ಬೆಳಗಾವಿ : ಶಾಲಾ ಬಸ್ ಮತ್ತು ಕ್ಯಾಂಟರ್ ನಡುವೆ ಢಿಕ್ಕಿ ಸಂಭವಿಸಿ ಎರಡೂ ವಾಹನಗಳ ಚಾಲಕರು ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಶಾಲಾ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪೊಲೀಸರು ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲು ನೆರವಾದರು. ಅಥಣಿ …
Read More »ಆನ್ ಲೈನ್‌ನಲ್ಲಿ ಸುಲಭವಾಗಿ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿ
ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆದಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು ಕೂಡಲೇ ಎಲ್ಲಾ ಮತದಾರರು ಮತದಾರರ ಗುರುತಿನ ಚೀಟಿಗೆ ಆಧಾರ್‌ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಕೋರಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆದಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು …
Read More »ಯಮಕನಮರ್ಡಿ ಕ್ಷೇತ್ರದಲ್ಲಿ ನಮ್ಮವರೇ ನನ್ನ ವಿರುದ್ಧ ಹಣ ಹಂಚಿದ್ದರಿಂದ ಲೀಡ ಕಡಿಮೆ: ಸತೀಶ್ ಜಾರಕಿಹೊಳಿ
ಯಮಕನಮರ್ಡಿ ಕ್ಷೇತ್ರದಲ್ಲಿ ನಮ್ಮವರೇ ನನ್ನ ವಿರುದ್ಧ ಹಣ ಹಂಚಿದ್ದರಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಲು ಕಾರಣವಾಯಿತು. ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದು ಸಧ್ಯ ಸತೀಶ್ ಜಾರಕಿಹೊಳಿ ವಿರುದ್ಧ ಹಣ ಹಂಚಿದ ಕಾಂಗ್ರೆಸ್ ನಾಯಕರು ಯಾರು ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲೀಗ ಪ್ರಾರಂಭವಾಗಿದೆ. ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿರವರು, ಇದೇ ವೇಳೆ ಕಳೆದ ಬಾರಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಗೆಲುವಿನ ಅಂತರ ಕಡಿಮೆಯಾದ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ …
Read More »ಮಹಿಳೆಯರು ಮತ್ತಷ್ಟು ಸಾಧನೆ ಮಾಡಬೇಕಿದೆ”: ಯುವ ನಾಯಕ ರಾಹುಲ ಜಾರಕಿಹೊಳಿ
ಯಾವುದೇ ದೇಶದ ಏಳಿಗೆ ಆ ದೇಶದ ಮಹಿಳೆಯರ ಪ್ರಗತಿಯನ್ನು ಅವಲಂಬಿಸಿದೆ. ಹೀಗಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆಯರು ಮತ್ತಷ್ಟು ಸಾಧನೆ ಮಾಡಬೇಕಿದೆ” ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಅಭಿಪ್ರಾಯ ಪಟ್ಟರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳಗಾವಿ ವಲಯದ ಕಾಕತಿ, ಗೌಂಡವಾಡ, ಮುತ್ಯಾನ ಹಟ್ಟಿ ಗ್ರಾಮದ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗೌಡವಾಡದ ಮೋನಿಕ ಸಮುದಾಯ ಭವನದಲ್ಲಿ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ, …
Read More »ಬೆಳಗಾವಿಯ ಐಟಿಬಿಪಿ ಶಿಬಿರದಲ್ಲಿ 2 ಎಕೆ-47 ರೈಫಲ್‍ಗಳು ನಾಪತ್ತೆ:
ಚೀನಾ ಗಡಿ ಕಾವಲು ಜವಾಬ್ದಾರಿ ಹೊತ್ತಿರುವ ಐಟಿಬಿಪಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರಿಗೆ ಸೇರಿದ ಎರಡು ಎಕೆ-47 ರೈಫಲ್‍ಗಳು ಕಳುವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಬಂದಿರುವ ಐಟಿಬಿಪಿ 45ನೇ ಬಟಾಲಿಯನ್ ಯೋಧರಾದ ರಾಜೇಶ್‍ಕುಮಾರ್, ಸಂದೀಪ್ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್‍ಗಳು ಕಳುವಾಗಿವೆ. ಆಗಸ್ಟ್ 17ರಂದು ರಾತ್ರಿ ಮಲಗುವಾಗ ರೈಫಲ್‍ಗಳನ್ನು ವಾಡಿಕೆಯಂತೆ ಭದ್ರತೆಯಲ್ಲಿಯೇ ಇರಿಸಲಾಗಿತ್ತು. …
Read More »ಬೆಳಗಾವಿಯಲ್ಲಿ ಚಿರತೆಗಾಗಿ ಅರಣ್ಯ-ಪೊಲೀಸ್ ಇಲಾಖೆ ಬೃಹತ್ ಕಾರ್ಯಾಚರಣೆ
