Breaking News

ಬೆಳಗಾವಿ

ಜೈನ್ ಶ್ವೇತಾಂಬರ ಪಂಥದ ೧೦ ಯುವಕರಿಂದ ಸನ್ಯಾಸ ಸ್ವೀಕಾರ:

ಬೆಳಗಾವಿ ನಗರದಲ್ಲಿ ಜೈನ ಸಮುದಾಯದ ೧೦ ಯುವಕರು ತಮ್ಮ ಸುಖ ಜೀವನವನ್ನು ತೊರೆದು ಜೈನ್ ಧರ್ಮ ದೀಕ್ಷೆಯನ್ನು ಸ್ವೀಕಾರ ಮಾಡಿದರು. ಈ ಹಿನ್ನೆಲೆ ಜೈನ ಸಮುದಾಯದ ಬಾಂಧವರ ವತಿಯಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ನಗರದಲ್ಲಿ ಜೈನ್ ಸಮುದಾಯದ ೧೦ಜನ ಯುವಕರು ಜೈನ್ ತಮ್ಮ ಲೌಕಿಕ ಜೀವನವನ್ನು ತೊರೆದು ಜೈನ್ ದೀಕ್ಷೆಯನ್ನು ಸ್ವೀಕಾರ ಮಾಡಿದ ಹಿನ್ನೆಲೆ ಇಂದು ನಗರದಲ್ಲಿ ಜೈನ್ ಸಮುದಾಯದ ವತಿಯಿಂದ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ …

Read More »

ಅ.15ರಂದು ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ

ಬೆಳಗಾವಿ: ಇಲ್ಲಿನ ನೆಹರೂ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅ.15ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ 75 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ.   ಈ ಬಗ್ಗೆ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ‘ಅಮೃತ ಮಹೋತ್ಸವದಲ್ಲಿ ಭಾಗವಹಿಸಲು …

Read More »

ಉದ್ಘಾಟನೆ ಆದ ಕೆಲವೇ ಗಂಟೆ ಗಳಲ್ಲಿ ತಗ್ಗು ಬಿದ್ದಿರುವ 38 ಕೋಟಿ ರೂಪಾಯಿ ಮೇಲ್ಸೇತುವೆ

ನಿನ್ನೆ ಲೋಕಾರ್ಪಣೆಗೊಂಡ ಬೆಳಗಾವಿಯ ಟಿಳಕವಾಡಿ 3ನೇ ರೈಲ್ವೇ ಗೇಟ್‍ನ ಮೇಲ್ಸೇತುವೆಯಲ್ಲಿ ತಗ್ಗು ಬಿದ್ದಿರುವ ಘಟನೆ ನಡೆದಿದೆ. ಹೌದು ನಿನ್ನೆಯಷ್ಟೇ ಸಂಸದೆ ಮಂಗಲಾ ಅಂಗಡಿ ಅವರು 3ನೇ ರೈಲ್ವೇ ಗೇಟ್‍ನಲ್ಲಿ ಮೇಲ್ಸೇತುವೆಯನ್ನು ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಎಂಎಲ್‍ಸಿ ಪ್ರಕಾಶ ಹುಕ್ಕೇರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ರೈಲ್ವೇ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ಆದರೆ ಇಂದು ನೋಡಿದ್ರೆ ಈ ಮೇಲ್ಸೇತುವೆಯಲ್ಲಿ ಒಂದು ತೆಗ್ಗು ಕಾಣಿಸಿಕೊಂಡಿದೆ. ಸಧ್ಯ ಗುಂಡಿ ಬಿದ್ದಿರುವ …

Read More »

ಬೆಳಗಾವಿ: ಕೈಕೊಟ್ಟ ಬೆಳೆ, ಸಾಲಬಾಧೆಯಿಂದ ಯುವ ರೈತ ಆತ್ಮಹತ್ಯೆ

ಬೆಳಗಾವಿ: ಸಾಲಬಾಧೆ ತಾಳಲಾರದೇ ಯುವ ರೈತನೊಬ್ಬ ತನ್ನ ಒಂದು ವರ್ಷದ ಮಗನ ಜನ್ಮದಿನ ಆಚರಿಸಿದ ಮರುದಿನವೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ವಿನಾಯಕ ನಗರದಲ್ಲಿ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಬೋಳೆತ್ತಿನ (34) ಮೃತ ರೈತ. ಮೃತಪಟ್ಟ ರೈತ ಕೃಷಿ ಚುಟುವಟಿಕೆಗಳಿಗೆ‌ ಮಾಡಿಕೊಂಡು ಸಾಲ ತಿರಿಸಲಾಗದೇ ಮನೆಯಲ್ಲಿ ಮಗುವನ್ನು ತೂಗಲು ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ …

Read More »

ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ*

        *ಗೋಕಾಕ* : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಡೆಸುತ್ತಿರುವ ಉಪ್ಪಾರ ಸಮುದಾಯದ ಹೋರಾಟಕ್ಕೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಗುರುವಾರದಂದು ಹೇಳಿಕೆ ನೀಡಿರುವ ಅವರು, ಉಪ್ಪಾರ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯವಿದೆ. ಶೈಕ್ಷಣಿಕವಾಗಿ, …

Read More »

ಅ.15ರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 5500 ರೂ. ಘೋಷಿಸಿ, ರೈತರಿಗೆ ಸಿಹಿ ಸುದ್ದಿ ಕೊಡಿ: ಸಿಎಂ ಬೊಮ್ಮಾಯಿಗೆ ಬೆಳಗಾವಿ ರೈತ ಮುಖಂಡರ ಆಗ್ರಹ..!

