Breaking News

ಬೆಳಗಾವಿ

ಪೊಲೀಸ್ ಎಂದು ನಂಬಿಸಿ ಮಹಿಳೆಯ ಚಿನ್ನಾಭರಣ ಎಗರಿಸಿದ್ದ ಆರೋಪಿ ಅಂದರ್

ಚಿಕ್ಕೋಡಿ: ತಾನು ಪೊಲೀಸ್ ಎಂದು ನಂಬಿಸಿ ಮಹಿಳೆಯ ಬಳಿ ಇದ್ದ ಚಿನ್ನಾಭರಣ ಎಗರಿಸಿದ್ದ ಆರೋಪಿಯನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರದ ಸಾಂಗ್ಲಿಯ ಮಹಮ್ಮದ್ ಯೂಸುಫ್ ಇರಾನಿ ಎಂದು ಗುರುತಿಸಲಾಗಿದೆ. ಇತ್ತಿಚೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಿಜಯಲಕ್ಷ್ಮೀ ರಾಜು ಚೌಗಲೆ ಎಂಬ ಮಹಿಳೆಗೆ ತಾನು ಪೊಲೀಸ್ ಎಂದು ನಂಬಿಸಿ, ಬೇರೆ ಕಡೆ ಗಮನ ಸೆಳೆದು 1.5 ಲಕ್ಷ ರೂ. ಬೆಲೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ …

Read More »

ಲೋಕಕಲ್ಯಾಣಕ್ಕಾಗಿ 220 ಕಿ.ಮೀ. ಉರುಳು ಸೇವೆ ಮಾಡಿದ ಪಂಡರಪುರದ ವಿಠ್ಠಲನ ಭಕ್ತ

ಚಿಕ್ಕೋಡಿ: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡೋದನ್ನ ಕೇಳಿದ್ದೀವಿ, ನೋಡಿದ್ದೀವಿ‌. ಅಷ್ಟೆ ಯಾಕೆ ಪಾದಯಾತ್ರೆ ಮೂಲಕ ತಮ್ಮ ಮನೆದೇವರ ಹರಕೆ ತೀರಿಸಿದವರನ್ನೂ ಸಹ ನೋಡಿರ್ತೀವಿ. ಆದರೆ ಇಲ್ಲೊಬ್ಬ ವಿಠ್ಠಲನ ಭಕ್ತ ಲೋಕಕಲ್ಯಾಣಕ್ಕಾಗಿ ಸುಮಾರು 220 ಕಿ.ಮೀ. ಉರುಳು ಸೇವೆ ಮಾಡಿ ಪಂಡರಪುರದ ವಿಠ್ಠಲನ ಕೃಪೆಗೆ ಪಾತ್ರನಾಗಿದ್ದಾ‌ನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದ ನಿವಾಸಿ ಶಹಾಜೀ ಜಾಧವ್ ಉರುಳು ಸೇವೆ ಸಲ್ಲಿಸಿದ ಭಕ್ತ. ಶಹಾಜೀ ಅಥಣಿ ತಾಲೂಕಿನ …

Read More »

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಹುಬ್ಬಳ್ಳಿಯಲ್ಲಿ ಕಿಂಗ್‌ಪಿನ್‌ ಅರೆಸ್ಟ್

ಬೆಳಗಾವಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಪಿಟಿಸಿಎಲ್ ಕಿರಿಯ ಅಭಿಯಂತರ(ಜೆಇ)ಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ 13ಕ್ಕೇರಿದೆ. ಈ ಪರೀಕ್ಷೆಯ ಅಕ್ರಮದ ಕಿಂಗ್​ ಪಿನ್​ ಎಂದೇ ಕರೆಯಲಾಗುತ್ತಿದ್ದ ಜಿಲ್ಲೆಯ ಗೋಕಾಕ್​ ತಾಲೂಕಿನ ಸಂಜೀವ ಲಕ್ಷ್ಮಣ ಭಂಡಾರಿ ಬಂಧಿತ. ಬಂಧಿತ ಆರೋಪಿಯನ್ನು ಪೊಲೀಸರು ಗೋಕಾಕ್​ನ ಪ್ರಿನ್ಸಿಪಲ್ ಜೆಎಂಎಫ್‌ಸಿಗೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 7ದಿನಗಳ ವರೆಗೆ …

