ಬೆಂಗಳೂರು : ಇದೀಗ ತಬ್ರೇಜ್ನನ್ನು ಬಂಧಿಸಲಾಗಿದೆ. ಎಸ್ಡಿಪಿಐ, ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ತಬ್ರೇಜ್, ವಾಟ್ಸಪ್ ಗ್ರೂಪ್ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದ. ಅಷ್ಟೇ ಅಲ್ಲದೆ ಗಲಭೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪ ತಬ್ರೇಜ್ ಮೇಲಿತ್ತು.
Read More »ಐವರ ಅಸಹಜ ಸಾವು ಕೇಸ್: ಅಬಕಾರಿ ಅಧಿಕಾರಿಗಳ ಸುಲಿಗೆಗೆ ಇಳಿದಿದ್ದನಂತೆ ಶಂಕರ್..!
ಬೆಂಗಳೂರು: ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಅಸಹಜ ಸಾವು ಕಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೇ ಆರೋಪಿ ಶಂಕರ್ ವಿರುದ್ಧ ಮಾಹಿತಿ ಹಕ್ಕು ಕಾಯ್ದೆ (RTI) ಯನ್ನು ದುರುಪಯೋಗ ಪಡಿಸಿಕೊಂಡು ಹಣ ಪೀಕಿರುವ ಆರೋಪ ಕೇಳಿ ಬಂದಿದೆ. ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿದ್ದ ಶಂಕರ್..! ರಾಜ್ಯದ ವಿವಿಧ ಅಬಕಾರಿ ಅಧಿಕಾರಿಗಳೇ ಈತನ ಟಾರ್ಗೆಟ್..! ಶಂಕರ್ …
Read More »ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚು ಮಳೆ
ಬೆಂಗಳೂರು : ದೇಶದಲ್ಲಿ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚು ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ಮಳೆ ಹೆಚ್ಚಾಗಲು ಕಾರಣವಾಗಿದೆ, ಇದರಿಂದಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕಡಿಮೆಯಾಗಬೇಕಿದ್ದ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಧ್ಯ ಮುಂಗಾರು ಈಗ ಜೈಸಲ್ಮೇರ್, ಕೋಟ, ಗುಣ, ಸತ್ನಾ, ಜಮ್ಶೆಡ್‌ಪುರನ ಕಡಿಮೆ ಒತ್ತಡದ ಕೇಂದ್ರ ನಂತರ ಆಗ್ನೇಯ ವಾರ್ಡ್‌ಗಳ ಮೂಲಕ ಈಶಾನ್ಯ ಮಧ್ಯ ಬಂಗಾಳ ಕೊಲ್ಲಿಗೆ ಹಾದು …
Read More »ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ
ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಮನವಿ ಮಾಡಿ ಕನ್ನಡ ಚಿತ್ರರಂಗದ ನಿರ್ಮಾಪಕರು ಇಂದು ಆರೋಗ್ಯ ಸಚಿವ ಕೆ.ಸುಧಾಕರ್ ಗೆ ಮನವಿ ಮಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಪಕರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ದೊಡ್ಡ ನಟರ ಸಿನಿಮಾಗಳಿಗೆ ಹೆಚ್ಚು ಹಣಹಾಕಿ ಚಿತ್ರ ಬಿಡುಗಡೆ ಮಾಡಲಾಗದೆ …
Read More »ರಾಜ್ಯ ಸಚಿವ ಸಂಪುಟ ಸಭೆ: ಸಾರಿಗೆ ನೌಕರರ ಮೇಲಿನ ಪ್ರಕರಣ ಹಿಂದೆಗೆತ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರ ಮೇಲೆ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ನಾಲ್ಕು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಾಧಕ – ಬಾಧಕಗಳ ಕುರಿತು ಚರ್ಚಿಸಿದ್ದೇನೆ. ಮುಷ್ಕರ ಸಮಯದಲ್ಲಿ ಕೆಲವರು ಅಮಾನತಾಗಿದ್ದಾರೆ, ಮತ್ತೆ ಕೆಲವರು ವರ್ಗಾವಣೆಯಾಗಿ 6 ಸಾವಿರ ನೌಕರರು ತೊಂದರೆಗೆೆ ಸಿಲುಕಿದ್ದರು. 4 ಸಾವಿರ ನೌಕರರ ಮೇಲೆ ತೆಗೆದುಕೊಂಡಿದ್ದ ಕ್ರಮವನ್ನು …
Read More »ಅಧಿವೇಶನದಲ್ಲಿ ಶಾಸಕರ ನಡಾವಳಿಗಳು, ವಿಪಕ್ಷಗಳ ಟೀಕೆ, ಆರೋಪಗಳಿಗೆ ತಕ್ಕ ತಿರುಗೇಟು ಕೊಡುವ ಬಗ್ಗೆ ಚರ್ಚೆ
