Breaking News

ಬೆಳಗಾವಿ

ಏಣಗಿ ಬಾಳಪ್ಪ ಕುರಿತ ಕೃತಿ ಮೇ 22ರಂದು ಬಿಡುಗಡೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ, ರಂಗ ಸಂಪದ ಹಾಗೂ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯ 8ನೇ ಮುದ್ರಣದ ಬಿಡುಗಡೆ ಸಮಾರಂಭವನ್ನು ಇಲ್ಲಿನ ರಾಣಿ ಚನ್ನಮ್ಮ ವೃತ್ತ ಸಮೀಪದ ಕನ್ನಡ ಸಾಹಿತ್ಯ ಭವನದಲ್ಲಿ ಮೇ 22ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್‌ ಬಿಡುಗಡೆ ಮಾಡಲಿದ್ದಾರೆ. …

Read More »

ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ.

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿನ ಕೃಷಿ ಜಮೀನುಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ. ಓದು-ಬರಹ ಬಾರದ ತಂದೆ-ತಾಯಿಗೆ ಹೆಮ್ಮೆಯ ಭಾವ ನೀಡಿದ್ದಾರೆ. ಪತ್ರಾಸಿನ ಮನೆ, ಮನೆಯ ಅಂಗಳದಲ್ಲಿ ಜಾನವಾರು, ನಿತ್ಯ ಹೊಲದ ಕೆಲಸ ಮತ್ತು ಕೂಲಿ ಮಾಡಿಕೊಂಡೆ ಬದುಕಿನ ಬಂಡಿ ಜಗ್ಗುವ ಅವಿಭಕ್ತ ಕುಂಟುಂಬವಿದು. ಕೊರತೆಗಳ ನೆಪವನ್ನು ಬದಿಗಿಟ್ಟು ಸಾಧನೆ ತೋರಿದ್ದಾರೆ. ಗ್ರಾಮದ ಅಂಬೇಡ್ಕರ್ …

Read More »

ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸತ್ತಿಗೇರಿಯ ಸಹನಾ ಕನ್ನಡದಲ್ಲಿ ಟಾಪರ್

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಕಟವಾಗಿದ್ದು, ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ, ಕನ್ನಡ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.   ಸಂತಸ ಹಂಚಿಕೊಂಡ ಅವರು, ‘ಕೋವಿಡ್‌-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್‌ಲೈನ್‌ ತರಗತಿಗೆ ಹಾಜರಾಗಲು ನೆಟ್‌ವರ್ಕ್‌ ಸಮಸ್ಯೆಯೂ ಕಾಡುತ್ತಲಿತ್ತು. ಆದರೂ, ಸಮಸ್ಯೆಗೆ ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ಶಿಕ್ಷಕರು ಮತ್ತು ಹೆತ್ತವರು ಪ್ರೋತ್ಸಾಹಿಸಿದರು. …

Read More »

ವಿಧಾನಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ

ಬೆಳಗಾವಿ: ಕರ್ನಾಟಕ ವಾಯವ್ಯ ಪಧವೀಧರು ಮತ್ತು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನಪರಿಷತ್ತಿಗೆ ತಲಾ ಒಬ್ಬ ಸದಸ್ಯರನ್ನು ಚುನಾಯಿಸಲು ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಯಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.   ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಕಚೇರಿ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮೇ 26ರೊಳಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಸಲ್ಲಿಸಬಹುದು ಎಂದು ತಿಳಿಸಲಾಗಿದೆ. …

Read More »

ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರ

ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತÀವಾಗಿ ಎಚ್‍ಇಆರ್‍ಎಫ್ ರಕ್ಷಣಾ ತಂಡ ಬೆಳಗಾವಿ ವತಿಯಿಂದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತÀವಾಗಿ ಕೊನೆಯ ದಿನ ಎಚ್‍ಇಆರ್‍ಎಫ್ ರಕ್ಷಣಾ ತಂಡ ಬೆಳಗಾವಿ ವತಿಯಿಂದ ಮಕ್ಕಳಿಗೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಕ್ಷಣಾ ತಂತ್ರಗಳನ್ನು ಕುರಿತಂತೆ ಎಚ್‍ಇಆರ್‍ಎಫ್ ರಕ್ಷಣಾ ತಂಡ ಸಿಬ್ಬಂದಿ ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ಈ ವೇಳೆ ಮಕ್ಕಳಿಗೆ …

Read More »

ಚಿಂಚಲಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಸಾರ್ವಜನಿಕ ಬಳಿ ಲಂಚಕ್ಕೆ ಬೇಡಿಕೆಇಟ್ಟು ಹಣ ಪೀಕುತ್ತಿದ್ದ ಲಂಚಬಾಕ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.ಹೌದು ರಾಯಬಾಗ್ ತಾಲೂಕಿನ ಚಿಂಚಲಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಜಗದೀಶ್ ಕಿತ್ತೂರ ಎಂಬವ ಸಾರ್ವಜನಿಕವಾಗಿ ಕೆಲಸಮಾಡುತ್ತಿದ್ದ ವೇಳೆ ಜನರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ದಿನಾಂಕ: 18.05.2022 ರಂದು ಗ್ರಾಮ ಲೆಕ್ಕಾಧಿಕಾರಿ ಲಂಚ ಕೇಳುತ್ತಿದ್ದಾರೆ ಎಂದು ಗಣಕೋಡಿಯ ಸಚೀನ್ ಶಾಂತಿನಾಥ ಶಿಂಧೆ ಎಸಿಬಿಗೆ …

