ಜಗತ್ತಿನಲ್ಲೇ ಪುರಾತಣವಾದ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು; ಶಾಸಕ ಆಸೀಫ್ ಸೇಠ್ ಸ್ಫೂರ್ತಿ ಅಸೋಸಿಯೇಷನ್’ನಿಂದ ಭಾವಗೀತ ಗಾಯನ; ಕಾರ್ತಿಕೋತ್ಸವ ಭಾವಗೀತ ಗಾಯನ; ಕಾರ್ತಿಕೋತ್ಸವ ಸ್ಫೂರ್ತಿ ಅಸೋಸಿಯೇಷನ್’ನಿಂದ ಆಯೋಜನೆ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು ಶಾಸಕ ಆಸೀಫ್ ಸೇಠ್ ಅಭಿಪ್ರಾಯ ಬೆಳಗಾವಿಯ ಸ್ಫೂರ್ತಿ ಸೋಷಿಯಲ್ ವೆಲ್’ಫೇರ್ ಅಸೋಸಿಯೇಷನ್’ನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಭಾವಗೀತೆ ಗಾಯನ ಸ್ಪರ್ಧೆ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಮಂಗಳವಾರ …
Read More »ಸತೀಶ ಶುಗರ್ಸ ಕಬ್ಬು ನುರಿಸುವ ಹಂಗಾಮಿಗೆ ರಾಹುಲ್ ಜಾರಕಿಹೊಳಿ ಚಾಲನೆ
ಸತೀಶ ಶುಗರ್ಸ ಕಬ್ಬು ನುರಿಸುವ ಹಂಗಾಮಿಗೆ ರಾಹುಲ್ ಜಾರಕಿಹೊಳಿ ಚಾಲನೆ ಬೆಳಗಾವಿ: ಹುಣಶ್ಯಾಳ ಪಿ.ಜಿ. ಸತೀಶ್ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಸನ್ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆಯ ನಿರ್ದೇಶಕರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ, ಬೆಳಗಾವಿಯ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು ಇಂದು ಚಾಲನೆ ನೀಡಿದರು. ಈ ವೇಳೆ ಯುವ ನಾಯಕ …
Read More »ಯೂಟ್ಯೂಬರ್ ಸಮೀರ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿದ್ದ ಅರ್ಜಿ ವಿಚಾರಣೆ ಧಾರವಾಡ ಪೀಠಕ್ಕೆ ವರ್ಗಾವಣೆ
ಯೂಟ್ಯೂಬರ್ ಸಮೀರ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿದ್ದ ಅರ್ಜಿ ವಿಚಾರಣೆ ಧಾರವಾಡ ಪೀಠಕ್ಕೆ ವರ್ಗಾವಣೆ ಬೆಂಗಳೂರು : ಬೆಳ್ತಂಗಡಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ಆಧಾರಿತ ವಿಡಿಯೋ ತುಣುಕು ಬಳಸಿ ವರದಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಎಂ ಡಿ ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಿ, ಹೈಕೋರ್ಟ್ನ ಬೆಂಗಳೂರು ಪೀಠ ಆದೇಶಿಸಿದೆ. ತನ್ನ …
Read More »ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಗೃಹಲಕ್ಷ್ಮಿ ಸಂಘದ ಪ್ರಮಾಣ ಪತ್ರ ಹಸ್ತಾಂತರ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಗೃಹಲಕ್ಷ್ಮಿ ಸಂಘದ ಪ್ರಮಾಣ ಪತ್ರ ಹಸ್ತಾಂತರ ಬೆಂಗಳೂರು (ವಿಧಾನಸೌಧ): ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ನೋಂದಾಯಿತ ಪ್ರಮಾಣ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕರಾದ ಲಕ್ಷ್ಮೀಪತಯ್ಯ ಹಸ್ತಾಂತರಿಸಿದರು. ವಿಧಾನಸೌಧದ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಲಕ್ಷ್ಮೀಪತಯ್ಯ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. * ಸಚಿವರ ಕನಸಿನ ಯೋಜನೆ ಕರ್ನಾಟಕ ಸರ್ಕಾರದ ಪಂಚ …
Read More »ಜನರ ಪ್ರೀತಿ,ಪ್ರೋತ್ಸಾಹ,ಆಶೀರ್ವಾದವೇ ನಮಗೆ ಶ್ರೀರಕ್ಷೆ.”
ಜನರ ಪ್ರೀತಿ,ಪ್ರೋತ್ಸಾಹ,ಆಶೀರ್ವಾದವೇ ನಮಗೆ ಶ್ರೀರಕ್ಷೆ.” ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರ ರತ್ನ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅವಿರೋಧವಾಗಿ ಆಯ್ಕೆಯಾದ ಹಿನ್ನಲೆ,ಪ್ರಥಮ ಬಾರಿಗೆ ನಿಪ್ಪಾಣಿ ನಗರಕ್ಕೆ ಆಗಮಿಸುತ್ತಿದ್ದಂತೆ ಪಿ.ಕೆ.ಪಿ.ಎಸ್.ಅಧ್ಯಕ್ಷರು,ಸದಸ್ಯರು,ಹಿತೈಷಿಗಳು,ಅಭಿಮಾನಿಗಳು ಹಾಗೂ ರೈತರು,ಅತ್ಯಂತ ಅದ್ದೂರಿಯಾಗಿ ಸ್ವಾಗತಿಸಿ,ಆತ್ಮೀಯವಾಗಿ ಬರಮಾಡಿಕೊಂಡು,ಪಟಾಕಿ ಸಿಡಿಸಿ,ಸಿಹಿ ತಿನ್ನಿಸಿ,ಅಭಿನಂದನೆ ಸಲ್ಲಿಸಿದ ಕ್ಷಣಗಳು. ಬಳಿಕ ವಿಜಯೋತ್ಸವ ಕಾರ್ಯಕ್ರಮದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಲಾಯಿತು.ಅವರಿಗೆ ಜೊಲ್ಲೆ ಪರಿವಾರ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು.