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಬಿಜೆಪಿ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಶಾಸಕರು ಹಾಗೂ ಸಚಿವರು ಭಾಗಿಯಾಗಿದ್ದರು. ಅಧಿವೇಶನದಲ್ಲಿ ಶಾಸಕರ ನಡಾವಳಿಗಳು, ವಿಪಕ್ಷಗಳ ಟೀಕೆ, ಆರೋಪಗಳಿಗೆ ತಕ್ಕ ತಿರುಗೇಟು ಕೊಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಅತ್ಯಾಚಾರ ಪ್ರಕರಣದಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. …
Read More »ಬೆಂಗಳೂರಿನಲ್ಲಿ ಸೆ. 25ರವರೆಗೂ ಗುಡುಗು ಸಹಿತ ಭಾರೀ ಮಳೆ; ಸಂಜೆ ಬೇಗ ಮನೆ ಸೇರಿಕೊಳ್ಳಿ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore Rain) ಒಂದು ಗಂಟೆ ಮಳೆ ಸುರಿದರೂ ಜನಜೀವನ ಅಸ್ತವ್ಯಸ್ತವಾಗಿ ಬಿಡುತ್ತದೆ. ಚರಂಡಿ ವ್ಯವಸ್ಥೆ, ರಾಜಕಾಲುವೆಗಳ ಅವ್ಯವಸ್ಥೆ, ತಗ್ಗು ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿರುವುದು ಹೀಗೆ ನಾನಾ ಕಾರಣಗಳಿಂದ ಮಳೆಗಾಲದಲ್ಲಿ ಬೆಂಗಳೂರಿಗರಿಗೆ ನರಕ ದರ್ಶನವಾಗುತ್ತಲೇ ಇರುತ್ತದೆ. ಇಂದಿನಿಂದ ಸೆ. 25ರವರೆಗೂ ಬೆಂಗಳೂರಿನಲ್ಲಿ ಮತ್ತೆ ಮಳೆ (Heavy Rain in Bengaluru) ಜೋರಾಗಲಿದ್ದು, ಇಂದಿನಿಂದ 5 ದಿನ ಗುಡುಗು- ಮಿಂಚು (Bengaluru Rains) ಸಹಿತ ಭಾರೀ ಮಳೆಯಾಗಲಿದೆ. …
Read More »ಸದನದಲ್ಲಿ ಬೆಲೆ ಏರಿಕೆ ಗದ್ದಲ: ಬಿಜೆಪಿಯದ್ದು ಲೂಟಿ ಸರ್ಕಾರ ಎಂದ ‘ಸಿದ್ದು’; ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂದು ವಿಪಕ್ಷಗಳಿಗೆ ಸಿಎಂ ಬೊಮ್ಮಾಯಿ ‘ಗುದ್ದು’
ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಬೆಲೆ ಏರಿಕೆ ವಿಚಾರ ಮತ್ತೆ ಪ್ರತಿಧ್ವನಿಸಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ವಾಕ್ಸಮರ, ವಾಗ್ದಾಳಿಗಳಿಗೆ ಕಾರಣವಾಗಿದೆ. ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ನಿಜ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಆದರೆ ಅದಕ್ಕೆ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯಾಗಿರುವುದು ಮಾತ್ರ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದ ಬೆಲೆ …
Read More »‘ಮೋದಿ ಅಲೆ ಭ್ರಮೆ’ ಬಗ್ಗೆ ಬಿಎಸ್‌ವೈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ
ಬೆಂಗಳೂರು, ಸೆಪ್ಟೆಂಬರ್ 20: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆಯ ವಿಚಾರವಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಯು ಹಲವಾರು ಕರ್ನಾಟಕ ಬಿಜೆಪಿ ನಾಯಕರು ಹಾಗೂ ಕೇಂದ್ರ ಬಿಜೆಪಿ ನಾಯಕರು ಅಸಮಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಯಾವ ರೀತಿಯಲ್ಲಿ ಗಟ್ಟಿಗೊಳಿಸುವುದು …
Read More »ಜನ ಕಲ್ಯಾಣಕ್ಕಾಗಿ ನವ ಚಂಡಿಕಾ ಹೋಮ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕ್ಷೇತ್ರದ ಜನರು, ಕೆಎಂಎಫ್ ಸಂಸ್ಥೆಯ ಪ್ರಗತಿ ಹಾಗೂ ಕುಟುಂಬಸ್ಥರ ಏಳ್ಗೆಗಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವ ಚಂಡಿಕಾ ಹೋಮ ನೆರವೇರಿಸಿದರು. ಕಳೆದ ಭಾನುವಾರ ಮತ್ತು ಸೋಮವಾರದಂದು ಎರಡು ದಿನಗಳವರೆಗೆ ಉಡುಪಿ ಜಿಲ್ಲೆಯ ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮ-ಹವನ ನೆರವೇರಿಸಿದರು. ಕಳೆದ ಎರಡು …
Read More »