Read More »

ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಬರೆದ ಸಂವಿಧಾನದಷ್ಟೇ ವಿಶ್ವ ಗುರು ಬಸವಣ್ಣವರ ವಚನಗಳು ಹರಿತವಾಗಿವೆ: ಸತೀಶ್ ಜಾರಕಿಹೊಳಿ

ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಬರೆದ ಸಂವಿಧಾನದಷ್ಟೇ ವಿಶ್ವ ಗುರು ಬಸವಣ್ಣವರ ವಚನಗಳು ಹರಿತವಾಗಿವೆ. ಆದಕಾರಣ ಬುದ್ದ, ಬಸವಣ್ಣ, ಡಾ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಪ್ರತಿಮೆಯ ಸ್ವರ್ಣ ಮಹೋತ್ಸವ ಹಾಗೂ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ಯ್ರ ಸಿಕ್ಕು 60 ವರ್ಷಗಳ ಅವಧಿಯಲ್ಲಿ ಡಾ. …

Read More »

ಗೋಕಾಕನಲ್ಲಿ ಸ್ವಂತ ತಮ್ಮನ ಹೆಣ ಉರುಳಿಸಿದ ಪಾಪಿ ಅಣ್ಣ

ಬೆಳಗಾವಿ: ಒಡ ಹುಟ್ಟಿದ ತಮ್ಮನ ಏಳಿಗೆಯನ್ನೇ ಸಹಿಸದ ಸಹೋದರನೊಬ್ಬ ತಮ್ಮನ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗೋಕಾಕ್​ ತಾಲೂಕಿನ ಶಿಂಗಳಾಪುರ ಗ್ರಾಮದಲ್ಲಿ ‌ನಡೆದಿದೆ. ಜಿಲ್ಲೆಯ ಗೋಕಾಕ್​ ತಾಲೂಕಿನ ಶಿಂಗಳಾಪುರ ಗ್ರಾಮದ ಮಾಳಪ್ಪ ಭೀಮಪ್ಪ ಚಳಾಯಿ (33)ಕೊಲೆಯಾದ ವ್ಯಕ್ತಿ. ಆತನ ಸಹೋದರನಾದ ವಾಶಪ್ಪ ಭೀಮಪ್ಪ ಚಳಾಯಿ ಕೊಲೆ ಮಾಡಿದ ಆರೋಪಿ.‌ ತಮ್ಮ ಜಮೀನಿನಲ್ಲಿ ದುಡಿದು ಶ್ರೀಮಂತನಾಗುತ್ತಿರುವುದನ್ನು ಕಂಡು ಹೊಟ್ಟೆ ಕಿಚ್ಚಿನಿಂದ ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ ಎಂದು …

Read More »

ಬಿಜೆಪಿ ನಿದ್ದೆ ಕೆಡಿಸಿದ ಶರದ್ ಪವಾರ್-ಎಂಇಎಸ್ ನಾಯಕರ ಭೇಟಿ

ಬೆಳಗಾವಿ: ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬೆಳಗಾವಿ ಗಡಿ ಪ್ರದೇಶದಲ್ಲಿರುವ 7 ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಸಂಖ್ಯಾತ ಮರಾಠಿ ಮತದಾರರ ಮೇಲೆ ಹಿಡಿತ ಸಾಧಿಸಿ ಯಶಸ್ವಿಯಾಗಿದ್ದ ಬಿಜೆಪಿಗೆ ಇದೀಗ ಶರದ್ ಪವಾರ್-ಎಂಇಎಸ್ ನಾಯಕರ ಭೇಟಿ ಚಿಂತೆಗೀಡಾಗುವಂತೆ ಮಾಡಿದೆ.   2023ರ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದ್ದು, ಅಥಣಿ, ನಿಪಾಣಿ, ಕಾಗವಾಡ, ಖಾನಾಪುರ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಉತ್ತರ — ಅಂತರರಾಜ್ಯ ಗಡಿ ಭಾಗದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ …

Read More »

ಜಾತ್ರೆಗಳು ನಮ್ಮ ಭವ್ಯ ಪರಂಪರೆಯನ್ನು ಬಿಂಬಿಸುತ್ತವೆ- ಶಾಸಕ ಬಾಲಚಂದ್ರ ಜಾರಕಿಹೊಳಿ.

ರಾಜಾಪೂರ- ಗ್ರಾಮ ದೇವತೆ ಜಾತ್ರೆಗೆ ಚಾಲನೆ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.     ಮೂಡಲಗಿ- ಜಾತ್ರಾ ಉತ್ಸವಗಳು ನಮ್ಮ ಭಾರತೀಯ ಪರಂಪರೆ, ಇತಿಹಾಸ ವನ್ನು ಬಿಂಬಿಸುತ್ರಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ ಹಾಗೂ ಚೂನಮ್ಮದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೊತೆಗೆ ಜಾತ್ರೆಗಳು ನಮ್ಮ ಸಾಂಸ್ಕೃತಿಕ ರಾಯಭಾರಿಯಾಗಿವೆ ಎಂದು ಅವರು ತಿಳಿಸಿದರು. …

Read More »