ಬೆಳಗಾವಿ: ‘ಏಣಗಿ ಬಾಳಪ್ಪ ಸ್ಮಾರಕ ಟ್ರಸ್ಟ್ ಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಸಾಹಿತಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ‘ನಗರದ ಟಿಳಕವಾಡಿಯಲ್ಲಿ ಪುನರ್ ನಿರ್ಮಾಣವಾಗುತ್ತಿರುವ ಕಲಾಮಂದಿರಕ್ಕೆ ಏಣಗಿ ಬಾಳಪ್ಪ ಅವರ ಹೆಸರು ನಾಮಕರಣ ಮಾಡಬೇಕು. ಪ್ರಮುಖ ರಸ್ತೆಗೆ ಅವರ ಹೆಸರಿಡಬೇಕು’ ಎಂದು ಕೋರಿದರು. ‘ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವ ಕಾರಣ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ, ಶಾಸಕರು ಮತ್ತು ಸಂಸದರ ನಿಧಿಯಿಂದ ವಂತಿಗೆ ಸಂಗ್ರಹಿಸಿ ನಾಟಕ …
Read More »ನಾನು ನನ್ನ ಪತ್ನಿಗೆ ಯಾವುದೇ ರೀತಿಯ ಮಾನಸಿಕ ಕಿರುಕುಳ ನೀಡಿಲ್ಲ : ಕಲ್ಯಾಣ್
ಬೆಳಗಾವಿ: ನಾನು ನನ್ನ ಪತ್ನಿಗೆ ಯಾವುದೇ ರೀತಿಯ ಮಾನಸಿಕ ಕಿರುಕುಳ ನೀಡಿಲ್ಲ. ಈಗ ಅವರು ನನ್ನ ಮೇಲೆ ಏಕಾಏಕಿ ಆರೋಪ ಮಾಡಿ ವಿಚ್ಛೇದನ ಕೇಳುತ್ತಿದ್ದಾರೆ ಎಂದರೆ ಅವರು ಯಾರದೋ ಒತ್ತಡಕ್ಕೆ ಸಿಲುಕಿ ಹೀಗೆ ಹೇಳುತ್ತಿದ್ದಾರೆ ಎಂದು ಚಿತ್ರ ಸಾಹಿತಿ ಕೆ.ಕಲ್ಯಾಣ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಕಲ್ಯಾಣ್, ನನ್ನ ಹಾಗೂ ನನ್ನ ಪತ್ನಿಯ ನಡುವೆ ಯಾವುದೇ ಗೊಂದಲಗಳಿಲ್ಲ. ನಾವಿಬ್ಬರು ಚೆನ್ನಾಗೇ ಇದ್ದೆವು. ಮನೆ ಕೆಲಸಕ್ಕೆ ಎಂದು ಬಂದ ಗಂಗಾ ಕುಲ್ಕರ್ಣಿಯಿಂದ ನಮ್ಮ …
Read More »ಸರ್ಕಾರದಿಂದ ಮೊದಲ ಹಂತದ ಪರಿಹಾರ ವಿತರಣೆ ಕಾರ್ಯ ಇನ್ನೂ ಆರಂಭವಾಗಿಲ್ಲ.