Read More »ಅತಿವೃಷ್ಠಿಯಿಂದ ಉತ್ತರ ಕರ್ನಾಟಕದಲ್ಲಿ ಶೇ.90ಕ್ಕಿಂತ ಹೆಚ್ಚು ಹಾನಿ
ಅತಿವೃಷ್ಠಿಯಿಂದ ಉತ್ತರ ಕರ್ನಾಟಕದಲ್ಲಿ ಶೇ.90ಕ್ಕಿಂತ ಹೆಚ್ಚು ಹಾನಿ ಮುಂಬರುವ ಒಂದು ವಾರ 15 ದಿನಗಳಲ್ಲಿ ಬೆಳೆಹಾನಿ ಪರಿಹಾರ ಜಮೆ; ಸಿಎಂ ಸಿದ್ಧರಾಮಯ್ಯ ಅತಿವೃಷ್ಠಿಯಿಂದ ಉತ್ತರ ಕರ್ನಾಟಕದಲ್ಲಿ ಶೇ.90ಕ್ಕಿಂತ ಹೆಚ್ಚು ಹಾನಿ ಮುಂಬರುವ ಒಂದು ವಾರ 15 ದಿನಗಳಲ್ಲಿ ಬೆಳೆಹಾನಿ ಪರಿಹಾರ ಸಿಎಂ ಸಿದ್ಧರಾಮಯ್ಯ ಭರವಸೆ ದೆಹಲಿ ಬಾಂಬ್ ಬ್ಲಾಸ್ಟ್ ಬಿಹಾರ ಚುನಾವಣೆ ಮೇಲೆ ಪರಿಣಾಮ ಅತಿವೃಷ್ಠಿಯಿಂದ ರಾಜ್ಯದ ಉತ್ತರ ಕರ್ನಾಟಕದಲ್ಲಿ ಶೇ.90ಕ್ಕಿಂತ ಹೆಚ್ಚು ಬೆಳೆಹಾನಿಯಾಗಿದೆ. ಮುಂಬರುವ ಒಂದು ವಾರ 15 …
Read More »ಹಿಂದಿ ಚಿತ್ರರಂಗದ ಹಿ ಮ್ಯಾನ್ ಇನ್ನಿಲ್ಲ
300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ನಟ ಧರ್ಮೇಂದ್ರ (Dharmendra) ಅವರು ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ನವೆಂಬರ್ 11) ನಿಧನರಾಗಿದ್ದಾರೆ. 89 ವರ್ಷ ವಯಸ್ಸಿನ ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಧರ್ಮೇಂದ್ರ ಅವರು ಮೃತರಾದರು. ಇತ್ತೀಚೆಗಷ್ಟೇ …
Read More »ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ: ಇಬ್ಬರು ಅಧಿಕಾರಿಗಳು ಸಸ್ಪೆಂಡ್: ಓರ್ವ ಅಧಿಕಾರಿ ಎತ್ತಂಗಡಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಜೈಲಾಧಿಕಾರಿಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಪರಮೇಶ್ವರ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣದ ತನಿಖೆಗೆ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಒಂದು ತಿಂಗಳ ಒಳಗಾಗಿ ಸಮಿತಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು. ಪ್ರಕರಣ ಸಂಬಂಧ ಓರ್ವ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಲಾಗಿದೆ. …
Read More »ಸಹಕಾರ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನಡೆಯುವುದಿಲ್ಲ: ಶಾಸಕ ಲಕ್ಷ್ಮಣ
ಸಹಕಾರ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನಡೆಯುವುದಿಲ್ಲ: ಶಾಸಕ ಲಕ್ಷ್ಮಣ ಬೆಳಗಾವಿ: ಎಲ್ಲರ ಒಪ್ಪಿಗೆ, ಸಹಮತದೊಂದಿಗೆ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿ, ರಾಜು ಕಾಗೆಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ತಿಳಿಸಿದರು. ಡಿಸಿಸಿ ಬ್ಯಾಂಕಿನಲ್ಲಿ ನೂತನ ಆಡಳಿತ ಮಂಡಳಿ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ನಾವು ಬೆಂಬಲ ಮತ್ತು ಸಹಕಾರ ಕೊಡುತ್ತೇವೆ. ಸೋಲು, ಗೆಲುವಿನ ಪ್ರಶ್ನೆ …
Read More »ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಮ್ಮ ಪ್ರಮುಖ ಗುರಿ: ಡಾ.ಭೀಮಶಿ ಜಾರಕಿಹೊಳಿ
ಬೆಳಗಾವಿ: ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಮ್ಮ ಪ್ರಮುಖ ಗುರಿಯಾಗಿದ್ದು, ಅದರ ಭಾಗವಾಗಿ ಗುಂಪು ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಹೇಳಿದರು. ನಗರದ ವಾರ್ತಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-26ನೇ ಸಾಲಿನ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸಿ ಅವರು ಮಾತನಾಡಿದರು. ಪತ್ರಕರ್ತರ …
Read More »
Laxmi News 24×7