ಹಾವೇರಿ: ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾವೇರಿಯ ಬಸವೇಶ್ವರ ನಗರದಲ್ಲಿ ಮಂಗಳವಾರ(ಅ.22) ರಂದು ಸಂಭವಿಸಿದೆ. ತಂದೆ ಡಾ.ವೀರಭದ್ರಪ್ಪ ಗುಂಡಗಾವಿ, ಮಗ ಡಾ.ವಿನಯ ಗುಂಡಗಾವಿ ಮೃತ ದುರ್ದೈವಿಗಳು. ವೃತ್ತಿಯಲ್ಲಿ ತಂದೆ, ಮಗ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆಕಸ್ಮಿಕವಾಗಿ ವಿನಯ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಈ ವಿಚಾರ ಕೇಳಿ ತಂದೆ ವೀರಭದ್ರಪ್ಪ ಅವರೂ ಕೂಡ ಹೃದಯಾಘಾತಕ್ಕೆ ಒಳಗಾಗಿ ಒಂದೇ ದಿನ ತಂದೆ ಮಗ ಮೃತಪಟ್ಟಿದ್ದಾರೆ. …
Read More »ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ
ಬೆಂಗಳೂರು: ಆಟವಾಡುವಾಗ ಅಣ್ಣ-ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಷ ಲೇಔಟ್‌ನ ಜಾನ್ಸನ್(13) ಮತ್ತು ಮಹಾಲಕ್ಷ್ಮೀ(11) ಕೆರೆಗೆ ಬಿದ್ದಿರುವ ಅಣ್ಣ-ತಂಗಿ. ಸೋಮವಾರ ಸಂಜೆ ಸುಮಾರು 5.30ಕ್ಕೆ ಕೆಂಗೇರಿ ಬಸ್ ನಿಲ್ದಾಣದ ಎದುರಿನ ಕೆರೆಯಲ್ಲಿ ಈ ಘಟನೆ ನಡೆದಿದೆ. ಜಯಮ್ಮ ಎಂಬುವವರ ಮಕ್ಕಳಾದ ಜಾನ್ಸನ್, ಮಹಾಲಕ್ಷ್ಮೀ ಕೆರೆಯ ವಾಕಿಂಗ್ ಪಾತ್ ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಿಂದಿಗೆಯೊಂದು ಕೆರೆಗೆ ಉರುಳಿದ …
Read More »ಪ್ರತೀ ಕ್ಷೇತ್ರದಲ್ಲೂ 10 ಸಾವಿರ ಬೋಗಸ್ ಮತದಾರರು: MVA ಆರೋಪ
ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಕಾವೇರಿದ್ದು, ಆರೋಪ ಪ್ರತ್ಯಾರೋಪಗಳು ತೀವ್ರವಾಗಿದೆ. ವಿಪಕ್ಷ ಮೈತ್ರಿಕೂಟವಾದ ಮಹಾ ವಿಕಾಸ್ ಆಘಾಡಿ ಆಡಳಿತಾರೂಢ ಮಾಹಾಯುತಿ ಮೈತ್ರಿಕೂಟದ ವಿರುದ್ಧ ಗಂಭೀರ ಆರೋಪ ಮಾಡಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಾವಿರ ಬೋಗಸ್ ಮತದಾರನ್ನು ನೋಂದಣಿ ಮಾಡಲಾಗಿದೆ ಎಂದು ಚುನಾವಣ ಆಯೋಗಕ್ಕೆ ದೂರು ನೀಡಿದೆ. ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ “ಲಫಂಗಿ ಎಂದು ನಾವು ಕರೆಯುವ ಮಹಾಯುವತಿ(NDA) ಸಂವಿಧಾನವು ನೀಡಿರುವ ವಿಶೇಷ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. …
Read More »ಬೆಳಗಾವಿ,ಸೇರಿದಂತೆ 19 ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆ?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ 19 ಜಿಲ್ಲೆಗಳಲ್ಲಿ ಸೋಮವಾರ(ಅ.21ರಂದು) ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಈ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ಇನ್ನು ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚುವರಿಯಾಗಿ ಶೇ.44ರಷ್ಟು ಮಳೆ ಸುರಿದಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕರಾವಳಿ ತೀರದಲ್ಲಿ ಸರ್ಕ್ನೂಲೇಶನ್ 5.8 ಕಿ.ಮೀ. ಎತ್ತರದವರೆಗೆ ಇವೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅ.23ರ ವರೆಗೆ …
Read More »ಕೃಷಿ-ಖುಷಿ: ಒಂದು ಎಕರೆಯಲ್ಲಿ ಪಪ್ಪಾಯಿ, ಶುಂಠಿ ಬೆಳೆದು ₹ 18 ಲಕ್ಷ ಗಳಿಸಿದ ರೈತ
ಚಿಂಚೋಳಿ: ಗ್ರಾಮದ ರೈತ ಪ್ರಭು ಮಸಾನೆ ಅವರು ಕೇವಲ ಒಂದು ಎಕರೆಯಲ್ಲಿ ಶುಂಠಿ ಹಾಗೂ ಪಪ್ಪಾಯಿ ಬೆಳೆದು ₹ 18 ಲಕ್ಷಕ್ಕೂ ಅಧಿಕ ಆದಾಯ ಗಳಿಸಿ ಯಶಸ್ಸು ಕಂಡಿದ್ದಾರೆ. ಕೇವಲ ಏಳನೇ ತರಗತಿಯವರೆಗೆ ಓದಿದ ಮಸಾನೆ ಅವರು ಕೃಷಿಯಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಅವರಿಗೆ ಒಟ್ಟು ಏಳು ಎಕರೆ ಭೂಮಿ ಇದೆ. ಅದರಲ್ಲಿ ಆರು ಎಕರೆಯಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆದಿದ್ದಾರೆ. ಒಂದು ಎಕರೆಯ ಅರ್ಧಭಾಗಕ್ಕಿಂತಲೂ ಹೆಚ್ಚು ಜಾಗದಲ್ಲಿ ಬೆಳೆದ ಶುಂಠಿ ಖರ್ಚು …
Read More »ಎಚ್‌ಐವಿ ತಡೆಗಟ್ಟುವಿಕೆ ಜಾಗೃತಿಗಾಗಿ ಮ್ಯಾರಥಾನ್
ಬೆಳಗಾವಿ: ಎಚ್‌ಐವಿ/ಏಡ್ಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನಗರದಲ್ಲಿ ಶನಿವಾರ ‘ರೆಡ್ ರನ್’ ರಾಜ್ಯಮಟ್ಟದ 5 ಕಿ.ಮೀ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಓಟ ಕೃಷ್ಣದೇವರಾಯ ವೃತ್ತ, ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಸಾಗಿ, ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹೆಚ್ಚುವರಿ ಯೋಜನಾ ನಿರ್ದೇಶಕಿ ಡಾ.ಉಮಾ ಬುಗ್ಗಿ ಸ್ಪರ್ಧೆಗೆ ಚಾಲನೆ ನೀಡಿದರು. …
Read More »ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ?
ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣವನ್ನು ಬಾಂಬ್ ಇಟ್ಟು ಸ್ಫೋಟ ಮಾಡುವುದಾಗಿ ಇ ಮೇಲ್ ಮೂಲಕ ಸಂದೇಶ ಕಳಿಸಲಾಗಿದೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದಾರೆ. ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರ ಇಮೇಲ್‌ಗೆ ಚೈನ್ನೈನಿಂದ ಅಪರಿಚಿತರಿಂದ ಬೆದರಿಕೆ ಪತ್ರದ ಮೇಲ್ ಬಂದಿದೆ. ಶ್ವಾನದಳ, ಬಾಂಬ್ ಸ್ಕ್ವಾಡನಿಂದ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಯಿತು. ಈ ಬಗ್ಗೆ ತ್ಯಾಗರಾಜ ಅವರು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Read More »ಮಹಾ’ ಸೀಟು ಹಂಚಿಕೆ ಬಗ್ಗೆ ಸಿಎಂ ಶಿಂಧೆ ಮಹತ್ವದ ಮಾಹಿತಿ
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಉಭಯ ಪಕ್ಷಗಳ ತಯಾರಿ ಗರಿಗೆದರಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ನಿನ್ನೆ ದೆಹಲಿಗೆ ತೆರಳಿ ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆಗೆ ಮಹತ್ವದ ಚರ್ಚೆ ನಡೆಸಿ ಬಂದಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದ ಜನತೆಗೆ ಒಳ್ಳೆಯ ಸುದ್ದಿಯನ್ನೇ ಕೊಡುತ್ತೇವೆ ಎಂದು ಸುಳಿವು ನೀಡಿದ್ದಾರೆ. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದೆವು. ನಮ್ಮ ಮಹಾಯುತಿಯ …
Read More »ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ ನೀರು. ಮುಳುಗಿದ ಬ್ಯಾರೇಜ್
ಮುಧೋಳ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿರುವ ಕಾರಣ ತಾಲೂಕಿನ ಬ್ರಿಡ್ಜ್ ಕಂ ಬ್ಯಾರೇಜ್ ಗಳು ಮುಳುಗಿ ಜನಸಂಚಾರ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ಮಿರ್ಜಿ-ಮಹಾಲಿಂಗಪುರ ಸಂಪರ್ಕ ರಸ್ತೆಯಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದ್ದು ಸದ್ಯ ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ. ಪರಿಸ್ಥಿತಿ ಇದೇರೀತಿ ಮುಂದುವರಿದರೆ ಸಂಜೆ ಅಥವಾ ನಾಳೆ ವೇಳೆಗೆ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಜೀರಗಾಳ ಸಮೀಪದ ಬ್ರಿಡ್ಜ …
Read More »ಎಣ್ಣೆ ಒಳಗೆ ಹೋದ್ಮೇಲೆ ಬಾಡಿ ಶೇಕ್ ಆಗೋದ್ಯಾಕೆ?
ಮದ್ಯ (Alcohol) ಸೇವಿಸಿದ ನಂತರ ವ್ಯಕ್ತಿಯ ಒಟ್ಟಾರೆ ವರ್ತನೆಯಲ್ಲಿ ಬದಲಾವಣೆಯಾಗುವುದನ್ನು ನೀವು ಹೆಚ್ಚಾಗಿ ನೋಡಿದ್ದೀರಿ. ಅದರಲ್ಲೂ ಮದ್ಯಪಾನ ಮಾಡುವವರಿಗೆ ಇದರ ಬಗ್ಗೆ ಹೆಚ್ಚು ತಿಳಿಯುತ್ತದೆ. ಮದ್ಯ ಸೇವಿಸಿದ ಸ್ವಲ್ಪ ಸಮಯದ ನಂತರ ಕುಡಿಯುವವರ ಧ್ವನಿ (Voice) ಬದಲಾಗಲು ಪ್ರಾರಂಭಿಸುತ್ತದೆ. ವ್ಯಕ್ತಿಯು ನಡೆಯಲು ಕಷ್ಟಪಡುತ್ತಾನೆ ಮತ್ತು ಕ್ರಮೇಣ ದೇಹದ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸ್ವಲ್ಪ ಸಮಯದ (Time) ನಂತರ ಆಲ್ಕೋಹಾಲ್ ಏಕೆ ಪರಿಣಾಮ …
Read More »