Breaking News

ರಾಜಕೀಯ

ಇಂದು ನಡೆದ ಮಹತ್ವದ ಸಂಪುಟ ಸಭೆಯ ಹೈಲೈಟ್ಸ್ …”

ಬೆಂಗಳೂರು, ಏ.9-ರಾಜ್ಯದಲ್ಲಿ ಇನ್ನು ಹದಿನೈದು ದಿನಗಳ ಕಾಲ ಲಾಕ್ಡೌನ್ ವಿಸ್ತರಣೆಗೆ ಎಲ್ಲ ಸಚಿವರು‌ ಸಲಹೆ ಮಾಡಿದ್ದು,ನಾಳೆ ಪ್ರಧಾನಿ‌ ಜೊತೆ ಚರ್ಚಿಸಿದ ಬಳಿಕ ಮುಂದಿನ‌ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏ.14ರ ನಂತರ‌ ಲಾಕ್ಡೌನ್ ವಿಸ್ತರಿಸಲು ಸಂಪುಟದ ಎಲ್ಲ ಸದಸ್ಯರು ಒತ್ತಾಯ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾಳೆ ಚರ್ಚಿಸಿದ ಬಳಿಕ‌ ತೀರ್ಮಾನಿಸಲಾಗುವುದು ಎಂದರು. ಲಾಕ್ಡೌನ್ ಸಂದರ್ಭದಲ್ಲಿ …

Read More »

ಶಂಕಿತ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ 2 ಖಾಸಗಿ ಆಸ್ಪತ್ರೆಗಳು ಬಂದ್- ಜಿಲ್ಲಾಧಿಕಾರಿ

ಕಲಬುರಗಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಭಯಾನಕ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ರಜ್ಯದಲ್ಲಿ ಸಹ 181ಕ್ಕೆ ತಲುಪಿದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕೊರೊನಾ ವೈರಸ್ ಲಕ್ಷಣಗಳಿರುವವರ ಬಗ್ಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ ಎಚ್ಚರಿಕೆ ನೀಡಿದ್ದು, ಶಂಕಿತ ಕೊರೋನಾ ರೋಗಿಗಳನ್ನು ಬಹಳ ದಿನಗಳ ಕಾಲ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ರೋಗ ಉಲ್ಬಣಿಸಿದ ಬಳಿಕ ಇಎಸ್‍ಐ ಮತ್ತು ಜಿಮ್ಸ್ …

Read More »

ಡಿಸೆಂಬರ್‌ವರೆಗೂ ಅಲರ್ಟ್ ಆಗಿರುವಂತೆ ಸಾರ್ವಜನಿಕರಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಮನವಿ

ಬೆಂಗಳೂರು: ಕೊವಿಡ್‌ 19 ವೈರಸ್‌ ಸಂಪೂರ್ಣ ನಿರ್ನಾಮ ಆಗುವವರೆಗೂ ಅಂದರೆ ಕನಿಷ್ಠ ಮುಂದಿನ 7-8 ತಿಂಗಳು ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಿಬಿಎಂಪಿಯ ಪೌರ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಮಲ್ಲೇಶ್ವರದಲ್ಲಿ ಬುಧವಾರ ಪಡಿತರ ವಿತರಣೆ ಮಾಡಿದ ಡಾ. ಅಶ್ವತ್ಥನಾರಯಣ ಅವರು, ಅಡುಗೆ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. “ಪ್ರಸ್ತುತ ಸಭೆ, …

Read More »

ಎಂಎಲ್‌ಎ, ಎಂಎಲ್‍ಸಿಗಳ ವೇತನ ಕಡಿತಕ್ಕೆ ರಾಜ್ಯ ಸರಕಾರ ಚಿಂತನೆ ….”

ಬೆಂಗಳೂರು : ಕೊರೋನಾ ತಂಡದೊಡ್ಡಿರುವ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಎಂಎಲ್‌ಎ, ಎಂಎಲ್ಸಿಗಳ ವೇತನ ಕಡಿತಕ್ಕೆ ಸರಕಾರ ಚಿಂತನೆ ನಡೆಸಿದೆ. ಪ್ರತಿಪಕ್ಷ ನಾಯಕರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ, ಎಲ್ಲಾ ಶಾಸಕರ, ಪ್ರತಿಪಕ್ಷದ ನಾಯಕರ, ಪರಿಷತ್ ಸದಸ್ಯರ ವೇತನ ಕಡಿತ ಮಾಡೋ ಬಗ್ಗೆ ಮಾತುಕತೆ‌ ನಡೆಸಿದರು. ಶೇ. …

Read More »

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಸಿಎಂ

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಲಿದ್ದಾರೆ ಸಿಎಂ ಯಡಿಯೂರಪ್ಪ, ಹೌದು, ಕೊರೋನಾ ಹೊಡೆತಕ್ಕೆ ರಾಜ್ಯ ತತ್ತರಿಸಿರುವ ಹಿನ್ನೆಲೆಯಲ್ಲಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಆಡಳಿತ ಯಂತ್ರಕ್ಕೆ ಹಿಡಿದಿರುವ ಕಿಲುಬನ್ನು ತಿಕ್ಕಿ ತೊಳೆಯಲು ಬಯಸಿರುವ ಸಿಎಂ ಇದಕ್ಕಾಗಿ ಪೂರ್ವಭಾವಿ ತಯಾರಿ ಆರಂಭಿಸಿದ್ದಾರೆ. ಆಡಳಿತ ಯಂತ್ರ ದುಬಾರಿ ವೆಚ್ಚದ್ದಾಗಿ ಪರಿಣಮಿಸಿರುವುದರಿಂದ ಮೊದಲು ತಮ್ಮ ಸಿಬ್ಬಂದಿಗಳು ಹಾಗೂ ಸಚಿವರ ಸಿಬ್ಬಂದಿಗಳ ಸಂಖ್ಯೆಗೆ ಸಿಎಂ ಕತ್ತರಿ ಹಾಕಲಿದ್ದಾರೆ. …