Read More »

ಅಕ್ರಮವಾಗಿ ಸಾಗವಾನಿ ಸಾಗಿಸುತ್ತಿದ್ದ ವಾಹನ ಮಾಲು ಸಮೇತ ಜಪ್ತಿ

ದಾಂಡೇಲಿ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಅಕ್ರಮವಾಗಿ ಸಾಗವಾನಿ ಸಾಗಿಸುತ್ತಿದ್ದ ವಾಹನ ಮಾಲು ಸಮೇತ ಜಪ್ತಿ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿರುವ ಘಟನೆ ಜೋಯ್ಡಾ ತಾಲೂಕಿನ ಉಸೋಡ ಬಳಿ ನಡೆದಿದೆ. ಹೌದು GA 07 C 9384 ನಂಬರಿನ ಸಫಾರಿ ವಾಹನದಲ್ಲಿ ಅಕ್ರಮವಾಗಿ ಸಾಗವಾನಿ ಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ದಾಂಡೇಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. …

Read More »

ಬಿಜೆಪಿಯವ್ರು ಚಂಬಲ್ ಕಣಿವೆ ಡಕಾಯಿತರಿಗಿಂತ ದೊಡ್ಡ ಡಕಾಯಿತರು:

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಚಂಬಲ್ ಕಣಿವೆಯ ಡಕಾಯಿತರಿಗಿಂತ ದೊಡ್ಡ ಡಕಾಯಿತವಾಗಿದೆ. ಜಿಎಸ್‍ಟಿ ಹೆಸರಲ್ಲಿ ಜನಸಾಮಾನ್ಯರಿಂದ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ರಮೇಶ ಕುಡಚಿ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಶಾಸಕ ರಮೇಶ ಕುಡಚಿ ಈಗಾಗಲೇ ಜಿಎಸ್‍ಟಿ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿಯೂ ಜಿಎಸ್‍ಟಿ ಇತ್ತು. ಇವತ್ತು ಇದೆ. ಆದರೆ ಕಾಂಗ್ರೆಸ್ ಎಷ್ಟು ಜಿಎಸ್‍ಟಿ ಹಾಕಬೇಕು ಎಂದು …

Read More »

ಬೈಲಹೊಂಗಲ: ದರ್ಗಾದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪ್ರತಿಬಾರಿಯಂತೆ ಈ ವರ್ಷವೂ ಪಟ್ಟಣದ ದರ್ಗಾದಲ್ಲಿ ಹಿಂದೂ ಮುಸ್ಲಿಮರು ಸೇರಿಕೊಂಡು ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಆಲಕಟ್ಟಿ ಫಕ್ಕೀರಸ್ವಾಮಿ ದರ್ಗಾ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿದೆ.   ಸಂಪ್ರದಾಯದಂತೆ ಬುಧವಾರ ಗಣಪನ ಮೂರ್ತಿಯನ್ನು ಹಿಂದೂ ಮುಸ್ಲಿಮ್ ಯುವಕರು ಮೆರವಣಿಗೆ ಮೂಲಕ ತಂದು ದರ್ಗಾದಲ್ಲಿ ಪ್ರತಿಸ್ಥಾಪನೆ ಮಾಡಿದರು. ಮುಸ್ಲಿಮರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿದರು, ಹಿಂದೂಗಳು ಆರತಿ ಮಾಡಿ, ನೈವೇದ್ಯ …

Read More »