ಬೆಳಗಾವಿ: ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರದಿಂದ ಮೊದಲ ಹಂತದ ಪರಿಹಾರ ವಿತರಣೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಹೋದ ವರ್ಷದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನೆರೆ ಮತ್ತು ಅತಿವೃಷ್ಟಿ ಆಗಿತ್ತು. ಈ ಬಾರಿಯೂ ಜಿಲ್ಲೆಯು ‘ನೆರೆಪೀಡಿತ’ ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ. ನೂರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಕೃಷಿಕರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ನೆರೆಯು ಗಾಯದ ಮೇಲೆ ‘ಬರೆ’ ಎಳೆದಿದ್ದು, ಜನರು ಪರಿಹಾರದ ‘ಮುಲಾಮಿಗಾಗಿ’ ಕಾಯುತ್ತಿದ್ದಾರೆ. …
Read More »ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿ……
ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವರಶೀಗಿಹಳ್ಳಿ ಹೊರವಲಯದಲ್ಲಿ ಹುಲ್ಲಿನ ಹೊರೆ ಹೊತ್ತು ಹೋಗುತ್ತಿದ್ದ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪದ ಮೇಲೆ ಮೂವರನ್ನು ಕಿತ್ತೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದೇವರಶೀಗಿಹಳ್ಳಿ ಗ್ರಾಮದ ನಾಗೇಶ ದೊಡಮನಿ, ವಿಜಯ ಮದನಬಾವಿ ಮತ್ತು ಚೇತನ ಹಿರೇಮಠ ಬಂಧಿತರು. ಅವರಿಂದ, ಕಳವು ಮಾಡಿದ್ದ ₹ 1.40 ಲಕ್ಷ ಮೌಲ್ಯದ 35 ಗ್ರಾಂ. ತೂಕದ ಚಿನ್ನದ ಸರ, ದ್ವಿಚಕ್ರ ವಾಹನ, ₹ 10 ಸಾವಿರ, …
Read More »ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 33,974 ವಿದ್ಯಾರ್ಥಿಗಳು ಪದವಿ
ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) 8ನೇ ಘಟಿಕೋತ್ಸವ ಅ. 5ರಂದು ಬೆಳಿಗ್ಗೆ 11.30ಕ್ಕೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು. ‘ರಾಜ್ಯಪಾಲ ವಿ.ಆರ್. ವಾಲಾ ಅಧ್ಯಕ್ಷತೆ ವಹಿಸುವರು. ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅತಿಥಿಯಾಗಿ ಭಾಗವಹಿಸುವರು. ಬೆಂಗಳೂರಿನ ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪಾರ್ವತಿಗೆ …
Read More »ಕಲ್ಯಾಣ್ ದೈಹಿಕ ಹಿಂಸೆ ನೀಡ್ತಿದ್ದಾರೆ, ನನಗೆ ವಿಚ್ಛೇದನ ಬೇಕು: ಕೋರ್ಟ್ ಮೊರೆಹೋದ ಪ್ರೇಮಕವಿ ಪತ್ನಿ
ಬೆಳಗಾವಿ: ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಚಿತ್ರಸಾಹಿತಿ ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅಶ್ವಿನಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಿಡ್ನ್ಯಾಪ್ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀದೇವಿ ಪಾಟೀಲ್‌ರಿಂದ ವಿಚಾರಣೆ ನಡೆಸಲಾಗುತ್ತಿದ್ದು ಇನ್ನೊಂದು ಕೊಠಡಿಯಲ್ಲಿ ಅಶ್ವಿನಿ ತಂದೆ ಶಿವಾನಂದ ವಾಲಿ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಕೆ.ಕಲ್ಯಾಣ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. …
Read More »ಆಸ್ತಿಗೋಸ್ಕರ K ಕಲ್ಯಾಣ್ ನನ್ನನ್ನು ಮದುವೆ ಆಗಿದ್ದಾರೆ -ಪ್ರೇಮಕವಿ ವಿರುದ್ಧ ಪತ್ನಿ ಪ್ರತಿದೂರು
ಬೆಳಗಾವಿ: ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಇದೀಗ, ಪ್ರಕರಣ ತಿರುವು ಪಡೆದುಕೊಂಡಿದೆ. ಹೌದು, ಇದೀಗ ಪ್ರೇಮಕವಿ ಹಾಗೂ ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಕಲ್ಯಾಣ್ ಮತ್ತು ನನ್ನ ನಡುವೆ ವೈಮನಸ್ಸು ಉಂಟಾಗಿದೆ. ಕಲ್ಯಾಣ್ ಆಸ್ತಿ ವಿಚಾರಕ್ಕೆ ನನ್ನನ್ನ ಮದುವೆ ಆಗಿದ್ದಾರೆ ಅಂತ ಅಶ್ವಿನಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. …
Read More »ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ಸಿಬಿಐ ವಹಿಸಿ: ಅಥಣಿ ವಾಲ್ಮೀಕಿ ಸಮುದಾಯ ಮನವಿ.