Read More »

ದೇಶದಲ್ಲಿ 6 ಸಾವಿರ ಗಡಿ ಸಮೀಪಿಸಿದ ಹೆಮ್ಮಾರಿ- 24 ಗಂಟೆಯಲ್ಲಿ 24 ಮಂದಿ ಸಾವು

ನವದೆಹಲಿ: ದೇಶದಲ್ಲಿ ಹೆಮ್ಮಾರಿ ಕೊರೊನಾ ಸೋಂಕಿತರ ಸಂಖ್ಯೆ 5,742 ಆಗಿದ್ದು, 174 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ದಿನ 773 ಮಂದಿಗೆ ಸೋಂಕು ದೃಢವಾಗಿದ್ದು, 24 ಗಂಟೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ 402 ದಿನ ಚೇತರಿಸಿಕೊಂಡಿದ್ದಾರೆ. ಹಾಟ್‍ಸ್ಪಾಟ್‍ಗಳ ಮೇಲೆ ನಿರಂತರವಾಗಿ ನಿಗಾವಹಿಸಿದ್ದೇವೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಒಂದು ಸಾವಿರ ಸೋಂಕಿತರ ಗಡಿ ದಾಟಿದ್ದ ಮಹಾರಾಷ್ಟ್ರದಲ್ಲಿ ಬುಧವಾರ ರಾತ್ರಿ …

Read More »

ಕರ್ನಾಟಕದ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಕನಿಷ್ಠ 2 ವಾರ ಲಾಕ್‍ಡೌನ್ ಮುಂದುವರಿಕೆ..

ಬೆಂಗಳೂರು : ಲಾಕ್ ಡೌನ್ ತೆರವುಗೊಳಿಸುವ ಸಂಬಂಧ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆದರೆ, ಕೋವಿಡ್-19 ಹಾಟ್ ಸ್ಪಾಟ್ ಗಳಲ್ಲಿ ಕನಿಷ್ಠ ಎರಡು ವಾರಗಳವರೆಗೆ ವಿಸ್ತರಿಸುವ ಕಡೆಗೆ ಒಲವು ವ್ಯಕ್ತಪಡಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಂದಿಷ್ಟು ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸುವ ಅಗತ್ಯತೆ ಬಗ್ಗೆ ಎದುರು ನೋಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ …

Read More »

ತುಮಕೂರು:ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ

ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಜನರು ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. ಮಹಾಮಾರಿಗೆ ‘ಕೊರೊನಾ ಅಮ್ಮ’ ಎಂದು ಹೆಸರಿಟ್ಟು ಪೂಜಿಸಲಾಗುತ್ತಿದೆ. ಗ್ರಾಮಗಳ ಹೊರವಲಯದಲ್ಲಿ ಎಮ್ಮೆಯ ಮುಖದ ರೀತಿಯಲ್ಲಿ ಮಣ್ಣಿನಲ್ಲಿ ಗೊಂಬೆ ತಯಾರಿಸಲಾಗಿದೆ. ಈ ಗೊಂಬೆಯನ್ನು ಕೊರೊನಾ ಅಮ್ಮನ ಪ್ರತಿರೂಪ ಎಂದು ಹೇಳ್ತಿರುವ ಜನರು ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಪೂಜೆ ಮಾಡುತ್ತಿದ್ದಾರೆ. ಈ ಹಿಂದೆ ಗ್ರಾಮಗಳಲ್ಲಿ ಪ್ಲೇಗ್ ಬಂದಾಗ ಇದೇ ರೀತಿ ಊರಿನ ಹೊರಗಿನ ಕೆರೆ, ಕಟ್ಟೆ …

Read More »

ಚಿಕ್ಕೋಡಿ: ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಮತ್ತೆ ಹಲ್ಲೆ

ಚಿಕ್ಕೋಡಿ: ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಮತ್ತೆ ಹಲ್ಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಪಟ್ಟಣದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆ ಮನೆ ಆರೋಗ್ಯ ಸರ್ವೆ ಕಾರ್ಯಕ್ಕೆ ಮುಂದಾಗಿದೆ. ಇದೇ ಕೆಲಸ ನಿಮಿತ್ತವಾಗಿ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ …

Read More »

ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ದಂಡ

ಬೆಂಗಳೂರು: ಲಾಕ್‍ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದ ಮನೋವೈದ್ಯರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ. ಕೊರೊನಾ ವೈರಸ್ ಹಾವಳಿ ತಡೆಗಟ್ಟುವ ಸಂಬಂಧ ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು ಎಲ್ಲ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಕರ್ನಾಟಕದಲ್ಲೂ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಖ್ಯಾತ ಮನೋವೈದ್ಯ ವಿನೋದ್ ಕುಲಕರ್ಣಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪಿಐಎಲ್ ಸಲ್ಲಿಸಿದ್ದರು. …

Read More »