K.S.R.T.C. ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ 8ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್‍ಟಿಸಿ ಬಸ್ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಗೋಕಾಕ್ ತಾಲೂಕಿನ ಕೊಳವಿ ಗ್ರಾಮದ ಬಳಿ ಸಂಭವಿಸಿದೆ. 17 ಜನ ಪ್ರಯಾಣಿಕರು ಈ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಏಕಾಏಕಿ ಬಸ್ ರಸ್ತೆ ಬಿಟ್ಟು ಕೆಳಗೆ ಇಳಿಯುತ್ತಿದ್ದಂತೆ ಪ್ರಯಾಣಿಕರು ತುಂಬಾ ವಿಚಲಿತರಾದರು. ಈ ವೇಳೆ ಬಸ್‍ನಲ್ಲಿ ಹ್ಯಾಂಡಲ್, ಕಿಡಕಿ ಆಂಗಲ್ ಬಡಿದು 8 ಪ್ರಯಾಣಿಕರಿಗೆ ಗಾಯವಾಗಿದೆ. ಓರ್ವ ಪ್ರಯಾಣಿಕರ ಕೈ ಮುರಿದಿದ್ದು, ಇನ್ನುಳಿದ ಪ್ರಯಾಣಿಕರಿಗೆ ಸಣ್ಣ …

Read More »

ಸತೀಶ್ ಜಾರಕಿಹೊಳಿ ಯಾವ ಕ್ಷೇತ್ರ ದಿಂದ ಸ್ಪರ್ಧೆ ಮಾಡ್ತಾರೆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

ಕಾಂಗ್ರೆಸ್ ಟಿಕೆಟ್ ಪಡೆಯಲು ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಜನಪ್ರಿಯತೆ, ಆಕರ್ಷಣಿಯ ವ್ಯಕ್ತಿತ್ವ ಹೊಂದಿರಬೇಕು. ಒಳ್ಳೆಯ ಕೆಲಸ ಮಾಡಿರಬೇಕು. ಎಲ್ಲಾ ಪಕ್ಷಗಳ ಟಿಕೆಟ್ ಅಂತಿಮವಾದ ಮೇಲೆ ಕೊನೆಯ ಸರ್ವೇ ಮಾಡಿ ನಮ್ಮ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಎರಡು ಕ್ಷೇತ್ರಗಳಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಬೇಕು ಎಂಬ ಬೆಂಬಲಿಗರ ಒತ್ತಾಯದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗೋಕಾಕ್‍ನಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಆ ರೀತಿ ಇರಬಹುದು, …

Read More »

ರಾಜ್ಯದಲ್ಲಿ ಬಿಜೆಪಿ ಪಕ್ಷ ಹುಟ್ಟಿರೋದೇ ಭ್ರಷ್ಟಾಚಾರದಿಂದ.: ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ: ಭಾಸ್ಕರ್‍ರಾವ್

ರಾಜ್ಯದಲ್ಲಿ ಬಿಜೆಪಿ ಪಕ್ಷ ಹುಟ್ಟಿರೋದೇ ಭ್ರಷ್ಟಾಚಾರದಿಂದ. ಬಾಂಬೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಇರಿಸಿ, ಅವರ ವಿಡಿಯೋ ಮಾಡಿ ಬ್ಲಾಕ್‍ಮೇಲ್ ಮಾಡಿ ಇವರು ಅಧಿಕಾರಕ್ಕೆ ಬಂದಿದ್ದಾರೆ. ಕೆಂಪು ಕೋಟೆ ಮೇಲೆ ನಿಂತು ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ. ನಾನು ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆದರೆ ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್‍ರಾವ್ ಆರೋಪಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ …

Read More »

ಅದ್ದೂರಿ ಗಣೇಶೋತ್ಸವ ಮಾಡುತ್ತೇವೆ, ಡಿಜೆ ಬಳಕೆ ಮಾಡುತ್ತೇವೆ. ವಿದ್ಯುತ್ ಶುಲ್ಕ ಪಾವತಿ ಮಾಡಲ್ಲ:ಯತ್ನಾಳ್

ಅಥಣಿ, : ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಅಪ್ಪ ಮಕ್ಕಳಿಗೆ ಟಿಕೆಟ್ ನೀಡಬಾರದೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ.   ಬಿಜೆಪಿಯಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ನಿಯಮ ಜಾರಿಯಾಗಿದೆ. ಈ ಕುರಿತು ನಾನು ಕೂಡ ಕರ್ನಾಟಕದಲ್ಲಿ ತ್ವರಿತವಾಗಿ ಈ ನಿಯಮ ಜಾರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಅಪ್ಪ ಮಕ್ಕಳಿಗೆ ಹಾಗೂ ಕುಟುಂಬ ರಾಜಕೀಯಕ್ಕೆ …

Read More »