ಅಥಣಿ: ಉತ್ತರ ಪ್ರದೇಶ ರಾಜ್ಯದಲ್ಲಿ ಕುಮಾರಿ ಮನೀಷಾ ವಾಲ್ಮೀಕಿ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಷ್ಟ್ರಪತಿ ಅವರಿಗೇ ಅಥಣಿ ವಾಲ್ಮೀಕಿ ಸಮುದಾಯದಿಂದ ಮನವಿ ಪತ್ರ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಭೀಮಗೌಡ ಪರಮಗೌಡರ್ ಮಾತನಾಡಿ, ಮನೀಷಾ ಹಿಂದುಳಿದ ವರ್ಗಗಳ ಸಮುದಾಯದಿಂದ ಬಂದಿದ್ದರಿಂದ ತನಿಖೆ ಇದುವರೆವಿಗೂ ವೇಗ ಪಡಿಕೊಂಡಿಲ್ಲ, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ದೇಶದ ತುಂಬೆಲ್ಲ ವಾಲ್ಮೀಕಿ …
Read More »ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ.
ಗೋಕಾಕ್: ನಗರದಲ್ಲಿ ರಾಜಸ್ತಾನ ವ್ಯಾಪಾರಿಗಳ ಕಳಪೆ ಗುಣಮಟ್ಟದ ವಸ್ತುಗಳ ಕಡಿಮೆ ಬೆಲೆ ಮಾರಾಟದಿಂದ ಸ್ಥಳೀಯ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ರಾಜಸ್ತಾನ ಹಠಾವೋ..ಗೋಕಾಕ್ ಬಚಾವೋ ಎಂಬ ಅಭಿಯಾನದ ಮೂಲಕ ವ್ಯಾಪಾರಸ್ಥ ಸಂಘದಿಂದ ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ. ಗೋಕಾಕ್ ನಗರದಲ್ಲಿ ರಾಜಸ್ತಾನಿ ವ್ಯಾಪಾರಿಗಳು ಕಳಪೆ ಗುಣಮಟ್ಟದ ವಸ್ತು, ಸಾಮಗ್ರಿಗಳನ್ನು ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ವ್ಯಾಪಾರಸ್ಥರು ತೊಂದರೆಯಾಗಿದೆ. ವ್ಯಾಪಾರದಲ್ಲಿ ಮೊದಲೇ ನಷ್ಟ …
Read More »ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರಿಂದ ನಾಡಿನ ಜನತೆಗೆ ಕ್ಷಮೆಯಾಚನೆ
ಬೆಂಗಳೂರು :ಈ ಮೂಲಕ ತಮ್ಮೆಲ್ಲರಲ್ಲಿ ಹಂಚಿಕೊಂಡಿರುವುದು ಏನೆಂದರೆ ಈ ವಿಶ್ವದಲ್ಲಿ ಮಹಾಮಾರಿಯಾಗಿ ಜನಜೀವನಕ್ಕೆ ಹಾಗೂ ಜೀವಕ್ಕೆ ಕಂಟಕ ತಂದಿರುವ ಕೋರೋಣ ವೈರಸ್ ಸಮಯದಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿರುವುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯ ಅಥವಾ ತಿಳಿಯಪಡಿಸುತ್ತೇನೆ. ನಮ್ಮ ಮುಷ್ಕರದಿಂದ ರಾಜ್ಯದ ಜನತೆಗೆ ಸಿಗಬೇಕಾದಂತಹ ಆರೋಗ್ಯ ಸೌಲಭ್ಯಗಳು ಸಿಗದಿರುವುದರಿಂದ ಈ ರಾಜ್ಯದ ಎಲ್ಲಾ ಜನಸಾಮಾನ್ಯರಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ಹೊರಗುತ್ತಿಗೆ …
Read More »