ಬೆಂಗಳೂರು: ವಿಧಾನಸಭೆಯಲ್ಲಿ ಪ್ರತಿಪಕ್ಷ ಶಾಸಕರನ್ನು ಕಲಾಪದಿಂದ ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಮುಖ್ಯಮಂತ್ರಿಯ ಸನ್ನೆ ಮೇರೆಗೆ ಸ್ಪೀಕರ್ ಹುಡುಗಾಟಿಕೆ ಮಾಡಿದ್ದಾರೆ ಎಂದು ಹರಿಹಾಯ್ದರು. ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟು, ಇವತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. …
Read More »ಜೈನಮುನಿ ಹತ್ಯೆ ಪ್ರಕರಣ.. ಸಿಐಡಿ ತನಿಖೆಗೆ ವಹಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಚಿಕ್ಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಬಿಜೆಪಿ, ಜೆಡಿಎಸ್ ಸದಸ್ಯರ ಧರಣಿ, ಗದ್ದಲದ ನಡುವೆ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ ಸಿಎಂ, ಜೈನಮುನಿ ಅವರು ಕಾಣೆಯಾಗಿರುವ ಬಗ್ಗೆ ಜುಲೈ 7 ರಂದು ದೂರು ಬಂದಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು. ನಾರಾಯಣಪ್ಪ ಬಸಪ್ಪ ಮಾಳಗಿ ಅವರ ಜಮೀನಿನ ಕೊಳವೆ ಬಾವಿಯಲ್ಲಿ …
Read More »ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ
ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಶಾಸಕರ ಪ್ರತಿಭಟನೆ ತೀವ್ರಗೊಂಡು ವಿಧೇಯಕಗಳ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು. ರಾಜಕೀಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಇದರ ಮಧ್ಯೆ ಸ್ಪೀಕರ್ ಯು ಟಿ ಖಾದರ್, ಪ್ರತಿಪಕ್ಷದ ಶಾಸಕರಿಗೆ ಕಲಾಪದಲ್ಲಿ ಭಾಗವಹಿಸುವಂತೆ ಮನವಿ …
Read More »6 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ 13 ಕನ್ನಡ ಶಾಲೆಗಳಿಗೆ ಬೀಗ.
ಕಾರವಾರ (ಉತ್ತರ ಕನ್ನಡ) : ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಆದರೂ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಿದ್ದು, ಕಳೆದ 6 ವರ್ಷಗಳಲ್ಲಿ ಬರೋಬ್ಬರಿ 13 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಾಗಿಲು ಮುಚ್ಚಿವೆ. ಹೌದು, ಕಾರವಾರ ಕರ್ನಾಟಕದ ಗಡಿ ಪ್ರದೇಶವಾಗಿದ್ದು, ಗೋವಾ ಗಡಿಯಲ್ಲಿ …
Read More »ಯಲಗೂರು ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಆರಂಭ: ನೇಪಾಳದ ಕರೆನ್ಸಿ ನೋಟು, ಭಕ್ತರಿಂದ ತರಹೇವಾರಿ ಬೇಡಿಕೆ ಪತ್ರಗಳು ಪತ್ತೆ
ವಿಜಯಪುರ: ಜಿಲ್ಲೆಯ ಸುಕ್ಷೇತ್ರ ಯಲಗೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಭಾನುವಾರ ಆರಂಭವಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಜಾಗೃತ ದೇವರೆಂದೇ ಖ್ಯಾತಿಯಾಗಿರುವ ಶ್ರೀ ಯಲಗೂರು ಆಂಜನೇಯ ದೇವಸ್ಥಾನದಲ್ಲಿ ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ಅವರ ನೇತೃತ್ವದಲ್ಲಿ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಎಣಿಕೆ ಮಾಡುತ್ತಿದ್ದಾರೆ. ನೇಪಾಳದ ಕರೆನ್ಸಿ ನೋಟುನೇಪಾಳದ ಕರೆನ್ಸಿ ನೋಟು, ಬೇಡಿಕೆ ಪತ್ರ ಪತ್ತೆ: ಹುಂಡಿಯಲ್ಲಿ ನೇಪಾಳ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ಜತೆಗೆ ದೇವರಿಗೆ ಬರೆದ …
Read More »ವಿಸ್ಮಯಕಾರಿ ಘಟನೆ..ನಿಬ್ಬೆರಗಾದ ಜನ..ಆಂಜನೇಯನಿಗೆ ಕೈಮುಗಿದು ಪ್ರಾಣಬಿಟ್ಟ ಕೋತಿ.!