ಪಂಜಾಬ್, ಉತ್ತರಪ್ರದೇಶ ರಾಜ್ಯದಲ್ಲಿ 3800 ರೂಪಾಯಿ ಘೋಷಣೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚು 5500 ರೂಪಾಯಿಯನ್ನು ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ಘೋಷಣೆ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಆದರೆ ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು …

Read More »

ತಿಂಗಳಾ ಸರಿಯಾಗಿ ಪಗಾರ್ ಕೊಡರಿ. ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ.!

ಆನ್‍ಲೈನ್ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎಐಯುಟಿಯುಸಿ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಸರ್ದಾರ್ ಮೈದಾನದಿಂದ ಆರಂಭವಾದ ಈ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಿತು. ಈ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ …

Read More »

ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಅಭಯ್ ಪಾಟೀಲ್ ಗರಂ

ಬೆಳಗಾವಿ ನಗರದಲ್ಲಿ ರೈಲ್ವೇ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ನಾಲ್ಕು ವರ್ಷಗಳನ್ನು ತೆಗೆದಿಕೊಂಡ ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಅಭಯ್ ಪಾಟೀಲ್ ಗರಂ ಆಗಿದ್ದಾರೆ. ನೀವು ಕಾಮಗಾರಿಯನ್ನು ವಿಳಂಬ ಮಾಡಿದ್ದರಿಂದ ಜನ ನಮ್ಮನ್ನು ಬಯ್ಯುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ನಗರದಲ್ಲಿ ಟಿಳಕವಾಡಿಯ ಮೂರನೇ ರೈಲ್ವೇ ಗೇಟ್‌ಬಳಿಯ ರೈಲ್ವೇ ಮೇಲ್ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಭಯ್ ಪಾಟೀಲ್ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬರಂಗವಾಗಿಯೇ ರೈಲ್ವೆ …

Read More »

ಬ್ರೇಕ್ ಫೇಲ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್

ಬೆಳಗಾವಿ : ಜಿಲ್ಲೆಯ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್​ನ ಬ್ರೇಕ್ ಫೇಲ್ ಆದ ಹಿನ್ನೆಲೆ ಕಬ್ಬಿನ ಗದ್ದೆಗೆ ನುಗ್ಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಜಿಲ್ಲೆಯ ‌ಯರಗಟ್ಟಿ ತಾಲೂಕಿನ ಸೋಮಾಪುರ ಗ್ರಾಮದಿಂದ ತಲ್ಲೂರು ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬಳಿಕ ನಿಯಂತ್ರಣ ತಪ್ಪಿ ತಲ್ಲೂರ ಗ್ರಾಮದ ಬಾಬು ಪಕಾಲಿ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಗೆ …

Read More »

ಭೋರ್ಗರೆವ ಹಳ್ಳದಲ್ಲೇ ಹಾಲಸಿದ್ಧನಾಥನ ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು

ಬೆಳಗಾವಿ: ಭೋರ್ಗರೆಯುತ್ತಿರುವ ಹಳ್ಳದಲ್ಲೇ ಸಾವಿರಾರು ಭಕ್ತರು ಹಾಲಸಿದ್ಧನಾಥನ ಪಲ್ಲಕ್ಕಿ ಹೊತ್ತು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದಿಂದ ಅಪ್ಪಾಚಿವಾಡಿ ಗ್ರಾಮಕ್ಕೆ ಸಾಗಿದರು. ಪ್ರತಿ ವರ್ಷ ಹಾಲಸಿದ್ಧನಾಥ ಜಾತ್ರೆ ವೇಳೆ ಅಪ್ಪಾಚಿವಾಡಿಗೆ ಕುರ್ಲಿ ಗ್ರಾಮದಿಂದ ಪಲ್ಲಕ್ಕಿ ಸಾಗಿಸಲಾಗುತ್ತದೆ. ಬಳಿಕ ಎರಡೂ ಗ್ರಾಮದ ಜನರು ಸೇರಿ ಐದು ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ಮಾಡುತ್ತಾರೆ. ಈ ಎರಡು ಗ್ರಾಮದ ಮಧ್ಯೆ ಗುಮ್ಮಟ ಹಳ್ಳ ಹರಿಯುತ್ತದೆ. ಈ ಹಳ್ಳ ವೇದಗಂಗಾ ನದಿಯ ಸಮೀಪವಿದೆ. …

Read More »