ಬೆಳಗಾವಿ – ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೊಸ ಡಿಸಿಪಿಯಾಗಿ ಡಾ. ವಿಕ್ರಮ ಅಮಟೆ ಅಧಿಕಾರ ಸ್ವೀಕಾರಿಸಿದರು. ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಸೀಮಾ ಲಾಟ್ಕರ್ ವರ್ಗಾವಣೆಯಾಗಿದ್ದರಿಂದ ಅವರ ಸ್ಥಾನಕ್ಕೆ ಡಾ. ವಿಕ್ರಮ ಅಮಟೆ ಅವರನ್ನು ನೇಮಿಸಲಾಗಿದೆ. ಡಾ. ವಿಕ್ರಮ ಅಮಟೆ ಇಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರಭಾರ ವಹಿಸಿಕೊಂಡಿದ್ದಾರೆ.
Read More »ಕನ್ನಡ ಭಾಷೆಯೇ ನಮಗೆ ಬಹುಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಗೋಕಾಕ: ಹಿಂದಿ, ಇಂಗ್ಲೀಷ ನಂತರ ಮೊದಲು ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು, ಕನ್ನಡ ಭಾಷೆಯೇ ನಮಗೆ ಬಹುಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದ ಹಿಲ್ ಗಾರ್ಡನ್ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ದೇಶ್ಯಾದ್ಯಂತ ಹಿಂದಿ ಹೇರಿಕೆಗೆ ನಡೆದಿತ್ತು. ಹಲವು ರಾಜ್ಯಗಳು ಇದನ್ನು ಖಂಡಿಸಿದ್ದವು. ಮೊದಲು ಪ್ರಾದೇಶಿಕ ಭಾಷೆಗೆ ಒತ್ತು ನೀಡಬೇಕು. ಇಲ್ಲಿಯವರೆಗೂ ಕನ್ನಡ …
Read More »ಆರೆಸ್ಸೆಸ್ ರೀತಿಯ ತರಬೇತಿ: ನಮ್ಮ ಶತ್ರುವಿಗೂ ನೀಡೆವು: ಬಿ. ಕೆ. ಹರಿಪ್ರಸಾದ
ಬೆಳಗಾವಿ: ಆರೆಸ್ಸೆಸ್ ರೀತಿ ಯಲ್ಲಿ ನಮ್ಮ ಶತ್ರುಗಳಿಗೂ ತರಬೇತಿ ನೀಡುವುದಿಲ್ಲ. ಆರೆಸ್ಸೆಸ್‌ಗೂ ಕಾಂಗ್ರೆಸ್ ತರಬೇತಿ ಶಿಬಿರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರು ಸ್ಪಷ್ಟಪಡಿಸಿದರು. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ರೀತಿಯ ಸಂಘಟನೆ ಕಾಂಗ್ರೆಸ್‌ಗೆ ಅಗತ್ಯವಿಲ್ಲ. ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಘಟಪ್ರಭಾದಲ್ಲಿ ನಾ.ಸು. ಹರ್ಡೀಕರ ಸಮಾಧಿ ಸ್ಥಳದಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು, …
Read More »ರೈತರಿಗೆ ತೊಂದರೆಯಾದರೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಬಿ.ಸಿ ಪಾಟೀಲ
ಬೆಳಗಾವಿ: ನಗರಕ್ಕೆ ಸೋಮವಾರ ಆಗಮಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಪರವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಾರ್ಯಕರ್ತರು ಪಕ್ಷದ ಆಸ್ತಿ ಹಾಗೂ ರೈತರು ದೇಶದ ಬೆನ್ನೆಲುಬು ನಿಮ್ಮೆಲ್ಲರ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ ಎಂದು ಹೇಳಿದರು. ರೈತರ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಏನಾದರೂ ತೊಂದರೆ ಇದ್ದರೆ ನಮಗೆ ತಿಳಿಸಿದರೆ ಅದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ …
Read More »ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್ ಫಿದಾ!