ಕಳೆದ 15 ದಿನಗಳಿಂದ ಬೆಳಗಾವಿ ನಗರದಲ್ಲಿ ಭೀತಿ ಹುಟ್ಟಿಸಿರುವ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆಯ ಮತ್ತಷ್ಟು ಚುರುಕುಗೊಂಡಿದ್ದು. ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿದೆ. ಹೌದು ಆಗಸ್ಟ್ 5ರಂದು ಬೆಳಗಾವಿಯ ಗಾಲ್ಫ್ ಮೈದಾನಕ್ಕೆ ಹೊಂದಿಕೊಂಡಿರುವ ಬೆಳಗಾವಿ ಕ್ಲಬ್ ಆವರಣದಲ್ಲಿ ಜಮಾಯಿಸಿದ ಅರಣ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಫೋರ್ಸ ಸಿಬ್ಬಂದಿಗಳಿಗೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಪತ್ತೆಯ …
Read More »ಅನೈತಿಕ ಸಂಬಂಧ: ಸವದತ್ತಿಯಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ
ಸವದತ್ತಿ: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಲ್ಲಿನ ರಾಮಾಪೂರ ಸೈಟಿನಲ್ಲಿ ಗುರುವಾರ ನಡೆದಿದೆ. ಶಬಾನಾ (28) ಕೊಲೆಗೀಡಾದ ಮಹಿಳೆ. ಆರೋಪಿ ಮೆಹಬೂಬಸಾಬ ಗರೀಬಸಾಬ ಗೊರವನಕೊಳ್ಳ (30) ತನ್ನ ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಸ್ಥಳಕ್ಕೆ ಪಿಐ ಕರುಣೇಶಗೌಡ ಜೆ. ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಯೊಂದಿಗೆ ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರವನ್ನು ವಶ ಪಡಿಸಿಕೊಳ್ಳಲಾಗಿದೆ. ಆಗಾಗ ಪತಿ ಪತ್ನಿ …
Read More »ಮತ್ತಮ್ಮೆ ಶಕ್ತಿ ಕೇಂದ್ರವಾದ B.S.Y. ನಿವಾಸ
ಬೆಂಗಳೂರು – ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಮುಂದೇನು ಎನ್ನುವ ಪ್ರಶ್ನೆಯೊಂದಿಗೆ, ಮೂಲೆಗುಂಪಾಗಿಬಿಡುತ್ತಾರಾ ಯಡಿಯೂರಪ್ಪ ಎನ್ನುವ ಅನುಮಾನಕ್ಕೆ ಉತ್ತರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ ನಂತರದ ಸ್ಥಾನದಲ್ಲಿ ಯಡಿಯೂರಪ್ಪ ಅವರು ಸೇರಿಸಲ್ಪಟ್ಟಿದ್ದಾರೆ. 2023ರ ವಿಧಾನ ಸಭೆ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗೆ …
Read More »ಉಮೇಶ ಕತ್ತಿ ಒಡೆತನದ ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಕ್ಷರಗಳನ್ನು ತೆರವುಗೊಳಿಸಲು ಮುಂದಾದ ಕನ್ನಡ ಹೋರಾಟಗಾರರು
ಬೆಳಗಾವಿಯ ಚನ್ನಮ್ಮಾಜಿ ವೃತ್ತದಲ್ಲಿರುವ ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಕರವೇ ಶಿವರಾಮೇಗೌಡ ಬಣದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೌದು ಬೆಳಗಾವಿಯ ಚನ್ನಮ್ಮಾಜಿ ವೃತ್ತದ ಒಂದು ಭಾಗದಲ್ಲಿ ಸೌಂದರ್ಯಿಕರಣ ಮಾಡುವ ಉದ್ದೇಶದಿಂದ 2011ರಲ್ಲಿ ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಚಿವ ಉಮೇಶ ಕತ್ತಿ ತಮ್ಮ ವಯಕ್ತಿಕ ಖರ್ಚಿನಲ್ಲಿ ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್ ವಿಎಸ್‍ಎಲ್ ಎಂದು ತಡೆಗೋಡೆ ಮೇಲೆ ಬರೆದಿರುವ ಆಕರ್ಷಕ ನಾಮಫಲಕವನ್ನು ಅನಾವರಣಗೊಳಿಸಿದ್ದರು. …
Read More »ಮತ್ತೆ M.E.S. ಕಿರಿಕ್: ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಆಗ್ರಹ
ಖಾನಾಪುರ ತಾಲೂಕಿನ ಹಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿಯ ದಾಖಲೆಗಳನ್ನು ಮರಾಠಿಯಲ್ಲಿಯೇ ನೀಡುವಂತೆ ಎಂಇಎಸ್ ಆಗ್ರಹಿಸಿದೆ. ಹಲಸಿ ಗ್ರಾಮ ಪಂಚಾಯಿತಿಯವರು ಕನ್ನಡ ಭಾμÉಯಲ್ಲಿ ಸರಕಾರಿ ದಾಖಲೆ ಹಾಗೂ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಮರಾಠಿ ಭಾಷಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಶೇ.21ಕ್ಕಿಂತ ಹೆಚ್ಚಿದ್ದಾರೆ. ಅಲ್ಲದೇ ಹಲಸಿ, ಹಲಸಿವಾಡಿ, ನರಸೇವಾಡಿ, ಭಾಂಬರಡಾ ಗ್ರಾಮಗಳಲ್ಲಿ ಶೇ.90ಕ್ಕೂ ಹೆಚ್ಚು ಮರಾಠಿ …
Read More »
Laxmi News 24×7