂಸ್ಥೆ ಬಸ್‌ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೋವಿಡ್‌ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದೆ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್‌ ಸೇವೆ ಆರಂಭಗೊಂಡಿಲ್ಲ.   ಇದರಿಂದ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ರಸ್ತೆ ಬದಿಯಲ್ಲಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಗೋಕಾಕ …

Read More »

ಕ್ಷೀರಭಾಗ್ಯ ಯೋಜನೆ ಹಾಲಿನಪುಡಿ ಅಕ್ರಮ ಸಾಗಾಟ, ಗ್ರಾಮಸ್ಥರಿಂದ ಓರ್ವನ ಸೆರೆ..

    ಆಂಕರ್: ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತದೆ. ಆದರೆ ಚಿಕ್ಕೋಡಿ ಉಪವಿಭಾಗ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದಲ್ಲಿ ಅಕ್ರಮವಾಗಿ ಹಾಲಿನ ಪುಡಿ ಸಾಗಾಟ ಮಾಡುತ್ತಿರುವ ಓರ್ವನನ್ನು ಗ್ರಾಮಸ್ಥರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.   ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಬೈಕ್ ಮೇಲೆ ಸಾಗಾಟ ಮಾಡುತ್ತಿರುವ ಅಥಣಿ …

Read More »

ಗೋಕಾಕ ತಾಲೂಕಿಗೆ 20 ಸಾವಿರ ಲಸಿಕೆ ಗುರಿ

        ಗೋಕಾಕ: ರಾಜ್ಯ ಸರಕಾರಹಮ್ಮಿಕೊಂಡಿರುವ ಬೃಹತ್ ಹ ಅಭಿಯಾನದ ಪ್ರಯುಕ್ತ ತಾಲೂಕಿನಲ್ಲಿ ಸುಮಾರು 20 ಸಾವಿರ ಲಸಿಕೆ ಡ ಗಗುದಸದೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಗುರಿತೆಗೆದು ತಾಲೂಕಿನಲ್ಲಿ 105) ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಪ್ರತಿ ಕೇಂದಕ್ಕೆ ನುರಿತ ವೈದ್ಯಕೀಯ, ಸಹಾಯಕ ಸಿಬ್ಬಂದಿ ನಿಯೋಜಿಸಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನ ಮನೆ ಭೇಟಿ Fಡಿ ಅರ್ಹ ವ್ಯಕ್ತಿಗಳನ್ನು ಕರೆತಂದು ಲಸಿಕೆ ಪಡೆಯಲು ಪೂರಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ. …

Read More »

25,ಹಾಗೂ26 ರಂದು ಎರಡು ದಿನ ಬೆಳಗಾವಿಯಲ್ಲೇ ಇರುತ್ತೇನೆ,: ಬಸವರಾಜ ಬೊಮ್ಮಾಯಿ

ಬೆಳಗಾವಿ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್ 25,ಹಾಗೂ 26 ರಂದು ಎರಡು ದಿನ ಬೆಳಗಾವಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ,ಶಾಸಕರು ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸಲು ಬೆಂಗಳೂರಿಗೆ ಹೋದ ಸಂಧರ್ಭದಲ್ಲಿ 25,ಹಾಗೂ26 ರಂದು ಎರಡು ದಿನ ಬೆಳಗಾವಿಯಲ್ಲೇ ಇರುತ್ತೇನೆ,ಬೆಳಗಾವಿ ಅಭಿವೃದ್ಧಿಗೆ ಸಮಂಧಿಸಿದ. ವಿಚಾರವನ್ನು ಅಲ್ಲೇ ಚರ್ಚೆ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಆದ ಬಳಿಕ ಎರಡನೇಯ ಬಾರಿಗೆ ಬೆಳಗಾವಿಗೆ ಬರುತ್ತಿರುವ ಬಸವರಾಜ ಬೊಮ್ಮಾಯಿ …

Read More »

ಬೆಳಗಾವಿ :ಆಹಾರ ಕಿಟ್​​ ಅನ್ನು ಬಿಜೆಪಿ ನಾಯಕರ ಮನೆಗಳಿಗೆ ಸಾಗಾಟ ಮಾಡಲಾಗುತ್ತಿದೆ.: ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ

ಬೆಳಗಾವಿ: ಕೊವೀಡ್​​ನಿಂದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೀಡಾದ ಬಡ ಕೂಲಿ ಕಾರ್ಮಿಕರಿಗೆ ಒಂದಿಷ್ಟು ಅನುಕೂಲವಾಗಲೇಂದು ಕಾರ್ಮಿಕ ಕಲ್ಯಾಣ‌ ಇಲಾಖೆಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಕಾರ್ಮಿಕರಿಗೆ ಆಹಾರ ಕಿಟ್​​ ಅನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಇಂತಹ ಕಿಟ್​​ಗಳು ಬಡ ಕೂಲಿ ಕಾರ್ಮಿಕರ ಕೈ ಸೇರುವ ಬದಲು ಪ್ರಭಾವಿ ಬಿಜೆಪಿ ನಾಯಕರ ಮನೆಗಳನ್ನು ಸೇರುತ್ತಿವೆ ಎಂಬ ಆರೋಪ ಕೇಳಿ ಬಂದಿವೆ. ಹೌದು, ಬೆಳಗಾವಿ ದಕ್ಷಿಣ ವುಧಾನಸಭಾ ಕ್ಷೇತ್ರದಲ್ಲಿನ ನೋಂದಾಯಿತ ಕಾರ್ಮಿಕರಿಗಾಗಿ ಹಲವು ತಿಂಗಳ …

Read More »

ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶ

ಚಿಕ್ಕೋಡಿ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ನಡೆದಿದೆ. ಯಡೂರವಾಡಿ ಮತ್ತು ಮಾಂಜರಿವಾಡಿ ಗ್ರಾಮಕ್ಕೆ ಸೇರಿದ 15 ಕ್ಕೂ ಹೆಚ್ಚು ರೈತರ ಜಮೀನುಗಳ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ ಪಡುತ್ತಿದ್ದಾರೆ.. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಿಂದ 15 …

Read More »

ಶ್ರೀಶೈಲ ಜಗದ್ಗುರುಗಳಿಂದ ವೀರಭದ್ರೇಶ್ವರ ಜಯಂತಿ

ಚಿಕ್ಕೋಡಿ: ಭಾದ್ರಪದ ಮಾಸದ ಪ್ರಥಮ ಮಂಗಳವಾರ ಪ್ರತಿ ವರ್ಷ ವೀರಭದ್ರೇಶ್ವರ ಜಯಂತಿಯನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಅತಿ ಸರಳವಾಗಿದೆ ಆಚರಣೆ ಮಾಡಿದರು.   ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರ ದೇವಸ್ಥಾನದಲ್ಲಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಿ ವಿಶ್ವ ಶಾಂತಿಗಾಗಿ ದೇವರಲ್ಲಿ ಆರಾಧಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಕೊರೊನಾ …

Read More »

ಗುಟ್ಕಾ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಪಾನ್ ಶಾಪ್ ಮಾಲೀಕನನ್ನು ಬರ್ಬರವಾಗಿ ಹತ್ಯೆ

ಬೆಳಗಾವಿ: ಗುಟ್ಕಾ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಪಾನ್ ಶಾಪ್ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಘಟನೆಯಿಂದ ಕುಂದಾನಗರಿ ಜನ ಬೆಚ್ಚಿಬಿದ್ದಿದ್ದಾರೆ.   ಮಂಗಳವಾರ ರಾತ್ರಿ ಬೆಳಗಾವಿಯ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಜೋರಾಗಿತ್ತು. ಜನರು ಗಣೇಶನ ವಿಸರ್ಜನೆಯಲ್ಲಿಯೇ ತಲ್ಲೀನರಾಗಿದ್ದರು. ಆದರೆ ಇತ್ತ ಆರೋಪಿ ದತ್ತಾತ್ರೇಯ ಶಿವಾನಂದ ಜತ್ತಿನಮಠ ಗುಟ್ಕಾ ಸಾಲ ಕೊಡು ಎಂದು ಬಂದಿದ್ದು, ಉದ್ರಿ ಕೊಡುವುದಿಲ್ಲ ಎಂದು ಪಾನ್ …

Read More »

ನಮಗೆ ಮನೆ ಕಟ್ಟಿಸಿ ಕೊಡಿ- ಘಟಪ್ರಭಾ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದ ಪ್ರತಿಭಟನೆ

ಬೆಳಗಾವಿ: ಗೋಕಾಕ್ ತಾಲೂಕಿನ ಅರಭಾವಿ ಕ್ಷೇತ್ರದಲ್ಲಿ 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೆ ಸರ್ಕಾರ ಮನೆ ಕಟ್ಟಿ ಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಂತ್ರಸ್ತರು ಬುತ್ತಿ ಕಟ್ಟಿಕೊಂಡು ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಮಗೆ ಮನೆ ಕಟ್ಟಿಸಿಕೊಡುವ ಆದೇಶ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅರಭಾವಿ ಕ್ಷೇತ್ರದ ಅಡಿಬಟ್ಟಿ, ಚಿಗಡೊಳ್ಳಿ, ಮೇಳವಂಕಿ, ಹಡಗಿನಾಳ, ಉದಗಟ್ಟಿ, ತಿಗಡಿ, ಮಸಗುಪ್ಪಿ, ಕಲಾರಕೊಪ್ಪ, ಅಳ್ಳಿಮಟ್ಟಿ, ಸುಣಧೋಳಿ, ಢವಳೇಶ್ವರ, ಮುನ್ಯಾಳ, ಕಮಲದಿನ್ನಿ, …

Read More »