ಬೆಳಗಾವಿ: ಮದುವೆಗೆ ತೆರಳುವ ಬದಲು ಮನೆಯೊಂದರಲ್ಲಿ ಸಿಲುಕಿದ್ದ ನಾಗರಹಾವನ್ನು ಉರಗ ತಜ್ಞೆ ನಿರ್ಜರಾ ಚಿಟ್ಟಿ ಬರಿಗೈಯಲ್ಲೇ ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿರ್ಜರಾ ಹಾಗೂ ಆಕೆಯ ಪತಿ ಆನಂದ್ ಮೂಲತಃ ವನ್ಯಜೀವಿ ತಜ್ಞರು. ಬೆಳಗಾವಿ ನಿವಾಸಿಗಳಾದ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಿನ್ನೆ ಸಜ್ಜಾಗುತ್ತಿದ್ದರಂತೆ. ಈ ನಡುವೆ ದಂಪತಿಗೆ ನಮ್ಮ ಮನೆಯಲ್ಲಿ ನಾಗರಹಾವು ಒಂದು ಸಿಲುಕಿಕೊಂಡಿದೆ. ದಯವಿಟ್ಟು ಬಂದು ಅದನ್ನು ಅಲ್ಲಿಂದ ಹೊರೆತೆಗೆಯಿರಿ ಅಂತಾ …
Read More »ಸವದತ್ತಿ: ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ
ಸವದತ್ತಿ: ರುದ್ರಭೂಮಿಗೆ ಹೋಗಲು ಸಮರ್ಪಕ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ತಾಲ್ಲೂಕಿನ ಕೆಂಚಲಾರಕೊಪ್ಪ ಗ್ರಾಮಸ್ಥರು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಭಾನುವಾರ ಪ್ರತಿಭಟನೆ ನಡೆಸಿದರು. ‘ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಗೆ ಹಾಗೂ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾರೂ ಇತ್ತ ಗಮನಹರಿಸುತ್ತಿಲ್ಲ. ಗ್ರಾಮದಲ್ಲಿ ಯಾರಾದರೂ ಮೃತರಾದರೆ ಸಂಸ್ಕಾರ ನಡೆಸಲು ರುದ್ರಭೂಮಿಗೆ ತೆರಳುವುದಕ್ಕೆ ಸರಿಯಾದ ರಸ್ತೆ ಇಲ್ಲ. ಇದರಿಂದ ಬಹಳ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ …
Read More »ಯೋಧನ ಬಳಿ ಎಕೆ 47ನ ಜೀವಂತ ಗುಂಡು ಪತ್ತೆ
ಬೆಳಗಾವಿ : ಜೀವಂತ ಗುಂಡು ಸಮೇತ ಪ್ರಯಾಣಿಸುತ್ತಿದ್ದ ಯೋಧನೊಬ್ಬನನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಸಂಕೇಶ್ವರದ ಹನುಮಾನ ನಗರದ ಸುಬೇದಾರ್ ಅರುಣ ಮಾರುತಿ ಭೋಸಲೆ ಕಳೆದೊಂದು ತಿಂಗಳ ಹಿಂದೆ ರಜೆ ಮೇಲೆ ಬಂದು ಮರಳಿ ಕರ್ತವ್ಯಕ್ಕೆಂದು ಕಾಶ್ಮೀರಕ್ಕೆ ಹೋಗಲು ಬೆಳಗಾವಿ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಎಕೆ …
Read More »ಎಸಿಪಿ ನಾರಾಯಣ ಭರಮಣಿ ಅವರನ್ನು ಮತ್ತೆ ಬೆಳಗಾವಿಗೆ ವರ್ಗಾವಣೆ
ಬೆಳಗಾವಿ: ಖಾನಾಪುರ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಯಾಗಿದ್ದ ಎಸಿಪಿ ನಾರಾಯಣ ಭರಮಣಿ ಅವರನ್ನು ಮತ್ತೆ ಬೆಳಗಾವಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಅಪರಾಧ ವಿಭಾಗದ ಎಸಿಪಿ ಯಾಗಿ ನಾಯರಣ ಭರಮನಿ ಅವರನ್ನು ನೇಮಿಸಲಾಗಿದೆ. ಅಪರಾಧ ವಿಭಾಗದಲ್ಲಿ ಮಾಹಾಂತೇಶ ಜಿದ್ದಿ ಅವರನ್ನು ಖಾನಾಪುರ ಪೊಲೀಸ್ ತರಬೇತಿಗೆ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.
Read More »ಬೆಳಗಾವಿ ಜಿಟಿಟಿಸಿಗೆ ‘ಉತ್ಕೃಷ್ಟ ಕೇಂದ್ರ’ ಸ್ಥಾನ
ಬೆಳಗಾವಿ: ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಗೆ ಉತ್ಕೃಷ್ಟ ಕೇಂದ್ರದ ಸ್ಥಾನಮಾನ ದೊರೆತಿದೆ. ’25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಶೇ 100ರಷ್ಟು ಉದ್ಯೋಗ ದೊರೆಯುವಂತಹ ಕೌಶಲ ಆಧಾರಿತ ಕೋರ್ಸ್‌ಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಇದನ್ನು ಆಧರಿಸಿ ಸ್ಥಾನಮಾನ ದೊರೆತಿದೆ’ ಎಂದು ಪ್ರಕಟಣೆ ತಿಳಿಸಿದೆ. ‘ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸಜ್ಜುಗೊಳಿಸುವ ಉದ್ದೇಶ ಕೇಂದ್ರದ್ದಾಗಿದೆ. ಉತ್ಕೃಷ್ಟ ಕೇಂದ್ರದ ಸ್ಥಾನಮಾನದಿಂದ …
Read More »ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕು:ಸತೀಶ ಜಾರಕಿಹೊಳಿ
ಧಾರವಾಡ: ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕುಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಡ್ರಗ್ಸ್ ವಿಚಾರವಾಗಿ ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ತನಿಖೆ ಬೇಗ ಬೇಗ ಮಾಡಬೇಕಿತ್ತು.ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ . ಇನ್ನೂ ಕಾಲ ಮೀರಿಲ್ಲ. ರಾಜ್ಯಾದ್ಯಂತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು. ಎಐಸಿಸಿ ಕಾರ್ಯಕಾರಿ ಸಮಿತಿ ಬದಲಾವಣೆ ವಿಚಾರ ಮಾತನಾಡಿ, ಕೆಲಸ ಮಾಡುವ …
Read More »