Breaking News

ರಾಷ್ಟ್ರೀಯ

ಧಾರವಾಡದ ಐಐಟಿ ವಿದ್ಯಾರ್ಥಿಗಳ ಜೊತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ..

ಧಾರವಾಡದ ಐಐಟಿ ಕೇಂದ್ರದಲ್ಲಿ ಸ್ಥಾಪಿತವಾದ ಧರ್ತಿ ಬಾಯೋನೆಟ್ಸ್ ಸೆಂಟರ್ ಉದ್ಘಾಟನೆಗೆಂದು ಬಂದಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಐಐಟಿಯ ಸುಮಾರು ಐದು‌ ವಿದ್ಯಾರ್ಥಿಗಳು ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸೀತಾರಾಮನ್ ಅವರು ತೀಕ್ಷ್ಣವಾಗಿಯೇ ಉತ್ತರಿಸಿದರು. ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಕೆಲಸಕ್ಕೆ ತಯಾರಾಗಿರಬೇಕು. ವಿಶ್ವವಿದ್ಯಾಲಯಗಳು ಕೌಶಲ್ಯ ಕಲಿಸುವ ಕೆಲಸ ಮಾಡಬೇಕು. ಕೌಶಲ್ಯ ಅಷ್ಟೇ ಅಲ್ಲ ಇಲ್ಲಿ ಭಾಷೆ‌ …

Read More »

ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ ಚಿಕ್ಕೋಡಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ನ್ಯಾಯಾಧೀಶರು ಭೇಟಿ

ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ ಚಿಕ್ಕೋಡಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ನ್ಯಾಯಾಧೀಶರು ಭೇಟಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ನ್ಯಾಯಾಧೀಶರು ಭೇಟಿ ಚಿಕ್ಕೋಡಿಯ ಹಿರೇಕೋಡಿಯಲ್ಲಿರುವ ವಸತಿ ಶಾಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲಿಸಿದರು. ಚಿಕ್ಕೋಡಿ …

Read More »

ನಾರಾಯಣ’, ‘ವೆಂಕಟರಮಣ’ ಎನ್ನುತ್ತಾ ಚಿನ್ನಾಭರಣ ಎಗರಿಸುತ್ತಿದ್ದ ನಕಲಿ ಸ್ವಾಮೀಜಿ ಸೆರೆ; ₹53 ಲಕ್ಷದ ಮಾಲು ಜಪ್ತಿ

ಬೆಂಗಳೂರು: ಪೂಜೆಯ ಹೆಸರಿನಲ್ಲಿ ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ನಕಲಿ ಸ್ವಾಮೀಜಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ದಾದಾಪೀರ್ (49) ಬಂಧಿತ ಆರೋಪಿ. ಜನರನ್ನು ವಂಚಿಸಿ ಪಡೆದ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗಲೇ ಆರೋಪಿಯನ್ನು ಬಂಧಿಸಿ, ಆತನಿಂದ ಒಟ್ಟು 53 ಲಕ್ಷ ರೂ ಮೌಲ್ಯದ 485.4 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ತನ್ನನ್ನು ತಾನು ನಾರಾಯಣ, ವೆಂಕಟರಮಣ ಮತ್ತಿತರ ಹೆಸರುಗಳಲ್ಲಿ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಸ್ವಾಮೀಜಿಯ …

Read More »

ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್: ಗಡಿಪಾರಿನಿಂದ ಮಹೇಶ್ ಶೆಟ್ಟಿ ತಿಮರೋಡಿ ಪಾರು!

ಬೆಂಗಳೂರು/ಮಂಗಳೂರು, (ಅಕ್ಟೋಬರ್ 13): ಗಡಿಪಾರು ಆದೇಶ ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್  (Karnataka High Court) ಪುರಸ್ಕರಿಸಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಗಡಿಪಾರು ಆದೇಶ ಪ್ರಶ್ನಿಸಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಪೂರ್ಣಗೊಳಸಿದ್ದು, ಆದೇಶ ಕಾಯ್ದಿರಿಸಿದೆ. ಆದ್ರೆ, ಮುಂದಿನ ಆದೇಶದವರೆಗೆ ಬಲವಂತದ ಕ್ರಮ ಬೇಡ. ಗಡಿಪಾರು ಜಾರಿಗೊಳಿಸದಂತೆ ಮಹತ್ವದ ಸೂಚನೆ ನೀಡಿದೆ. …

Read More »

ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ‌ ಕರವೇ ದೀಕ್ಷೆ: ನಾರಾಯಣಗೌಡ

ಬೆಳಗಾವಿ: ಕನ್ನಡ ನಾಡು, ನುಡಿ, ಗಡಿ, ಜಲ ರಕ್ಷಣೆಗಾಗಿ ಜಿಲ್ಲೆಯ 2500ಕ್ಕೂ ಹೆಚ್ಚು ಕಾರ್ಯಕರ್ತರು “ಕನ್ನಡ ದೀಕ್ಷೆ” ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಕನ್ನಡ ದೀಕ್ಷೆ ಕೊಡುವ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತಿಳಿಸಿದರು. ಕರವೇ ಕಾರ್ಯಕರ್ತರ ಮೆರವಣಿಗೆಗೆ ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. …

Read More »

ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ತನ್ನಿಬ್ಬರು ಮಕ್ಕಳನ್ನು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಬೃಂದಾ (4) ಹಾಗೂ ಭುವನ್ (1) ಕೊಲೆಗೀಡಾದ ಮಕ್ಕಳು. ವಿಜಯಲಕ್ಷ್ಮಿ (35) ಆತ್ಮಹತ್ಯೆ ಮಾಡಿಕೊಂಡ ತಾಯಿ. ಗುರುವಾರ ರಾತ್ರಿ ವಿಜಯಲಕ್ಷ್ಮಿ ಅವರ ಸಹೋದರಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಾಯಚೂರಿನವರಾದ ವಿಜಯಲಕ್ಷ್ಮಿ ಹಾಗೂ ರಮೇಶ್ ಐದು ವರ್ಷದ ಹಿಂದೆ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ -ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಮ್ಮ ಪೆನಲ್‌ದಿಂದ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಗೆಲ್ಲಬೇಕೆಂದೇ ನಾವು ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಅರಬಾವಿ ಶಾಸಕ, ಬೆಮೂಲ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೆನಲ್‌ದಿಂದ 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಸ್ಪರ್ಧೆ ಮಾಡಲಾಗುವುದು. ಈಗಾಗಲೇ 7 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ …

Read More »

ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ ಪಾಲಾರ್ ನದಿಯ ಮೇಲಿನ ಸೇತುವೆಯ ಉದ್ಘಾಟನೆಯನ್ನು ಇಂದು ಮಾನ್ಯ ಹಿರಿಯ ಸಚಿವರಾದ ಶ್ರೀ ಕೆ. ಎಚ್. ಮುನಿಯಪ್ಪ ಅವರೊಂದಿಗೆ ನೆರವೇರಿಸಲಾಯಿತು

ಕೋಲಾರ ಜಿಲ್ಲೆಯ ಕೆ.ಜೀ.ಎಫ್ ತಾಲೂಕಿನ ನಲ್ಲೂರು ಮತ್ತು ನತ್ತ ಗ್ರಾಮಗಳ ನಡುವೆ, ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ ಪಾಲಾರ್ ನದಿಯ ಮೇಲಿನ ಸೇತುವೆಯ ಉದ್ಘಾಟನೆಯನ್ನು ಇಂದು ಮಾನ್ಯ ಹಿರಿಯ ಸಚಿವರಾದ ಶ್ರೀ ಕೆ. ಎಚ್. ಮುನಿಯಪ್ಪ ಅವರೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಜೀ.ಎಫ್ ಶಾಸಕರಾದ ಶ್ರೀಮತಿ ರೂಪಕಲಾ ಎಂ. ಶಶಿಧರ್, ಬಂಗಾರಪೇಟೆ ಶಾಸಕರಾದ ಶ್ರೀ ಎಸ್. ಎನ್. ನಾರಾಯಣಸ್ವಾಮಿ, ಇಲಾಖೆಯ ಹಿರಿಯ ಅಧಿಕಾರಿಗಳು, ಪಕ್ಷದ ನಾಯಕರು, ಗಣ್ಯರು ಹಾಗೂ ಸ್ಥಳೀಯ …

Read More »

ಅಧಿಕಾರಿಯ ಪ್ರತಿ ವರ್ಗಾವಣೆಗೂ ಗೆಜೆಟ್ ಅಧಿಸೂಚನೆ ಹೊರಡಿಸುವ ಅಗತ್ಯ ಇಲ್ಲ: ಹೈಕೋರ್ಟ್

ಬೆಂಗಳೂರು: ರಾಜ್ಯದ ಒಂದು ವೃತ್ತದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗೆ ಡ್ರಗ್ಸ್ ಇನ್ಸ್​ಪೆಕ್ಟರ್ ಎಂಬುದಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ ಬಳಿಕ, ಆ ಅಧಿಕಾರಿ ಮತ್ತೊಂದು ವೃತ್ತಕ್ಕೆ ವರ್ಗಾವಣೆಗೊಂಡರೂ ಅದೇ ಹುದ್ದೆ ಮುಂದುವರೆಯಲಿದ್ದು ಮತ್ತೆ ಹೊಸದಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕಾಗಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಗದಗ ವೃತ್ತದ ಡ್ರಗ್ಸ್ ಇನ್ಸ್​ಪೆಕ್ಟರ್‌ ಅವರು ತಮ್ಮ ವಿರುದ್ಧ ದಾಖಲಿಸಿರುವ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಕೋರಿ ಎಂ.ಎಸ್‌. ಕಡ್ಲಿ …

Read More »

ಹುಲಿ ಹತ್ಯೆ ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟಕ್ಕೆ ಬಂದಿದ್ದು, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಾಲ್ವರು ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ನಡೆಸಲಾಯಿತು. ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲ, ಗಣೇಶ್, ಗೋವಿಂದೇಗೌಡ, ಸಂಪು ಎಂಬವರ‌ನ್ನು ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಕರೆತಂದು ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ನಾಲ್ವರನ್ನು ಕೂಡ ಬಂಧಿಸಿ ನ್ಯಾಯಾಧೀಶರ ಮುಂದೆ ಇಂದೇ ಹಾಜರುಪಡಿಸುವ ಸಾಧ್ಯತೆ ಇದೆ. ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದರಿಂದ ರೊಚ್ಚಿಗೆದ್ದ …

Read More »