ಬೆಂಗಳೂರು: ಕೋತಿಯೊಂದು ವೀರಾಂಜನೇಯ ಸ್ವಾಮಿಗೆ ನಮಸ್ಕರಿಸಿ ಅಲ್ಲಿಯೇ ಪ್ರಾಣಬಿಟ್ಟಿರುವ ಅಪರೂಪದ ಘಟನೆಯೊಂದು ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ. ಇಲ್ಲಿನ ರಾಮನಾಯಕನಹಳ್ಳಿಯ ವಿರಾಂಜನೇಯಸ್ವಾಮಿ ದೇವಾಲಯದ ಮುಖ್ಯದ್ವಾರದ ಬಳಿ ತಲೆಯಿಟ್ಟು ಕೋತಿಯೊಂದು ಕೈಮುಗಿದ ರೀತಿಯಲ್ಲಿ ಸಾವನ್ನಪ್ಪಿದೆ. ಇದನ್ನು ಕಂಡ ಗ್ರಾಮಸ್ಥರು ಇದೆಂತಹ ವಿಸ್ಮಯವೆಂದು ಉದ್ಘರಿಸಿದ್ದಾರೆ. ವೀರಾಂಜನೇಯನ ದೇವಸ್ಥಾನದ ಬಳಿ ಕೋತಿಯೊಂದು ಯಾವಾಗಲೂ ಓಡಾಡಿಕೊಂಡು ಇತ್ತು. ಜುಲೈ 17ರಂದು ಭೀಮನ ಅಮವಾಸ್ಯೆ ದಿನ ದೇವಾಲಯದ ಅರ್ಚಕ ರಾಮಕೃಷ್ಣಯ್ಯ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ …
Read More »ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ : ಲಾಲು ಪ್ರಸಾದ್ ಯಾದವ್
ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಹೋಟೆಲ್‍ನ ಸಭೆಯಲ್ಲಿ ತಮ್ಮ ಪುತ್ರರೂ ಆದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಭಾಗವಹಿಸಿದ್ದ ಅವರು, ಪ್ರಧಾನಮಂತ್ರಿಯವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಸಭೆ ಅಗತ್ಯವಿದೆ. ಪ್ರಧಾನಮಂತ್ರಿಯವರ ಶಾಸನಗಳು ಜನರಿಗೆ ಮಾರಕವಾಗಿದೆ. …
Read More »ಮೋದಿಯವರು ದೇಶದ ವ್ಯವಸ್ಥೆಯನ್ನು ಕಲುಷಿತಗೊಳಿಸಿದ್ದಾರೆ : ಅರವಿಂದ್ ಕೇಜ್ರಿವಾಲ್
ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಂದು ವ್ಯವಸ್ಥೆಯನ್ನು ಕಲುಷಿತಗೊಳಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾಘಟಬಂಧನ ಸಭೆಗೂ ಮುನ್ನ ಮಾತನಾಡಿದ ಅವರು, 10 ವರ್ಷಗಳ ಹಿಂದೆ ದೇಶದ ಆಡಳಿತ ನಡೆಸಲು ನರೇಂದ್ರ ಮೋದಿಯವರಿಗೆ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವ ಬದಲಾಗಿ ಅವರು ವ್ಯವಸ್ಥೆಯನ್ನು ಕಲುಷಿತಗೊಳಿಸಲು ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಜನರ ನಡುವೆ ದ್ವೇಷ ಬೆಳೆಸಲು, ಆರ್ಥಿಕತೆಯನ್ನು ಕುಗ್ಗಿಸಲು, ಹಣದುಬ್ಬರದ ಮೂಲಕ ಗರಿಷ್ಠ ಪ್ರಮಾಣದ …
Read More »ಎನ್‌ಡಿಎ ಮೈತ್ರಿಕೂಟವು ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಪಡೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳವಾರ ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸೇರಿ ತಮ್ಮ ಎರಡನೇ ಏಕತಾ ಸಭೆಯನ್ನು ನಡೆಸಿದ ಕೆಲವೇ ಗಂಟೆಗಳ ಬಳಿಕ ಸಂಜೆ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎನ್‌ಡಿಎ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನಮ್ಮ ಎಲ್ಲ ಮೈತ್ರಿ ಪಾಲುದಾರರು …
Read More »ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್ ಕ್ವೀನ್!
ಚಿಕ್ಕೋಡಿ(ಬೆಳಗಾವಿ): ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯ ಪರಿಸ್ಥಿತಿ ಇತ್ತು. ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೆಟೊ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದರೆ, ಅನ್ನದಾತರು ಮಾತ್ರ ಖುಷಿಯಾಗಿದ್ದಾರೆ. ಟೊಮೆಟೊ ಬೆಳೆದ …
Read More »
Laxmi News 24×7